Homeಆರೋಗ್ಯಅಮೆರಿಕಾದ ಮೃಗಾಲಯದ ಹುಲಿಗೆ ಕೊರೊನಾ ಸೋಂಕು; ಸಾಕು ಪ್ರಾಣಿಗಳಿಗೆ ಸೋಂಕು ತಗುಲಬಲ್ಲದೆ?

ಅಮೆರಿಕಾದ ಮೃಗಾಲಯದ ಹುಲಿಗೆ ಕೊರೊನಾ ಸೋಂಕು; ಸಾಕು ಪ್ರಾಣಿಗಳಿಗೆ ಸೋಂಕು ತಗುಲಬಲ್ಲದೆ?

- Advertisement -
- Advertisement -

ಅಮೆರಿಕಾದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದ ಹುಲಿಯೊಂದಕ್ಕೆ ಕೋವಿಡ್-19 ಸೋಂಕು ತಗಲಿರುವುದು ಧೃಢಪಟ್ಟಿದೆ. ಇತರ ಆರು ಹುಲಿಗಳು ಕೂಡ ಸೋಂಕಿನ ಲಕ್ಷಣಗಳನ್ನು ಹೊಂದಿವೆ ಎಂದು ಅಮೆರಿಕಾದ ಕೃಷಿ ಇಲಾಖೆ ಭಾನುವಾರ ಹೇಳಿದೆ.

“ಇದೆ ಮೊದಲ ಬಾರಿಗೆ ಮನುಷ್ಯನಿಂದ ಕೋವಿಡ್-19 ಸೋಂಕು (ಕಾಡು) ಪ್ರಾಣಿಗಳಿಗೆ ತಗಲುವುದು ತಿಳಿದುಬಂದಿದೆ” ಎಂದು ಬ್ರಾಂಕ್ಸ್ ಮೃಗಾಲಯದ ಮುಖ್ಯ ಪಶುವೈದ್ಯ ಪಾಲ್ ಕ್ಯಾಲ್ ಹೇಳಿದ್ದಾರೆ. ಯಾವುದೇ ಲಕ್ಷಣಗಳನ್ನು ಹೊಂದಿಲ್ಲದ ಕೊರೊನ ಸೋಂಕಿತ ಮೃಗಾಲಯದ ಸಿಬ್ಬಂದಿಯಿಂದ ಹುಲಿಗೆ ಸೋಂಕು ತಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಆ ವ್ಯಕ್ತಿ ಯಾರು ಎಂದು ತಿಳಿಯಲಾಗಿಲ್ಲ. ಮಾರ್ಚ್ 16ರಿಂದಲೇ ಮೃಗಾಲಯವನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು.

ಈ ಹಿಂದೆ ನಾಯಿಗಳು ಮತ್ತು ಬೆಕ್ಕುಗಳು ಸಾರ್ಸ್ ಸೋಂಕಿಗೆ ಗುರಿಯಾಗುವುದನ್ನು ಗುರುತಿಸಲಾಗಿತ್ತು. ಈ ನಿಟ್ಟಿನಲ್ಲಿ ಮನುಷ್ಯನಿಂದ ಸಾಕು ಮತ್ತು ಕಾಡುಪ್ರಾಣಿಗಳಿಗೆ ಕೋವಿಡ್-19 ಸೋಂಕು ಹರಡುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.

ಬೆಕ್ಕುಗಳು ತಮ್ಮ ನಡುವೆ  ಕೋವಿಡ್-19 ಸೋಂಕು ಹರಡಿಕೊಳ್ಳುತ್ತವೆ: ಅಧ್ಯಯನ

ಚೈನಾದ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ ಈ ಹೊಸ ಕೊರೊನಾ ವೈರಸ್ ಬೆಕ್ಕುಗಳಿಗೆ ಹರಡುವ ಸಾಧ್ಯತೆ ಇದೆ ಮತ್ತು ಬೆಕ್ಕುಗಳು ಅವುಗಳ ನಡುವೆ ಈ ಸೋಂಕನ್ನು ಹಬ್ಬಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.

ಹರ್ಬಿನ್ ಪಶುವೈದ್ಯ ಸಂಶೋಧನಾ ಸಂಸ್ಥೆಯ ಸಂಶೋಧಕರು ಬೆಕ್ಕುಗಳು ಕೊರೊನ ಸೋಂಕಿಗೆ ಒಳಗಾಗುವ ಸಾಧ್ಯತೆ ಇದು ಎಂದು ತಿಳಿಸಿದ್ದರಲ್ಲದೆ, ನಾಯಿಗಳು, ಕೋಳಿಗಳು ಮತ್ತು ಹಂದಿಗಳು ಈ ರೋಗಕ್ಕೆ ಒಳಗಾಗುವ ಸಾಧ್ಯತೆ ಇಲ್ಲ ಎಂದು ಅಧ್ಯಯನ ತಿಳಿಸುತ್ತದೆ ಎಂದಿದ್ದರು.

ಬೆಕ್ಕುಗಳು ಕೂಡ ಕೊರೊನಾ ಸೋಂಕಿಗೆ ಗುರಿಯಾದರೆ ತಮ್ಮ ಸಂತತಿ ನಡುವೆ ಈ ಸೋಂಕನ್ನು ಹಬ್ಬುವುದಕ್ಕೆ ಅಧ್ಯಯನ ಫಲಿತಾಂಶ ನೀಡಿದೆ ಹೊರತು ಬೆಕ್ಕುಗಳಿಂದ ಮನುಷ್ಯರಿಗೆ ಸೋಂಕು ಹಬ್ಬುವುದರ ಬಗ್ಗೆ ಯಾವುದೇ ನೇರ ಸಾಕ್ಷ್ಯ ದೊರೆತಿಲ್ಲ ಎಂದು ಚೈನಾ ಕೃಷಿ ವಿಜ್ಞಾನಗಳ ಪ್ರಾಧಿಕಾರ ಹೇಳಿತ್ತು.

ಬೆಲ್ಜಿಯಂನಲ್ಲಿ ಇತ್ತೀಚೆಗಷ್ಟೇ ಬೆಕ್ಕೊಂದು ತನ್ನ ಮಾಲೀಕನಿಂದ ಕೊರೊನಾ ಸೋಂಕಿಗೆ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಅಧ್ಯಯನಗಳು ನಡೆಯುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...