Homeಅಂತರಾಷ್ಟ್ರೀಯ100ಕ್ಕೂ ಹೆಚ್ಚು ಸೈನಿಕರಿದ್ದ ಕೊಲಂಬಿಯಾ ವಾಯುಪಡೆಯ ವಿಮಾನ ಪತನ : 66 ಮಂದಿ ಸಾವು

100ಕ್ಕೂ ಹೆಚ್ಚು ಸೈನಿಕರಿದ್ದ ಕೊಲಂಬಿಯಾ ವಾಯುಪಡೆಯ ವಿಮಾನ ಪತನ : 66 ಮಂದಿ ಸಾವು

- Advertisement -
- Advertisement -

ದಕ್ಷಿಣ ಕೊಲಂಬಿಯಾದ ಪುತುಮಾಯೊ ಪ್ರಾಂತ್ಯದ ಪ್ಯೂರ್ಟೊ ಲೆಗುಯಿಜಾಮೊ ಎಂಬಲ್ಲಿ ಸೋಮವಾರ (ಮಾರ್ಚ್ 23) ಬೆಳಿಗ್ಗೆ ವಾಯುಪಡೆಯ ವಿಮಾನವೊಂದು ಪತನಗೊಂಡಿದ್ದು, ದುರಂತದಲ್ಲಿ ಈವರೆಗೆ ಕನಿಷ್ಠ 66 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ಯೂರ್ಟೊ ಲೆಗುಯಿಜಾಮೊದ ಕೌಕಾಯಾ ವಿಮಾನ ನಿಲ್ದಾಣದಿಂದ ಪ್ಯೂರ್ಟೊ ಅಸಿಸ್‌ಗೆ ಹೊರಟಿದ್ದ ವಿಮಾನ, ರನ್‌ವೇಯ ಕೊನೆಯ ಭಾಗದ ಬಳಿ ನೆಲಕ್ಕಪ್ಪಳಿಸಿದೆ. ಅವಘಡ ನಡೆದ ಸ್ಥಳ ಪೆರು ಮತ್ತು ಈಕ್ವೆಡಾರ್ ಗಡಿಯ ಸಮೀಪವಿರುವ ಅಮೆಝಾನ್ ಅರಣ್ಯ ಪ್ರದೇಶದಲ್ಲಿದೆ.

ವರದಿಗಳ ಪ್ರಕಾರ, ಕೊಲಂಬಿಯಾದ ಸ್ಥಳೀಯ ಕಾಲಮಾನ ಸೋಮವಾರ (ಮಾ.23) ಬೆಳಿಗ್ಗೆ ಸುಮಾರು 9:50ಕ್ಕೆ ವಿಮಾನ ಪತನಗೊಂಡಿದೆ. ಭಾರತ ಮತ್ತು ಕೊಲಂಬಿಯಾ ನಡುವೆ ಸುಮಾರು 10 ಗಂಟೆ 30 ನಿಮಿಷಗಳ ಸಮಯದ ವ್ಯತ್ಯಾಸವಿದೆ. ಭಾರತವು ಕೊಲಂಬಿಯಾಕ್ಕಿಂತ ಮುಂದಿದೆ. ಹಾಗಾಗಿ, ಕೊಲಂಬಿಯಾದಲ್ಲಿ ಸೋಮವಾರ ಬೆಳಿಗ್ಗೆ 9:50 ಆಗಿದ್ದಾಗ, ಭಾರತದಲ್ಲಿ ರಾತ್ರಿ 8:20 ಆಗಿರುತ್ತದೆ.

ಅಪಘಾತಕ್ಕೀಡಾದ ವಿಮಾನವು ವಾಯುಪಡೆಗೆ ಸೇರಿದ C-130 ಹರ್ಕ್ಯುಲಸ್ ಮಾದರಿಯದ್ದಾಗಿದ್ದು, ಅದರಲ್ಲಿ 125ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ವಿಮಾನದಲ್ಲಿ 114 ಸೇನಾ ಸಿಬ್ಬಂದಿ ಹಾಗೂ 11 ಇತರ ಸಿಬ್ಬಂದಿ ಇದ್ದರು ಎಂದು ವಾಯುಪಡೆಯ ಕಮಾಂಡರ್ ಕಾರ್ಲೋಸ್ ಫೆರ್ನಾಂಡೊ ಸಿಲ್ವಾ ರುಯೇಡಾ ತಿಳಿಸಿದ್ದಾಗಿ ಬಿಬಿಸಿ ವರದಿ ಹೇಳಿದೆ.

ರಕ್ಷಣಾ ತಂಡಗಳು ದುರಂತ ಸ್ಥಳದಲ್ಲಿ ಮೃತದೇಹಗಳಿಗಾಗಿ ಹುಡುಕುತ್ತಿವೆ. ಗಾಯಗೊಂಡವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಬಿಬಿಸಿ ಮಂಗಳವಾರ (ಭಾರತೀಯ ಕಾಲಮಾನ ಮಾ.24) ಬೆಳಿಗ್ಗೆ ವರದಿ ಮಾಡಿದೆ.

ವಾಯುಪಡೆಯ ವಿಮಾನವಾದ್ದರಿಂದ ಅದರಲ್ಲಿ ಮದ್ದುಗುಂಡುಗಳು ಇತ್ತು. ವಿಮಾನಪತನಗೊಂಡ ವೇಳೆ ಆ ಮದ್ದುಗುಂಡುಗಳು ಸ್ಪೋಟಗೊಂಡು ಹೆಚ್ಚಿನ ಬೆಂಕಿ ಆವರಿಸಿದೆ ಎಂದು ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ತಿಳಿಸಿದ್ದಾರೆ.

ಈ ಘಟನೆಯು ಕೊಲಂಬಿಯಾದ ವಾಯುಪಡೆಯ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ದುರಂತ ಎಂದು ಹೇಳಲಾಗ್ತಿದೆ. ಸ್ಥಳೀಯ ಮಾಧ್ಯಮಗಳು ಹಂಚಿಕೊಂಡ ಫೋಟೋಗಳಲ್ಲಿ, ಘಟನಾ ಸ್ಥಳದಲ್ಲಿ ದಟ್ಟವಾದ ಹೊಗೆ ಮತ್ತು ಸೈನಿಕರನ್ನು ಹೊತ್ತ ಟ್ರಕ್‌ಗಳು ಆ ಪ್ರದೇಶಕ್ಕೆ ಹೋಗುತ್ತಿರುವುದನ್ನು ತೋರಿಸಿವೆ ಎಂದು ಬಿಬಿಸಿ ವರದಿ ಉಲ್ಲೇಖಿಸಿದೆ.

ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ “ಈ ಭಯಾನಕ ಅಪಘಾತ ಸಂಭವಿಸಬಾರದಿತ್ತು” ಎಂದು ಸಾಮಾಜಿಕ ಜಾಲತಾನ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರ ಮತ್ತು ವಿಮಾನಗಳನ್ನು ಹೊಸದಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಸರ್ಕಾರಿ ಕೆಲಸಗಳ ವಿಳಂಬವೇ ಕಾರಣ ಎಂದು ಅವರು ತಮ್ಮ ಸುದೀರ್ಘ ಬರಹದಲ್ಲಿ ದೂರಿದ್ದಾರೆ.

“ನಾನು ಇನ್ನು ಮುಂದೆ ಯಾವುದೇ ವಿಳಂಬವನ್ನು ಸಹಿಸುವುದಿಲ್ಲ, ನಮ್ಮ ಯುವಜನರ ಜೀವ ಪಣಕ್ಕಿಡಲಾಗಿದೆ” ಎಂದು ಬರೆದುಕೊಂಡಿರುವ ಅವರು, ಅಪಘಾತಕ್ಕೆ ನಿಖರ ಕಾರಣವೇನಿರಬಹುದು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಕಳೆದ ತಿಂಗಳು, ಬ್ಯಾಂಕ್‌ನೋಟುಗಳನ್ನು (ನಗದು) ಸಾಗಿಸುತ್ತಿದ್ದ ಬೊಲಿವಿಯನ್ ವಾಯುಪಡೆಯ C-130 ಹರ್ಕ್ಯುಲಸ್ ವಿಮಾನವು ದೇಶದ ಪಶ್ಚಿಮ ಭಾಗದಲ್ಲಿ ಪತನಗೊಂಡು, ಕನಿಷ್ಠ 20 ಜನರು ಸಾವನ್ನಪ್ಪಿದ್ದರು.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...