Homeಮುಖಪುಟಬಿಜೆಪಿ ವಿರುದ್ಧ ತೆಂಗು ಬೆಳೆಗಾರರ ಆಕ್ರೋಶ

ಬಿಜೆಪಿ ವಿರುದ್ಧ ತೆಂಗು ಬೆಳೆಗಾರರ ಆಕ್ರೋಶ

- Advertisement -
|  ಆಣೆಕಟ್ಟೆ ವಿಶ್ವನಾಥ್ |
ತೆಂಗು ಬೆಳೆಗಾರರ ಸಂಘ
ತೆಂಗು ಬೆಳೆಗಾರರ ಮಟ್ಟಿಗೆ ರಾಜ್ಯದಲ್ಲಿ ಒಂದು ಸಹಕಾರಿ ಚಳವಳಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಸಂಕ್ರಮಣ ಕಾಲ ಇದು. ಇದಕ್ಕೆ ಮುಖ್ಯ ಕಾರಣ ಶ್ರೀ ಟಿ.ಕೆ.ಜೋಶ್ ಎಂಬ ದೂರಗಾಮಿ ದೃಷ್ಟಿ ಹೊಂದಿದ್ದ ಐಎಎಸ್ ಅಧಿಕಾರಿ 2002ರಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಬಂದಿದ್ದು. ಇವರು ಕೇರಳ ಸರ್ಕಾರದಲ್ಲಿ ಕುಟುಂಬಶ್ರೀ ಎಂಬ ಮಹಿಳಾ ಸ್ವ ಸಹಾಯ ಸಂಘಗಳ ಯೋಜನೆ ಪ್ರಾರಂಭಿಸಿ ಯಶಸ್ವಿ ಯಾಗಿದ್ದವರು. ಭಾರತ ದೇಶವನ್ನು ತೆಂಗು ಕ್ಷೇತ್ರದಲ್ಲಿ ಜಾಗತಿಕ ಮುಂದಾಳಾಗಿಸುವ ದೂರದೃಷ್ಟಿ ಹೊಂದಿದ್ದರು. ಅದಕ್ಕಾಗಿ ದೇಶದಾದ್ಯಂತ ತೆಂಗು ಉತ್ಪಾದಕರ ಕಂಪನಿ ಮತ್ತು ಒಕ್ಕೂಟ ಸ್ಥಾಪಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮೌಲ್ಯವರ್ಧನೆ ಮೂಲಕ ಸಶಕ್ತೀಕರಣಕ್ಕೆ ಮುಂದಾಗಿದ್ದರು. ಇವರು ಎಷ್ಟೊಂದು ಸಕಾರಾತ್ಮಕ ವಾಗಿದ್ದರೆಂದರೆ, ಇವರ ಜೊತೆಗೆ ಒಂದು ದಿನ ಕಳೆದರೆ ನಮಗೆಲ್ಲ ಒಂದು ವರ್ಷಕ್ಕಾಗುವಷ್ಟು ಎನರ್ಜಿ ಸಿಗುತ್ತಿತ್ತು. ಕೇರಳ ಸರ್ಕಾರ ನೀರಾ ನೀತಿ ರೂಪಿಸಲು ಉಮ್ಮನ್ ಚಾಂಡಿ ಜೊತೆಗೆ ಸೇರಿ ಯಶಸ್ವಿಯಾಗಿ ಮಾಡಿದ್ದರು. ಕರ್ನಾಟಕದಲ್ಲಿ ನೀರಾ ನೀತಿ ರೂಪಿಸಲು ನಮ್ಮ ಬೆನ್ನು ತಟ್ಟಿ ಸರ್ಕಾರದ ಜೊತೆಯಲ್ಲಿ ಮಾತುಕತೆ ನಡೆಸಲು ಅವಶ್ಯಕ ಎಲ್ಲಾ ಬೆಂಬಲ ನೀಡಿದ್ದರು. ಇದರಿಂದ ಕರ್ನಾಟಕದಲ್ಲಿಯೂ ಸಿಹಿ ನೀರಾ ನೀತಿ ಜಾರಿಗೆ ಬಂತು.
ತೆಂಗು ಬೆಳೆಗಾರರ ಸಂಘದ ಉದ್ಘಾಟನೆ
ಕರ್ನಾಟಕದ ತೆಂಗು ಕ್ಷೇತ್ರದಲ್ಲಿ ಕೇರಳದಲ್ಲಿ ಆದಂತಹ ಬದಲಾವಣೆ ಆಗಲಿಲ್ಲ. ಅದಕ್ಕೆ ಮುಖ್ಯ ಕಾರಣ ಕರ್ನಾಟಕದ ನಿರ್ದೇಶಕರು ಅಂತಹ ದಕ್ಷ ಅಧಿಕಾರಿಗಳಾಗಿರಲಿಲ್ಲ. ಕೇರಳದಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ಕೇಂದ್ರ ಕಛೇರಿ ಇದ್ದದ್ದು ಕೇರಳ ರೈತರಿಗೆ ಪೂರಕವಾಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ಹೋರಾಟದ ಫಲವಾಗಿ ರಾಜ್ಯದಲ್ಲಿ ಸುಮಾರು ಹದಿನಾಲ್ಕು ತೆಂಗು ಉತ್ಪಾದಕರ ಕಂಪನಿಗಳು ನೂರೈವತ್ತಕ್ಕು ಅಧಿಕ ಒಕ್ಕೂಟಗಳು ರಾಜ್ಯದಾದ್ಯಂತ ಸ್ಥಾಪನೆಯಾದವು. ಇವುಗಳ ಅಷ್ಟೊಂದು ಪರಿಣಾಮಕಾರಿಯಾಗಿ  ಕೆಲಸ ಮಾಡಲು ದಕ್ಷ ಅಧಿಕಾರಿಯ ಕೊರತೆಯನ್ನು ಮನಗಂಡು ತನ್ನ ಬಲಗೈನಂತಿದ್ದ ಶ್ರೀ ಹೇಮಚಂದ್ರ ಅವರನ್ನು ಕರ್ನಾಟಕಕ್ಕೆ ನಿರ್ದೇಶಕರಾಗಿ ಶ್ರೀ ಟಿ ಕೆ ಜೋಶ್ ಕಳಿಸಿಕೊಟ್ಟರು.
ಶ್ರೀ ಹೇಮಚಂದ್ರ ಕರ್ನಾಟಕಕ್ಕೆ ಬಂದ ಮೇಲೆ ತೆಂಗು ಬೆಳೆಗಾರರ ಒಕ್ಕೂಟ ಮತ್ತು ಕಂಪನಿಗಳಿಗೆ ಆನೆ ಬಲ ಬಂತು. ಜಾತ್ಯಾತೀತ ವಾಗಿ ಮತ್ತು ಪ್ರದೇಶಾತೀತವಾಗಿ ಎಲ್ಲರ ಬೆನ್ನು ತಟ್ಟಿ ಬೆಂಬಲಿಸಿದರು. ಇದರ ಪರಿಣಾಮವಾಗಿ ತೆಂಗು ಉತ್ಪಾದಕರ ಕಂಪನಿ ಮತ್ತು ಒಕ್ಕೂಟಗಳಿಗೆ ಆನೆ ಬಲ ಬಂತು. ಐತಿಹಾಸಿಕವಾಗಿ ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಅತೀ ಹೆಚ್ಚು ಅನುದಾನ ಹರಿದು ಬಂದವು. ವರ್ಷಕ್ಕೆ ಸರಾಸರಿ ನಾಲ್ಕು ಕೋಟಿ ಬರುತ್ತಿದ್ದ ಅನುದಾನ ಎಂಬತ್ತು ಕೋಟಿಗೆ ಏರಿತು.  ಇದೇ ಸಮಯದಲ್ಲಿ ಟಿಕೆ ಜೋಶ್ ಅವರನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿತು. ಈ ಸ್ಥಾನಕ್ಕೆ ಬಿಜೆಪಿ ವಿಚಾರದಲ್ಲಿ ನಂಬಿಕೆ ಉಳ್ಳ ರಾಜು ನಾರಾಯಣ ಸ್ವಾಮಿ ಅಧಿಕಾರವಹಿಸಿಕೊಂಡರು.
ಹೇಮಚಂದ್ರ ಅವರು ತಮ್ಮ ಕೆಲಸಗಳನ್ನು ಪ್ರಾಮಾಣಿಕ ವಾಗಿ ನಡೆಸುತ್ತಿದ್ದರು. ನಮಗೆ ಟಿಕೆ ಜೋಶ್ ಇಲ್ಲ ಎಂಬ ಭಾವನೆ ಬರದಂತೆ ವೈಯಕ್ತಿಕವಾಗಿ ನಮ್ಮ ಜೊತೆ ನಿಂತರು. ಯಾವುದೇ ಒಕ್ಕೂಟ ಕಂಪನಿ ಯಾವುದೇ ಕೆಲಸ ಕಾರ್ಯ ಕೇಳಿದರೂ ಪ್ರಾಮಾಣಿಕವಾಗಿ ಬೆಂಬಲ ನೀಡುತ್ತಿದ್ದರು. ಯೋಜನೆಗಳ ಅನುಷ್ಠಾನದಲ್ಲಿ ಇದ್ದ ನ್ಯೂನತೆಗಳನ್ನು ನಿವಾರಿಸಲು ಅನೇಕ ಬಗೆಯ ಬದಲಾವಣೆ ತಂದರು.
ಹೇಮಚಂದ್ರ
ಇದೇ ಸಮಯದಲ್ಲಿ ಬಿಜೆಪಿಯ ಕಣ್ಣು ಇವರ ಮೇಲೆ ಬಿತ್ತು. ಬಿಜೆಪಿಯ ಮಾಜಿ ಎಂಎಲ್ ಸಿ ಮನೋಹರ ಮಸ್ಕಿ ಗುಂಪು ಇವರ ಮೇಲೆ ಒತ್ತಡ ಹೇರಿ ತಮಗೆ ಬೇಕಾದಂತೆ ಲಾಬಿ ನಡೆಸಲು ಪ್ರಯತ್ನಿಸಿದರು. ಇದ್ಯಾವುದಕ್ಕೂ ಜಗ್ಗದ ಹೇಮಚಂದ್ರ “ತೆಂಗು ಅಭಿವೃದ್ಧಿ ಮಂಡಳಿಯ ಕಛೇರಿಯನ್ನು ಬಿಜೆಪಿಯ ಕಛೇರಿಯನ್ನಾಗಿ ಮಾಡಿಕೊಳ್ಳಲು ಬಿಡೆನು” ಎಂಬ ಸಂದೇಶ ರವಾನಿಸಿದರು. ಇದರ ಪರಿಣಾಮವಾಗಿ ಮನೋರ ಮಸ್ಕಿಯವರು (ಇವರ ಬಗ್ಗೆ ತಿಳಿಯಲು ಆರ್ ಎಸ್ ಎಸ್ ಹಿರಿಯರಾದ ಬೇಳೂರು ಸುದರ್ಶನ ಅವರನ್ನು ಕೇಳಿರಿ. ಅವರು ತಮ್ಮ ಮಿತ್ರಮಾಧ್ಯಮ ವೆಬ್ ಸೈಟ್ ನಲ್ಲಿ ಮಸ್ಕಿಯ ಸ್ಕೀಮುಗಳ ಬಗ್ಗೆ ಬರೆದಿದ್ದಾರೆ. ) ಚಿಕ್ಕನಾಯಕನಹಳ್ಳಿ ಎಮ್.ಎಲ್.ಎ ಜೆ.ಸಿ ಮಾಧುಸ್ವಾಮಿ ಜೊತೆ ಸೇರಿ ಹೇಮಚಂದ್ರ ವಿರುದ್ಧ ತಿರುಗಿ ಬಿದ್ದರು.
ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಮೂಲಕ ಹೇಮಚಂದ್ರ ವಿರುದ್ಧ ಪಿತೂರಿ ನಡೆಸಿ ಅವರನ್ನು ಅಮಾನತುಗೊಳಿಸುವಲ್ಲಿ ಯಶಸ್ವಿಯಾದರು. ಈ ವಿಚಾರವನ್ನು ಸ್ವತಃ ಮಾಧುಸ್ವಾಮಿಯೇ  ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಇಲ್ಲಿಂದ ತೆಂಗು ಬೆಳೆಗಾರರ ಯಶಸ್ಸಿಗೆ ದುಡಿಯುತ್ತಿದ್ದ ಮಹಾಚೇತನವೊಂದು ನಮ್ಮಿಂದ ದೂರವಾಯಿತು. ಈಗ ಇದರ ವಿರುದ್ಧ ತೆಂಗು ಬೆಳೆಗಾರರು ಚಳವಳಿ ನಡೆಸುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವ ಪಣ ತೊಟ್ಟಿದ್ದಾರೆ. ಕರ್ನಾಟಕದ ತೆಂಗು ಬೆಳೆಗಾರರ ಅಸ್ಮಿತೆಯಂತಿದ್ದ ಹೇಮಚಂದ್ರ ಮರಳಿ ಬರಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...