Homeಮುಖಪುಟಗುಜರಾತ್ - ಹಿಮಾಚಲ ಪ್ರದೇಶ: ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಎಂದ ಎಕ್ಸಿಟ್ ಪೋಲ್‌ಗಳು

ಗುಜರಾತ್ – ಹಿಮಾಚಲ ಪ್ರದೇಶ: ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಎಂದ ಎಕ್ಸಿಟ್ ಪೋಲ್‌ಗಳು

- Advertisement -
- Advertisement -

ಗುಜರಾತ್ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. 182 ಸ್ಥಾನಗಳ ಗುಜರಾತ್‌ನಲ್ಲಿ ಬಹುಮತಕ್ಕೆ 92 ಸ್ಥಾನಗಳ ಅಗತ್ಯವಿದೆ. ಚುನಾವಣಾ ಸಮೀಕ್ಷೆಗಳ ಪೋಲ್ ಆಫ್ ಎಕ್ಸಿಟ್ ಪೋಲ್ಸ್ ಪ್ರಕಾರ 131 ರಷ್ಟು ಸ್ಥಾನ ಗಳಿಸುವ ಮಲಕ ಗುಜರಾತ್‌ನಲ್ಲಿ ಸತತ ಏಳನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎನ್ನಲಾಗಿದೆ. ಕಾಂಗ್ರೆಸ್ 41 ಸ್ಥಾನಗಳಿಗೆ ಕುಸಿಯಲಿದೆ ಮತ್ತು ಆಪ್ 7 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಿದೆ ಎಂದು ಎಕ್ಸಿಟ್‌ ಪೋಲ್‌ಗಳು ಹೇಳಿವೆ.

ಬಿಜೆಪಿಯು ಈ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಕಾಂಗ್ರೆಸ್ ಕಳೆದ ಚುನಾವಣೆಗಿಂತ 30 ಸೀಟುಗಳಷ್ಟು ಕಡಿಮೆ ಪಡೆಯಲಿದೆ ಎನ್ನಲಾಗಿದೆ. ಕಳದ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 77 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.

ಹಿಮಾಚಲ ಪ್ರದೇಶದ ಪೋಲ್ ಆಫ್ ಎಕ್ಸಿಟ್ ಪೋಲ್ಸ್ ಪ್ರಕಾರ ಬಿಜೆಪಿಗೆ ಸರಳ ಬಹುಮತ (36) ಲಭಿಸಲಿದೆ. 68 ವಿಧಾನಸಭಾ ಕ್ಷೇತ್ರಗಳುಳ್ಳ ಗುಜರಾತ್‌ನಲ್ಲಿ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಬಿಜೆಪಿಗೆ ಅಷ್ಟೇ ಸೀಟು ಬರಬಹುದೆಂದು ಊಹಿಸಲಾಗಿದೆ. ಕಾಂಗ್ರೆಸ್ 29 ಸ್ಥಾನ ಪಡೆಯಬಹುದಾಗಿದ್ದು, ಆಪ್ ಖಾತೆ ತೆರೆಯುವುದು ಅನುಮಾನ ಎನ್ನಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ 30-40 ಸೀಟು ಗಳಿಸಬಹುದೆಂದು ಆಜ್ ತಕ್ ಸಮೀಕ್ಷೇ ಹೇಳಿದೆ. ಆದರೆ ಉಳಿದ ಸಮೀಕ್ಷೆಗಳು ಬಿಜೆಪಿ 35-36 ಸ್ಥಾನ ಗಳಿಸಲಿದೆ. ಆ ಮೂಲಕ ಕಳೆದ ಚುನಾವಣೆಗಿಂತ ಕಡಿಮೆ ಸ್ಥಾನ ಪಡೆಯಲಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಿತ್ತು. 21 ಸ್ಥಾನ ಪಡೆದ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಕೂತಿತ್ತು.

ಇನ್ನು ದೆಹಲಿ ಮಹಾನಗರ ಪಾಲಿಗೆ ಚುನಾವಣೆಯ ಪೋಲ್ ಆಫ್ ಎಕ್ಸಿಟ್ ಪೋಲ್ಸ್ ನಲ್ಲಿ ಆಪ್ ಭರ್ಜರಿ ಬಹುಮತ ಸಾಧಿಸಲಿದೆ ಎನ್ನಲಾಗಿದೆ. ಒಟ್ಟು 250 ವಾರ್ಡ್‌ಗಳಲ್ಲಿ ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿದೆ. ಎಕ್ಸಿಟ್ ಪೋಲ್‌ಗಳು ಆಪ್ 155 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತದೆ ಎಂದು ಭವಿಷ್ಯ ನುಡಿದಿವೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವನೆಯ ಫಲಿತಾಂಶ ಡಿಸೆಂಬರ್ 8 ರಂದು ಪ್ರಕಟವಾಗಲಿದೆ. ದೆಹಲಿ ಎಂಸಿಡಿ ಚುನಾವಣೆಯ ಫಲಿತಾಂಶ ಡಿಸೆಂಬರ್ 7 ರಂದು ಘೋಷಣೆಯಾಗಲಿದೆ.

ಇದನ್ನೂ ಓದಿ; ಗುಜರಾತ್ ಚುನಾವಣೆ ದಿನವೇ ಪ್ರಧಾನಿ ಮೋದಿ ರೋಡ್ ಶೋ: ಕಾಂಗ್ರೆಸ್ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...