Homeಮುಖಪುಟಗ್ಯಾನೇಶ್ ಕುಮಾರ್‌ಗೆ ಸಂಕಷ್ಟ ತಂದಿಟ್ಟ 2006ರ ಲಂಚದ ಕೇಸ್: ಏನಿದು ಪ್ರಕರಣ?

ಗ್ಯಾನೇಶ್ ಕುಮಾರ್‌ಗೆ ಸಂಕಷ್ಟ ತಂದಿಟ್ಟ 2006ರ ಲಂಚದ ಕೇಸ್: ಏನಿದು ಪ್ರಕರಣ?

- Advertisement -
- Advertisement -

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಲ್ಲಿ ಬೃಹತ್ ಅಕ್ರಮ ಎಸಗಲಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೇಸ್ ನಾಯಕರು ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟಿಸಿ, ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟುಹಿಡಿದಿರುವ ಬೆನ್ನಲ್ಲೇ, ಗ್ಯಾನೇಶ್ ಕುಮಾರ್ ವಿರುದ್ಧದ 2006ರ ಹಳೆಯ ಭ್ರಷ್ಟಾಚಾರದ ಪ್ರಕರಣವೊಂದನ್ನು ಮರುತನಿಖೆ ಮಾಡಲು ಕೇರಳಂನ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಸರ್ಕಾರ ಆದೇಶಿಸಿದೆ.

ಕೇರಳಂ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಈ ಕುರಿತು ರಾಜ್ಯದ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪ್ರಾಥಮಿಕ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. 1988ರ ಬ್ಯಾಚ್‌ನ ಕೇರಳಂ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್, 2006ರಲ್ಲಿ ರಾಜ್ಯದ ಲೋಕೋಪಯೋಗಿ ಇಲಾಖೆ (PWD) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ವಿಶ್ವಬ್ಯಾಂಕ್ ನೆರವಿನ ರಸ್ತೆ ಕಾಮಗಾರಿ ಯೋಜನೆಗೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಈ ಭ್ರಷ್ಟಾಚಾರದ ಆರೋಪದ ಮೂಲ ಇರುವುದು ಕೇರಳಂ ಲೋಕೋಪಯೋಗಿ ಇಲಾಖೆಯ ಪ್ರಮುಖ ಯೋಜನೆಯಾದ ‘ಕೇರಳ ರಾಜ್ಯ ಸಾರಿಗೆ ಯೋಜನೆ’ಯಲ್ಲಿ (KSTP). ಸುಮಾರು 1,600 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು ವಿಶ್ವಬ್ಯಾಂಕ್ ಸಾಲದ ನೆರವಿನೊಂದಿಗೆ ರಾಜ್ಯದ ಪ್ರಮುಖ ರಸ್ತೆಗಳನ್ನು ಉನ್ನತೀಕರಿಸಲು ರೂಪಿಸಲಾಗಿತ್ತು. 1996 ರಿಂದ 2001ರ ಸಿಪಿಐ(ಎಂ) ನೇತೃತ್ವದ ಎಲ್‌‌ಡಿಎಫ್ ಸರ್ಕಾರದಲ್ಲಿ ಪಿಡಬ್ಲ್ಯೂಡಿ ಸಚಿವರಾಗಿದ್ದ ಪಿ.ಜೆ. ಜೋಸೆಫ್ ಅವರ ಅವಧಿಯಲ್ಲಿ ಈ ಯೋಜನೆಯ ಆರಂಭಿಕ ಚರ್ಚೆಗಳು ಪೂರ್ಣಗೊಂಡಿದ್ದವು (ಇವರು ಪ್ರಸ್ತುತ ಆಡಳಿತಾರೂಢ ಯುಡಿಎಫ್ ಮೈತ್ರಿಕೂಟದಲ್ಲಿದ್ದಾರೆ).

ಈ ಯೋಜನೆಯಡಿ ತಿರುವನಂತಪುರಂನಿಂದ ಅಂಕಮಾಲಿವರೆಗಿನ ಮುಖ್ಯ ರಸ್ತೆಯನ್ನು ನೂತನ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೇರಿಸಲು 216 ಕೋಟಿ ರೂಪಾಯಿ ವೆಚ್ಚದ ಗುತ್ತಿಗೆಯನ್ನು ಕೇರಳಂನ ಭಗೀರಥ ಇಂಜಿನಿಯರಿಂಗ್ ಹಾಗೂ ಮಲೇಷ್ಯಾದ ‘ಪ್ರಾಪರ್ಟಿ ಅಂಡ್ ಟ್ರಾನ್ಸ್‌ಪೋರ್ಟ್ ಇನ್‌ಫ್ರಾಸ್ಟ್ರಕ್ಚರ್’ (PATI) ಕಂಪನಿಗಳ ‘ಪಾಟಿ-ಬೆಲ್’ (PATI-BEL) ಒಕ್ಕೂಟಕ್ಕೆ ನೀಡಲಾಗಿತ್ತು.

ಆದರೆ, ಡಿಸೆಂಬರ್ 2002ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಪ್ಪಂದ ಮಾಡಿಕೊಂಡರೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಯೋಜನೆಯನ್ನು ಹಸ್ತಾಂತರಿಸಿತ್ತು. 2004ರಲ್ಲಿ ಭೂಸ್ವಾಧೀನದ ಅಧಿಸೂಚನೆ ಹೊರಬಿದ್ದರೂ, ವಿಳಂಬದ ಕಾರಣದಿಂದಾಗಿ ಯೋಜನೆಯ ವೆಚ್ಚ ಹೆಚ್ಚಾಯಿತು. ಅಷ್ಟರಲ್ಲಿ ಸಿಪಿಐ(ಎಂ) ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಯೋಜನಾ ವೆಚ್ಚದಲ್ಲಿ ಶೇ.30ರಷ್ಟು ಹೆಚ್ಚಳ ಮಾಡಲು ನಿರಾಕರಿಸಿದರು.

ಇನ್ನೊಂದೆಡೆ ಸಬ್-ಕಾಂಟ್ರಾಕ್ಟರ್‌ಗಳು ಹಾಗೂ ಸಾಮಗ್ರಿ ಪೂರೈಕೆದಾರರಿಂದ ಹಣಕ್ಕಾಗಿ ತೀವ್ರ ಒತ್ತಡದಲ್ಲಿದ್ದ ಪಾಟಿ-ಬೆಲ್ ಒಕ್ಕೂಟದ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್, 54 ವರ್ಷದ ಮಲೇಷ್ಯನ್ ಎಂಜಿನಿಯರ್ ಲೀ ಸೀ ಬಿನ್ 2006ರ ನವೆಂಬರ್ 11ರಂದು ಕೌಲಾಲಂಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರು ಬರೆದಿಟ್ಟಿದ್ದ ಡೆತ್ ನೋಟ್‌ನಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳು 18 ಕೋಟಿ ರೂ. ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು, ಅದರಲ್ಲಿ ಅಂದಿನ ಪಿಡಬ್ಲ್ಯೂಡಿ ಕಾರ್ಯದರ್ಶಿ ಜ್ಞಾನೇಶ್ ಕುಮಾರ್ ಅವರ ಹೆಸರನ್ನೂ ಉಲ್ಲೇಖಿಸಲಾಗಿತ್ತು.

ಲೀ ಆತ್ಮಹತ್ಯೆಯ ಬಳಿಕ ತೀವ್ರ ಸಾರ್ವಜನಿಕ ಆಕ್ರೋಶ ವ್ಯಕ್ತವಾದಾಗ, ಅಂದಿನ ಸಿಪಿಐ(ಎಂ) ಸರ್ಕಾರ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ ವಿಜಿಲೆನ್ಸ್ ತನಿಖೆಗೆ ಆದೇಶಿಸಿತ್ತಲ್ಲದೆ, ‘ಪಾಟಿ-ಬೆಲ್’ ಒಪ್ಪಂದವನ್ನೂ ರದ್ದುಗೊಳಿಸಿತ್ತು. ಆದರೆ, ಕಾಂಗ್ರೆಸ್ ನಾಯಕ ಮಲಯಿಂಕಿಲ ಜಿ. ವೇಣುಗೋಪಾಲ್ ಅವರು ಇತ್ತೀಚೆಗೆ ನೀಡಿದ ದೂರಿನಲ್ಲಿ ತಿಳಿಸಿರುವಂತೆ, ಅಂದಿನ ತನಿಖೆಯನ್ನು ಹಾದಿತಪ್ಪಿಸಿ ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ಹುದ್ದೆಯಿಂದ ವಜಾಗೊಂಡಿದ್ದ ಗ್ಯಾನೇಶ್ ಕುಮಾರ್ ಅವರಿಗೆ ರಾಜ್ಯದಲ್ಲಿ ಯಾವುದೇ ಹೊಸ ಹುದ್ದೆ ನೀಡದ ಕಾರಣ, ಅವರು ಕೇಂದ್ರ ಸೇವೆಯ ಡೆಪ್ಯುಟೇಶನ್ ಮೇಲೆ ನವದೆಹಲಿಗೆ ತೆರಳಿದ್ದರು (ಅಂದು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರ್ಕಾರವಿತ್ತು ಹಾಗೂ ಸಿಪಿಐ-ಎಂ ಕೂಡ ಹೊರಗಿನಿಂದ ಬೆಂಬಲ ನೀಡಿತ್ತು).

ನಂತರದ ದಿನಗಳಲ್ಲಿ ಮರು-ಟೆಂಡರ್ ಕರೆದರೂ ಯಾರೂ ಮುಂದೆ ಬಾರದಿದ್ದಾಗ, 2008ರಲ್ಲಿ ಸಿಪಿಐ(ಎಂ) ಸರ್ಕಾರವು ಮೂಲ 216 ಕೋಟಿ ರೂ. ಜೊತೆಗೆ ಹೆಚ್ಚುವರಿಯಾಗಿ 72 ಕೋಟಿ ರೂ.ಗಳನ್ನು ನೀಡಿ ಮತ್ತೆ ‘ಪಾಟಿ-ಬೆಲ್’ ಕಂಪನಿಗೆ ಕಾಮಗಾರಿ ನವೀಕರಿಸಿಕೊಟ್ಟಿತು. ಅಂದು ವಿರೋಧ ಪಕ್ಷದಲ್ಲಿದ್ದ ಒಮ್ಮನ್ ಚಾಂಡಿ ಅವರು, ತನಿಖೆ ಬಾಕಿ ಇರುವಾಗಲೇ ಕಪ್ಪುಪಟ್ಟಿಗೆ ಸೇರಿಸಬೇಕಾದ ಕಂಪನಿಗೆ ಪುನಃ ಕಾಮಗಾರಿ ವಹಿಸಿದ್ದನ್ನು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಹಲವು ದಶಕಗಳ ಬಳಿಕ, ದೇಶಾದ್ಯಂತ ‘ಸಿರ್’ (SIR) ಅಕ್ರಮಗಳ ವಿವಾದದ ನಡುವೆಯೇ ಜ್ಞಾನೇಶ್ ಕುಮಾರ್ ವಿರುದ್ಧದ ಈ ಹಳೆಯ ಭ್ರಷ್ಟಾಚಾರದ ಕಡತವನ್ನು ಕೇರಳಂ ಗೃಹ ಇಲಾಖೆ ಮರುಪರಿಶೀಲನೆಗೆ ತೆಗೆದುಕೊಂಡಿದ್ದು, ಪ್ರಾಥಮಿಕ ತನಿಖೆಗೆ ಆದೇಶಿಸಿರುವುದು ಚುನಾವಣಾ ಆಯುಕ್ತರಿಗೆ ಸಂಕಷ್ಟ ತಂದಿಟ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫ್ರೀಡಂ ಪಾರ್ಕ್‌ಗೆ ಬರುತ್ತಿದೆ ಸಿಜೆಪಿ ದಂಡು; ಜನತಾ ನ್ಯಾಯಾಲಯದ ಮುಂದೆ ಎಸ್‌ಐಆರ್ ಅನ್ಯಾಯಗಳ ಅನವಾರಣ

ಇದೇ ತಿಂಗಳ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ 'ಜನತಾ ನ್ಯಾಯಾಲಯ' ವಿನೂತನ ಹೋರಾಟಕ್ಕೆ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಯ ದಂಡು ಬರುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್‌ನಿಂದ ಆಗಿರುವ ಅನ್ಯಾಯಗಳ ಈ...

“ನಮ್ಮ ದೇಶಕ್ಕೆ ಮಾಡಿರುವುದು ದೇಶದ್ರೋಹ, ಯಾರನ್ನೂ ಬಿಡುವುದಿಲ್ಲ”: ಮೋದಿ, ಶಾ, ಮೋಹನ್‌ ಭಾಗವತ್ ಹಾಗೂ ಗ್ಯಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ಗುಡುಗು!

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ 'ವೋಟ್ ಚೋರಿ' ವಿವಾದದ ವಿರುದ್ಧ ಇಂಡಿಯಾ ಒಕ್ಕೂಟ ನಡೆಸಿದ ಐತಿಹಾಸಿಕ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಯತ್ತ...

ಚುನಾವಣಾ ಆಯೋಗಕ್ಕೆ ‘ಇಂಡಿಯಾ’ ಮೈತ್ರಿಕೂಟ ಮೆರವಣಿಗೆ; ಬ್ಯಾರಿಕೇಡ್ ಹತ್ತಿದ ರಾಹುಲ್ ಗಾಂಧಿ

ಸಂಸತ್ ಭವನದಿಂದ ಚುನಾವಣಾ ಆಯೋಗದ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ 'ಇಂಡಿಯಾ' ಮೈತ್ರಿಕೂಟದ ಸಂಸತ್ತಿನ ಸದಸ್ಯರನ್ನು ಮಾರ್ಗ ಮಧ್ಯದಲ್ಲೇ ತಡೆಯಲಾಗಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೃಣಮೂಲ ಕಾಂಗ್ರೆಸ್...

ಕಾಸರಗೋಡು: ವಿಶ್ವವಿದ್ಯಾಲಯ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ನಾಯಕನ ಉಪಸ್ಥಿತಿ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

'ವಂದೇ ಮಾತರಂ'ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್ ನಂಟಿನ ಸಂಘಟನೆಯೊಂದರ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಅವರ ಉಪಸ್ಥಿತಿಯನ್ನು ವಿರೋಧಿಸಿ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಅ.6) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾರ್ಯಕ್ರಮದಲ್ಲಿ ನಂದಕುಮಾರ್ ಅವರ...

ಜಂತರ್ ಮಂತರ್ ಪ್ರತಿಭಟನೆ: ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ದೆಹಲಿ ಪೊಲೀಸ್ ಅಧಿಕಾರಿಗೆ ಬಡ್ತಿ: ದೂರುದಾರರನ್ನೇ ಎರಡು ಬಾರಿ ಬಂದಿಸಿದ್ದ ಪೊಲೀಸರು

ನವದೆಹಲಿ: ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಅಧಿಕಾರಿ ವಿವೇಕ್ ಭಗತ್ ಅವರನ್ನು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಅಡಿಷನಲ್ ಡಿಸಿಪಿ) ಹುದ್ದೆಗೆ ಬಡ್ತಿ ನೀಡಿರುವುದು ತೀವ್ರ...

ಪತ್ರಕರ್ತೆ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಸಿಪಿಗೆ ಹೆಚ್ಚುವರಿ ಡಿಸಿಪಿ ಹುದ್ದೆ; ವಿರೋಧದ ಬಳಿಕ ಆದೇಶಕ್ಕೆ ತಡೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿವೇಕ್ ಭಗತ್ ಅವರಿಗೆ ನೀಡಲಾಗಿದ್ದ...

ಬಿಜೆಪಿ ಸದಸ್ಯರಾಗಿರುವವರು ಮಾತ್ರ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗ ನಂಬಿದೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀವ್ರ ವಾಗ್ದಾಳಿ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಆಯೋಗದ ವಿವಾದಾತ್ಮಕ ಕಾರ್ಯವೈಖರಿಯನ್ನು ಖಂಡಿಸಿ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ವೇಳೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್...

ದೆಹಲಿಯಲ್ಲಿ ಎಸ್‌ಐಆರ್ ಅಕ್ರಮಗಳ ವಿರುದ್ಧ ‘ಇಂಡಿಯಾ’ ಸಂಸದರ ಜಾಥಾ: ಗ್ಯಾನೇಶ್ ಕುಮಾರ್ ವಜಾಕ್ಕೆ ಆಗ್ರಹ

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಪ್ರಮುಖ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೃಹತ್ ಅಕ್ರಮಗಳು ನಡೆಯುತ್ತಿದ್ದು, ಅರ್ಹ ಮತದಾರರ...

SIR ಅಕ್ರಮಗಳ ವಿರುದ್ಧ ಅಕ್ಟೋಬರ್‌ 8ರಂದು ‘ಜನತಾ ನ್ಯಾಯಾಲಯ’: ಮತ ಹಕ್ಕು ರಕ್ಷಣೆಗೆ ವಿನೂತನ ಹೋರಾಟ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಕ್ರಮಗಳ ವಿರುದ್ಧ ಮತ್ತು ಎಸ್‌ಐಆರ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಅಕ್ಟೋಬರ್‌‌ 8ರಂದು 'ಜನತಾ ನ್ಯಾಯಾಲಯ' ಎಂಬ...

‘ಫಾರಂ 6 ಬದಲಾವಣೆ ಅನುಮೋದಿಸಿಲ್ಲ’: ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಪ್ರತಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಬಲ ತುಂಬಿದ ಸುಪ್ರೀಂ ಹೇಳಿಕೆ

ನವದೆಹಲಿ: ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಬಳಸುವ ನಮೂನೆ 6ಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟ ಹೇಳಿಕೆ ಇದೀಗ ಚುನಾವಣಾ ಆಯೋಗ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಮತದಾರರ ಪಟ್ಟಿಯ...