Homeಮುಖಪುಟಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷ

- Advertisement -
- Advertisement -

|ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಬಡ ಕುಟುಂಬದಲ್ಲಿ ಜನಿಸಿದವರಿಗೂ ಸಹ ಸಾಕಷ್ಟು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆತ ಅಥವಾ ಆಕೆ ಏನನ್ನಾದರು ಸಾಧಿಸಬೇಕೆಂದು ನಿಂತಾಗ ಮೊದ ಮೊದಲಿಗೆ ಭಯಾನಕ ಅವಮಾನ ಮತ್ತು ಸೋಲುಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಕೊನೆಯವರೆಗು ನಿಂತು ಗೆಲ್ಲುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂತಹ ಸಾಧನೆ ಮಾಡಿದ ಯುವಕನ ಕಥೆಯೇ ಗಲ್ಲಿಬಾಯ್. ಬಾಲಿವುಡ್‍ನಲ್ಲಿ ಸದ್ದು ಮಾಡಿರು ಈ ವಿಶೇಷ ಚಿತ್ರ ದೇಶಾದ್ಯಂತ ಒಳ್ಳೆಯ ಪ್ರಶಂಸೆಗಳನ್ನು ಪಡೆದಿದೆ. ಇದು ಇಬ್ಬರು ಪ್ರಚಲಿತ ರ್ಯಾಪ್ ಗಾಯನದ ತಾರೆಗಳಾದ ನೇಜಿ (ನವೀದ್ ಶೇಕ್) ಮತ್ತು ಡಿವೈನ್ (ವೀವಾನ್ ಫರ್ನಾಂಡೀಸ್)ರ ನೈಜ ಜೀವನದ ಕಥೆಯಿಂದ ಪಡೆದ ಸ್ಫೂರ್ತಿಯಿಂದ ಮಾಡಲಾಗಿದೆ.

ಮುಂಬಯಿಯ ಹೆಸರಾಂತ ಸ್ಲಂ ಧಾರವೀಯ ಗಲ್ಲಿಯ ಹುಡುಗ ಮೂರಾದ್ ಒಂದು ಬಡ ಮುಸ್ಲೀಂ ಕುಟುಂಬದಲ್ಲಿ ಹುಟ್ಟಿ ತಾನು ಒಬ್ಬ ರ್ಯಾಪ್ ಸಿಂಗರ್ ಆಗಬೇಕೆಂದು ಕನಸು ಕಾಣುತ್ತಿರುತ್ತಾನೆ. ಆದರೆ ಬಡತನ ಈತನನ್ನು ಹಿಂದೆ ಎಳೆಯುತ್ತಿರುತ್ತದೆ. ಈತನ ತಂದೆ ಒಂದು ಶ್ರೀಮಂತ ಕುಟುಂಬದಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ತಾಯಿ, ಅಜ್ಜಿ, ತಮ್ಮ ಹೀಗೆ ಕುಟುಂಬ ಸಾಗುತ್ತಿರಬೇಕಾದರೆ ದಿಡೀರ್ ಎಂದು ಇವರ ತಂದೆ ಮತ್ತೊಂದು ಮದುವೆಯಾಗುತ್ತಾನೆ. ಕೊನೆಯ ವರ್ಷದ ಪದವಿ ಓದುತ್ತಿರುವ ಮೂರಾದ್ ಓದನ್ನು ಮುಗಿಸಿ ಕೆಲಸಕ್ಕೆ ಹೋಗಬೇಕೆಂಬುದು ತಂದೆಯ ಬಯಕೆಯಾಗಿರುತ್ತದೆ. ಒಮ್ಮೆ ತಂದೆಯ ಕಾಲಿಗೆ ಏಟಾದಾಗ ತಂದೆಯ ಕೆಲಸಕ್ಕೆ ಈತನೆ ಹೋಗುತ್ತಾನೆ. ಕೆಲಸದ ಸಮಯದಲ್ಲೂ ಈತನ ಮನಸ್ಸು ಪೂರ್ತಿ ಸಂಗೀತದದಲ್ಲಿ ತೇಲುತಿರುತ್ತದೆ. ಇವನು ಮಾತ್ರ ಸಮಯ ಸಿಕ್ಕಾಗೆಲ್ಲ ಹಾಡುಗಳನ್ನು ಕೇಳುತ್ತಾ ಗಾಯಕನಾಗಬೇಕೆಂದು ಹುಚ್ಚು ಹಿಡಿಸಿಕೊಂಡಿರುತ್ತಾನೆ. ಇದಕ್ಕೆ ತನ್ನ ಪ್ರೀತಿಯ ಗೆಳತಿ ಸಫೀನಾ ಇವನ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸಿರುತ್ತಾಳೆ. ಅವಳು ಅವರ ಮನೆಯವರಿಗೆ ಸುಳ್ಳು ಹೇಳಿ ಪ್ರತಿದಿನ ಮೂರಾದ್ ನನ್ನು ಭೇಟಿಯಾಗುತ್ತಿರುತ್ತಾಳೆ.

ಈ ಮಧ್ಯೆ ಇವರ ಕಾಲೇಜಿನಲ್ಲಿ ಹಾಡಲು ಬಂದ ರ್ಯಾಪರ್ ಶೇರ್ ನನ್ನು ನಂತರ ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಳ್ಳುತ್ತಾನೆ. ಶೇರ್‍ನ ಸ್ನೇಹ ಮೂರಾದ್ ಗೆ ಹೊಸ ಭರವಸೆ ಮತ್ತು ಹೊಸ ಸ್ಫೂರ್ತಿಯನ್ನು ತರುತ್ತದೆ. ಶೇರ್ ತನ್ನ ಪಂಚ್ ಮಾತುಗಳಿಂದ ಮೂರಾದ್‍ನನ್ನು ಹುರಿದುಂಬಿಸುತ್ತಾನೆ. ನಿನ್ನಂತಹ ಕಷ್ಟದಲ್ಲಿರುವವರೇ ಏನಾದರೂ ಸಾಧನೆ ಮಾಡಲಿಕ್ಕೆ ಸಾಧ್ಯ ಎಲ್ಲಾ ಅನೂಕೂಲವಾಗಿದ್ದರೆ ಸಾಧನೆ ಮಾಡಲು ಯಾರು ಬರುವುದಿಲ್ಲ ಎಂದು ಹೇಳುತ್ತಾನೆ. ನಿನ್ನೋಳಗೆ ಅಡಗಿರುವಂತಹ ಲಾವರಸ ಹೊಡೆದು ಜ್ವಾಲಾಮುಖಿಯಾಗಿ ಹೊರಗಡೆ ಬರಲಿ ಎಂದು ಹೊಸ ಚೈತನ್ಯ ತುಂಬುತ್ತಾನೆ. ಈ ಮಧ್ಯೆ ಮೂರಾದ್ ಹತ್ತಿರ ಹಾಡಿಸಿ ಒಂದು ವಿಡಿಯೋ ಮಾಡಿ ಗಲ್ಲಿಬಾಯ್ ಹೆಸರಿನಲ್ಲಿ ಯೂಟೂಬ್ ಅಲ್ಲಿ ಬಿಡುತ್ತಾರೆ. ಅದು ಒಂದಷ್ಟು ಜನ ಗುರುತಿಸುವಂತಾಗುತ್ತದೆ. ವಿಡಿಯೋ ನೋಡಿ ಇವರನ್ನು ಬೇಟಿಯಾಗುವ ಸ್ಕೈ (ಕಲ್ಕಿ ಕೋಚ್ಲಿನ್) ಎಂಬ ಸಂಗೀತದ ಸ್ಟುಡೀಯೋ ಹೊಂದಿರುವ ಹುಡುಗಿ ಮೂರಾದ್ ಮತ್ತು ಷೇರ್ ಇಬ್ಬರನ್ನು ಸೇರಿಸಿ ಒಂದು ಆಲ್ಬಂ ಸಾಂಗ್ ಮಾಡಿ ಬಿಡುತ್ತಾರೆ. ಅದು ತುಂಬಾ ಸದ್ದು ಮಾಡುತ್ತದೆ. ಈ ಹಾಡನ್ನು ಕೇಳಿ ಮೂರಾದ್‍ನ ತಂದೆ ಕೆರಳುತ್ತಾನೆ ಇದರಿಂದ ಮನೆಯಲ್ಲಿ ಜಗಳವಾಗುತ್ತದೆ, ತಂದೆ ಈ ರ್ಯಾಪ್ ಹಾಡುವುದನ್ನು ಒಪ್ಪುವುದಿಲ್ಲ. ಮೂರಾದ್ ತನ್ನ ತಾಯಿ ತಮ್ಮನನ್ನು ಕರೆದುಕೊಂಡು ಮನೆಯಿಂದ ಹೊರಗಡೆ ಬಂದು ಬಿಡುತ್ತಾನೆ.

ಈತನ ಸ್ನೇಹಿತ ಚಿಕ್ಕಮಕ್ಕಳ ಜೊತೆ ಬೇರೆ ದಂಧೆಗಳನ್ನ ಮಾಡಿಸುವದನ್ನು ನಿಲ್ಲಿಸೆಂದು ಜಗಳ ಮಾಡುತ್ತಾನೆ ಆದರೆ ಇವೆಲ್ಲ ಮಾಡದೆ ಇದ್ದರ ಅವರಿಗೆ ತಿನ್ನಲು ಅನ್ನವು ಇರುವುದಿಲ್ಲ ಎಂದು ಹೇಳುತ್ತಾನೆ. ಮೂರಾದ್ ಮನೆಯಿಂದ ತನ್ನ ತಾಯಿ ಮತ್ತು ತಮ್ಮನನ್ನು ಕರೆದುಕೊಂಡು ಹೊರಬಂದಿರುವುದಿರಿಂದ ತನ್ನ ಕುಟುಂಬ ನಿರ್ವಹಣೆಗೆ ಹಣ ಸಾಕಾಗದೆ ಒದ್ದಾಡುತ್ತಾನೆ. ಕೊನೆಗೆ ತನ್ನ ಸ್ನೇಹಿತನ ಜೊತೆ ಸೇರಿ ಕಾರುಗಳನ್ನು ಕದ್ದು ಮಾರುವ ಕೆಲಸಕ್ಕೆ ಅನಿವಾರ್ಯವಾಗಿ ತೊಡಗಿಕೊಳ್ಳುತ್ತಾನೆ. ಕೊನಗೆ ಈತನ ಸ್ನೇಹಿತ ಪೋಲಿಸರ ಕೈಗೆ ಸಿಕ್ಕರೂ ಮೂರಾದ್ ಬಗ್ಗೆ ಮಾತ್ರ ಬಾಯಿ ಬಿಡುವುದಿಲ್ಲ. ತನ್ನ ತಾಯಿಯ ಸಹೋದರ (ಮಾವ) ಮಾಡುವ ಒತ್ತಾಯಕ್ಕೆ ಮಾವ ಕೆಲಸ ಮಾಡುವ ಖಾಸಗಿ ಕಂಪನಿಯಲ್ಲಿಯೇ ಈತನೂ ಕೆಲಸಕ್ಕೆ ಸೇರುತ್ತಾನೆ. ಆದರೆ ಈತ ಇದು ನನ್ನ ಜಾಗ ಅಲ್ಲ , ನಾನು ಮಾಡಬೇಕಾದ ಕೆಲಸ ಅಲ್ಲಾ ಎಂದು ತುಡಿಯುತ್ತಿರುತ್ತಾನೆ.

ಇದನ್ನು ಓದಿ: ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಒಂದು ದೊಡ್ಡ ರ್ಯಾಪರ್ ಗಾಯಕರಿಗಾಗಿ ಸ್ಫರ್ಧೆ ಇರುವುದು ಗೊತ್ತಾಗಿ ತನ್ನ ಮಾವನಿಗೆ ರಜೆ ಕೇಳುತ್ತಾನೆ ಆದರೆ ಅವನ ಮಾವ ತಿರಸ್ಕರಿಸುತ್ತಾನೆ. ಮೂರಾದ್ ಕೆಲಸವೇ ಬಿಟ್ಟು ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಕೊನೆಗೂ ಕಾಂಪಿಟೇಷನ್ ಅಲ್ಲಿ ಗೆದ್ದು ಆಪ್ನಾ ಟೈಮ್ ಆಯೇಗಾ ಎಂದು ಮಿಂಚುತ್ತಾನೆ. ಹೀಗೆ ಜೀವನದ ಅನುಕ್ಷಣವು ತನ್ನ ಗುರಿಗಾಗಿ ತುಡಿದು ಗೆಲ್ಲುವ ಯುವ ಸಾಧಕರ ಕಥೆ.

ನಮ್ಮ ಸಮಾಜದಲ್ಲಿ ಸಾಕಷ್ಟು ಪ್ರತಿಭೆಗಳು ಬಡವರ ಮನೆಗಳಲ್ಲಿಯೇ ತಮ್ಮ ಬಡತನ ಕಾರಣಕ್ಕಾಗಿ ಉಳಿದು ಹೋಗಿವೆ. ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹೊರಗಡೆ ಬಂದು ಮಿಂಚಿದ್ದಾರೆ ಮತ್ತು ಅಂತಹವರನ್ನು ಸಹ ಕೆಲವರು ಬಳಸಿಕೊಂಡು ಬಿಸಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ನಮ್ಮದೇ ರಾಜ್ಯದ ಉದಾಹರಣೆ ನೋಡುವುದಾದರೆ ಕಾಡಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದ ರಾಜೇಶ್‍ನನ್ನು ಈ ಮಾಧ್ಯಮ ಲೋಕ ತಮ್ಮ ಟಿ.ಆರ್.ಪಿ ದಾಹಕ್ಕೆ ಹೇಗೆ ಬಳಸಿಕೊಂಡಿತು ಎಂಬದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಈ ಸಿನೆಮಾ ಯುವಜನರು ತಾವು ಅಂದಕೊಂಡ ಯಶಸನ್ನು ಸಾಧಿಸಲು ಧೃಢವಾದ ನಂಬಿಕೆ ಮತ್ತು ಪ್ರಯತ್ನ ಕಲಿಕೆ ಎಷ್ಟು ಮುಖ್ಯ ಮತ್ತು ಜೀವನದಲ್ಲಿ ನಮ್ಮ ಆಶಯ ಸಾಧನೆಗೆ ಬರುವ ತೊಡಕುಗಳನ್ನು ಹೇಗೆ ಧೈರ್ಯದಿಂದ ಎದುರಿಸಬೇಕು ಎಂಬದನ್ನು ಮೂರಾದ್ ನ ಗೆಲುವಿನ ಮೂಲಕ ತೋರಿಸುತ್ತದೆ. ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷವೆನ್ನಬಹುದು. ಈಗ ಪ್ರತಿಭೆಯನ್ನು ಗುರ್ತಿಸಿಕೊಳ್ಳಲು ಸಾಮಾಜಿಕ ಜಾಲತಾಣದ ವೇದಿಕೆಗಳಿವೆ ಅದರ ಹೊರತಾಗಿ ಬೆಳೆಯಲು ತುಂಬಾ ಅವಕಾಶಗಳಿದ್ದರೂ ಸಹ ಯುವಜನರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಈ ಸಿನೆಮಾದಲ್ಲಿ ಮೂರಾದ್ ಪ್ರತಿ ಸಮಯದಲ್ಲಿ ಸಾಹಿತ್ಯ ಮತ್ತು ಬೀಟ್‍ಗಳನ್ನು ಸೇರಿಸಲು ಪ್ರತಿದಿನ ತಾಲೀಮು ನಡೆಸುತ್ತಿರುತ್ತಾನೆ.

ಇದನ್ನು ಓದಿ:  ಇದು ಸಿನಿಮಾವಲ್ಲ, ಹೆಣ್ತನದ ಮುಖಾಮುಖಿ ನಾತಿಚರಾಮಿ

ಇದು ಈ ಸಿನೆಮಾದ ಕಥೆ ಮಧ್ಯೆ ನಡೆಯುವ ಮೂರಾದ್ ಮತ್ತು ಸಫೀನಾ ಪ್ರೀತಿ, ಜಗಳ ತಮಾಷೆ ತುಂಬಾ ಆಪ್ತವಾಗುತ್ತವೆ. ಮೂರಾದ್ ಪಾತ್ರವನ್ನು ರಣವೀರ್ ಸಿಂಗ್ ತನ್ನ ಒಳಗಡೆ ಇಳಿಸಿಕೊಂಡು ನಟಿಸಿದ್ದಾನೆ. ಮೂರಾದ್ ಪ್ರೀತಿಸುವ ಹಡುಗಿ ಸಫೀನಾ ಪಾತ್ರದಲ್ಲಿ ಆಲೀಯಾ ಭಟ್ ಕೂಡ ಉತ್ತಮವಾದ ಅಭಿನಯ ನೀಡಿದ್ದಾರೆ. ತಾವು ಜೀವನದಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಮನಸ್ಸು ತುಂಬ ತುಂಬಿಕೊಂಡು ಜೊತೆಗಿರುವವರನ್ನು ಹುರಿದುಂಬಿಸುವ ಶೇರ್ ಪಾತ್ರದಲ್ಲಿ ಸಿದ್ದಾರ್ಥ ಚತುರ್ವೇದಿ ಚನ್ನಾಗಿ ಅಭಿನಯಿಸಿದ್ದಾರೆ. ಜೋಯಾ ಅಖ್ತರ್ ಈ ಸಿನೆಮಾವನ್ನು ನೋಡುಗರು ಸಿನೆಮಾದಲ್ಲಿಯೇ ಮುಳುಗಿರುವಂತೆ ನಿರ್ದೇಶಿಸಿದ್ದಾರೆ. ಸರಾಗವಾಗಿ ಸಾಗುವ ಕಥೆ ಪ್ರೇಕ್ಷಕರನ್ನು ಸಿನಾಮಾದ ಪಾತ್ರಗಳಜೊತೆ ಬೆಸೆಯುತ್ತದೆ. ಇದಕ್ಕೆ ಪೂರಕವಾದಂತಹ ಸಂಗೀತವನ್ನು ಕರ್ಷನ್ ಕಾಲೆ ಮಾಡಿದ್ದಾರೆ. ಈ ಸಿನೆಮಾ ಬರ್ಲಿನ್ ಸಿನೆಮಾ ಉತ್ಸವದಲ್ಲಿ ಪ್ರದರ್ಶನ ಖಂಡಿದೆ. ಇಂತಹ ಸ್ಫೂರ್ತಿಧಾಯಕ ಸಿನೆಮಾಗಳು ಬರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...