HomeಅಂಕಣಗಳುKarnataka against SIR‘ನನ್ನ ಮತ ಉಳಿಸಿ ಎಂದು ಜನ ಬೇಡಿಕೊಳ್ಳುವಂತೆ ಮಾಡಬೇಡಿ’: ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲ,...

‘ನನ್ನ ಮತ ಉಳಿಸಿ ಎಂದು ಜನ ಬೇಡಿಕೊಳ್ಳುವಂತೆ ಮಾಡಬೇಡಿ’: ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲ, ಇಡೀ ದೇಶದ ಸಮಸ್ಯೆ: ಬಹುಭಾಷಾ ನಟ ಪ್ರಕಾಶ್ ರಾಜ್

- Advertisement -
- Advertisement -

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಧಾನದ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕರೆದಿದ್ದ ಮಹತ್ವದ ಪತ್ರಿಕಾಗೋಷ್ಠಿ ಆಗಸ್ಟ್ 14, 2026ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. 

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ರಾಜ್, ಮತದಾರರ ಪಟ್ಟಿಯಿಂದ ಸತ್ತವರ ಹೆಸರುಗಳನ್ನು ತೆಗೆಯುವುದು, ಹೊಸ ಮತದಾರರನ್ನು ಸೇರಿಸುವುದು ಮತ್ತು ಸ್ಥಳಾಂತರಗೊಂಡವರಿಗೆ ಸೂಕ್ತ ಬೂತ್‌ನಲ್ಲಿ ಮತದಾನದ ಹಕ್ಕು ಕಲ್ಪಿಸುವುದು ಆಯೋಗದ ಕರ್ತವ್ಯ ಎಂದು ಹೇಳಿದರು. ಆದರೆ ಈಗಾಗಲೇ ಪಟ್ಟಿಯಲ್ಲಿರುವ ಮತದಾರರಿಂದಲೇ ನಮೂನೆಗಳನ್ನು ಭರ್ತಿ ಮಾಡಿಸಿಕೊಳ್ಳುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಒಂದರಿಂದ ಒಂದೂವರೆ ತಿಂಗಳ ಅವಧಿಯಲ್ಲಿ ರಾಜ್ಯದ ಸುಮಾರು ಐದು ಕೋಟಿ ಜನರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸುವುದು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಈ ಪ್ರಕ್ರಿಯೆಯಿಂದ ಚುನಾವಣಾ ಸಿಬ್ಬಂದಿ ಮತ್ತು ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಬಂದಿದೆ ಎಂದು ಅವರು ಗಮನಸೆಳೆದರು. ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳ ಸಾವಿಗೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.

ಮನೆ ಭೇಟಿ ಸಂದರ್ಭದಲ್ಲಿ ಜನರು ಕೆಲಸಕ್ಕೆ ಹೊರಗೆ ಹೋಗಿರಬಹುದು, ಮಹಿಳೆಯರು ತವರಿಗೆ ತೆರಳಿರಬಹುದು ಅಥವಾ ಮನೆಯಲ್ಲಿರುವ ವಯೋವೃದ್ಧರಿಗೆ ಮಾಹಿತಿ ತಿಳಿದಿರದಿರಬಹುದು. ಇಂತಹ ಕಾರಣಗಳಿಗಾಗಿ ಹೆಸರುಗಳನ್ನು ಅಳಿಸುವುದು ಸರಿಯಲ್ಲ ಎಂದು ಪ್ರಕಾಶ್ ರಾಜ್ ಹೇಳಿದರು. ಬಂಡೀಪುರದ ಜನರು ಆರು ತಿಂಗಳು ವಯನಾಡಿಗೆ ವಲಸೆ ಹೋಗುತ್ತಾರೆ. ಉತ್ತರ ಕರ್ನಾಟಕದ ಕೂಲಿಕಾರರೂ ಬೇರೆಡೆಗೆ ದುಡಿಯಲು ಹೋಗುತ್ತಾರೆ. ರೈತರು ಮತ್ತು ಅಲೆಮಾರಿಗಳ ಬಗ್ಗೆ ಯೋಚನೆ ಮಾಡದೆ ಅವರ ಹೆಸರುಗಳನ್ನು ತೆಗೆಯುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದರು. ಜನರು ತೆರಿಗೆ ಕಟ್ಟುತ್ತಿರುವುದು ಸರ್ಕಾರ ನಡೆಸಲು. ಸಂವಿಧಾನದ ಪ್ರಕಾರ ಒಬ್ಬರಿಗೆ ಒಂದು ಮತ ಎಂಬುದು ಹಕ್ಕು. ಅದನ್ನು ಕಿತ್ತುಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು. ನೋಟಿಸ್ ಕೊಡದೆ ಪ್ರಜೆಗಳನ್ನು ತಮ್ಮ ಹಕ್ಕಿಗಾಗಿ ಬೇಡಿಕೊಳ್ಳುವಂತೆ ಮಾಡುವುದು ಹೇಗೆ? ಒಂದು ಸಮುದಾಯ ಮತ್ತು ವ್ಯಕ್ತಿಯ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ ಎಂದು ಅವರು ಮನವಿ ಮಾಡಿದರು.

ಮುಂದಿನ ಚುನಾವಣೆಗೆ ಇನ್ನೂ ಎರಡು ವರ್ಷಗಳಿರುವಾಗ ಇಷ್ಟೊಂದು ಅವಸರ ಯಾಕೆ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು. ಸ್ವಚ್ಛ ಭಾರತ ಯೋಜನೆಗಿಂತ ಅದರ ಜಾಹೀರಾತಿಗೆ ಹೆಚ್ಚು ಖರ್ಚು ಮಾಡುವವರು, SIR ಪ್ರಕ್ರಿಯೆಗೆ ಆರು ತಿಂಗಳ ಮುಂಚಿತವಾಗಿ ಜಾಗೃತಿ ಮೂಡಿಸದಿರುವುದು ಯಾಕೆ ಎಂದು ಅವರು ಟೀಕಿಸಿದರು. ಜಾಗೃತಿ ಮೂಡಿಸದೆ ಏಕಾಕಿಯಾಗಿ ಬಂದು ಬಾಗಿಲು ತಟ್ಟಿ, ಅವರು ಇಲ್ಲ ಎಂದು ವರದಿ ಮಾಡಿ, ಫಾರ್ಮ್ ಸಹಿ ಮಾಡಿ ಕೊಡದಿದ್ದಕ್ಕಾಗಿ ಹೆಸರು ಅಳಿಸುವುದು ಸರಿಯಲ್ಲ ಎಂದು ಅವರು ಹೇಳಿದರು. ಈಗಾಗಲೇ ನೋಟು ಅಮಾನ್ಯೀಕರಣದಿಂದ ಜನರನ್ನು ಕಾಡಿಸಿದ್ದಾರೆ. ದಿನಗೂಲಿ ನೌಕರ ಒಂದು ದಿನ ರಜೆ ಹಾಕಿದರೆ ಅವನ ಕೂಲಿ ನಷ್ಟವಾಗುತ್ತದೆ ಎಂದು ತಿಳಿಸಿದರು,

ಅಲ್ಲದೇ ಮನೆ ಬದಲಾಯಿಸಿದವರಿಗೆ ಫಾರ್ಮ್ 8 ನೀಡಬೇಕು, ಫಾರ್ಮ್ 6 ಅಲ್ಲ. ಹಳೆಯ ಮತದಾರರಿಗೆ ಫಾರ್ಮ್ 8 ಕೇಳುವುದು ಮತ್ತು ಮನೆ ಬದಲಾಯಿಸಿದವರಿಗೆ ಫಾರ್ಮ್ 6 ಕೇಳುವುದು ಸರಿಯಲ್ಲ ಎಂದು ಅವರು ಹೇಳಿದರು. ಆರು ತಿಂಗಳ ಹೆಚ್ಚುವರಿ ಸಮಯ ತೆಗೆದುಕೊಂಡು, ಕೊನೆಯ ಮತದಾರನಿಗೂ ಅರಿವು ಮೂಡಿಸಿ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.

ಕೂಲಿಗಾಗಿ ಬೇರೆಡೆ ಹೋಗಿರುವವರ ಹಕ್ಕು ರಕ್ಷಿಸಿ, ಹೊಸ ಮತದಾರರನ್ನು ಸೇರಿಸಿ, ಸತ್ತವರ ಹೆಸರನ್ನು ಮಾತ್ರ ಅಳಿಸಿ ಎಂದು ಮನವಿ ಮಾಡಿದ ಅವರು, ಇದು ನನ್ನ ವೈಯಕ್ತಿಕ ಸಮಸ್ಯೆಯಲ್ಲ, ಇದು ದೇಶದ ಸಮಸ್ಯೆ. ಧ್ವನಿ ಇಲ್ಲದ ಜನರ ಪರವಾಗಿ ನಾವು ನಿಲ್ಲಬೇಕು ಎಂದು ಹೇಳಿದರು. ಇದು ಸಾಧ್ಯವಾಗದಿದ್ದರೆ ಬೀದಿ ಹೋರಾಟಕ್ಕೆ ಇಳಿಯುತ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದರು. 

ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎದ್ದೇಳು ಕರ್ನಾಟಕದ ನೂರ್ ಶ್ರೀಧರ್, “ಪ್ರಕಾಶ್ ರಾಜ್ ಅವರ ಹೆಸರನ್ನು ಡಿಲೀಟ್ ಮಾಡಿದ ಚುನಾವಣಾ ಆಯೋಗಕ್ಕೆ ಧನ್ಯವಾದಗಳು” ಎಂದು ಹೇಳಿದರು. ನಾಗರಿಕ ಸಂಘಟನೆಗಳು 200ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದರೂ ಆಯೋಗ ಪ್ರತಿಕ್ರಿಯೆ ನೀಡಿಲ್ಲ ಎಂದ ಅವರು ಇದು ಕರ್ನಾಟಕದ ಸುಮಾರು 1 ಕೋಟಿ 10 ಲಕ್ಷ ಮತದಾರರ ವಿಷಯವಾಗಿದೆ. ಆಯೋಗವು ಮೂರು ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಮೊದಲ SIR ನಲ್ಲಿ ವೋಟರ್ ಲಿಸ್ಟ್ ಸಂಖ್ಯೆ ಹೆಚ್ಚಾಗಿತ್ತು. ಈಗ ಅದು ಕಡಿಮೆಯಾಗುತ್ತಿರುವುದು ಹೇಗೆ ಎಂದು ಅವರು ಪ್ರಶ್ನಿಸಿದರು. ಉತ್ತರ ಭಾರತದಲ್ಲಿ ಮೊದಲು ಹೆಸರುಗಳನ್ನು ಅಳಿಸಲಾಗಿತ್ತು. ಬಿಹಾರದಲ್ಲಿ ವಲಸೆ ಕಾರಣ ಎಂದುಕೊಂಡಿದ್ದೆವು. ಉತ್ತರ ಪ್ರದೇಶದಲ್ಲಿ ಎರಡು ಕೋಟಿ ಹೆಸರುಗಳನ್ನು ಅಳಿಸಲಾಗಿತ್ತು, ಅದನ್ನೂ ವಲಸೆ ಎಂದು ಭಾವಿಸಿದ್ದೆವು. ತಮಿಳುನಾಡಿನಲ್ಲಿ 90 ಲಕ್ಷ ಹೆಸರುಗಳು ಕಡಿಮೆಯಾಗಿವೆ. ಕರ್ನಾಟಕದಲ್ಲೂ ಇದೇ ಪ್ರಕ್ರಿಯೆ ನಡೆಯುತ್ತಿದೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಹೇಗೆ ಇದು ನಡೆಯುತ್ತಿದೆ ಎಂದು ಅವರು ಕೇಳಿದರು. ವಲಸಿಗರಿಂದ ತುಂಬಿರುವ ಬೆಂಗಳೂರಿನಲ್ಲಿ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿರುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ಹಿಂದಿನ SIR ನಲ್ಲಿ ಮನೆಮನೆ ಭೇಟಿ ಸಂದರ್ಭದಲ್ಲಿ ಸತ್ತವರು, ಹೊಸ ಮತದಾರರು ಮತ್ತು ಸ್ಥಳಾಂತರಗೊಂಡವರಿಂದ ಫಾರ್ಮ್ ಪಡೆದು ತುಂಬುತ್ತಿದ್ದರು. ಈ ಬಾರಿ ಫಾರ್ಮ್ 6 ಮತ್ತು 8 ಬದಲಿಗೆ ಎನ್ಯುಮರೇಷನ್ ಫಾರ್ಮ್ ಬಳಸಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು. ಸಣ್ಣ ಕಾರಣಗಳಿಗೆ ಹೆಸರುಗಳನ್ನು ಅಳಿಸುತ್ತಿರುವುದು ಯಾಕೆ? ಶಿಫ್ಟ್ ಅಥವಾ ಅಬ್ಸೆಂಟ್ ಆಗಿದ್ದರೆ ಅಳಿಸಿದ್ದು ಯಾಕೆ? ಅಧಿಕಾರಿಗಳು ಹೋದಾಗ ಜನರು ದುಡಿಯಲು ಹೋಗಿರುತ್ತಾರೆ. ಬಾಡಿಗೆ ಮನೆ ಬದಲಾಯಿಸಿದವರ ಹೆಸರನ್ನು ಅಳಿಸುವಂತಿಲ್ಲ ಎಂದು ನೂರ್ ಶ್ರೀಧರ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಹಾಗೂ ಎದ್ದೇಳು ಕರ್ನಾಟಕದ ನೂರ್ ಶ್ರೀಧರ್ , ತಾರಾ ರಾವ್ ಹಾಗೂ ‘ನನ್ನ ಮತ, ನನ್ನ ಹಕ್ಕು’ ವೇದಿಕೆಯ ಮೃದುಲ, ತನ್ವೀರ್, ರಂಜಿತ್, ಮಧು, ಐಶ್ವರ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

Mysore| SIR ವಿರುದ್ಧ ಸರ್ಕಾರ ವಿಶೇಷ ಅಧಿವೇಶನ ನಡೆಸಲಿ: ಪ್ರಕಾಶ್ ರಾಜ್

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹಕ್ಕು ಕಸಿಯಲಾಗುತ್ತಿದ್ದು, ಈ ಅನ್ಯಾಯದ ವಿರುದ್ಧ ನಾಗರಿಕ ಸಂಘಟನೆಗಳು ಸಂಗ್ರಹಿಸಿರುವ...

SIR: ‘ಫಾರ್ಮ್ 6’ ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ!

ಹೊಸ ಮತದಾರರ ನೋಂದಣಿಗೆ ಕಾಗದಪತ್ರಗಳ ಅಡೆತಡೆ ಒಡ್ಡುತ್ತಿದ್ದ ತನ್ಮೂಲಕ ಹಕ್ಕು ವಂಚಿತಗೊಳಿಸುತ್ತಿದ್ದ ಆರೋಪ ಎದುರಿಸುತ್ತಿದ್ದ ಕೇಂದ್ರ ಚುನಾವಣಾ ಆಯೋಗವು ಸಾರ್ವಜನಿಕ ಮತ್ತು ಕಾನೂನಾತ್ಮಕ ಒತ್ತಡದ ಹಿನ್ನೆಲೆಯಲ್ಲಿ ಭಾಗಶಃ ಹಿಂದೆ ಸರಿದಿದೆ. 'ವಿಶೇಷ ತೀವ್ರ...

ಹೈದರಾಬಾದ್ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ : ABVPಗೆ ಸೋಲು; ಅಧ್ಯಕ್ಷೆಯಾಗಿ SFIನ ದಿಲ್ಶಾದಾ ರೈಹಾನ್ ಆಯ್ಕೆ

ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ASA), ದಲಿತ ಸ್ಟೂಡೆಂಟ್ಸ್ ಯೂನಿಯನ್ (DSU), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಟ್ರೈಬಲ್ ಸ್ಟೂಡೆಂಟ್ಸ್ ಫೋರಂ (TSF) ಒಳಗೊಂಡ...

CWC ಸಭೆಯಲ್ಲಿ ನಿತೀಶ್ ಕುಮಾರ್ ವಿಚಾರ ಪ್ರಸ್ತಾಪ: ಸೋನಿಯಾ ಗಾಂಧಿ ಮತ್ತು ದಿಗ್ವಿಜಯ್ ಸಿಂಗ್ ನಡುವೆ ಭಿನ್ನಾಭಿಪ್ರಾಯ

ಜೆಡಿಯು ನಾಯಕ ನಿತೀಶ್ ಕುಮಾರ್ 2024ರಲ್ಲಿ 'ಇಂಡಿಯಾ' (INDIA) ಮೈತ್ರಿಕೂಟದಿಂದ ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆಂತರಿಕ ಸಭೆಯಲ್ಲಿ ನಾಯಕರ ನಡುವೆ ಗಂಭೀರ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ...

‘ಇಸಿಐನೆಟ್’ ಸಾಫ್ಟ್‌ವೇರ್ ಲೋಪ: ಸ್ಥಳೀಯ ಅಧಿಕಾರಿಗಳ ಶಾಸನಬದ್ಧ ಅಧಿಕಾರ ಹರಣ ಆರೋಪಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಮಹಾರಾಷ್ಟ್ರ ಸಿಇಒ ಸುದೀರ್ಘ ಪತ್ರ!

ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಜಾರಿಗೆ ತಂದಿರುವ 'ಇಸಿಐನೆಟ್' (ECINet) ಕೇಂದ್ರೀಕೃತ ಸಾಫ್ಟ್‌ವೇರ್, ಕಾನೂನುಬದ್ಧವಾಗಿ ಸ್ಥಳೀಯ ಮತದಾರ ನೋಂದಣಿ ಅಧಿಕಾರಿಗಳಿಗೆ (ERO) ನೀಡಲಾಗಿರುವ ಶಾಸನಬದ್ಧ ಅಧಿಕಾರಗಳನ್ನು ಕಸಿಯುತ್ತಿದೆ ಎಂಬ ಗಂಭೀರ ಆರೋಪ ಎದುರಾಗಿದೆ....

ಸಂಭಾಲ್ ಹಿಂಸಾಚಾರ ಪ್ರಕರಣ: ಮುಸ್ಲಿಂ ವ್ಯಕ್ತಿಯ NSA ಬಂಧನ ರದ್ದುಪಡಿಸಿದ ಸುಪ್ರೀಂ ಕೋರ್ಟ್; ಯುಪಿ ಸರ್ಕಾರಕ್ಕೆ ₹10 ಲಕ್ಷ ದಂಡ

ನವದೆಹಲಿ: ಸಂಭಾಲ್‌ನಲ್ಲಿ 2024ರ ನವೆಂಬರ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಲಾ ಅಫ್ರೋಜ್ ಎಂಬುವರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ತಡೆಗಟ್ಟುವ...

ಸಂಭಾಲ್ ಹಿಂಸಾಚಾರ | ಮುಲ್ಲಾ ಅಫ್ರೋಝ್ ಎನ್‌ಎಸ್‌ಎ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ; ಯುಪಿ ಸರ್ಕಾರಕ್ಕೆ 10 ಲಕ್ಷ ರೂ. ದಂಡ

2024ರ ಸಂಭಾಲ್ ಹಿಂಸಾಚಾರದ ರೂವಾರಿ ಎಂದು ಆರೋಪಿಸಲಾದ ಮುಲ್ಲಾ ಅಫ್ರೋಝ್ ಅವರನ್ನು 'ರಾಷ್ಟ್ರೀಯ ಭದ್ರತಾ ಕಾಯ್ದೆ, 1980'ರ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು (ಸೆಪ್ಟೆಂಬರ್ 29) ರದ್ದುಗೊಳಿಸಿದೆ....

ಔಷಧ ಬೆಲೆಗಳ ಹೆಸರಲ್ಲಿ ನಡೆಯುತ್ತಿದೆ ಲೂಟಿ: ಆಸ್ಪತ್ರೆ-ಮೆಡಿಕಲ್‌ಗಳ ವಿರುದ್ಧ ಸುಪ್ರೀಂ ಕೋರ್ಟ್ ಗರಂ

ದೇಶದಲ್ಲಿ ಗರಿಷ್ಠ ಚಿಲ್ಲರೆ ಬೆಲೆ (MRP) ಹೆಸರಿನಲ್ಲಿ ಔಷಧಗಳ ಬೆಲೆಯನ್ನು ಮನಬಂದಂತೆ ಹೆಚ್ಚಿಸಿ ಸಾಮಾನ್ಯ ರೋಗಿಗಳನ್ನು ಸುಲಿಗೆ ಮಾಡುತ್ತಿರುವುದನ್ನು ಸುಪ್ರೀಂ ಕೋರ್ಟ್ 'ಅಮಾನವೀಯ ಲೂಟಿ' ಎಂದು ತೀವ್ರವಾಗಿ ಖಂಡಿಸಿದೆ. ಔಷಧಗಳ ನೈಜ ಖರೀದಿ...

ಬಂಗಾಳ ಎಸ್‌ಐಆರ್‌ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ನಕಾರ; ‘ಇವು ಕೇವಲ ಉಪಚುನಾವಣೆಗಳು’ ಎಂದ ಸಿಜೆಐ ಸೂರ್ಯಕಾಂತ್ ವಿರುದ್ಧ ಜನಾಕ್ರೋಶ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೊರಗಿಡಲಾದ ಮತದಾರರಿಗೆ ಸಂಬಂಧಿಸಿದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಅರ್ಜಿದಾರರು ಅಕ್ಟೋಬರ್...

CWC Meeting : ಮೋದಿ, ಗ್ಯಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ 5 ಬೇಡಿಕೆಗಳನ್ನು ಮುಂದಿಟ್ಟ ಕಾಂಗ್ರೆಸ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ನೋಂದಣಿ ನಿಯಮಗಳಿಗೆ ಬದಲಾವಣೆಗಳ ಮೂಲಕ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ರಾಜಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...