Homeಮುಖಪುಟಮೇಲ್ಜಾತಿ ಗೆಳೆಯರ ಊಟದ ತಟ್ಟೆ ಮುಟ್ಟಿದ್ದಕ್ಕೆ ದಲಿತ ಯುವಕನ ಹತ್ಯೆ!

ಮೇಲ್ಜಾತಿ ಗೆಳೆಯರ ಊಟದ ತಟ್ಟೆ ಮುಟ್ಟಿದ್ದಕ್ಕೆ ದಲಿತ ಯುವಕನ ಹತ್ಯೆ!

ಪರಿಶಿಷ್ಟ ಜಾತಿಗೆ ಸೇರಿದ ಕೃಷಿ ಕಾರ್ಮಿಕ ದೇವರಾಜ್ ಅನುರಾಜಿ, ತನ್ನ ಇಬ್ಬರು ಮೇಲ್ಜಾತಿಯ ಗೆಳೆಯರಾದ ಅಪೂರ್ವಾ ಸೋನಿ ಮತ್ತು ಸಂತೋಷ್ ಪಾಲ್ ಅವರ ಊಟವಿದ್ದ ತಟ್ಟೆಯನ್ನು ಮುಟ್ಟಿದ ನಂತರ ಥಳಿತಕ್ಕೆ ಒಳಗಾಗಿದ್ದಾನೆ.

- Advertisement -
- Advertisement -

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಸಮಾರಂಭವೊಂದರಲ್ಲಿ ಮೇಲ್ಜಾತಿ ಗೆಳೆಯರ ಊಟದ ತಟ್ಟೆಯನ್ನು ಮುಟ್ಟಿದನೆಂದು 25 ವರ್ಷದ ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಲಾಗಿದೆ.

ಈ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಕೃಷಿ ಕಾರ್ಮಿಕ ದೇವರಾಜ್ ಅನುರಾಜಿ, ತನ್ನ ಇಬ್ಬರು ಮೇಲ್ಜಾತಿಯ ಗೆಳೆಯರಾದ ಅಪೂರ್ವಾ ಸೋನಿ ಮತ್ತು ಸಂತೋಷ್ ಪಾಲ್ ಅವರ ಊಟದ ತಟ್ಟೆಯನ್ನು ಮುಟ್ಟಿದ ನಂತರ ಥಳಿತಕ್ಕೆ ಒಳಗಾಗಿದ್ದಾನೆ.

ಇದನ್ನೂ ಓದಿ: ಜಾತಿ-ಧರ್ಮಗಳ ನಡುವೆ ಕೋಮುಗಲಭೆ ಎಬ್ಬಿಸಿ ಬೇಳೆ ಬೇಯಿಸಿಕೊಳ್ಳುವ ಯತ್ನಾಳ್‌ ಕುತಂತ್ರ ಫಲಿಸುವುದಿಲ್ಲ: ಕರವೇ

ದೇವರಾಜ್‌ಗೆ ರಕ್ತಸ್ರಾವವಾಗುವವರೆಗೂ ಕೋಲುಗಳಿಂದ ಹೊಡೆಯಲಾಗಿದೆ. ಆತ ಮೂರ್ಛೆ ಹೋದ ನಂತರ ‘ಈತ ಗಾಯಗೊಂಡಿದ್ದಾನೆ’ ಎಂದು ಆತನ ಮನೆಗೆ ಸಾಗಿಸಿದರು. ನಂತರ ಸಂಜೆ 7 ರ ಸುಮಾರಿಗೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಒತ್ತಾಯ: ದಲಿತರ ಗುಡಿಸಲು ಸುಟ್ಟ ಮೇಲ್ಜಾತಿಯವರು!

“ಮೃತ ಮತ್ತು ಆರೋಪಿಗಳು ಒಂದೇ ಹಳ್ಳಿಯವರು. ಪಾರ್ಟಿಯಲ್ಲಿ ತಮ್ಮ ಸ್ನೇಹಿತರ ಊಟದ ತಟ್ಟೆಯನ್ನು ಮುಟ್ಟಿದ್ದಕ್ಕಾಗಿ ಅವರು ದೇವರಾಜ್‌ನನ್ನು ಕೊಂದಿದ್ದಾರೆ” ಎಂದು ಗೌರಿಹಾರ್ ಪೊಲೀಸ್ ಠಾಣೆಯ ಟೌನ್ ಇನ್ಸ್‌ಪೆಕ್ಟರ್ ಜಸ್ವಂತ್ ಸಿಂಗ್ ರಜಪೂತ್ ಹೇಳಿದ್ದಾರೆ.

ಪರಾರಿಯಾಗಿದ್ದ ಆರೋಪಿಗಳ ಮೇಲೆ ಗೌರಿಹಾರ್ ಪೊಲೀಸರು ಕೊಲೆ ಮತ್ತು ದಲಿತರ ಮೇಲಿನ ದೌರ್ಜನ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಷನಲ್ ಹೆರಾಲ್ಡ್‌ ವರದಿ ಮಾಡಿದೆ.

ಇದನ್ನೂ ಓದಿ: ಇದು ಯಡಿಯೂರಪ್ಪನವರ ’ಜಾತಿಗೊಂದು ನಿಗಮ’ವಷ್ಟೇ ಅಲ್ಲ, ಬಿಜೆಪಿಯ ಅಪಾಯಕಾರಿ ವೈದಿಕಶಾಹಿ ವರಸೆ!

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 34 ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ರಜಪೂತ್ ತಿಳಿಸಿದ್ದಾರೆ.

“ಆರೋಪಿಗಳನ್ನು ಹುಡುಕಲಾಗುತ್ತಿದೆ. ಅತೀ ಶೀಘ್ರದಲ್ಲಿ ಅವರನ್ನು ಜೈಲಿಗೆ ಕಳುಹಿಸಲಾಗುವುದು. ಜೊತೆಗೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯನ್ವಯ ಸಂತ್ರಸ್ತರ ಕುಟುಂಬಕ್ಕೆ 8.25 ಲಕ್ಷ ರೂ. ಪರಿಹಾರ ಧನ ಸೇರಿದಂತೆ ಇತರ ಪ್ರಯೋಜನಗಳು ಸಿಗಲಿವೆ” ಎಂದು ಛತ್ತರ್‌ಪುರ ಜಿಲ್ಲೆಯ ಎಎಸ್‌ಪಿ ಹೇಳಿದರು.

ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ

ಮಧ್ಯಪ್ರದೇಶದಲ್ಲಿ ದಲಿತರ ವಿರುದ್ಧದ ಅಪರಾಧ ಹೊಸದೇನಲ್ಲ.

ಕೇವಲ ಹದಿನೈದು ದಿನಗಳ ಹಿಂದೆ, ಸಿಗರೇಟ್ ಹಚ್ಚಲು ಬೆಂಕಿಕಡ್ಡಿ ನೀಡಲು ನಿರಾಕರಿಸಿದ ಕಾರಣಕ್ಕೆ ಗುನಾ ಜಿಲ್ಲೆಯ ಕರೋಡ್ ಗ್ರಾಮದ ನಿವಾಸಿ 50 ವರ್ಷದ ದಲಿತ ಲಾಲ್ಜಿರಾಮ್ ಅಹಿರ್ವಾರ್ ಅವರ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ.


ಇದನ್ನೂ ಓದಿ: ಜಾತಿ ದ್ವೇಷ: ದಲಿತ ಕುಟುಂಬವನ್ನು ಕೊಲ್ಲಲು ತಂದೆಯಿಂದಲೇ ಮಗನಿಗೆ ಪ್ರಚೋದನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...