Homeಮುಖಪುಟರಾಹುಲ್ ಗಾಂಧಿ ಅವರ 'ಛಾತ್ರೋನ್ ಕೀ ಗೂಂಜ್'ಗೆ ಹೇಳಿಕೆಗಳ ಫ್ಯಾಕ್ಟ್-ಚೆಕ್: ಬಿಜೆಪಿಯಿಂದ 'ಜೂಠ್ ಕೀ ಗೂಂಜ್'...

ರಾಹುಲ್ ಗಾಂಧಿ ಅವರ ‘ಛಾತ್ರೋನ್ ಕೀ ಗೂಂಜ್’ಗೆ ಹೇಳಿಕೆಗಳ ಫ್ಯಾಕ್ಟ್-ಚೆಕ್: ಬಿಜೆಪಿಯಿಂದ ‘ಜೂಠ್ ಕೀ ಗೂಂಜ್’ ವೆಬ್‌ಸೈಟ್ ಆರಂಭ

- Advertisement -
- Advertisement -

ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಅವರ ‘ಛಾತ್ರೋನ್ ಕೀ ಗೂಂಜ್’ ಅಭಿಯಾನದ ವೇಳೆ ನೀಡಲಾದ ಹೇಳಿಕೆಗಳನ್ನು ಫ್ಯಾಕ್ಟ್-ಚೆಕ್ (ಸತ್ಯಾಸತ್ಯತೆ ಪರಿಶೀಲನೆ) ಮಾಡುವ ವೆಬ್‌ಸೈಟ್‌ ಒಂದನ್ನು ಉಲ್ಲೇಖಿಸಿರುವ ಬಿಜೆಪಿ, “ರಾಹುಲ್ ಗಾಂಧಿ ಯುವಕರನ್ನು ಹಾದಿ ತಪ್ಪಿಸುತ್ತಿದ್ದಾರೆ. ಅಲ್ಲದೆ ಅವರ ಸುಳ್ಳುಗಳಿಗೆ ಇನ್ಮುಂದೆ ಸೂಕ್ತ ಮುಖಾಮುಖಿ ಸಾಕ್ಷ್ಯಾಧಾರಗಳ ಮೂಲಕ ಉತ್ತರ ನೀಡಲಾಗುವುದು” ಎಂದು ಹೇಳಿದೆ.

“ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಹತಾಶೆಯಿಂದ ರಾಹುಲ್ ಗಾಂಧಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿರುವ ಬಿಜೆಪಿ, ತನ್ನ ವಕ್ತಾರರ ದಂಡನ್ನೇ ಅಖಾಡಕ್ಕಿಳಿಸಿ ರಾಹುಲ್ ವಿರುದ್ಧ ಕಟು ವಾಗ್ದಾಳಿ ನಡೆಸಿದೆ. ‘ಜೂಠ್ ಕೀ ಗೂಂಜ್’ (ಸುಳ್ಳಿನ ಸದ್ದು) ಎಂಬ ಶೀರ್ಷಿಕೆಯ ಈ ವೆಬ್‌ಸೈಟ್ ರಾಹುಲ್ ಅವರ ಅಭಿಯಾನಕ್ಕೆ ತಕ್ಕ ತಿರುಗೇಟು ನೀಡಲಿದೆ ಎಂದು ಬಣ್ಣಿಸಿರುವ ಬಿಜೆಪಿ ನಾಯಕರು, ತಮ್ಮ ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ವೆಬ್‌ಸೈಟ್‌ ಲಿಂಕ್ ಹಂಚಿಕೊಂಡಿದ್ದಾರೆ.

ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ, “ರಾಹುಲ್ ಗಾಂಧಿ ಸುಳ್ಳುಗಳ ಧ್ವಜವಾಹಕ. ಪ್ರಧಾನಿ ಮೋದಿ ವಿರುದ್ಧದ ಹತಾಶೆಯಿಂದ ಅವರು ಏನೇ ಸುಳ್ಳು ಹರಡಿದರೂ, ಈಗ ಪ್ರತಿಯೊಂದು ಸುಳ್ಳನ್ನು ಸಾಕ್ಷ್ಯಗಳ ಸಮೇತ ಬ ಬಯಲು ಮಾಡಲಾಗುತ್ತಿದೆ. ಜೂಠ್ ಕೀ ಗೂಂಜ್ ವೆಬ್‌ಸೈಟ್ ರಾಹುಲ್ ಗಾಂಧಿ ಅವರ ಪ್ರತಿ ಪ್ರತಿಪಾದನೆಯ ನೈಜತೆಯನ್ನು ಬಹಿರಂಗಪಡಿಸುತ್ತಿದೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪಕ್ಷದ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಮತ್ತು ಮುಖ್ಯ ವಕ್ತಾರ ಅನಿಲ್ ಬಲೂನಿ ಮಾತನಾಡಿ, “ರಾಹುಲ್ ಗಾಂಧಿ ಸುಳ್ಳು ಹೇಳುತ್ತಿರಲಿ, ತೊಂದರೆಯಿಲ್ಲ… ಆದರೆ ಈಗ ಪ್ರತಿಯೊಂದು ಸುಳ್ಳಿಗೂ ಸತ್ಯಗಳ ಮೂಲಕವೇ ಉತ್ತರ ಸಿಗಲಿದೆ. ಸುಳ್ಳಿನ ಪ್ರಚಾರ ಎಷ್ಟು ವೇಗವಾಗಿ ಸದ್ದು ಮಾಡುತ್ತದೋ, ಸತ್ಯವೂ ಅಷ್ಟೇ ಜೋರಾಗಿ ಹೊರಬರುತ್ತದೆ” ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ-ಉಸ್ತುವಾರಿ ಪ್ರದೀಪ್ ಭಂಡಾರಿ ಮಾತನಾಡಿ, ರಾಹುಲ್ ಗಾಂಧಿ ಅವರ “ನಕಲಿ ನಿರೂಪಣೆ”ಗೆ ಪ್ರತಿಯಾಗಿ ದೇಶದ ಯುವಕರೇ ಈ ವೆಬ್‌ಸೈಟ್ ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರ ಪ್ರಚಾರವನ್ನು ಯುವಜನತೆ ಬಯಲು ಮಾಡುತ್ತಿದ್ದಾರೆ ಎಂದು ಹೇಳಿದರು.

ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಂಡಾರಿ, “ರಾಹುಲ್ ಗಾಂಧಿ ಅವರ ಸಾಲು ಸಾಲು ಸುಳ್ಳುಗಳಿಂದ ದೇಶದ ಯುವಕರು ಬೇಸತ್ತಿದ್ದಾರೆ. ರಾಹುಲ್ ಗಾಂಧಿ ತಮ್ಮ ಕಳೆದ ನಾಲ್ಕು ಕಾರ್ಯಕ್ರಮಗಳಲ್ಲಿ 40 ಪ್ರತಿಪಾದನೆಗಳನ್ನು ಮಾಡಿದ್ದು, ಯುವಕರ ಪ್ರಕಾರ ಆ 40 ಹೇಳಿಕೆಗಳೂ ಸುಳ್ಳು ಅಥವಾ ಹಾದಿತಪ್ಪಿಸುವಂತಿವೆ” ಎಂದು ಅವರು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಶುಕ್ಲಾ ಮತ್ತು ವಕ್ತಾರ ಪ್ರತ್ಯೂಷ್ ಕಾಂತ್ ಕೂಡ ಈ ವೆಬ್‌ಸೈಟ್ ದಾಖಲಿತ ಆಧಾರಗಳ ಮೂಲಕ ರಾಹುಲ್ ಗಾಂಧಿ ಅವರ ಪ್ರತಿಪಾದನೆಗಳನ್ನು ವ್ಯವಸ್ಥಿತವಾಗಿ ಪರಿಶೀಲಿಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯುತ್ತಿದೆ ಎಂದು ಪ್ರತಿಪಾದಿಸಿದರು.

ಸುಪ್ರೀಂ ಕೋರ್ಟ್ ಹಿರಿಯ ವಕೀಲ ರಮೇಶ್ ಜೇಠ್ಮಲಾನಿ ಕೂಡ ಬಿಜೆಪಿಯ ಧ್ವನಿಗೆ ಧ್ವನಿಗೂಡಿಸಿ, ರಾಹುಲ್ ಗಾಂಧಿ ಅವರ ‘ಛಾತ್ರೋನ್ ಕೀ ಗೂಂಜ್’ ಅಭಿಯಾನಕ್ಕೆ ಜೆನ್-ಝೀ ಯುವಜನತೆ ‘ಜೂಠ್ ಕೀ ಗೂಂಜ್’ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ ಎಂದರು. ರಾಹುಲ್ ಗಾಂಧಿ 4 ರ‍್ಯಾಲಿಗಳಲ್ಲಿ ನೀಡಿದ 40 ಹೇಳಿಕೆಗಳನ್ನು 134 ಆಧಾರಗಳನ್ನು ಬಳಸಿ ಪರಿಶೀಲಿಸಲಾಗಿದ್ದು, ಅದರಲ್ಲಿ 29 ಸಂಪೂರ್ಣ ಸುಳ್ಳು ಮತ್ತು 11 ಹಾದಿತಪ್ಪಿಸುವಂತಿವೆ ಎಂದು ಅವರು ಹೇಳಿದರು.

ಯುವಕರು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರಿಕರಿಸಿ ರಾಹುಲ್ ಗಾಂಧಿ ಇದುವರೆಗೆ ಈ ಅಭಿಯಾನದಡಿ 4 ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

Karnataka SIR : ನಿರ್ದೋಷಿ ಜನರೇಕೆ ದಾಖಲೆಗಾಗಿ ಅಲೆದಾಡಬೇಕು? ಲಾಜಿಕಲ್ ಡಿಸ್ಕ್ರಿಪೆನ್ಸಿ ನೋಟಿಸ್‌ಗೆ ನಾಗರಿಕ ಸಂಘಟನೆಗಳ ಆಕ್ಷೇಪ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಭಾಗವಾಗಿ ಮತದಾರರಿಗೆ ನೋಟಿಸ್ ನೀಡಲು ಮುಂದಾಗಿರುವ ಚುನಾವಣಾ ಆಯೋಗದ ಕ್ರಮವನ್ನು ನಾಗರಿಕ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಆಗಸ್ಟ್ 25ರಂದು ಎಸ್‌ಐಆರ್‌ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ...

ಮಳೆಯೇ ಇಲ್ಲದೆ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಕಾರಣವೇನು?

ನೇಪಾಳ-ಟಿಬೆಟ್ ಗಡಿಭಾಗದ ಹಿಮಾಲಯ ಪ್ರದೇಶದಲ್ಲಿ ಹಿಮನದಿ ಇದ್ದಕ್ಕಿದ್ದಂತೆ ಕರಗಿ ಕುಸಿದ ಪರಿಣಾಮ ಭೀಕರ ಪ್ರವಾಹ ಉಂಟಾಗಿದೆ. ಈ ವಿಕೋಪದಲ್ಲಿ ಇದುವರೆಗೆ 160ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, 800ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು...

101 ತಾಲ್ಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿದ ರಾಜ್ಯ ಸರ್ಕಾರ

ಮಳೆ ಕೊರತೆಯಿಂದ ತತ್ತರಿಸಿರುವ ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಬರ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಸರ್ಕಾರವು ₹350...

ಕೊಟ್ಟ ಭರವಸೆ ಈಡೇರಿಸದ ಕೇಂದ್ರ ಸರ್ಕಾರ: ಸೆಪ್ಟೆಂಬರ್ 5ರಂದು ಸಿಜೆಪಿಯಿಂದ ದೆಹಲಿಯಲ್ಲಿ ಶಾಂತಿಯುತ ಮೆರವಣಿಗೆ

ಜುಲೈ 25ರಂದು ದೇಶದ ಯುವಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಸೆಪ್ಟೆಂಬರ್ 5ರಂದು ರಾಷ್ಟ್ರ ರಾಜಧಾನಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ...

Karnataka SIR : ಮತಹರಣದ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ನಾಗರಿಕ ಸಂಘಟನೆಗಳು

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಉಂಟಾದ ಮತಹರಣದ ವಿರುದ್ಧ ಕಾನೂನು ಸಮರ ನಡೆಸಲು ನಾಗರಿಕ ಸಂಘಟನೆಗಳು ಮುಂದಾಗಿವೆ. ಆಗಸ್ಟ್ 25ರಂದು ಎಸ್‌ಐಆರ್‌ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ವಿರುದ್ದ...

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ ಘಟಿಕೋತ್ಸವ ರದ್ದು: ಸಿಜೆಐ, ಬಾರ್ ಕೌನ್ಸಿಲ್ ಮುಖ್ಯಸ್ಥರ ಆಹ್ವಾನಕ್ಕೆ ವಿದ್ಯಾರ್ಥಿಗಳ ತೀವ್ರ ವಿರೋಧ!

ಬೆಂಗಳೂರು: ದೇಶದ ಪ್ರತಿಷ್ಠಿತ ಕಾನೂನು ಶಿಕ್ಷಣ ಸಂಸ್ಥೆಯಾದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU), ತನ್ನ 34ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ದಿಢೀರ್ ರದ್ದುಗೊಳಿಸಿದೆ. ಸೆಪ್ಟೆಂಬರ್ 12 ರಂದು...

ತಮಿಳುನಾಡು| ದಲಿತ ಯುವಕನ ಲಾಕಪ್ ಡೆತ್ ಪ್ರಕರಣ; ಆರು ಜನ ಪೊಲೀಸರ ವಿರುದ್ಧ ಪ್ರಕರಣ ದಾಖಲು

ಕಲೆದ ಮಾರ್ಚ್‌ನಲ್ಲಿ ತಮಿಳುನಾಡಿನ ಶಿವಗಂಗೈ ಜಿಲ್ಲೆಯಲ್ಲಿ ನಡೆಸಿದ್ದ 26 ವರ್ಷದ ದಲಿತ ಯುವಕ ಆಕಾಶ್ ಡೆಲಿಸನ್ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿ-ಸಿಐಡಿ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ (ಚಾರ್ಜ್‌ಶೀಟ್), ಆರೋಪಿಗಳಾದ ಆರು ಮಂದಿ...

Karnataka SIR | ಡಿಲೀಟ್ ಪಟ್ಟಿಯಲ್ಲಿ ಅಂದಾಜು 52 ಲಕ್ಷ ಅರ್ಹ ಮತದಾರರಿದ್ದಾರೆ : ನಾಗರಿಕ ಸಂಘಟನೆಗಳಿಂದ ಗಂಭೀರ ಆರೋಪ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ ಮತದಾರರ ಪಟ್ಟಿಯಿಂದ ಈಗಾಗಲೇ ಹೊರಗಿಟ್ಟಿರುವ 1.08 ಕೋಟಿ (1,07,96,415) ಮತದಾರರ ಪೈಕಿ ಅಂದಾಜು 52 ಲಕ್ಷ ಮಂದಿ ಅರ್ಹರಿದ್ದಾರೆ ಎಂದು ನಾಗರಿಕ ಸಂಘಟನೆಗಳು ಗಂಭೀರ...

ನೇಪಾಳದಲ್ಲಿ ಜಲಪ್ರಳಯ: 300 ಭಾರತೀಯರು ಸೇರಿ 1,500 ಮಂದಿ ನಾಪತ್ತೆ, ಸಾವಿನ ಸಂಖ್ಯೆ 165ಕ್ಕೆ ಏರಿಕೆ

ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ನಂತರ ಸುಮಾರು 1,500 ಜನರು ಕಾಣೆಯಾಗಿದ್ದಾರೆ. ಈ ಪ್ರವಾಹದಲ್ಲಿ 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್...

PTCL ಕಾಯ್ದೆ ಅನುಷ್ಠಾನ ವೈಫಲ್ಯ: ನ್ಯಾಯಾಂಗ ಹಾಗೂ ಸರ್ಕಾರದ ಧೋರಣೆ ಖಂಡಿಸಿ ಜ್ಯೂರಿ ವರದಿ ಬಿಡುಗಡೆ

ದಲಿತ ಸಮುದಾಯಗಳಿಗೆ ಮಂಜೂರಾದ ಭೂಮಿ ಅನ್ಯಯವಾಗುವುದನ್ನು ತಡೆಯುವಲ್ಲಿ ಹಾಗೂ ಪಿಟಿಸಿಎಲ್ (PTCL) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ನ್ಯಾಯಾಂಗ ಮತ್ತು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಜ್ಯೂರಿ ವರದಿಯು ತೀವ್ರವಾಗಿ ಅತೃಪ್ತಿ ವ್ಯಕ್ತಪಡಿಸಿದೆ. ಪಿಟಿಸಿಎಲ್...