Homeಮುಖಪುಟಜುಲೈ 31ಕ್ಕೆ 12 ನೇ ತರಗತಿ ಫಲಿತಾಂಶ ಪ್ರಕಟಗೊಳಿಸಲಿರುವ ಸಿಬಿಎಸ್‌ಇ

ಜುಲೈ 31ಕ್ಕೆ 12 ನೇ ತರಗತಿ ಫಲಿತಾಂಶ ಪ್ರಕಟಗೊಳಿಸಲಿರುವ ಸಿಬಿಎಸ್‌ಇ

- Advertisement -
- Advertisement -

ದೇಶದಲ್ಲಿ ಕೊರೊನಾ ಬಿಕ್ಕಟ್ಟಿನಿಂದ ರದ್ದಾಗಿದ್ದ ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶಗಳನ್ನು ಜುಲೈ 31 ರೊಳಗೆ ಪ್ರಕಟಿಸಲಾಗುವುದು ಎಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 10 ನೇ ತರಗತಿಯಿಂದ ವಿದ್ಯಾರ್ಥಿಗಳ ಅಂಕಗಳನ್ನು ಪರಿಗಣಿಸಿ ಫಲಿತಾಂಶ ನೀಡಲಾಗುತ್ತದೆ.

12 ನೇ ತರಗತಿ ಪರೀಕ್ಷೆಯಲ್ಲಿ ನೀಡಲಾಗುವ ಒಟ್ಟು ಅಂಕಗಳು ಹಿಂದಿನ 19, 11 ನೇ ತರಗತಿಯ ಅಂಕಗಳನ್ನು ಆಧರಿಸಲಿದೆ ಎಂದು ಸಿಬಿಎಸ್‌ಇ ಹೇಳಿದೆ.  ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಉದಾರವಾಗಿ ಅಂಕಗಳನ್ನು ನೀಡುವ ಶಾಲೆಗಳ ಮೇಲೆ ನಿಗ ಇಡಲು “ಮಾಡರೇಶನ್ ಕಮಿಟಿ” ಯನ್ನು ರಚಿಸಲಾಗುವುದು ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು. 

“ಸಿಬಿಎಸ್ಇ 12 ನೇ ತರಗತಿ ಫಲಿತಾಂಶ ಸಮಿತಿಯು ಶಾಲೆಯ ಹಿರಿಯ ಶಿಕ್ಷಕರನ್ನು ಒಳಗೊಂಡಿರುತ್ತದೆ. ಅಗತ್ಯವಿದ್ದರೆ, ಮೂರನೇ ಶಿಕ್ಷಣ ತಜ್ಞರನ್ನು ನೇಮಿಸಲಾಗುವುದು. ಇದು  ಮಾಡರೇಶನ್ ಕಮಿಟಿ ಆಗಿರುತ್ತದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಮಂಡ್ಯದಲ್ಲಿ ಈಡುಗಾಯಿ ಸೇವೆ

12ನೇ ತರಗತಿಯ ಫಲಿತಾಂಶವನ್ನು 10 ನೇ ತರಗತಿಯ ಮತ್ತು 11ನೇ ತರಗತಿಯ ಅಂಕಗಳಿಂದ ತಲಾ ಶೇಕಡಾ 30 ರಷ್ಟು ಮತ್ತು 12 ತರಗತಿಯ ಆಂತರಿಕ ಪರೀಕ್ಷಗಳಲ್ಲಿ ಗಣಿಸಿರುವ ಅಂಕಗಳಿಂದ ಶೇಕಡಾ 40 ರಷ್ಟು ತೆಗೆದುಕೊಂಡು ಒಟ್ಟು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಸಿಬಿಎಸ್‌ಇ ನ್ಯಾಯಪೀಠಕ್ಕೆ ತಿಳಿಸಿದೆ.

ಪ್ರಾಯೋಗಿಕ ಪರೀಕ್ಷಾಯ 100 ಅಂಕಗಳಿಗೆ ಶಾಲೆಗಳು ಸಲ್ಲಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಸಿಬಿಎಸ್‌ಇ ರಚಿಸಿರುವ 12 ಸದಸ್ಯರ ಸಮಿತಿ ನ್ಯಾಯಾಲಯಕ್ಕೆ ತಿಳಿಸಿದೆ.

ಸಿಬಿಎಸ್‌ಇ 12 ನೇ ತರಗತಿಯ ಫಲಿತಾಂಶದ ಬಗ್ಗೆ ಅಸಮಾಧಾನ ಇರುವ ವಿದ್ಯಾರ್ಥಿಗಳು ಕೊರೊನಾ ಸಾಂಕ್ರಾಮಿಕದ ಬಳಿಕ ನಡೆಸಲಾಗುವ ಪರೀಕ್ಷೆಯಲ್ಲಿ ಬರೆಯಬಹುದು ಎಂದು ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ದೇಶಾದ್ಯಂತ ಸಾಂಕ್ರಾಮಿಕ ರೋಗದ ತೀವ್ರತೆ ನಡುವೆ ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಯನ್ನು ಸರ್ಕಾರ ಜೂನ್ 1 ರಂದು ರದ್ದುಗೊಳಿಸಿತು.


ಇದನ್ನೂ ಓದಿ: ಪ್ರತಿಭಟಿಸುವುದು ಭಯೋತ್ಪಾದನೆಯಲ್ಲ ಎಂದ ದೆಹಲಿ ಹೈಕೋರ್ಟ್: ಸ್ವಾಗತಿಸಿದ ನ್ಯಾಯವಾದಿಗಳು ಮತ್ತು ಕಾನೂನು ತಜ್ಞರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...