25 ವರ್ಷಗಳ ಹಿಂದೆ ಇದೆ ದಿನ ಬಾಲಿವುಡ್‌ನಲ್ಲಿ’ದಿಲ್ವಾಲೆ ದುಲ್ಹಾನಿಯಾ ಲೆ ಜಯೆಂಗೆ’ (DDLJ) ಚಿತ್ರ ಬಿಡುಗಡೆಯಾಗಿತ್ತು. ಅಂದು ಈ ಚಿತ್ರ ಈ ಮಟ್ಟಿಗೆ ಯಶಸ್ಸು, ದಾಖಲೆಗಳನ್ನು ಸಾಧಿಸುತ್ತದೆ ಎಂಬ ಕಲ್ಪನೆಯನ್ನು ಯಾರು ಇಟ್ಟುಕೊಂಡಿರಲಿಲ್ಲ.
ಬಾಲಿವುಡ್‌ನ ಎಲ್ಲಾ ದಾಖಲೆಗಳನ್ನು ಚೂರು ಮಾಡಿದ ಚಿತ್ರ ಇದು. ನಟ ಶಾರುಖ್ ಖಾನ್‌ಗೆ ರೊಮ್ಯಾಂಟಿಕ್ ಹೀರೋ ಪಟ್ಟ ಕೊಟ್ಟ ಚಿತ್ರ. ನಟಿ ಕಾಜೋಲ್ ಸಿನಿ ಜೀವನದ ಮೈಲುಗಲ್ಲು. ಚಿತ್ರ ನಿರ್ಮಿಸಿದ, ಚಿತ್ರದಲ್ಲಿ ನಟಿಸಿದ ಪ್ರತಿರೊಬ್ಬರ ಬದುಕನ್ನು ಬದಲಿಸಿದ ಚಿತ್ರ ಎಂದರೆ ಅತಿಶಯೋಕ್ತಿಯಲ್ಲ.
‘ದಿಲ್ವಾಲೆ ದುಲ್ಹಾನಿಯಾ ಲೆ ಜಯಂಗೆ’ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಅಂಬರಿಷ್ ಪುರಿ, ಅನುಪಮ್ ಖೇರ್, ಫರಿದಾ ಜಲಾಲ್ ಮುಂತಾದವರು ನಟಿಸಿದ್ದಾರೆ. ಇದು ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಮುಂಬೈನ ಥಿಯೇಟರ್ ಒಂದರಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡಿದೆ.
ಚಿತ್ರಕ್ಕೆ 25ರ ಸಂಭ್ರಮದ ಹಿನ್ನೆಲೆ ನಟಿ ಕಾಜೋಲ್ ಮತ್ತು ನಟ ಶಾರುಖ್ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳ ಹೆಸರನ್ನು ಡಿಡಿಎಲ್‌ಜೆ ಚಿತ್ರದ ಪಾತ್ರಗಳ ಹೆಸರಾದ ರಾಜ್ ಮತ್ತು ಸಿಮ್ರಾನ್ ಎಂದು ಬದಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬಾಲಿವುಡ್ ನಟಿ ಶ್ರೀದೇವಿಯ ಸಾವು ಸಹಜವಲ್ಲವೇ?

ಈ ಚಿತ್ರವು ರಾಜ್ (ಶಾರುಖ್) ಮತ್ತು ಸಿಮ್ರಾನ್ (ಕಾಜೋಲ್) ಎಂಬ ಪ್ರೇಮಿಗಳ ಪ್ರೀತಿಯ ಸುತ್ತ ಗಿರಕಿ ಹೊಡೆಯುತ್ತದೆ. ಇದು ಸಾರ್ವಕಾಲಿಕ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದ್ದು ಮಾತ್ರವಲ್ಲದೆ 10 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.

ಡಿಡಿಎಲ್‌ಜೆ ಚಿತ್ರದ ಅಪ್ರತಿಮ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಕಂಚಿನ ಪ್ರತಿಮೆ ಲಂಡನ್ನಿನ ಲೀಸೆಸ್ಟರ್ ಸ್ಕ್ವೇರ್ ನ ‘ಸೀನ್ಸ್ ಇನ್ ದಿ ಸ್ಕ್ವೇರ್’ ನಲ್ಲಿ ಅನಾವರಣಗೊಳ್ಳಲಿದೆ. ಈ ಪ್ರತಿಮೆಯು ಲೀಸೆಸ್ಟರ್ ಚೌಕದಲ್ಲಿ ಚಿತ್ರೀಕರಿಸಿದ ದೃಶ್ಯದ ಒಂದು ಭಾಗವನ್ನು ಪ್ರತಿನಿಧಿಸುತ್ತದೆ.
25 years ago on this day, the definition of romance was rewritten. Raj met Simran, they fell in love and since then, we can't stop swooning over this epic love story. Celebrating #DDLJ25 pic.twitter.com/ocpyDv0c5N
— Yash Raj Films (@yrf) October 20, 2020
“ಈ ಚಿತ್ರ ಬರುವ ಮುನ್ನ ರೋಮ್ಯಾಂಟಿಕ್ ರೀತಿಯ ಪಾತ್ರವನ್ನು ನಿರ್ವಹಿಸಲು ನನ್ನಿಂದ ಸಾಧ್ಯವೇ ಇಲ್ಲ ಎಂದೇ ನಾನು ಭಾವಿಸಿದ್ದೆ” ಎಂದು ಚಿತ್ರದ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ‘ಕಿಂಗ್ ಆಫ್ ರೋಮ್ಯಾನ್ಸ್’ ಶಾರುಖ್ ಖಾನ್ ಹೇಳಿದ್ದಾರೆ.
ಇಂದಿಗೂ ಈ ಚಿತ್ರಕ್ಕೆ ಅತ್ಯಧಿಕ ಅಭಿಮಾನಿ ಬಳಗವಿದೆ. 25 ವರ್ಷಗಳನ್ನು ಪೂರೈಸಿದರೂ ಕೂಡ ಈ ಚಿತ್ರದ ಜನಪ್ರಿಯತೆ ಎಂದಿಗೂ ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ #DilwaleDulhaniaLeJayenge # DDLJ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿವೆ.