Homeಕರ್ನಾಟಕರಾಜ್ಯ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪ- ಭಾರಿ ನಿರೀಕ್ಷೆ

ರಾಜ್ಯ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪ- ಭಾರಿ ನಿರೀಕ್ಷೆ

- Advertisement -
- Advertisement -

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ(ಇಂದು) 2021-22ನೇ ಸಾಲಿನ ರಾಜ್ಯ ಬಜೆಟ್‌‌ ಅನ್ನು ಮಂಡಿಸಲಿದ್ದಾರೆ. 2019 ರಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಂಡಿಸುತ್ತಿರುವ ಎರಡನೆ ಬಜೆಟ್ ಇದಾಗಿದೆ. ರಾಜ್ಯದಲ್ಲಿ ಆರ್ಥಿಕ ಕುಸಿತ, ಪ್ರವಾಹ, ಹೆಚ್ಚಾದ ಸಾಲ ಪ್ರಮಾಣಗಳ ನಡುವೆ ಮುಖ್ಯಮಂತ್ರಿ ಮಂಡಿಸುವ ಬಜೆಟ್​ ಮೇಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ರಾಜ್ಯವು ಈಗಾಗಲೆ ಮೂರು ಲಕ್ಷ ಕೋಟಿ ಸಾಲದಲ್ಲಿದ್ದು, ಜೊತೆಗೆ ಕೇಂದ್ರದಿಂದ ಸಿಗಬೇಕಾಗಿದ್ದ ಜಿಎಸ್‌ಟಿ ಪರಿಹಾರ ರಾಜ್ಯಕ್ಕೆ ಸಿಕ್ಕಿಲ್ಲ. ಈ ನಡುವೆ ಕೊರೊನಾದಿಂದಾಗಿ ಉಂಟಾದ ಆರ್ಥಿಕ ಕುಸಿತದ ಒತ್ತಡವು ರಾಜ್ಯದ ಮೇಲೆ ಇದೆ. ಹಾಗಾಗಿ ಇಂದು ಮಂಡಿಸಲಿರುವ ಬಜೆಟ್‌ಗಳ ಮೇಲೆ ಜನರ ದೃಷ್ಟಿ ನೆಟ್ಟಿದೆ.

ಇದನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: ಟಿಕ್ರಿ ಗಡಿಯಲ್ಲಿ ಪ್ರಾಣಬಿಟ್ಟ ಮತ್ತೊಬ್ಬ ರೈತ!

ಹಣಕಾಸು ಖಾತೆಯನ್ನು ತಮ್ಮ ಬಳಿಯೆ ಉಳಿಸಿಕೊಂಡಿರುವ ಯಡಿಯೂರಪ್ಪ ಇಂದು ಮಧ್ಯಾಹ್ನ 12 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರಗಳಿಗಿಂಲೂ ರಾಜ್ಯದ ಸಾಲವೆ ಹಚ್ಚಿದ್ದು, ಈ ಬಾರಿ ಮಂಡಿಸಲಿರುವ ಬಜೆಟ್ ಅನ್ನು ‘ವಿಕಾಸ ಪತ್ರ’ ಎಂದು ಅವರು ಕರೆದಿದ್ದಾರೆ.

 

ಬಜೆಟ್‌ ಮಧ್ಯಾಹ್ನ 12 ಗಂಟೆಗೆ ಮಂಡನೆಯಾಗಲಿದ್ದು, ಅದಕ್ಕೂ ಮುನ್ನ ಸಂಪುಟ ಸಭೆ ನಡೆಸಿ ಬಜೆಟ್ ಮಂಡನಗೆ ಅನುಮತಿ ಪಡೆಯಲಿದ್ದಾರೆ. ಬಜೆಟ್ ಮಂಡನೆಯು ಪೂರ್ಣಗೊಂಡ ಬಳಿಕ ಉಭಯ ಸದನಗಳಲ್ಲಿ ಏಪ್ರಿಲ್ 1 ರವರೆಗೂ ಬಜೆಟ್ ಕುರಿತು ಚರ್ಚೆಗಳನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: ಬೆಳಗಾವಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೇಳಿದ್ದೇನೆ: ಪ್ರಮೋದ್ ಮುತಾಲಿಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...