Homeಮುಖಪುಟಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿ ಕೊಲೆ... ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ..

ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿ ಕೊಲೆ… ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ..

- Advertisement -
- Advertisement -

ಅಖಿಲ ಭಾರತ ಹಿಂದೂ ಮಹಾಸಭಾದ (ಎಬಿಎಚ್‌ಎಂ) ಸ್ವಯಂ ಘೋಷಿತ ಕಾರ್ಯಕಾರಿ ಅಧ್ಯಕ್ಷ ಕಮಲೇಶ್ ತಿವಾರಿ ಅವರ ಮೇಲೆ ಗುಂಡುಹಾರಿಸಿ ಅವರ ಮನೆಯಲ್ಲಿಯೇ ಕೊಲೆ ಮಾಡಲಾಗಿದೆ.

ವೈಯಕ್ತಿಕ ವಿವಾದದಿಂದ ಕೊಲೆಯಾಗಿದ್ದು, ತಿವಾರಿ ಅವರ ಕುತ್ತಿಗೆಗೆ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಅಯೋಧ್ಯೆ ಮೊಕದ್ದಮೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದವರಲ್ಲಿ ತಿವಾರಿ ಕೂಡ ಒಬ್ಬರಾಗಿದ್ದಾರೆ.

ಅವರ ಸಾವಿನ ನಂತರ ಜನರ ಗುಂಪೊಂದು ಲಕ್ನೋದಲ್ಲಿ ಪ್ರತಿಭಟನೆ ನಡೆಸಿದೆ. ನಂತರ ಫತೇಗಂಜ್ ಮತ್ತು ಅಮಿನಾಬಾದ್ ಪ್ರದೇಶದ ಅನೇಕ ಅಂಗಡಿಗಳನ್ನು ಮುಚ್ಚಲಾಯಿತು. ಘರ್ಷಣೆ ತಪ್ಪಿಸಲು ಈ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ದೇಹದ ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.

ಬೆಳಿಗ್ಗೆ 11.00 ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಅವರನ್ನು ಭೇಟಿಯಾಗಲು ಅವರ ಮನೆಗೆ ಬಂದಿದ್ದರು ಎಂದು ತಿವಾರಿ ಅವರ ಸಹವರ್ತಿ ಸ್ವತಂತ್ರದೀಪ್ ಸಿಂಗ್ ಹೇಳಿದ್ದಾರೆ. ತಿವಾರಿ ಅವರನ್ನು ಮನೆಯ ಮೊದಲ ಮಹಡಿಗೆ ಬರಲು ಕೇಳಿಕೊಂಡಿದ್ದರು ಎಂದು ಸಿಂಗ್ ಹೇಳಿದ್ದಾರೆ. “ಹಲ್ಲೆಕೋರರೊಬ್ಬರು ಸಿಗರೇಟ್ ತರಲು ನನ್ನನ್ನು ಕೇಳಿದರು. ಆದ್ದರಿಂದ, ನಾನು ಮಾರುಕಟ್ಟೆಗೆ ಹೋದೆ. ಆದರೆ ನಾನು ಕೋಣೆಗೆ ಹಿಂತಿರುಗಿದಾಗ ಕಮಲೇಶ್‌ರವರನ್ನು ಕೋಣೆಯಲ್ಲಿ ಸತ್ತ ಸ್ಥಿತಿಯಲ್ಲಿ ನಾನು ನೋಡಿದೆ” ಎಂದು ಅವರು ಹೇಳಿದರು. ಅದನ್ನು ನೋಡಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.

ಲಕ್ನೋದ ಇನ್ಸ್‌ಪೆಕ್ಟರ್ ಜನರಲ್ ಎಸ್.ಕೆ. ಭಗತ್ ಮಾತನಾಡಿ, ಹಲ್ಲೆಕೋರರು ತಿವಾರಿ ಅವರಿಗೆ ಪರಿಚಿತರೆ ಆಗಿದ್ದಾರೆ, ಏಕೆಂದರೆ ಅವರು ಅವರೊಂದಿಗೆ ಮನೆಯಲ್ಲಿ ಸುಮಾರು ಅರ್ಧ ಘಂಟೆಯವರೆಗೆ ಇದ್ದರು. ಮನೆಯಿಂದ ಪಿಸ್ತೂಲ್ ಮತ್ತು ಖಾಲಿ ಕಾರ್ಟ್ರಿಡ್ಜ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಿವಾರಿ ಅವರ ಕುತ್ತಿಗೆಗೆ ಗಾಯದ ಗುರುತುಗಳು ಕಂಡುಬಂದಿವೆ ಆದರೆ ಯಾವುದೇ ತೀರ್ಮಾನಕ್ಕೆ ಬರಲು ಅವರು ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು.

ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣಕ್ಕಾಗಿ ತಿವಾರಿಯವರ ಮೇಲೆ ಕೇಸುಗಳು ಕೂಡ ದಾಖಲಾಗಿದ್ದವು. ಸೀತಾಪುರ ಮೂಲದ ತಿವಾರಿ 2012 ರ ಅಸೆಂಬ್ಲಿ ಚುನಾವಣೆಯಲ್ಲಿ ಸೆಂಟ್ರಲ್ ಲಕ್ನೋದಿಂದ ಎಬಿಎಚ್‌ಎಂ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...