Factcheck ಅಂಬೇಡ್ಕರ್‌ರವರಿಗೆ ಭಾರತ ರತ್ನ ಕೊಟ್ಟಿದ್ದು ಅಟಲ್ ಬಿಹಾರ ವಾಜಪೇಯಿ- ಬಿ.ಎಲ್ ಸಂತೋಷ್ : ಈ ಮಾತು ನಿಜವೇ?

ತುಮಕೂರಿನ ಸಿದ್ದಗಂಗ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂದು ಎಷ್ಟೆಲ್ಲಾ ಒತ್ತಾಯ ಮಾಡಿದರೂ ಕೇಂದ್ರ ಸರ್ಕಾರ ಇದುವರೆಗೂ ಕೊಟ್ಟಿಲ್ಲ.

1

ಅನೇಕರು ಅಂಬೇಡ್ಕರ್‌ರವರನ್ನು ಗುತ್ತಿಗೆ ಪಡೆದವರಂತೆ ಆಡುತ್ತಿದ್ದಾರೆ. ಆದರೆ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ ಬರಬೇಕಾಯಿತು ಎಂಬುದು ಗೊತ್ತಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಇದೇ ವಾದವನ್ನು ಮುಂದಿಟ್ಟಿದ್ದರು.

ವಾಸ್ತವವೇನು?

ಆದರೆ ಸತ್ಯವೇನೆಂದರೆ 1990ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದು ವಿ.ಪಿ ಸಿಂಗ್ ಸರ್ಕಾರ ಎಂದು ವಿಕಿಪೀಡಿಯಾ ತಿಳಿಸುತ್ತದೆ. ವಿ.ಪಿ ಸಿಂಗ್‌ರವರು ಆಗ ಜನಮೋರ್ಚ ಪಕ್ಷದಿಂದ ಗೆದ್ದಿದ್ದು ಜನತಾ ಪಕ್ಷ, ಲೋಕದಳ ಮತ್ತು ಕಾಂಗ್ರೆಸ್‌ ಎಸ್‌ ಪಕ್ಷಗಳು ವಿಲೀನಗೊಂಡು ಸಮ್ಮಿಶ್ರ ಸರ್ಕಾರ ರಚಿಸಿದ್ದಾಗ ಅಂಬೇಡ್ಕರ್‌ರವರಿಗೆ ಭಾರತ ರತ್ನ ಸಿಕ್ಕಿದೆ.

ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಮತ್ತು RSSನ ಮನಪರಿವರ್ತನೆ! : ಅಂಬೇಡ್ಕರ್‌ ಹೊಗಳಿದ ಬಿ.ಎಲ್‌ ಸಂತೋಷ್‌ಗೆ 9 ಪ್ರಶ್ನೆಗಳು

ಇನ್ನು ಅಟಲ್‌ ಬಿಹಾರಿ ವಾಜಪೇಯಿಯವರು ಮೊದಲ ಬಾರಿ ಪ್ರಧಾನಿಯಾಗಿದ್ದುದೆ 1996ರಲ್ಲಿ. ಇನ್ನು ಅಂಬೇಡ್ಕರ್‌ರವರಿಗೆ ಭಾರತ ರತ್ನ ನೀಡುವುದಕ್ಕೆ ಬಿಜೆಪಿಗೆ ವಿರೋಧವಿತ್ತು. ಈಗ ನೋಡಿದರೆ ಅದರ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ದೂರಿದ್ದರು.

ಈ ಬಿಜೆಪಿ, ಆರ್‌ಎಸ್‌ಎಸ್‌ನವರು ಮೇಲ್ಜಾತಿ ಅದರಲ್ಲಿಯೂ ಬ್ರಾಹ್ಮಣರಿಗೆ ಮಾತ್ರ ಅಧಿಕಾರ ಪ್ರಶಸ್ತಿಗಳನ್ನು ನೀಡುತ್ತಾರೆಯೇ ವಿನಃ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗಲ್ಲ ಎಂದು ಒವೈಸಿ ಕೂಡ ಕಳೆದ ವರ್ಷ ಟೀಕಿಸಿದ್ದರು.

ಅಷ್ಟೇ ಏಕೆ ಕರ್ನಾಟಕದ ನಿತ್ಯ ದಾಸೋಹಿ, ನಡೆದಾಡುವ ದೇವರು ಎಂದು ಪ್ರಖ್ಯಾತಿ ಪಡೆದಿದ್ದ ತುಮಕೂರಿನ ಸಿದ್ದಗಂಗ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂದು ಎಷ್ಟೆಲ್ಲಾ ಒತ್ತಾಯ ಮಾಡಿದರೂ ಕೇಂದ್ರ ಸರ್ಕಾರ ಇದುವರೆಗೂ ಕೊಟ್ಟಿಲ್ಲ.

ಹಾಗಾಗಿ ಬಿ.ಎಲ್‌ ಸಂತೋಷ್‌ ಹೇಳಿರುವುದು ಸುಳ್ಳಾಗಿದ್ದು, ಅಂಬೇಡ್ಕರ್‌ಗೆ ಬಿಜೆಪಿ ಎನನ್ನೂ ಮಾಡಿಲ್ಲ.

ಹಾಗೆ ನೋಡಿದರೆ ಅತಿದೊಡ್ಡ ವಿದ್ವಾಂಸ, ಪ್ರಖರ ಪಂಡಿತ, ಸಂವಿಧಾನದ ಶಿಲ್ಪಿ, ಶೋಷಿತ ಜನರ ವಿಮೋಚಕ ಅಂಬೇಡ್ಕರ್‌ರವರಿಗೆ ಯಾವ ಪ್ರಶಸ್ತಿಗಳು ಅಗತ್ಯವಲ್ಲ. ಆದರೆ ಈ ರಾಜಕೀಯ ಪಕ್ಷಗಳು ಅವರ ಹೆಸರು ಬಳಸಿಕೊಳ್ಳಲು ಈ ರೀತಿಯ ಸುಳ್ಳು ಹರಡುತ್ತಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. The cunning lie told by BJP person Santosh must be published in main stream meadia, not under fact check. This one lie exposes their every dirt in their mind.

LEAVE A REPLY

Please enter your comment!
Please enter your name here