Homeಚಳವಳಿದೇಶಕ್ಕೆ ಅನ್ನ ನೀಡಿ, ಗಡಿ ಕಾಯಲು ನಮ್ಮ ಮಕ್ಕಳನ್ನು ನೀಡಿ, ಈಗ ನಮ್ಮ ಜೀವವನ್ನೂ ನೀಡುತ್ತಿದ್ದೇವೆ:...

ದೇಶಕ್ಕೆ ಅನ್ನ ನೀಡಿ, ಗಡಿ ಕಾಯಲು ನಮ್ಮ ಮಕ್ಕಳನ್ನು ನೀಡಿ, ಈಗ ನಮ್ಮ ಜೀವವನ್ನೂ ನೀಡುತ್ತಿದ್ದೇವೆ: ರೈತ ಒಕ್ಕೂಟ

- Advertisement -
- Advertisement -

ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೊರೆಯುತ್ತಿರುವ ಚಳಿ ಮತ್ತು ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆಯೂ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಇದರ ಜೊತೆಗೆ ಸರ್ಕಾರ ಒಡ್ಡುತ್ತಿರುವ ಅಡೆತಡೆಗಳನ್ನೆಲ್ಲಾ ಎದುರಿಸಿ ಪಟ್ಟುಬಿಡದೇ ಅಲ್ಲಿಯೇ ಕುಳಿತಿದ್ದಾರೆ. ಆದರೆ ಸರ್ಕಾರ ಮಾತ್ರ ಮರುಗುವಂತೆ ಕಾಣುತ್ತಿಲ್ಲ.

ನಮ್ಮ ಕೈಯಲ್ಲಿರುವ ರೊಟ್ಟಿಯನ್ನು ಕಿತ್ತುಕೊಳ್ಳಬೇಡಿ ಎಂದು ಟ್ವೀಟ್ ಮಾಡಿದ್ದ ರೈತ ಒಕ್ಕೂಟ ಕಿಸಾನ್ ಏಕ್ತಾ ಮೋರ್ಚಾ, ಇಂದೂ ಅಂತಹುದೇ ಟ್ವೀಟ್ ಒಂದನ್ನು ಮಾಡಿ ಭಾರತದ ಅಂತಃಸತ್ವವನ್ನು ಪ್ರಶ್ನಿಸಿದೆ.

ಇದನ್ನೂ ಓದಿ: ಸುರಿವ ಮಳೆ – ಕೊರೆವ ಚಳಿಯಲ್ಲಿಯೂ ಪಟ್ಟು ಬಿಡದ ಪ್ರತಿಭಟನಾ ನಿರತ ರೈತರು!

“ಈ ದೇಶದ ಜನರಿಗೆ ಅನ್ನ ನೀಡುತ್ತಿರುವವರು ನಾವು, ಈ ದೇಶ ಕಾಯಲು ನಮ್ಮ ಮಕ್ಕಳನ್ನೂ ನೀಡಿದ್ದೇವೆ. ಈಗ ನಮ್ಮ ಹಕ್ಕುಗಳನ್ನು ಕೇಳಲು ನಮ್ಮ ಜೀವವನ್ನೇ ನೀಡುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜೊತೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದು, ಅವುಗಳೆಲ್ಲವೂ ವಿಫಲವಾಗಿವೆ.

ಇದನ್ನೂ ಓದಿ: ಇತ್ತ ಮಾತುಕತೆ; ಅತ್ತ ರೈತರ ಮೇಲೆ ಅಶ್ರುವಾಯು ದಾಳಿ – ಪ್ರಭುತ್ವದ ದಬ್ಬಾಳಿಕೆ ನೋಡಿ!

“ಡಿಸಂಬರ್ 30 ರಂದು ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ, ರೈತರ 4 ಪ್ರಮುಖ ಬೇಡಿಕೆಗಳಲ್ಲಿ ಕೇಂದ್ರ ಸರ್ಕಾರ ಎರಡಕ್ಕೆ ಒಪ್ಪಿಗೆ ನೀಡಲಾಗಿದ್ದು, ಉಳಿದ ಎರಡು ಬೇಡಿಕೆಗಳ ಕುರಿತಂತೆ ಜನವರಿ 4 ರಂದು ನಡೆಯುವ ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ತೀರ್ಮಾನವಾಗಲಿದೆ. ಅಲ್ಲಿ ತಮ್ಮ ಬೇಡಿಕೆಗಳನ್ನು ಈಡೆರಿಸದಿದ್ದರೆ ದೇಶದಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಕೆ ಕೊಟ್ಟಿದ್ದಾರೆ.

ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟದ ಪರಿಣಾಮವಾಗಿ ಪ್ರಸಕ್ತ ಹಣಕಾಸು ವರ್ಷದ 3 ನೇ ತ್ರೈಮಾಸಿಕದಲ್ಲಿ 70,000 ಕೋಟಿ ರೂ.ಗಳ ಆರ್ಥಿಕ ನಷ್ಟವಾಗಲಿದೆ ಎಂದು PHD ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ತಿಳಿಸಿತ್ತು. ಆದರೆ ಸರ್ಕಾರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೇ ಹಿಡಿದ ಹಠ ಸಾಧಿಸುತ್ತಿದೆ.


ಇದನ್ನೂ ಓದಿ: 35 ಸಾವಿರ ದೇವಾಲಯ ನಿರ್ಮಿಸಿ ಎಂದ ಎಸ್‌.ಎಲ್.ಭೈರಪ್ಪ: ಭೈರಪ್ಪಾ, ಆಲಯದಿಂದ ಬಯಲಿಗೆ ಬಾರಪ್ಪ ಎಂದು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...