HomeಮುಖಪುಟFly Dubai ಹೈಜಾಕ್ ಯತ್ನ: ಭಾರತೀಯ ಪೈಲಟ್ ಮೇಲೆ ದಾಳಿ ಮಾಡಿದ್ದ ಸಹಪೈಲಟ್ ಉಗ್ರರ ನಂಟಿನ...

Fly Dubai ಹೈಜಾಕ್ ಯತ್ನ: ಭಾರತೀಯ ಪೈಲಟ್ ಮೇಲೆ ದಾಳಿ ಮಾಡಿದ್ದ ಸಹಪೈಲಟ್ ಉಗ್ರರ ನಂಟಿನ ಆರೋಪ

- Advertisement -
- Advertisement -

ದುಬೈಯಿಂದ ಟೆಲ್ ಅವೀವ್‌ಗೆ 170ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನವನ್ನು ಹೈಜಾಕ್ ಮಾಡಲು ಹಾಗೂ ಅಪಘಾತಕ್ಕೀಡು ಮಾಡಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಸಹಪೈಲಟ್ ಹಮಾಮ್ ಅಲ್‌ಹಮಾಮಿ ಕುರಿತು ಮತ್ತಷ್ಟು ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ವಿಮಾನ ಹಾರಾಟದ ನಡುವೆಯೇ ಭಾರತೀಯ ಮೂಲದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಅಲ್‌ಹಮಾಮಿಗೆ, ಈ ಹಿಂದೆ ಆತನ ತಾಯ್ನಾಡು ಒಮಾನ್‌ನಲ್ಲಿ ವಿಮಾನ ಹಾರಾಟ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಒಮಾನ್ ಪ್ರಜೆಯಾಗಿದ್ದ ಅಲ್‌ಹಮಾಮಿ, ಸಿರಿಯಾದಲ್ಲಿ ನೆಲೆಸಿದ್ದಾಗ ತೀವ್ರಗಾಮಿ ಹಾಗೂ ಉಗ್ರಗಾಮಿ ವಿಚಾರಗಳಿಂದ ಪ್ರಭಾವಿತರಾಗಿದ್ದ ಎಂಬ ಆರೋಪಗಳಿವೆ. 2024ರಲ್ಲಿ ಒಮಾನ್ ಏರ್‌ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಆತನ ಬಳಿ ಉಗ್ರಗಾಮಿ ಸಾಮಗ್ರಿಗಳು ಪತ್ತೆಯಾಗಿದ್ದರಿಂದ ಆತನನ್ನು ಹಾರಾಟದಿಂದ ದೂರವಿಡಲಾಗಿತ್ತು. ಭದ್ರತಾ ಅಪಾಯವೆಂದು ಗುರುತಿಸಲ್ಪಟ್ಟಿದ್ದರೂ, ಆತ ತರುವಾಯ ಫ್ಲೈದುಬೈ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ.

ವಿಮಾನದಲ್ಲಿದ್ದ ಹಿರಿಯ ಪೈಲಟ್‌ಗಳ ಪ್ರಕಾರ, ವಿಮಾನವು ಸುಮಾರು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಸಹಪೈಲಟ್ ಅಲ್‌ಹಮಾಮಿ ಏಕಾಏಕಿ ವಿಮಾನವನ್ನು ಕಡಿದಾದ ವೇಗದಲ್ಲಿ ಕೆಳಕ್ಕೆ ಧುಮುಕುವಂತೆ ಮಾಡಿ ಆತಂಕ ಸೃಷ್ಟಿಸಿದ್ದ. ಈ ವೇಳೆ ವಿಮಾನವನ್ನು ನಿಯಂತ್ರಿಸಲು ಯತ್ನಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಮಚ್ಚಾರ್, ತಕ್ಷಣವೇ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಬಾಗಿಲು ತೆರೆಯುತ್ತಿದ್ದಂತೆಯೇ ಒಳಗಿದ್ದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ, ಉಗ್ರಾವತಾರ ತಾಳಿದ್ದ ಅಲ್‌ಹಮಾಮಿಯನ್ನು ಹಿಡಿದು ಕಟ್ಟಿಹಾಕಿದರು. ಇದೇ ವೇಳೆ ವಿಮಾನದಲ್ಲಿದ್ದ ದಂತವೈದ್ಯರೊಬ್ಬರು ಗಾಯಗೊಂಡಿದ್ದ ಕ್ಯಾಪ್ಟನ್ ಮಚ್ಚಾರ್ ಅವರಿಗೆ ತುರ್ತು ಪ್ರಥಮ ಚಿಕಿತ್ಸೆ ನೀಡಿದರು.

ಬಳಿಕ ವಿಮಾನದಲ್ಲಿದ್ದ ಇತರ ಇಬ್ಬರು ಹೆಚ್ಚುವರಿ ಪೈಲಟ್‌ಗಳು ತಕ್ಷಣವೇ ವಿಮಾನದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡು, ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಿಸಿ ಸುರಕ್ಷಿತವಾಗಿ ಇಳಿಸಿದರು. ಹೀಗಾಗಿ ಭಾರತೀಯ ಪೈಲಟ್‌ನ ಸಮಯಪ್ರಜ್ಞೆ ಹಾಗೂ ಸಾಹಸದಿಂದಾಗಿ ಭಾರಿ ದೊಡ್ಡ ವಿಮಾನ ದುರಂತ ತಪ್ಪಿದಂತಾಗಿದೆ. ಇತ್ತ ಘಟನೆಯ ನಂತರ ಅಲ್‌ಹಮಾಮಿಯ ಲಿಂಕ್ಡ್‌ಇನ್ ಖಾತೆಯಿಂದ ಅಲ್ ಖೈದಾ ಉಗ್ರರ ಚಿತ್ರಗಳು ಹಾಗೂ ಇಸ್ಲಾಂ ಧರ್ಮದ ಪವಿತ್ರ ಸ್ಥಳಗಳನ್ನು ಒಳಗೊಂಡ ಉಗ್ರಗಾಮಿ ಪೋಸ್ಟ್‌ಗಳು ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣ ಸಂಸ್ಥೆಗಳು ಹಾಗೂ ತನಿಖಾ ಸಂಸ್ಥೆಗಳು ಆತನ ಖಾತೆಗಳ ಕುರಿತು ಸುದೀರ್ಘ ತನಿಖೆ ಆರಂಭಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಮತದಾರರ ಪಟ್ಟಿ ಪರಿಷ್ಕರಣೆ: 25 ಪ್ರಕರಣಗಳಲ್ಲಿ ಅಧಿಕಾರಿಗಳೇ ‘ಆಕ್ಷೇಪಕರು’! ‘ಕಾರಣ’ ನೀಡದೆ ನೋಟಿಸ್ ಜಾರಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ ಅತ್ಯಂತ ಅಪರೂಪದ ಹಾಗೂ ಕಾನೂನು ತಜ್ಞರ ಹುಬ್ಬೇರಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕರಡು ಮತದಾರರ ಪಟ್ಟಿಯಿಂದ...

ಪ್ರತಿಭಟನಾಕಾರರನ್ನು ಬಂಧಿಸುವಂತೆ ಸಿಎಂ ಫಡ್ನವೀಸ್‌ಗೆ ಅಭಿಜೀತ್ ಸವಾಲು

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶಿವಾಜಿ ಪಾರ್ಕ್‌ನಲ್ಲಿ ಜಮಾಯಿಸಿರುವ ಪ್ರತಿಭಟನಾಕಾರರನ್ನು ಬಂಧಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಸಿ‌ಜೆ‌ಪಿ (ಕಾಕ್ರಾಚ್ ಜನತಾ ಪಾರ್ಟಿ) ನಾಯಕ ಅಭಿಜೀತ್...

ಕರ್ನಾಟಕ ಎಸ್‌ಐಆರ್‌ನಲ್ಲಿ ಫಾರ್ಮ್ 7 ದುರುಪಯೋಗ ಆರೋಪ: ಖಾಸಗಿ ವ್ಯಕ್ತಿಗಳ ಆಕ್ಷೇಪಣೆ ಸ್ಥಗಿತಕ್ಕೆ ಸಚಿವ ರಿಜ್ವಾನ್ ಅರ್ಷದ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆಯೇ ಫಾರ್ಮ್ 7 ಬಳಸಿ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪ ಮತ್ತಷ್ಟು ತೀವ್ರಗೊಂಡಿದೆ. ರಾಜ್ಯ...

ಗಾಂಧಿ ಜಯಂತಿಯಂದೇ ಗಾಂಧಿ ಹತ್ಯೆ ಸಂಭ್ರಮಿಸುವ ವಿಕೃತ ವಿಡಿಯೋ ಪೋಸ್ಟ್ ಮಾಡಿದ ಹಿಂದುತ್ವ ವೇದಿಕೆ  ‘ದಿ ಜೈಪುರ ಡೈಲಾಗ್ಸ್’

ನವದೆಹಲಿ: ಗಾಂಧಿ ಜಯಂತಿಯಂದೇ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸುವ ರೀತಿಯ ವೀಡಿಯೊವೊಂದನ್ನು ಹಂಚಿಕೊಂಡಿರುವ ಆರೋಪಕ್ಕೆ ಹಿಂದುತ್ವಕ್ಕೆ ಸಂಬಂಧಿಸಿದ ಡಿಜಿಟಲ್ ವೇದಿಕೆ ‘ದಿ ಜೈಪುರ ಡೈಲಾಗ್ಸ್’ ತೀವ್ರ ಟೀಕೆಗೆ ಗುರಿಯಾಗಿದೆ. ಅಕ್ಟೋಬರ್ 2ರಂದು ಗಾಂಧಿ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ; ಮುಂಬೈನ ಶಿವಾಜಿ ಪಾರ್ಕ್‌ಗೆ ಹರಿದುಬಂದ ಪ್ರತಿಭಟನಾಕಾರರು

ಮುಂಬೈನಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರೂ ಸಹ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರಾಚ್ ಜನತಾ ಪಾರ್ಟಿ' (ಸಿಜೆಪಿ) ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಶುಕ್ರವಾರ (ಅ.2)...

ಫೇಸ್‌ಬುಕ್ ಪೋಸ್ಟ್ ವಿವಾದ: ಉದ್ಯಮಿ ದೂರು ಆಧರಿಸಿ ‘ಮೊಹಮ್ಮದ್’ ದೀಪಕ್ ಬಂಧನ; ಕೋಟ್‌ದ್ವಾರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

ಉತ್ತರಾಖಂಡದ ಕೋಟ್‌ದ್ವಾರದಲ್ಲಿ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಸ್ಥಳೀಯ ಉದ್ಯಮಿ ಸಂಜೀವ್ ಟೋಂಕ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೀಪಕ್ ಕುಮಾರ್ ಅವರನ್ನು ಅಕ್ಟೋಬರ್ 1ರಂದು ಬಂಧಿಸಿದ್ದಾರೆ.  ಜನವರಿ 26ರಂದು ಮುಸ್ಲಿಂ...

ದಾಖಲೆ ಇಲ್ಲದ ಮಾತ್ರಕ್ಕೆ ಜಾನುವಾರು ಸಾಗಾಟ ‘ವಧೆಗಾಗಿ’ ಎಂದು ಊಹಿಸಲಾಗದು: ಸುಪ್ರೀಂ ಕೋರ್ಟ್

ಜಾನುವಾರುಗಳನ್ನು ಸಾಗಿಸುವಾಗ ಸೂಕ್ತ ದಾಖಲೆಗಳು ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಅವುಗಳನ್ನು ವಧೆಯ ಉದ್ದೇಶಕ್ಕಾಗಿಯೇ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. 32 ಎತ್ತುಗಳನ್ನು ವಧೆಗಾಗಿ...

ಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಎರಡೇ ದಿನಗಳಲ್ಲಿ ಇಬ್ಬರು ಬಲಿ

ಗಾಳಿಪಟ ಹಾರಿಸುವ ಸಂಭ್ರಮವು ಬೆಳಗಾವಿ ನಗರದಲ್ಲಿ ಸಾರ್ವಜನಿಕರ ಜೀವಕ್ಕೆ ಭಾರಿ ಕಂಟಕವಾಗಿ ಪರಿಣಮಿಸಿದೆ. ನಗರದಲ್ಲಿ ಅಪಾಯಕಾರಿ ಮಾಂಜಾ ದಾರ ಮತ್ತು ಗಾಳಿಪಟದ ಹುಚ್ಚಾಟಕ್ಕೆ ಕೇವಲ ಎರಡೇ ದಿನಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ ಭೀಕರ...

ಗ್ಯಾನೇಶ್ ಕುಮಾರ್ ವಿರುದ್ಧದ ಹಳೆಯ ಭ್ರಷ್ಟಾಚಾರದ ಕಡತ ತರಿಸಿಕೊಂಡ ಕೇರಳಂ ಸರ್ಕಾರ

ದೇಶಾದ್ಯಂತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ 'ಇಂಡಿಯಾ' (INDIA) ಒಕ್ಕೂಟವು ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್...

‘ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು..’; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

"ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು," ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುರುವಾರ ಹೇಳಿದ್ದಾರೆ. ಭಗವಂತ ತಮ್ಮನ್ನು ಈ ಜಗತ್ತಿಗೆ ಈ ಖಾದ್ಯವನ್ನು ಸವಿಯಲು ಕಳುಹಿಸಿದ್ದಾನೆ ಎಂಬ ಕಾಂಗ್ರೆಸ್ ಸಂಸದ ರಕೀಬುಲ್...