Homeಮುಖಪುಟಅಗತ್ಯ ವಸ್ತುಗಳ ದರ ನಿಗದಿ ಮಾಡಿದ ಕೇರಳ ಸರ್ಕಾರ, ಸರ್ಜಿಕಲ್ ಮಾಸ್ಕ್‌ 3 ರೂ., ಫೇಸ್‌ಶೀಲ್ಡ್‌ಗೆ...

ಅಗತ್ಯ ವಸ್ತುಗಳ ದರ ನಿಗದಿ ಮಾಡಿದ ಕೇರಳ ಸರ್ಕಾರ, ಸರ್ಜಿಕಲ್ ಮಾಸ್ಕ್‌ 3 ರೂ., ಫೇಸ್‌ಶೀಲ್ಡ್‌ಗೆ 21 ರೂ.ದರ

- Advertisement -
- Advertisement -

ಕೊರೊನಾ ಸೋಂಕು ನಿಯಂತ್ರಣ ಮತ್ತು ರಾಜ್ಯದಲ್ಲಿ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಪರಿಹಾರ ಒದಗಿಸುವಲ್ಲಿ ಮಾದರಿಯಾಗಿರುವ ಕೇರಳ ಸರ್ಕಾರ ಈಗ ಅಗತ್ಯ ವಸ್ತುಗಳಾದ ಮಾಸ್ಕ್, ಸ್ಯಾನಿಟೈಜರ್‌, ಫೇಸ್‌ಶೀಲ್ಡ್‌ಗೆ ಸೇರಿದಂತೆ ಹಲವು ವಸ್ತುಗಳಿಗೆ ಗರಿಷ್ಠ ದರ ನಿಗದಿ ಮಾಡಿ, ಜನರ ಪ್ರಶಂಸೆಗೆ ಪಾತ್ರವಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ, ಕೇರಳ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ- 1986 ಕಾಯ್ದೆ ಜಾರಿಗೆ ತಂದಿದೆ. ಕೊರೊನಾ ಉಲ್ಬಣವಾಗುತ್ತಿರುವ ಈ ಸಮಯದಲ್ಲಿ ಅಗತ್ಯ ವಸ್ತುಗಳು ಜನರ ಕೈಗೆಟುಕುವಂತೆ ಮಾಡಲು ಈ ಕಾಯ್ದೆ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಸಿಟಿ ರವಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಮತ್ತೆ ಹೇಳಿಕೆ ಸಮರ್ಥಿಸಿಕೊಂಡ ಮಾಜಿ ಸಚಿವ!

ಕೇರಳ ಸರ್ಕಾರ ಹೊರಡಿಸಿರುವ ಅಗತ್ಯ ವಸ್ತುಗಳ ಗರಿಷ್ಠ ದರ ಪಟ್ಟಿ ಹೀಗಿದೆ.

ಪಿಪಿಣ ಕಿಟ್- 273 ರೂಪಾಯಿ

ಎನ್‌95 ಮಾಸ್ಕ್- 22 ರೂಪಾಯಿ,

ಟ್ರಿಪಲ್ ಲೇಯರ್ ಮಾಸ್ಕ್- 3 ರೂಪಾಯಿ 90 ಪೈಸೆ,

ಎನ್‌ಆರ್‌ಬಿ ಮಾಸ್ಕ್- 80 ರೂಪಾಯಿ

ಫೇಸ್‌ಶೀಲ್ಡ್ – 21 ರೂಪಾಯಿ

ಡಿಸ್‌ಪೋಸಬಲ್ ಏಪ್ರಾನ್‌- 12 ರೂಪಾಯಿ,

ಸರ್ಜಿಕಲ್ ಗೌನ್- 65 ರೂಪಾಯಿ,

ಗ್ಲೌಸ್- 5 ರೂಪಾಯಿ 75 ಪೈಸೆ

 

ಅರ್ಧ ಲೀಟರ್‌ ಹ್ಯಾಂಡ್ ಸ್ಯಾನಿಟೈಸರ್ 192 ರೂ, 200 ಎಂಎಲ್‌ಗೆ 98 ರೂಪಾಯಿ ಮತ್ತು 100 ಎಂಎಲ್‌ಗೆ 55 ರೂಪಾಯಿ
ಆಕ್ಸಿಜನ್ ಮಾಸ್ಕ್ – 54 ರೂಪಾಯಿ
ಪಲ್ಸ್ ಆಕ್ಸಿಮೀಟರ್ – 1500 ರೂಪಾಯಿ

ದರ ಪಟ್ಟಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಜನರಿಗೆ ತಿಳಿಸಿದ್ದಾರೆ. ಜೊತೆಗೆ ಮೇ 23 ರವರೆಗೆ ಲಾಕ್‌ಡೌನ್ ವಿಸ್ತರಿಸಿರುವ ಕೇರಳದಲ್ಲಿ ಜೂನ್ ತಿಂಗಳಲ್ಲೂ ದಿನಸಿ ಕಿಟ್ ವಿತರಣೆ ಮುಂದುವರೆಯಲಿದೆ ಎಂದಿದ್ದಾರೆ.

“ಲಾಕ್‌ಡೌನ್ ಅನ್ನು ಮೇ 23 ರವರೆಗೆ ವಿಸ್ತರಿಸಲಾಗಿದೆ .ತಿರುವನಂತಪುರಂ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂನಲ್ಲಿ ಟ್ರಿಪಲ್ ಲಾಕ್ ಡೌನ್ ವಿಧಿಸಲಾಗಿದೆ. ಜೂನ್‌ನಲ್ಲಿಯೂ ಉಚಿತ ದಿನಸಿ ಕಿಟ್‌ಗಳನ್ನೂ ವಿತರಿಸಲಾಗುತ್ತದೆ.  823.23 ಕೋಟಿ ಹಣವನ್ನು ಮೇ ತಿಂಗಳಲ್ಲಿ ವೆಲ್‌ಫೇರ್‌ ಪಿಂಚಣಿಗಳಾಗಿ ವಿತರಿಸಲಾಗುವುದು. ವೆಲ್‌ಫೇರ್‌ ಬೋರ್ಡ್ ಸದಸ್ಯರಿಗೆ 1,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ” ಎಂದಿದ್ದಾರೆ.


ಇದನ್ನೂ ಓದಿ: ತೌಕ್ತೆ ಚಂಡಮಾರುತ ಭೀತಿ: ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ NDRF ತಂಡ ನಿಯೋಜನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...