Homeಮುಖಪುಟಇಂದಿನ ಆಡಳಿತಕ್ಕೆ ಹೋಲಿಸಿದರೆ ತುರ್ತು ಪರಿಸ್ಥಿತಿ ಏನೇನೂ ಅಲ್ಲ: ಪಿ. ಸಾಯಿನಾಥ್

ಇಂದಿನ ಆಡಳಿತಕ್ಕೆ ಹೋಲಿಸಿದರೆ ತುರ್ತು ಪರಿಸ್ಥಿತಿ ಏನೇನೂ ಅಲ್ಲ: ಪಿ. ಸಾಯಿನಾಥ್

ಮೂರು ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಎರಡು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಏರಿಸುವ ನಿರ್ಧಾರವು ಇತಿಹಾಸದ ಶೂನ್ಯ ಜ್ಞಾನವಿರುವ ಪೆದ್ದರಿಂದ ಬಂದಿದೆ.

- Advertisement -
- Advertisement -

ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಬಗ್ಗೆ ಇರುವ ಪೋಡ್‌ಕಾಸ್ಟ್ ಆಗಿರುವ “ಜೆ-ಪೋಡ್”ನಲ್ಲಿ ಮಾತಾಡುತ್ತಾ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, “ಎವ್ರಿಬಡಿ ಲವ್ಸ್ ಎ ಗುಡ್ ಡ್ರೌಟ್” ಎಂಬ ಪ್ರಸಿದ್ಧ ಕೃತಿಯ ಲೇಖಕ ಪತ್ರಕರ್ತ ಪಿ. ಸಾಯಿನಾಥ್ ಅವರು ಭಾರತ ಮತ್ತು ಕೋವಿಡ್ ನಂತರದ ಭಾರತೀಯ ಮಾಧ್ಯಮ ಮತ್ತು ವಲಸೆ ಕಾರ್ಮಿಕರ ಬಗ್ಗೆ ವಿವರಿಸಿದ್ದಾರೆ. ಶೂನ್ಯ ಜ್ಞಾನದ ಪೆದ್ದರು ನಮ್ಮ ಕಾರ್ಮಿಕ ಕಾನೂನುಗಳನ್ನು ಮರುರೂಪಿಸುತ್ತಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ. ಸಾರಾಂಶ ಇಲ್ಲಿದೆ.

ಅನುವಾದ: ನಿಖಿಲ್ ಕೋಲ್ಪೆ

ಅಭಿವೃದ್ಧಿಯ ಮರಣೋತ್ತರ ಪರೀಕ್ಷೆ

ಕೋವಿಡ್ ನಮಗೆ ಕಳೆದ ಮೂವತ್ತು ವರ್ಷಗಳ ನಮ್ಮ ಅಭಿವೃದ್ಧಿಯ ಸಂಪೂರ್ಣ, ಸಮಗ್ರ ಮತ್ತು ಎಗ್ಗಿಲ್ಲದ ಮರಣೋತ್ತರ ಪರೀಕ್ಷೆ ನಡೆಸುವ ಅವಕಾಶವನ್ನು ಒದಗಿಸಿಕೊಟ್ಟಿದೆ. ನೋಟು ಅಮಾನ್ಯೀಕರಣವನ್ನು ನಾವು ಕಡೆಗಣಿಸಬಹುದಾಗಿತ್ತು. ಆದರೆ ಈಗ ಬೆಂಕಿ ನಮ್ಮ ಮನೆ ಹೊಸ್ತಿಲಲ್ಲಿದೆ.

ನಾವು ನಮ್ಮ ಇತಿಹಾಸದಲ್ಲಿ ಸಂಸದೀಯ ಪ್ರಜಾಪ್ರಭುತ್ವವು ಅತ್ಯಂತ ವೇಗವಾಗಿ ಶಿಥಿಲಗೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಇದಕ್ಕೆ ಹೋಲಿಸಿದರೆ ತುರ್ತುಪರಿಸ್ಥಿತಿ ಏನೇನೂ ಅಲ್ಲ. ಇಲ್ಲೀಗ ಸಂಸತ್ತಾಗಲಿ, ಇ- ಸಂಸತ್ತಾಗಲಿ, ವರ್ಚುವಲ್ ಸಂಸತ್ತಾಗಲೀ, ಒಂದೂ ಇಲ್ಲ.

ನಮ್ಮಲ್ಲೀಗ ಕೆಲಸ ಮಾಡುತ್ತಿರುವ ವಿಧಾನಸಭೆಗಳಿಲ್ಲ. ಮುಖ್ಯಮಂತ್ರಿಗಳು ಈಗ ಕೇಂದ್ರ ಸರಕಾರದ ಕೃಪೆಯಲ್ಲಿದ್ದಾರೆ. ಕೇಂದ್ರವು ರಾಜ್ಯಗಳಿಗೆ ಬರಬೇಕಾದ ಜಿಎಸ್‌ಟಿ ನಿಧಿಯನ್ನು ತಡೆಹಿಡಿಯುತ್ತಿದೆ ಮತ್ತು ಖಾಸಗಿಯಾಗಿ ನೋಂದಾಯಿತವಾದ ‘ಪಿಎಂ ಕೇರ್ಸ್’ ಟ್ರಸ್ಟ್ ಮುಖಾಂತರ ರಾಜ್ಯಗಳಿಗೆ ಬರಬೇಕಾದ ಹಣವನ್ನು ಕೊಳ್ಳೆಹೊಡೆಯುತ್ತಿದೆ.

ಮೂರು ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಎರಡು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಏರಿಸುವ ನಿರ್ಧಾರವು ಇತಿಹಾಸದ ಶೂನ್ಯ ಜ್ಞಾನವಿರುವ ಪೆದ್ದರಿಂದ ಬಂದಿದೆ.

ಯುಎಸ್‌ಎಯಲ್ಲಿ ಬಂಡವಾಳಶಾಹಿ ಗುಂಪುಗಳು ದಿನಕ್ಕೆ ಎಂಟು ಗಂಟೆಗಳ ಕೆಲಸದ ಅವಧಿಯನ್ನು ಒಪ್ಪಿಕೊಂಡಿವೆ ಏಕೆಂದರೆ, ಎಂಟು ಗಂಟೆಗಳ ಬಳಿಕ ಉತ್ಪಾದಕತೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.

ಭಾರತವು ಸಮಾಜೋ-ಧಾರ್ಮಿಕ ಮೂಲಭೂತವಾದಿಗಳು ಮತ್ತು ಆರ್ಥಿಕ-ಮಾರುಕಟ್ಟೆ ಮೂಲಭೂತವಾದಿಗಳ ಮೈತ್ರಿಕೂಟದ ಕಪಿಮುಷ್ಟಿಯಲ್ಲಿದೆ. ಅವರು ಜೊತೆಸೇರುವ, ಹಂಚಿಕೊಳ್ಳುವ ಹಾಸಿಗೆಯೆಂದರೆ, ಕಾರ್ಪೊರೇಟ್ ಮಾಧ್ಯಮ ಅಥವಾ ಮುಖ್ಯವಾಹಿನಿಯ ಮಾಧ್ಯಮ.

ಮಾಧ್ಯಮ ಮನಸ್ಥಿತಿಯ ಬ್ರೈನ್ ಸ್ಕ್ಯಾನಿಂಗ್

ಕೋವಿಡ್ ನಮಗೆ ಭಾರತೀಯ ಸಮಾಜದ ಮರಣೋತ್ತರ ಪರೀಕ್ಷೆಯ ವರದಿಯನ್ನು ಒದಗಿಸಿದಂತೆಯೇ, ಅದು ಮೇಲ್ವರ್ಗದ ಚಿಂತನೆಯ, ಮಾಧ್ಯಮಗಳ ಚಿಂತನೆಯ ಮೆದುಳಿನ ಪರೀಕ್ಷೆಯ ವರದಿಯನ್ನೂ ಒದಗಿಸಿದೆ.

ಪ್ರಮುಖ ಪತ್ರಕರ್ತನೊಬ್ಬ ತನ್ನದೇ ಆನ್‌ಲೈನ್‌ ಟಿವಿಯಲ್ಲಿ ಎನು ಹೇಳುತ್ತಾನೆ ಎಂದರೆ, “ಒಳ್ಳೆಯ ಬಿಕ್ಕಟ್ಟನ್ನು ಯಾವಾಗಲೂ ವ್ಯರ್ಥಮಾಡಬೇಡಿ” ಎಂದು! ಇದು ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ಮುನ್ನುಗ್ಗಿಸಲು ಸರಿಯಾದ ಸಮಯವೆಂದು ಆತ ಹೇಳುತ್ತಾನೆ. ಇದು ಭಾರತದ ಮೇಲ್ವರ್ಗದ ಚಿಂತನೆಯ ಬಗ್ಗೆ ಅದರ ಕ್ರೌರ್ಯದ ಬಗ್ಗೆ, ಸಮಾಜದ ದುರ್ಬಲ ವರ್ಗಗಳ ಕುರಿತು ಸಂಪೂರ್ಣ ದಯಾಹೀನತೆಯ ಬಗ್ಗೆ ಏನು ಹೇಳುತ್ತದೆ?

ಏನು ಬದಲಾಗಿದೆಯೋ, ಯಾವುದು ರಾಜಕೀಯವನ್ನು ಬದಲಾಯಿಸಿದೆಯೋ, ಯಾವುದು ಎಲ್ಲಾ ರೀತಿಯಲ್ಲಿ ಪತ್ರಿಕೋದ್ಯಮದ ಮೇಲೆ ಪರಿಣಾಮ ಬೀರಿದೆಯೋ, ಅದು ನಮ್ಮನ್ನು ಬಾಧಿಸದೇ ಇರಬಹುದು. ಆದರೆ ಅದು ಇತರನ್ನು ಬಾಧಿಸಿದೆ ಎಂಬುದು ಬಹಳ ಮುಖ್ಯ. ನ್ಯಾಯ ಎಂಬುದು ಎಲ್ಲರಿಗೂ ಸೇರಿದ್ದು, ಅದನ್ನು ನಿರಾಕರಿಸುವವರಿಗೆ ಮಾತ್ರವಲ್ಲ.

ಇಡೀ ಒಂದು ಯುವಜನರ ಪೀಳಿಗೆಯೇ ಪತ್ರಿಕೆಗಳ ಪುರವಣಿಗಳಲ್ಲಿ ಬರುವುದಕ್ಕಿಂತ ಬೇರೆ ಪತ್ರಿಕೋದ್ಯಮವೇ ಇಲ್ಲ; ನವ ಉದಾರವಾದಕ್ಕಿಂತ ಬೇರೆಯಾದ ಆರ್ಥಿಕತೆಯೇ ಇಲ್ಲ ಎಂದು ನಂಬಿಕೊಂಡು ಬೆಳೆದುಬಿಟ್ಟಿದೆ. ವಲಸೆ ಕಾರ್ಮಿಕರ ಬಿಕ್ಕಟ್ಟು ಪತ್ರಕರ್ತರ ಮೇಲೆ, ಅದರಲ್ಲೂ ಎಳೆಯ ಪತ್ರಕರ್ತರ ಮೇಲೆ ಆಳವಾದ ಪರಿಣಾಮ ಬೀರಿದೆ.

ಕೋಣೆಯೊಳಗೊಂದು ವಾನರ!

ಸರಾಸರಿಯಾಗಿ ರಾಷ್ಟ್ರೀಯ ದಿನಪತ್ರಿಕೆಗಳು 69 ಶೇಕಡಾ ಜನರು ವಾಸಿಸುವ ಗ್ರಾಮೀಣ ಪ್ರದೇಶಗಳ ಸುದ್ದಿಗೆ ತಮ್ಮ ಮುಖಪುಟದಲ್ಲಿ ಕೇವಲ 0.67 ಶೇಕಡಾ ಜಾಗವನ್ನು ಮಾತ್ರ ನೀಡುತ್ತವೆ ಎಂದು ಐದು ವರ್ಷಗಳ ಅಧ್ಯಯನ ತೋರಿಸುತ್ತದೆ. ನೀವು ಚುನಾವಣಾ ವರ್ಷವನ್ನು ಪರಿಗಣನೆಗೆ ಹೊರತುಪಡಿಸಿದರೆ ಇದು 0.18ರಿಂದ 0.24ಶೇಕಡಾದಷ್ಟಿದೆ. ಅಂದರೆ, 75 ಶೇಕಡಾ ಜನರು ಚುನಾವಣೆಯಲ್ಲದ ಕಾಲದಲ್ಲಿ ಯಾವುದೇ ಸುದ್ದಿಗಳನ್ನು ಮಾಡುವುದಿಲ್ಲ ಎಂದು ಮಾಧ್ಯಮಗಳು ನಿರ್ಧರಿಸಿದಂತಿದೆ.

ಮಾರ್ಚ್ 25ರಿಂದ 1,000ದಷ್ಟು ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಜನರಿಗೆ ಅವರ ಅತ್ಯಂತ ಜರೂರಿ ಇರುವ ಹೊತ್ತಿನಲ್ಲಿಯೇ ಸೆನ್ಸೆಕ್ಸ್‌ನ 30 ಅತ್ಯನ್ನತ ಸ್ಥಾನಗಳಲ್ಲಿ ಇರುವ ಕಂಪನಿಗಳು ಅಸೂಯೆಪಡುವಷ್ಟು ಆದಾಯವಿರುವ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಹೊರಗೆಸೆಯುತ್ತಿವೆ.

ನಿಮ್ಮಲ್ಲಿ ಇಷ್ಟು ಹಣವಿದೆ. ನಿಮ್ಮ ಕಾಲಂಗಳಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಮಿಡಿಯುತ್ತಾ ನಿಮ್ಮ ಹೃದಯವು ರಕ್ತ ಸುರಿಸುತ್ತದೆ. ಆದರೂ ನೀವು 24 ಗಂಟೆಗಳ ನೋಟಿಸ್ ನೀಡಿ ಪತ್ರಕರ್ತರು ರಾಜೀನಾಮೆ ನೀಡುವಂತೆ ಮಾಡುತ್ತೀರಿ. ಏಕೆಂದರೆ, ನೀವು ಜನರ ಕಣ್ಣಲ್ಲಿ ವಾನರರಂತೆ ಕಾಣಬಾರದಲ್ಲ!

ಕೊರೋನಕ್ಕೆ ಮಿಡಿಯುತ್ತಿರುವ ಪತ್ರಿಕೆಗಳೇ ಜನರನ್ನು ಕಸದಂತೆ ಹೊರಗೆಸೆಯುತ್ತಿವೆ. ಭಾರತದ ಅತ್ಯಂತ ದೊಡ್ಡ ಮಾಧ್ಯಮದ ಮಾಲೀಕ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ಭಾರತೀಯ. ತಮ್ಮದೇ ದೇಶದ ಬಗ್ಗೆ ಸುದ್ದಿ ಪ್ರಸಾರ ಮಾಡುವುದಕ್ಕಿಂತಲೂ ಹೆಚ್ಚಾಗಿ ನೆರೆಯ ರಾಷ್ಟ್ರದ ಬಗ್ಗೆ ಸುದ್ದಿ ಪ್ರಸಾರ ಮಾಡುವ ಟಿ.ವಿ. ಚಾನೆಲ್‌ಗಳಿರುವ ಏಕೈಕ ದೇಶ ಭಾರತ! ನಮ್ಮ ಸಾಲಿಸಿಟರ್ ಜನರಲ್ ಮಾಧ್ಯಮಗಳನ್ನು ದೂರುತ್ತಿದ್ದಾಗ, ಅವರು ಯಾವ ಮಾಧ್ಯಮಗಳನ್ನು ದೂರುತ್ತಿದ್ದಾರೆ ಎಂದು ಆಶ್ಚರ್ಯಪಟ್ಟಿದ್ದೆ! ಏಕೆಂದರೆ, 90 ಶೇಕಡಾ ಮಾಧ್ಯಮಗಳು ಅವರ ಜೊತೆಗೇ ಇವೆ!

ಪಿ. ಸಾಯಿನಾಥ್ ರವರ ಪೂರ್ಣ ಪಾಡ್‌ಕಾಸ್ಟ್‌ಕೇಳಲು ಇಲ್ಲಿ ಕ್ಲಿಕ್‌ ಮಾಡಿ.


ಇದನ್ನೂ ಓದಿ: ಶ್ರಮಿಕ್ ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು: ಫ್ಯಾಕ್ಟ್‌ಚೆಕ್ ಮಾಡುವ ಪಿಐಬಿ ಸತ್ಯ ಮರೆಮಾಚಿತೆ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...