HomeಅಂಕಣಗಳುKarnataka SIRSIR ನಿಂದ ಬಾಧಿತರಾದ 13.3 ಕೋಟಿ ಮತದಾರರ ಮರುನೋಂದಣಿಗೆ ಕಾಂಗ್ರೆಸ್‌ನಿಂದ 'ಮತ ರಕ್ಷಕ'ರ ಪಡೆ

SIR ನಿಂದ ಬಾಧಿತರಾದ 13.3 ಕೋಟಿ ಮತದಾರರ ಮರುನೋಂದಣಿಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ಪಡೆ

- Advertisement -
- Advertisement -

ರಾಜ್ಯ ಮತ್ತು ದೇಶಾದ್ಯಂತ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ಶೋಷಿತ ಹಾಗೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಕೈಬಿಡಲಾಗಿದೆ ಎಂಬ ಗಂಭೀರ ಆರೋಪಗಳ ನಡುವೆಯೇ, ಕಾಂಗ್ರೆಸ್ ಪಕ್ಷವು ಬೃಹತ್ ಪ್ರತಿರೋಧದ ಅಭಿಯಾನಕ್ಕೆ ಮುಂದಾಗಿದೆ.

ಎಸ್‌ಐಆರ್ ವೇಳೆ ಅಕ್ರಮವಾಗಿ ಡಿಲೀಟ್ ಮಾಡಲಾಗಿರುವ ದೇಶದ ಸುಮಾರು 13.3 ಕೋಟಿ ಮತದಾರರನ್ನು ತಲುಪಿ, ಅವರ ಹಕ್ಕನ್ನು ಮರುಸ್ಥಾಪಿಸಲು ‘ಮತ ರಕ್ಷಕ’ರನ್ನು (ವೋಟ್ ರಕ್ಷಕ್) ನೇಮಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಅಕ್ಟೋಬರ್ 25ರಿಂದ ನವೆಂಬರ್ 25ರವರೆಗೆ ಇಡೀ ಒಂದು ತಿಂಗಳ ಕಾಲ ದೇಶಾದ್ಯಂತ ಈ ಮಹತ್ವದ ಕಾರ್ಯಚರಣೆ ನಡೆಯಲಿದೆ.

ಈ ಅಭಿಯಾನದ ಭಾಗವಾಗಿ ಎಸ್‌ಐಆರ್‌ಗೂ ಮೊದಲು ಮತ್ತು ನಂತರದ ಮತದಾರರ ಪಟ್ಟಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಪ್ರತಿಯೊಂದು ಬೂತ್ ಮಟ್ಟದಲ್ಲಿಯೂ ಕೈಬಿಡಲಾಗಿರುವ ಮತದಾರರ ನಿಖರ ಪಟ್ಟಿಯನ್ನು ‘ಮತ ರಕ್ಷಕರು’ ಹಾಗೂ ಬೂತ್ ಮಟ್ಟದ ಏಜೆಂಟ್‌ಗಳಿಗೆ (BLA) ನೀಡಲಾಗುತ್ತದೆ. ನಂತರ ಈ ಕಾರ್ಯಕರ್ತರು ನೇರವಾಗಿ ಬಾಧಿತ ಮತದಾರರ ಮನೆ ಬಾಗಿಲಿಗೆ ತೆರಳಿ, ಅವರ ಹೆಸರು ಡಿಲೀಟ್ ಆಗಿರುವ ಹಿಂದಿನ ಅಸಲಿ ಕಾರಣಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳಲಿದ್ದಾರೆ.

ಅಷ್ಟೇ ಅಲ್ಲದೆ, ಅರ್ಹ ಮತದಾರರು ಮತ್ತೆ ಪಟ್ಟಿಗೆ ಸೇರ್ಪಡೆಯಾಗಲು ಅಗತ್ಯವಿರುವ ಫಾರ್ಮ್-6 ಅನ್ನು ಭರ್ತಿ ಮಾಡಿ ಸಲ್ಲಿಸಲು ಪೂರ್ಣ ಪ್ರಮಾಣದ ನೆರವು ನೀಡಲಿದ್ದಾರೆ. ಈ ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆ ಹಾಗೂ ದಾಖಲೆಗಳ ಪೂರೈಕೆಯನ್ನು ಕಾಂಗ್ರೆಸ್‌ನ ‘ಕನೆಕ್ಟ್ ಸೆಂಟರ್’ ನಿರ್ವಹಿಸಲಿದ್ದು, ಈಗಾಗಲೇ ತೆಲಂಗಾಣದ ಆರು ಕ್ಷೇತ್ರಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಯಶಸ್ವಿಯಾಗಿ ಜಾರಿಗೆ ತರಲಾಗಿತ್ತು. ಪ್ರಸ್ತುತ ಪಕ್ಷದ ಬಳಿ 8 ರಾಜ್ಯಗಳ ದತ್ತಾಂಶ ಲಭ್ಯವಿದ್ದು, ಶೀಘ್ರದಲ್ಲೇ ಉಳಿದ ರಾಜ್ಯಗಳ ಮಾಹಿತಿಯನ್ನೂ ಕಲೆಹಾಕಲಾಗುತ್ತದೆ.

ಕಳೆದ ತಿಂಗಳು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ತೆಗೆದುಕೊಂಡ ಈ ನಿರ್ಧಾರಕ್ಕೆ, ಅಕ್ಟೋಬರ್ 5ರಂದು ನಡೆದ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಅಂತಿಮ ರೂಪುರೇಷೆ ನೀಡಲಾಗಿದೆ. ಮತದಾರರ ಮರುನೋಂದಣಿ ಕಾರ್ಯದ ಜೊತೆಗೆ, ಎಸ್‌ಐಆರ್ ಹೆಸರಿನಲ್ಲಿ ನಡೆಯುತ್ತಿರುವ ‘ಮತಗಳ್ಳತನ’ವನ್ನು ಖಂಡಿಸಿ ಅಕ್ಟೋಬರ್ 10ರಿಂದ 20ರವರೆಗೆ ದೇಶಾದ್ಯಂತ ಬೂತ್ ಮಟ್ಟದ ಬೈಕ್ ರ್‍ಯಾಲಿ ಹಾಗೂ ಪಾದಯಾತ್ರೆಗಳನ್ನು ನಡೆಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಲು ನಿರ್ಧರಿಸಲಾಗಿದೆ. ಅಲ್ಲದೆ, ನವರಾತ್ರಿ ಆಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ ಈ ಅಕ್ರಮದ ಕುರಿತು ಜನಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚಲಾಗುತ್ತದೆ.

ಈ ಹೋರಾಟದ ಮುಂದಿನ ಭಾಗವಾಗಿ ‘ಇಂಡಿಯಾ’ ಒಕ್ಕೂಟದ ವತಿಯಿಂದ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ನವೆಂಬರ್ 25 ಮತ್ತು 26ರಂದು ರಾಷ್ಟ್ರ ರಾಜಧಾನಿಯ ಗಡಿಭಾಗಗಳಲ್ಲಿ ಬೃಹತ್ ಯಾತ್ರೆಗಳನ್ನು ಆಯೋಜಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಲೋಚನೆ, ಹಾಸ್ಯ – ಚರ್ಚೆಗೆ ಮುಕ್ತ ವೇದಿಕೆ: ‘ಕಾಕ್ರೋಚ್ ಕ್ಲಬ್’ ಆರಂಭಿಸಿದ ಸಿಜೆಪಿ

ದೇಶದಲ್ಲಿ ಬದಲಾವಣೆ ತರಲು ಯುವಜನರ ಶಕ್ತಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಉದ್ದೇಶದಿಂದ ರಾಜಕೀಯ ಮತ್ತು ವಿಡಂಬನಾತ್ಮಕ ಮುಕ್ತ ಚರ್ಚೆಗಳನ್ನು ಆಯೋಜಿಸಲು "ಕಾಕ್ರೋಚ್ ಕ್ಲಬ್" ಎಂಬ ಹೊಸ ಉಪಕ್ರಮವನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆರಂಭಿಸಿದೆ...

ಖಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಸಂಚು : ಭಾರತೀಯ ಪ್ರಜೆಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿದ ಅಮೆರಿಕ ನ್ಯಾಯಾಲಯ

ಅಮೆರಿಕ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ಫೆಡರಲ್ ನ್ಯಾಯಾಲಯವು 235 ತಿಂಗಳುಗಳ...

560 ದಿನಗಳ ಜೈಲುವಾಸದ ಬಳಿಕ ಪತ್ರಕರ್ತನ ವಿರುದ್ಧದ ಯುಎಪಿಎ ಆರೋಪ ಕೈಬಿಟ್ಟ ನ್ಯಾಯಾಲಯ

ಕೇರಳ ಮೂಲದ ಪತ್ರಕರ್ತ ರೆಜಾಜ್ ಎಂ. ಶೀಬಾ ಸಿದ್ದೀಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾಗಿದ್ದ ಎರಡು ಆರೋಪಗಳಿಂದ ನಾಗಪುರದ ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿದೆ. ಈ ಪ್ರಕರಣದಲ್ಲಿ...

ಪತ್ರಕರ್ತರನ್ನು ವಶಕ್ಕೆ ಪಡೆದು ‘ಜನಸಂದಣಿ ನಿಯಂತ್ರಣ’ ಎಂದು ಸಮರ್ಥಿಸಿಕೊಳ್ಳಲಾಗದು: ದೆಹಲಿ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ಪತ್ರಕರ್ತರ ಸಂಘದ ಆಕ್ಷೇಪ

ನವದೆಹಲಿ: ಪ್ರತಿಭಟನೆಗಳನ್ನು ವರದಿ ಮಾಡಲು ತೆರಳಿದ ಪತ್ರಕರ್ತರನ್ನು ಬಲವಂತವಾಗಿ ಸ್ಥಳದಿಂದ ಹೊರಗೆಳೆದು ಪೊಲೀಸ್ ವಾಹನಗಳಿಗೆ ತಳ್ಳುವುದು, ಅವರ ಚಲನವಲನಗಳಿಗೆ ನಿರ್ಬಂಧ ಹೇರುವುದು ಸೇರಿದಂತೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕ್ರಮಗಳನ್ನು ಕೇವಲ ‘ಜನಸಂದಣಿ...

‘BJP Ka Beta, BJPberg’ : ಮೆಟಾ ವಿರುದ್ಧ ಯುವ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ; ನಿರ್ಬಂಧಿತ ಖಾತೆ, ಪೋಸ್ಟ್‌ಗಳ ಮರುಸ್ಥಾಪನೆಗೆ 7 ದಿನಗಳ ಗಡುವು 

ವಿರೋಧ ಪಕ್ಷದ ನಾಯಕರು (ವಿಶೇಷವಾಗಿ ಕಾಂಗ್ರೆಸ್ ನಾಯಕರು), ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿಗಳ (Influencers) ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಟೆಕ್ ದೈತ್ಯ ‘ಮೆಟಾ’ (Meta)...

ಕಾಡುಗೊಲ್ಲರ ಎಸ್‌ಟಿ ಹಕ್ಕಿನ ಹೋರಾಟ: ಮೂರು ತಿಂಗಳ ಅಧ್ಯಯನದ ಬಳಿಕ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ; ಹಿರಿಯೂರು ಉಪಚುನಾವಣೆ ಸಿದ್ಧತೆಯೂ ಜೋರು

ಸಮುದಾಯದ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ, ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ಜನಾಂಗೀಯ ಅಧ್ಯಯನ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು...

ಕೇರಳ: ಇ20 ಪರೀಕ್ಷೆಗೆ ಶುದ್ಧ ಪೆಟ್ರೋಲ್ ನೀಡಲು ತೈಲ ಕಂಪನಿಗಳ ಹಿಂದೇಟು

ಪೆಟ್ರೋಲ್‌ನಲ್ಲಿರುವ ಎಥನಾಲ್ ಪ್ರಮಾಣವನ್ನು ಪರಿಶೀಲಿಸುವ ಕೇರಳ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇ20 ಪೆಟ್ರೋಲ್‌ನಲ್ಲಿನ ಎಥನಾಲ್ ಪ್ರಮಾಣವನ್ನು ಹೋಲಿಕೆ ಮಾಡಿ ಪರೀಕ್ಷಿಸಲು ಅಗತ್ಯವಿರುವ ಎಥನಾಲ್ ಮಿಶ್ರಣವಿಲ್ಲದ ಶುದ್ಧ ಪೆಟ್ರೋಲ್ ಮಾದರಿಗಳನ್ನು ಒದಗಿಸಲು ತೈಲ ಕಂಪನಿಗಳು...

ಜಮ್ಮು-ಕಾಶ್ಮೀರ: ನೇಮಕಾತಿ ಅಕ್ರಮದ ವಿರುದ್ಧ  ಕೊರೆಯುವ ಚಳಿಯಲ್ಲೂ ಧರಣಿ: ವಿದ್ಯಾರ್ಥಿಗಳ ಜೊತೆ ರಾತ್ರಿ ಕಳೆದ ಮಾಜಿ ಸಂಸದ ಅಗಾ ರುಹುಲ್ಲಾ

ಶ್ರೀನಗರ: ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳು, ಪರೀಕ್ಷಾ ವಂಚನೆ ಮತ್ತು ನೇಮಕಾತಿ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯುವ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ...

ತಿರುಪರಂಕುಂದ್ರಂ ವಿವಾದ : ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರದಿಂದ ಮರುಪರಿಶೀಲನಾ ಅರ್ಜಿ

ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಸಮೀಪದ 'ದೀಪತ್ತೂನ್' (ಕಲ್ಲಿನ ಸ್ತಂಭ) ಮೇಲೆ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡಿರುವ ಇತ್ತೀಚಿನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ....

ಅಗ್ನಿವೀರರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ಯತ್ನ: 14 ವರ್ಷದ ಬಾಲಕನ ವಶಕ್ಕೆ ಪಡೆದ ದೆಹಲಿ ಪೊಲೀಸರು

ಸುಮಾರು 4,000 ಅಗ್ನಿವೀರ ಸಿಬ್ಬಂದಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹ್ಯಾಕ್ ಮಾಡಿ, ಅದನ್ನು ಡಾರ್ಕ್ ವೆಬ್‌ನಲ್ಲಿ 500 ಡಾಲರ್‌ಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಹರಿಯಾಣದ ಬಲ್ಲಭಗಢದ 14 ವರ್ಷದ ಬಾಲಕನನ್ನು...