Homeಮುಖಪುಟಮುಸ್ಲಿಂ ವಿವಾಹ ವಿಚ್ಛೇದನ ನೋಂದಣಿ ಕಾಯ್ದೆ ರದ್ದು: ಅಸ್ಸಾಂ ವಿಧಾನಸಭೆಯಿಂದ ಹೊರನಡೆದ ಶಾಸಕರು

ಮುಸ್ಲಿಂ ವಿವಾಹ ವಿಚ್ಛೇದನ ನೋಂದಣಿ ಕಾಯ್ದೆ ರದ್ದು: ಅಸ್ಸಾಂ ವಿಧಾನಸಭೆಯಿಂದ ಹೊರನಡೆದ ಶಾಸಕರು

- Advertisement -
- Advertisement -

‘ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯ್ದೆ-1935’ನ್ನು ರದ್ದುಪಡಿಸುವ ಅಸ್ಸಾಂನ ಬಿಜೆಪಿ ಸರಕಾರದ ಸಂಪುಟದ ನಿರ್ಧಾರವನ್ನು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಐಯುಡಿಎಫ್ ಶಾಸಕರು ಅಸ್ಸಾಂ ವಿಧಾನಸಭೆಯಿಂದ ಹೊರ ನಡೆದಿದ್ದಾರೆ.

‘ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯ್ದೆ-1935’ನ್ನು ರದ್ದುಪಡಿಸುವ ಅಸ್ಸಾಂ  ಕ್ಯಾಬಿನೆಟ್ ನಿರ್ಧಾರದ ಬಗ್ಗೆ ಚರ್ಚಿಸಲು ಎಐಯುಡಿಎಫ್ ತಡೆ ನಿರ್ಣಯವನ್ನು ಮಂಡಿಸಿತ್ತು, ಅದನ್ನು ಸ್ಪೀಕರ್ ಬಿಸ್ವಜಿತ್ ಡೈಮರಿ ತಿರಸ್ಕರಿಸಿದ್ದರು. ಮೂಲ ಮಸೂದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸದೆ ತಿದ್ದುಪಡಿಗಳನ್ನು ಮಾಡಬಹುದಿತ್ತು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ರಾಜ್ಯದಲ್ಲಿ ಬಾಲ್ಯವಿವಾಹದ ಸಾಮಾಜಿಕ ಪಿಡುಗನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಸ್ಸಾಂ ಕ್ಯಾಬಿನೆಟ್ ಶುಕ್ರವಾರ ಕಾಯ್ದೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಅಂಗೀಕರಿಸಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಶರ್ಮಾ, ಬಾಲ್ಯವಿವಾಹವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಮಸೂದೆಯನ್ನು ರದ್ದುಗೊಳಿಸಲಾಗುವುದು ಎಂದು ಸೋಮವಾರ ಸದನದಲ್ಲಿ ಹೇಳಿದ್ದು, ನಾನು ಬದುಕಿರುವವರೆಗೂ ಅಸ್ಸಾಂನಲ್ಲಿ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಸಚಿವ ಸಂಪುಟದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಸದನದಿಂದ ಹೊರನಡೆದಿದೆ. ಎಐಯುಡಿಎಫ್ ಶಾಸಕರು ಆರಂಭದಲ್ಲಿ ಘೋಷಣೆಗಳನ್ನು ಕೂಗಿದರು ಮತ್ತು ಸದನದ ಬಾವಿಗಿಳಿದು ಧರಣಿ ನಡೆಸಿದ್ದಾರೆ.

ಅಸ್ಸಾಂ ಕ್ಯಾಬಿನೆಟ್‌ ‘ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯಿದೆ’ಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕಾಯಿದೆಯು ವಧು ಮತ್ತು ವರನ ಕಾನೂನುಬದ್ಧ ವಯಸ್ಸನ್ನು 18 ಮತ್ತು 21 ಆಗದಿದ್ದರೂ ವಿವಾಹ ನೋಂದಣಿಯನ್ನು ಅನುಮತಿಸುವ ನಿಬಂಧನೆಗಳನ್ನು ಒಳಗೊಂಡಿತ್ತು. ಇದೀಗ ಬಾಲ್ಯವಿವಾಹಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲಾಗಿದೆ ಎಂದು ಅಸ್ಸಾಂ ಸಿಎಂ ಹೇಮಂತ್‌ ಬಿಸ್ವಾ ಶರ್ಮಾ ಹೇಳಿದ್ದರು.

ಈ ಕ್ರಮವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ದೃಷ್ಟಿಯಲ್ಲಿ ತೆಗೆದುಕೊಂಡ ಒಂದು ಹೆಜ್ಜೆಯಾಗಿದೆ ಎಂದು ಅಸ್ಸಾಂ ಸಚಿವ ಜಯಂತ ಮಲ್ಲ ಬರುವಾ ಅವರು ಮಾದ್ಯಮಗಳಿಗೆ ತಿಳಿಸಿದ್ದರು. ಕಾನೂನು ಪ್ರಸ್ತುತ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ಸ್ವಯಂಪ್ರೇರಿತ ನೋಂದಣಿಯ ಅವಕಾಶವನ್ನು ಒದಗಿಸುತ್ತದೆ. ಕಾನೂನನ್ನು ರದ್ದುಗೊಳಿಸಿದ ನಂತರ ಮುಸ್ಲಿಮರು ಮದುವೆ ಮತ್ತು ವಿಚ್ಛೇದನವನ್ನು ಸುಲಭವಾಗಿ ನೋಂದಾಯಿಸಲು ಸಾಧ್ಯವಾಗುವುದಿಲ್ಲ. ಕಾನೂನನ್ನು ರದ್ದುಗೊಳಿಸಿದ ನಂತರ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಿಜಿಸ್ಟ್ರಾರ್‌ಗಳ ವ್ಯಾಪ್ತಿಗೆ ಇದು ಬರಲಿದೆ ಎಂದು ಹೇಳಲಾಗಿದೆ. ಎಲ್ಲಾ ವಿವಾಹಗಳನ್ನು ‘ವಿಶೇಷ ವಿವಾಹ ಕಾಯ್ದೆಯಡಿ’ ನೋಂದಾಯಿಸಬೇಕೆಂದು ಅಸ್ಸಾಂ ಸರ್ಕಾರ ಬಯಸುತ್ತದೆ ಎಂದು ಅಸ್ಸಾಂ ಸಚಿವ ಜಯಂತ ಬರುವಾ ಹೇಳಿದ್ದರು.

ಇದನ್ನು ಓದಿ: ಗಾಝಾ ಹತ್ಯಾಕಾಂಡವನ್ನು ಖಂಡಿಸಿ ಇಸ್ರೇಲ್‌ ರಾಯಭಾರ ಕಚೇರಿಯೆದುರು ಬೆಂಕಿ ಹಚ್ಚಿಕೊಂಡ ಅಮೆರಿಕದ ಅಧಿಕಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...