HomeದಿಟನಾಗರFact Check: ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಚುನಾವಣೆ ಎದುರಿಸುವಷ್ಟು ಹಣ ಇಲ್ವಾ?

Fact Check: ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಚುನಾವಣೆ ಎದುರಿಸುವಷ್ಟು ಹಣ ಇಲ್ವಾ?

- Advertisement -
- Advertisement -

ಟೈಮ್ಸ್ ನೆಟ್‌ವರ್ಕ್‌ ನಡೆಸಿದ ‘ಟೈಮ್ಸ್‌ ನೌ ಸಮ್ಮಿಟ್’ ಎಂಬ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಕಿ, “ನೀವು ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೀರಾ?” ಎಂದು ಕೇಳಿದ್ದಕ್ಕೆ. “ಇಲ್ಲ, ಚುನಾವಣೆಗೆ ಎದುರಿಸುವಷ್ಟು ಹಣ ನನ್ನಲ್ಲಿ ಇಲ್ಲ” ಎಂದು ನಿರ್ಮಲಾ ಸೀತಾರಾಮ್ ಉತ್ತರಿಸಿದ್ದಾರೆ.

“ಏನಿದು! ದೇಶದ ಹಣಕಾಸು ಸಚಿವೆಯ ಬಳಿ ಹಣ ಇಲ್ಲವೇ?” ಎಂದು ನಿರೂಪಕಿ ಕೇಳಿದ್ದಕ್ಕೆ. “ಹೌದು, ದೇಶದ ಏಕೀಕೃ ನಿಧಿ (Consolidated Fund) ನನ್ನದಲ್ಲ ದೇಶದ್ದು. ನನ್ನ ಏನಿದ್ದರೂ ವೇತನ ಇತ್ಯಾದಿ ಮಾತ್ರ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹಾಗಾದರೆ, ನಿಜವಾಗಿಯೂ ನಿರ್ಮಲಾ ಸೀತಾರಾಮನ್ ಬಳಿ ಚುನಾವಣೆ ಎದುರಿಸಲು ಹಣ ಇಲ್ವಾ? ದೇಶದ ಹಣಕಾಸು ಸಚಿವೆ, ಪ್ರಭಾವಿ ರಾಜಕಾರಣಿ ಅಷ್ಟೊಂದು ಅರ್ಥಿಕ ಸಂಕಷ್ಟದಲ್ಲಿ ಇದ್ದಾರಾ? ನಿರ್ಮಲಾ ಸೀತಾರಾಮನ್ ಬಳಿ ಇತರ ಯಾವುದೇ ಆಸ್ತಿಗಳು ಇಲ್ವಾ? ಎಂಬುವುದನ್ನು ನೋಡೋಣ.

ಫ್ಯಾಕ್ಟ್‌ಚೆಕ್ : ನಿರ್ಮಲಾ ಸೀತಾರಾಮನ್ ಹೇಳಿಕೆ ಸಂಬಂಧಪಟ್ಟಂತೆ ಅವರ ಆಸ್ತಿ ವಿವರ ತಿಳಿಯಲು 2023ರಲ್ಲಿ ಸೀತಾರಾಮನ್ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿದ್ದ ಚುನಾವಣಾ ಅಫಿಡವಿಟ್ ಪರಿಶೀಲಿಸಿದ್ದೇವೆ. ಈ ವೇಳೆ ನಮಗೆ ಗೊತ್ತಾದ ಮಾಹಿತಿಯೆಂದರೆ, ನಿರ್ಮಲಾ ಸೀತಾರಾಮನ್ ಅವರೇ ಘೋಷಿಸಿಕೊಂಡಂತೆ ಅವರ ಬಳಿ 2 ಕೋಟಿಗೂ ಅಧಿಕ ಮೌಲ್ಯದ ಆಸ್ತಿ-ಪಾಸ್ತಿ ಇದೆ.

ನಿರ್ಮಲಾ ಸೀತಾರಾಮನ್ ಸಲ್ಲಿಸಿರುವ ಅಫಿಡವಿಟ್‌ ಪ್ರಕಾರ, ಅವರು ಸುಮಾರು 1.87 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು 69.12 ಲಕ್ಷ ಮೌಲ್ಯದ ಚರಾಸ್ತಿ ಸೇರಿ ಒಟ್ಟು 2.56 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಸುದ್ದಿ ಲಿಂಕ್ 

ನಿರ್ಮಲಾ ಸೀತಾರಾಮನ್ ಮತ್ತು ಅವರ ಪತಿ ಪರಕಾಲ ಪ್ರಭಾಕರ್ ಮಾಲೀಕತ್ವದ 1.7 ಕೋಟಿ ರೂ. ಮೌಲ್ಯದ
ವಸತಿ ಕಟ್ಟಡವೊಂದರಲ್ಲಿ ನಿರ್ಮಲಾ ಅವರು ಶೇ. 50ರಷ್ಟು ಪಾಲನ್ನು ಹೊಂದಿದ್ದಾರೆ. 17 ಲಕ್ಷ ಮೌಲ್ಯದ ಕೃಷಿಯೇತರ ಜಮೀನೂ ಅವರ ಬಳಿಯಿದೆ.

ಇನ್ನೂ, ಚರಾಸ್ತಿ ನೋಡುವುದಾದರೆ, ನಿರ್ಮಲಾ ಅವರು 35.52 ಲಕ್ಷ ರೂಪಾಯಿ ಹಣ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ ಮತ್ತು 18.39 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ.

ಈ ಅಂಕಿ ಅಂಶಗಳು ನಿರ್ಮಲಾ ಸೀತಾರಾಮನ್ ಚುನಾವಣೆ ಎದುರಿಸುವಷ್ಟು ಹಣ ಇಲ್ಲದವರಲ್ಲ ಎಂಬುವುದನ್ನು ಸಾಬೀತುಪಡಿಸುತ್ತದೆ.

ಚುನಾವಣಾ ಖರ್ಚು ಮಿತಿ ಮೀರುತ್ತಿದೆಯಾ ಬಿಜೆಪಿ?

ಟೈಮ್ಸ್‌ ನೌ ಸಮ್ಮಿಟ್‌ನಲ್ಲಿ ಮಾತನಾಡುವಾಗ ನಿರ್ಮಲಾ ಸೀತಾರಾಮನ್ “ನನ್ನ ಬಳಿ ಚುನಾವಣೆ ಎದುರಿಸಲು ಹಣವಿಲ್ಲ” ಎಂದಿರುವುದು ಕೆಲವೊಂದು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಪೈಕಿ ಒಂದು ಬಿಜೆಪಿ ಚುನಾವಣಾ ಖರ್ಚಿನ ಮಿತಿ ಮೀರುತ್ತಿದೆಯಾ? ಎಂಬುವುದು.

ಸುದ್ದಿ ಲಿಂಕ್ 

ಚುನಾವಣಾ ಆಯೋಗದ ನಿಯಮ ಪ್ರಕಾರ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಯ ಖರ್ಚಿನ ಮಿತಿ 95 ಲಕ್ಷ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ನಿರ್ಮಲಾ ಸೀತಾರಾಮನ್ ಬಳಿ ಪ್ರಸ್ತುತ 2 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಇದೆ. ಅಂದರೆ, 95 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ಆಸ್ತಿ ಇದೆ. ಆದರೂ, ಹಣ ಇಲ್ಲ ಎಂಬುವುದರ ಅರ್ಥ, ಬಿಜೆಪಿ ನಿಯಮ ಮೀರಿ ಖರ್ಚು ಮಾಡುತ್ತಿದೆ ಎಂದಾ? ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ : Fact Check : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿರುವುದು ಮೋಹನ್ ಭಾಗವತ್ ನೇತೃತ್ವದ ಆರ್‌ಎಸ್‌ಎಸ್‌ ಅಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...