12 ತಬ್ಲಿಘಿ ಜಮಾಅತ್‌‌ ಸದಸ್ಯರ ಪ್ರಕರಣವನ್ನು ಖುಲಾಸೆಗೊಳಿಸಿದ ಯುಪಿ ನ್ಯಾಯಾಲಯ | Naanu Gauri

ಕೋವಿಡ್ ಮಾನದಂಡಗಳ ನಿರ್ಲಕ್ಷ್ಯ ಮತ್ತು ನಿಯಮ ಉಲ್ಲಂಘನೆ ಕಾರಣಕ್ಕಾಗಿ ವರ್ಷಗಳ ಹಿಂದೆ ದಾಖಲಾಗಿದ್ದ, ತಬ್ಲಿಘಿ ಜಮಾತ್‌ನ ಹನ್ನೆರಡು ಸದಸ್ಯರ ವಿರುದ್ಧದ ಎಲ್ಲಾ ಆರೋಪಗಳನ್ನು ಬರೇಲಿಯ ಮುಖ್ಯ ನ್ಯಾಯಾಧೀಶರು ಶನಿವಾರ ಮುಕ್ತಗೊಳಿಸಿದ್ದಾರೆ.

ಪ್ರಕರಣ ಖುಲಾಸೆಗೊಂಡವರಲ್ಲಿ ಒಂಬತ್ತು ಜನರು ಥಾಯ್‌ಲ್ಯಾಂಡ್‌ ಪ್ರಜೆಗಳಾಗಿದ್ದಾರೆ. ಅವರ ಇಬ್ಬರು ಭಾಷಾಂತರಕಾರರು ಮತ್ತು ದೆಹಲಿಯ ಜಮಾತ್ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ವಾಸಿಸುತ್ತಿದ್ದ ಶಹಜಹಾನ್ ಪುರದ ಮಸೀದಿಯ ಉಸ್ತುವಾರಿಯ ಮೇಲಿದ್ದ ಆರೋಪಗಳು ಕೂಡಾ ಖೂಲಾಸೆಗೊಂಡಿದೆ. ಥಾಯ್ ಪ್ರಜೆಗಳಿಗೆ ತಮ್ಮ ದೇಶಕ್ಕೆ ಮರಳಲು ಅವಕಾಶ ನೀಡಲಾಗಿದೆ.

ಕಳೆದ ವರ್ಷ ಮಾರ್ಚ್ ಆರಂಭದಲ್ಲಿ, ತಬ್ಲಿಘಿ ಜಮಾತ್‌ನ ನಿಜಾಮುದ್ದೀನ್ ಮರ್ಕಝ್‌(ಕೇಂದ್ರ)ನಲ್ಲಿ ಸಾವಿರಾರು ಜನರು ಸೇರಿದ್ದರು.

ಇದನ್ನೂ ಓದಿ: ತಬ್ಲೀಘಿಗಳನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಕ್ಷಮೆ ಕೇಳಿದ ‘ನ್ಯೂಸ್‌18 ಕನ್ನಡ’!

2,300 ವಿದೇಶಿ ಪ್ರಜೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಒಕ್ಕೂಟ ಸರ್ಕಾರ ಹೇಳಿತ್ತು. ಮಾರ್ಚ್ 15, 2020 ರ ಹೊತ್ತಿಗೆ ಸಭೆ ಕೊನೆಗೊಂಡಿತ್ತು ಮತ್ತು ಇದರ ನಂತರ ಒಕ್ಕೂಟ ಸರ್ಕಾರ ಲಾಕ್‌ಡೌನ್ ಅನ್ನು ಘೋಷಿಸಿತ್ತು.

ಈ ಕಾರ್ಯಕ್ರಮ ನಂತರ ಒಂಬತ್ತು ಥಾಯ್ ಪ್ರಜೆಗಳು ಹಾಗೂ ಅವರ ಇಬ್ಬರು ಅನುವಾದಕರು ಶಹಜಹಾನ್ ಪುರ ಮಸೀದಿಯಲ್ಲಿ ತಂಗಿದ್ದರು. ಎಪ್ರೀಲ್ 1 ರಂದು ಮಸೀದಿಯ ಉಸ್ತುವಾರಿ ಸೇರಿದಂತೆ ಒಟ್ಟು ಹನ್ನೆಡೆದು ಜನರನ್ನು ಬಂಧಿಸಲಾಗಿತ್ತು.

ಥಾಯ್ ಪ್ರಜೆಗಳು ಮತ್ತು ಅವರ ಭಾರತೀಯ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 188 (ಸರ್ಕಾರಿ ನಿಯಮ ಉಲ್ಲಂಘಟನೆ), 269 (ಸೋಂಕು ಹರಡುವ ಬಗ್ಗೆ ನಿರ್ಲಕ್ಷ್ಯ), 270 (ಅಪಾಯಕಾರಿ ಕಾಯಿಲೆಯ ಸೋಂಕು ಹರಡುವ ಸಾಧ್ಯತೆ), 271 (ಕ್ವಾರಂಟೈನ್‌ ನಿಯಮ ಉಲ್ಲಂಘನೆ) ಮತ್ತು ಸಾಂಕ್ರಾಮಿಕ ರೋಗಗಳ ಕಾಯಿದೆಯ ಸೆಕ್ಷನ್ 3 (ಕಾಯಿದೆಯಡಿ ಮಾಡಿದ ನಿಯಮಗಳನ್ನು ಪಾಲಿಸದಿರುವುದು) ಸೇರಿದಂತೆ ಪ್ರಕರಣ ದಾಖಲಾಗಿತ್ತು.

ಥಾಯ್ ಪ್ರಜೆಗಳ ಮೇಲೆ ಪ್ರತ್ಯೇಕವಾಗಿ, ವಿದೇಶಿಯರ ಕಾಯಿದೆಯ ಸೆಕ್ಷನ್ 14 (ವೀಸಾ ನಿಯಮಗಳನ್ನು ಉಲ್ಲಂಘನೆ) ಅಡಿಯಲ್ಲಿ ದಾಖಲಿಸಲಾಗಿತ್ತು.

ಇದೆ ಸಮಯದಲ್ಲಿ ಪ್ರಕರಣ ದಾಖಲಿಸಲ್ಪಟ್ಟಿದ್ದ ಹಲವು ತಬ್ಲೀಘಿ ಜಮಾಅತ್‌ ಸದಸ್ಯರ ಮೇಲಿನ ಪ್ರಕರಣವನ್ನು ದೇಶದ ಬೇರೆ ಬೇರೆ ನ್ಯಾಯಾಲಯಗಳು ಈ ಹಿಂದ ಖುಲಾಸೆಗೊಳಿಸಿದ್ದವು.

ಇದನ್ನೂ ಓದಿ: ತಬ್ಲೀಘಿ ಜಮಾತ್‌ನ 36 ವಿದೇಶಿಗರೂ ದೋಷಮುಕ್ತ ಎಂದ ಹೈಕೋರ್ಟ್: ಬಿಜೆಪಿಗೆ ಮುಖಭಂಗ

LEAVE A REPLY

Please enter your comment!
Please enter your name here