2020ರ GDP ಬೆಳವಣಿಗೆಯಲ್ಲಿ ಏಷ್ಯಾ ರಾಷ್ಟ್ರಗಳಲ್ಲಿಯೇ ಭಾರತದ ಸಾಧನೆ ತೀರಾ ಕಳೆಪೆ ಎಂದು ಐಎಂಎಫ್ ಅಂದಾಜಿಸಿದೆ. -10.3% ನೊಂದಿಗೆ ಏಷ್ಯಾ ರಾಷ್ಟ್ರಗಳಲ್ಲಿ ಭಾರತ 11 ನೇ ಸ್ಥಾನದಲ್ಲಿದ್ದರೆ ಬಾಂಗ್ಲಾದೇಶ 3.9%, ಚೀನಾ 1.8%, ಮತ್ತು ವಿಯೆಟ್ನಾಂ 1.6% ಮೂಲಕ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.
ಇದೇ ಸಂದರ್ಭದಲ್ಲಿ ಕೋವಿಡ್ ಸಾವುಗಳ ವಿಷಯದಲ್ಲಿ ಏಷ್ಯಾ ಖಂಡದಲ್ಲಿಯೇ ಭಾರತ ಅಗ್ರಸ್ಥಾನ ಪಡೆದಿದೆ. ಪ್ರತಿ 10 ಲಕ್ಷ ಜನರಿಗೆ ಭಾರತದಲ್ಲಿ 83 ಮಂದಿ ಕೋವಿಡ್‌ನಿಂದಾಗಿ ಮರಣ ಹೊಂದಿದ್ದಾರೆ. ಕೋವಿಡ್ ಸಾವುಗಳ ವಿಷಯದಲ್ಲಿ ವಿಯೆಟ್ನಾಂ ಪ್ರತಿ 10 ಲಕ್ಷ ಜನರಿಗೆ 0.4, ಶ್ರೀಲಂಕ 0.6 ಮತ್ತು ಥೈಲೈಂಡ್ 0.8 ರಷ್ಟು ಕಡಿಮೆ ಕೊರೊನಾ ಸಾವು ವರದಿ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿವೆ.
ಭಾರತದ GDP ಕುಸಿತಕ್ಕೆ ನರೇಂದ್ರ ಮೋದಿ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿಗಳ ಕಾರಣ ಎಂದು ಹಲವು ಅರ್ಥಶಾಸ್ತ್ರಜ್ಞರು ಆರೋಪಿಸಿದ್ದಾರೆ. ಹಲವು ಗಾರ್ಮೆಂಟ್ ಉದ್ದಿಮೆಗಳು ಭಾರತ ಮತ್ತು ಚೀನಾ ತೊರೆದು ಬಾಂಗ್ಲಾದೇಶಕ್ಕೆ ಹೋಗುತ್ತಿವೆ ಹಾಗಾಗಿ ಅದು ವೇಗವಾಗಿ ಬೆಳೆಯುತ್ತಿದೆ. ಅದೇ ರೀತಿಯಲ್ಲಿ ಜಪಾನ್ ಕಂಪನಿಗಳು ಥೈಲೈಂಡ್‌ನಲ್ಲಿ ಹೂಡಿಕೆ ಮಾಡುತ್ತಿವೆ. ಉತ್ಪಾದನಾ ಕ್ಷೇತ್ರದಲ್ಲಿ ವಿಯೆಟ್ನಾಂ ದಾಪುಗಾಲಿಡುತ್ತಿದೆ. ಹಾಗಾಗಿ ಅವುಗಳು ಆರ್ಥಿಕ ಪ್ರಗತಿ ಹೊಂದಿವೆ ಎನ್ನಲಾಗುತ್ತಿದೆ.
“ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶಪಡಿಸುವುದು ಮತ್ತು ಹೆಚ್ಚು ಜನರಿಗೆ ಬೇಗನೆ ಸೋಂಕು ಹರುಡುವುದು ಹೇಗೆ ಎಂದು ನರೇಂದ್ರ ಮೋದಿ ತೋರಿಸಿದ್ದಾರೆ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
How to completely destroy an economy and infect the maximum number of people really quickly. pic.twitter.com/5kbMpmnIpZ
— Rahul Gandhi (@RahulGandhi) October 19, 2020
ಇತ್ತೀಚೆಗೆ ತಲಾವಾರು GDP ಯಲ್ಲಿಯೂ ಸಹ ಬಾಂಗ್ಲಾದೇಶವನ್ನು ಭಾರತವನ್ನು ಹಿಂದಿಕ್ಕಲಿದೆ ಎಂದು ಐಎಂಎಫ್ ತಿಳಿಸಿತ್ತು. 2020ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 107 ದೇಶಗಳಲ್ಲಿ ಭಾರತವು 94 ನೇ ಸ್ಥಾಣ ಪಡೆದು ಕಳಪೆ ಪ್ರದರ್ಶನ ನೀಡಿತ್ತು.
ಈ ಎಲ್ಲಾ ಸೂಚನೆಗಳು ಭಾರತವು ತೀವ್ರ ಆರ್ಥಿಕ ಕುಸಿತ ಮತ್ತು ಅಪಾಯಕಾರಿ ಸ್ಥಿತಿಗೆ ತಲುಪುತ್ತಿದೆ. ಭಾರತದ ಆರ್ಥಿಕ ನೀತಿಗಳು ಬೃಹತ್ ಪ್ರಮಾಣದ ಉದ್ಯೋಗ ನಷ್ಟಕ್ಕೆ ಕಾರಣವಾಗಿರುವುದನ್ನು ಈಗಾಗಲೇ ನೋಡಿದ್ದೇವೆ. ಕೊರಾನಾ ಸಾಂಕ್ರಾಮಿಕ ಗಾಯದ ಮೇಲೆ ಬರೆ ಎಳೆದಿದೆ. ಆದರೆ ಇದನ್ನು ಆಳುವ ಸರ್ಕಾರ ಒಪ್ಪಿಕೊಳ್ಳದಿರುವುದರಿಂದ ಪರಿಹಾರದ ಮಾರ್ಗಗಳು ಕಾಣುತ್ತಿಲ್ಲ. ಭವಿಷ್ಯದಲ್ಲಿ ಭಾರತವು ಬೃಹತ್ ಸಂಕಷ್ಟ ಎದುರಿಸುವುದಂತೂ ಖಚಿತ.
ಇದನ್ನೂ ಓದಿ: ಐತಿಹಾಸಿಕ ಜಿಡಿಪಿ ಕುಸಿತಕ್ಕೆ ಕೊರೊನಾ ಮಾತ್ರ ಕಾರಣವೆ? ಕರ್ನಾಟಕದ ತಜ್ಞರು ಏನಂತಾರೆ?