Homeಮುಖಪುಟರೈತರ ಆಕ್ರೋಶದ ಪರಿಣಾಮ: ಸರ್ಕಾರ ಪತನದ ಭೀತಿಯಲ್ಲಿ ಹರಿಯಾಣ ಸಿಎಂ!

ರೈತರ ಆಕ್ರೋಶದ ಪರಿಣಾಮ: ಸರ್ಕಾರ ಪತನದ ಭೀತಿಯಲ್ಲಿ ಹರಿಯಾಣ ಸಿಎಂ!

ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಈಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನೇ ಕಡಿಮೆ ಮಾಡಿದ್ದಾರೆ.

- Advertisement -
- Advertisement -

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ಒಂದು ಕಡೆ ರೈತರ ಪ್ರತಿಭಟನೆಯ ಆಕ್ರೋಶದ ಬಿಸಿ ತಟ್ಟತೊಡಗಿದ್ದರೆ, ಇನ್ನೊಂದು ಕಡೆ ಆಡಳಿತದ ಮಿತ್ರ ಪಕ್ಷ ಜನತಾ ಜನನಾಯಕ್ ಪಾರ್ಟಿ (ಜೆಜೆಪಿ) ರೈತರಿಗೆ ಬೆಂಬಲವಾಗಿ ಯಾವ ಕ್ಷಣದಲ್ಲಾದರೂ ಹೋಳಾಗಬಹದು ಅಥವಾ ಅದರ ಎಲ್ಲ 10 ಶಾಸಕರೂ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳಬಹುದು ಎಂಬ ಭಯ ಕಾಡತೊಡಗಿದೆ.

ಪ್ರತಿವರ್ಷ ಎಲ್ಲ ಮುಖ್ಯಮಂತ್ರಿಗಳು ನಿರ್ದಿಷ್ಟ ಸ್ಥಳದಲ್ಲಿ ಗಣರಾಜ್ಯೋತ್ಸವ ಧ್ವಜ ಹಾರಿಸುತ್ತಾರೆ. ಆದರೆ, ಈ ಸಲ ಖಟ್ಟರ್ ಗಣರಾಜ್ಯೋತ್ಸವ ಕಾರ್ಯಕ್ರಮದ ಸ್ಥಳವನ್ನೇ ಶಿಫ್ಟ್ ಮಾಡಿಸಿದ್ದರು. ಪಾಣಿಪತ್‌ನಲ್ಲಿ ಧ್ವಜ ಹಾರಿಸಲು ಹಿಂದೇಟು ಹಾಕಿದ ಖಟ್ಟರ್, ಸ್ವಲ್ಪ ಸುರಕ್ಷಿತ ಸ್ಥಳವೆಂದು ಪಂಚಕುಲಾದಲ್ಲಿ ಕಾರ್ಯಕ್ರಮ ನಡೆಸಿ ತ್ರಿವರ್ಣ ಧ್ವಜ ಹಾರಿಸಿದರು!

ಅರೆ, ಯಾರ ಭಯ? ಉಗ್ರರ ಭಯವಾ? ಊಹೂಂ, ರೈತರು ಕಪ್ಪು ಬಟ್ಟೆ ಪ್ರದರ್ಶನ ಮಾಡಬಹುದು ಅಥವಾ ಘೇರಾವ್ ಹಾಕಬಹುದು ಎಂಬ ಆತಂಕ. ತನ್ನ ರಾಜ್ಯದಲ್ಲೇ ಇಷ್ಟು ಆತಂಕಿತನಾಗಿ ಆಡಳಿತ ಮಾಡಿದ ಸಿಎಂ ಇನ್ನೊಬ್ಬರಿರಲಿಕ್ಕಿಲ್ಲ.

ಪಾಣಿಪತ್ ಮನೋಹರಲಾಲ್ ಖಟ್ಟರ್ ಸ್ವಗ್ರಾಮ ಕರ್ನಾಲ್‌ನಿಂದ 16 ಕಿಮೀ ದೂರದಲ್ಲಿದೆ. 15 ದಿನಗಳ ಹಿಂದೆ ಖಟ್ಟರ್ ಕರ್ನಾಲ್‌ಗೆ ಹೋಗಲೂ ಆಗಲಿಲ್ಲ. ಏಕೆಂದರೆ, ರೈತರು ಅಲ್ಲಿನ ಹೆಲಿಪ್ಯಾಡ್ ಧ್ವಂಸಗೊಳಿಸಿದ್ದರು. ಕಾರ್ಯಕ್ರಮ ನಡೆಯಬೇಕಿದ್ದ ವೇದಿಕೆಗೆ ನುಗ್ಗು ಚೆಲ್ಲಾಪಿಲ್ಲಿ ಮಾಡಿದ್ದರು. ತಿಂಗಳ ಹಿಂದೆ ಅದೇ ಕರ್ನಾಲ್‌ನಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಕಾರ್ಯಕ್ರಮವನ್ನೇ ಖಟ್ಟರ್ ರದ್ದು ಮಾಡಬೇಕಾಯಿತು. ಕಾರಣ ರೈತರನ್ನು ಎದುರಿಸುವ ರಾಜಕೀಯ ದೃಢತೆಯೇ ಇಲ್ಲ.

ಅಂಬಾಲಾದಲ್ಲಿ 13 ರೈತರ ಮೇಲೆ ಕೊಲೆ ಯತ್ನ, ದಂಗೆ ಪ್ರಕರಣ ದಾಖಲಿಸಲಾಗಿದೆ. ರೈತರು ಖಟ್ಟರ್‌ಗೆ ಕಪ್ಪು ದ್ವಜ ಪ್ರದರ್ಶನ ಮಾಡಿದ್ದರು. ಹಾಗೆಯೇ ರೈತರು ಖಟ್ಟರ್ ಬೆಂಗಾವಲು ವಾಹನವನ್ನು ತಡೆದು ವಾಪಸ್ ಕಳಿಸಿದ್ದರು.

ರಾಜ್ಯದಲ್ಲಿ ಅರಾಜಕತೆ ಉಂಟಾಗಬಹುದು ಎಂಬ ನೆಪ ನೀಡಿ, 22 ಜಿಲ್ಲೆಗಳ ಪೈಕಿ 17ರಲ್ಲಿ ಇಂಟರ್‌ನೆಟ್ ಸೇವೆಯನ್ನು ಖಟ್ಟರ್ ಸ್ಥಗಿತಗೊಳಿಸಿದ್ದಾರೆ. ರೈತ ಹೋರಾಟ ಎಲ್ಲೆಡೆ ಹರಡದಂತೆ ತಡೆಯುವ ಕುತಂತ್ರ ಇದಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದುವರಿದು ರೈತರು ದೇವಸ್ಥಾನದ ಮೈಕ್‌ಗಳನ್ನು ಉಪಯೋಗಿಸಿ ರೈತ ಹೋರಾಟದ ಪರಿಸ್ಥಿತಿಯನ್ನು ವಿವರಿಸಿ, ಹೋರಾಟ ಸೇರಿಕೊಳ್ಳಲು ಕರೆ ನೀಡುತ್ತಿದ್ದಾರೆ.

ಸರ್ಕಾರ ಪತನದ ಭೀತಿ

ಇನ್ನೊಂದು ಕಡೆ ಖಟ್ಟರ್‌ಗೆ ಸರ್ಕಾರ ಬೀಳಬಹುದೆಂಬ ಆತಂಕ ಶುರುವಾಗಿದೆ. ಜನವರಿ 26ರ ಕೆಂಪುಕೋಟೆಯ ಅಹಿತಕರ ಘಟನೆ ನಂತರ ಸ್ವಲ್ಪ ನಿರಾಳರಾಗಿದ್ದ ಅವರಿಗೆ, ಟಿಕಾಯತ್ ಮನವಿ ನಂತರ ತೀವ್ರಗೊಳ್ಳುತ್ತಿರುವ ರೈತರ ಪ್ರತಿಭಟನೆ ಚಿಂತೆಗೀಡುಮಾಡಿದೆ.

90 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 40. 10 ಜೆಜೆಪಿ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಯಾಗಿದೆ. ಇಬ್ಬರು ಪಕ್ಷೇತರರು ರೈತರ ಬೆಂಬಲಾರ್ಥವಾಗಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ.

ಜೆಜೆಪಿ ನಾಯಕ, ಉಪ ಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌತಾಲರ ಮೇಲೆ ಅವರ ಪಕ್ಷದ ಶಾಸಕರೆ ಒತ್ತಡ ಹೇರುತ್ತಿದ್ದು, ರೈತರ ಪರ ನಿಲ್ಲೋಣ, ಸರ್ಕಾರಕ್ಕೆ ಬೆಂಬಲ ಹಿಂಪಡೆಯೋಣ ಎನ್ನುತ್ತಿದ್ದಾರೆ. ಕೆಲವರು ಜೆಜೆಪಿ ಬಿಡಲೂ ತಯಾರಾಗಿದ್ದಾರೆ. ಐಎನ್‌ಎಲ್‌ಡಿ ಶಾಸಕ ಅಭಯ ಸಿಂಗ್ ಚೌತಾಲ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ, ದುಷ್ಯಂತ್ ರಾಜಿನಾಮೆಗೆ ಒತ್ತಡ ಹೆಚ್ಚುತ್ತಿದೆ.

ಕೃಷಿ ಕಾಯ್ದೆ ಪರ ಮೋದಿಯವರನ್ನು ಬೆಂಬಲಿಸಿ, ಪ್ರಧಾನಿಗೆ ಶಕ್ತಿ ತುಂಬಬೇಕಿದ್ದ ಖಟ್ಟರ್, ಕಳೆದ ವಾರ ಡಿಸಿಎಂ ದುಷ್ಯಂತರನ್ನು ದೆಹಲಿಗೆ ಕರೆದುಕೊಂಡು ಹೋಗಿ, ಮೋದಿ-ಶಾ ಎದುರು ನಿಲ್ಲಿಸಿ, ನೀವೇ ನನ್ನ ಸರ್ಕಾರ ಉಳಿಸಿ ಎಂದು ಮನವಿ ಮಾಡಿದ್ದರು.

ರಾಜ್ಯವೊಂದರ ಪ್ರಬಲ ಸಮುದಾಯಕ್ಕೆ ಮುಖ್ಯಮಂತ್ರಿ ಪದವಿ ನೀಡದೇ, ಸಣ್ಣ ಸಮುದಾಯಕ್ಕೆ ನೀಡುವ ಮುಲಕ ಮುಖ್ಯಮಂತ್ರಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಮೋದಿ-ಶಾ ತಂತ್ರದ ಭಾಗವಾಗಿ ಖಟ್ಟರ್‌ರನ್ನು ಹರಿಯಾಣ ಸಿಎಂ ಮಾಡಲಾಗಿದೆ. ಪ್ರಬಲ ಜಾಟ್ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನಿರಾಕರಿಸಿ, ಪಂಜಾಬಿ ಖತ್ರಿ ಸಮುದಾಯಕ್ಕೆ ಸೇರಿದ ಖಟ್ಟರ್‌ಗೆ ಕಿರೀಟ ತೊಡಿಸಲಾಗಿತ್ತು. ಐದು ವರ್ಷಗಳ ಅಡಳಿತದಲ್ಲಿ ಅಂಥದ್ದೇನೂ ಮಾಡದ ಪರಿಣಾಮ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ 40 ಸೀಟು ಸಿಕ್ಕವು. ಕಾಂಗ್ರೆಸ್‌ನ ಭೂಪಿಂದರ್ ಹೂಡಾ ಮತ್ತು ಐಎನ್‌ಎಲ್‌ಡಿಯ ಓಂಪ್ರಕಾಶ್ ಚೌತಾಲರ (ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜೈಲು ಪಾಲಾಗಿದ್ದಾರೆ) ಭ್ರಷ್ಟಾಚಾರ ಪ್ರಕರಣಗಳ ಲಾಭ ಪಡೆದೂ ಬಿಜೆಪಿಗೆ ಸಿಕ್ಕಿದ್ದು 40 ಸೀಟು ಮಾತ್ರ.
ಈಗ ಜೆಜೆಪಿ ಕೈ ಕೊಟ್ಟರೆ ಖಟ್ಟರ್ ಸರ್ಕಾರ ಬೀಳುವುದು ಖಚಿತ. ಅದಕ್ಕೆ ನೇರ ಕಾರಣ ಎಂಬುದರಲ್ಲಿ ಸಂಶಯವಿಲ್ಲ.

  • ಪಿ.ಕೆ ಮಲ್ಲನಗೌಡರ್, (ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವು)

ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...