Homeಮುಖಪುಟ1 ಕೋಟಿ ಓಟು ನೀಡಿ, 70 ರೂ.ಗೆ ಮದ್ಯ ಕೊಡುತ್ತೇವೆ: ಆಂಧ್ರ BJP ಅಧ್ಯಕ್ಷ

1 ಕೋಟಿ ಓಟು ನೀಡಿ, 70 ರೂ.ಗೆ ಮದ್ಯ ಕೊಡುತ್ತೇವೆ: ಆಂಧ್ರ BJP ಅಧ್ಯಕ್ಷ

- Advertisement -
- Advertisement -

2024 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಒಂದು ಕೋಟಿ ಮತಗಳನ್ನು ಪಡೆದರೆ ರಾಜ್ಯದ ಜನರಿಗೆ 70 ರೂ.ಗೆ ಮದ್ಯ ಸಿಗುತ್ತದೆ ಎಂದು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಅವರು ಭರವಸೆ ನೀಡಿದ್ದಾರೆ.

ವಿಜಯವಾಡದಲ್ಲಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವೀರರಾಜು, “ರಾಜ್ಯದಲ್ಲಿ ಕಳಪೆ ಗುಣಮಟ್ಟದ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಚೆನ್ನಾಗಿರುವ ಮತ್ತು ಜನಪ್ರಿಯ ಬ್ರಾಂಡ್‌ಗಳು ಲಭ್ಯವಿಲ್ಲ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ದತ್ತಜಯಂತಿ ಹಿನ್ನೆಲೆʼ: ಮದ್ಯ ಮಾರಾಟ ನಿಷೇಧಕ್ಕೆ ಹಾಸನ ಡಿಸಿ ಆದೇಶ

“ಸ್ಪೆಷಲ್‌ ಸ್ಟೇಟಸ್‌, ಗವರ್ನರ್ಸ್‌ ಮೆಡಲ್‌ ನಂತಹ ಲೇಬಲ್‌ಗಳ ಅಡಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬ್ರಾಂಡೆಡ್ ಮದ್ಯ ಮಾರಾಟ ಮಾಡುತ್ತಿಲ್ಲ. ಅವರು ಸಂಪೂರ್ಣ ಮದ್ಯ ನಿಷೇಧ ಎಂದು ಹೇಳಿದರು ಆದರೆ ಬ್ರಾಂಡಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಬಿಜೆಪಿಗೆ ಒಂದು ಕೋಟಿ ಮತ ನೀಡಿ…ನಾವು ಕೇವಲ 70 ರೂ.ಗೆ ಮದ್ಯವನ್ನು ನೀಡುತ್ತೇವೆ. ಹೆಚ್ಚಿನ ಲಾಭ ಬಂದರೆ ದರವನ್ನು ಇನ್ನೂ ಇಳಿಸಿ ಕೇವಲ 50 ರೂ.ಗೆ ಮದ್ಯ ಒದಗಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಮಹುವಾ ಹೂವಿನಿಂದ ತಯಾರಿಸಿದ ಮದ್ಯಕ್ಕೆ ಹೆರಿಟೇಜ್‌ ಸ್ಥಾನಮಾನ: ಮಧ್ಯಪ್ರದೇಶ ಸರ್ಕಾರ

ಸರ್ಕಾರ ನಕಲಿ ಮದ್ಯ ಉತ್ಪಾದಿಸಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ ಅವರು, “ರಾಜ್ಯ ಸರ್ಕಾರ ಜನರ ರಕ್ತ ಕುಡಿಯುತ್ತಿದೆ. ಪ್ರತಿ ತಿಂಗಳು ಒಬ್ಬ ವ್ಯಕ್ತಿ ಮದ್ಯಕ್ಕೆ 12,000 ರೂ. ಖರ್ಚು ಮಾಡುತ್ತಿದ್ದಾನೆ. ಈ ಹಣವನ್ನು ಸರ್ಕಾರ ಪಡೆದು, ಕಲ್ಯಾಣ ಯೋಜನೆಗಳ ನೆಪದಲ್ಲಿ ಪಡೆದು ವಾಪಸು ನೀಡುತ್ತಿದೆ” ಎಂದಿದ್ದಾರೆ.

ಬ್ರಾಂಡ್‌ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕಾರಣ ರಾಜ್ಯದಲ್ಲಿ ಪ್ರಿಮಿಯಂ ಮದ್ಯ ಮಾರಾಟವಾಗುತ್ತಿದೆ. ಇತ್ತೀಚೆಗೆ, ರಾಜ್ಯ ಸರ್ಕಾರವು ಮದ್ಯದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಿದೆಯಾದರೂ ‘ವಿಶೇಷ ಮಾರ್ಜಿನ್’ ಸೇರಿಸಿರುವುದರಿಂದ MRP ಗಳು ಬದಲಾಗಿಲ್ಲ. ಹೀಗಾಗಿ ಬೆಲೆ ಇಳಿಕೆಯ ಲಾಭಗಳು ಗ್ರಾಹಕರಿಗೆ ಲಭ್ಯವಾಗುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಡ ವರ್ಗದ ಜನರು ಮದ್ಯ ಸೇವನೆಯನ್ನು ಕಡಿಮೆ ಮಾಡುವ ಉದ್ದೇಶಕ್ಕಾಗಿ ಸರ್ಕಾರ ಮದ್ಯದ ಬೆಲೆ ಹೆಚ್ಚಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಮುಸ್ಲಾಪುರ ಮದ್ಯದಂಗಡಿ ಪ್ರಕರಣ; ಬಂಧನ ಭೀತಿಯಲ್ಲಿ ಊರು ತೊರೆದ ಗ್ರಾಮಸ್ಥರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ನಮ್ಮ ಪಕ್ಷ ಗೆದ್ದರೆ 30 ರೂಪಾಯಿಗೆ ಪೆಟ್ರೋಲ್ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಗೆದ್ದು ಆಮೇಲೆ ಪೆಟ್ರೋಲ್ ಬೆಲೆಯನ್ನು 100 ರೂ ಗೆ ತಂದು ನಿಲ್ಲಿಸಿರುವ ಸರ್ಕಾರ ನಿಮ್ಮದು.
    1 ಕೋಟಿ ಮತ ನೀಡಿ ಕಡಿಮೆ ಬೆಲೆಗೆ ಕುಡಿಯುವ ವ್ಯವಸ್ಥೆ ನಮಗೆ ಬೇಡ. ಈಗಾಗಲೇ ದುಡಿದು ರಾಷ್ಟ್ರ ಕಟ್ಟುವ ನಮ್ಮ ಯುವ ಜನತೆ ಕುಡಿತದ ಅಮಲಿನಿಂದ ತಮ್ಮ ಬದುಕನ್ನೇ ಕಟ್ಟಲು ಆಗದೇ ಇರುವ ಸ್ಥಿತಿಯಲ್ಲಿ ಇದ್ದಾರೆ, ಮತ್ತೆ ಕಡಿಮೆ ಬೆಲೆಗೆ ಮದ್ಯ ನೀಡಿ ನಮ್ಮ ದೇಶವನ್ನು ಮತ್ತೊಂದು ಸೂಡಾನ್ ದೇಶವಾಗಿ ಪರಿವರ್ತಿಸುವ ಕೆಲಸ ಮಾಡಬೇಡಿ ! ಯಾಕೆಂದರೆ ಯುವ ಜನಾಂಗ ಆರ್ಥಿಕವಾಗಿ ದೇಶವನ್ನು ಬಲಿಷ್ಠ ಮಾಡಬೇಕೇ ಹೊರತು ತುತ್ತು ಅನ್ನಕ್ಕಾಗಿ ಪರಿತಾಪ ಪಡುವ ಯುವ ಜನಾಂಗದ ದೇಶವಾಗಬಾರದು.
    ನಿಮ್ಮಲ್ಲಿ ಕಿಂಚಿತ್ತೂ ದೇಶಭಕ್ತಿ, ಸ್ವಾಭಿಮಾನ, ಅದೂ ಬೇಡ ಮಾನ ಮರ್ಯಾದೆ ಇದ್ದರೆ ಇಡೀ ದೇಶದಲ್ಲಿ ಮಧ್ಯವನ್ನು ಬ್ಯಾನ್ ಮಾಡಿ. ಆಗ ಒಪ್ಪುತ್ತೇನೆ ನೀವು ಒಬ್ಬ ಅಪ್ಪನಿಗೆ ಹುಟ್ಟಿದ ಪಕ್ಷ ಮತ್ತು ಮಕ್ಕಳು ಎಂದು.
    ಕುಡಿದು ಕ್ಷಣಕಾಲ ಮೋಜು ಮಾಡುವುದನ್ನು ಹೇಳಿಕೊಡುವ ನಿಮ್ಮ ಸರ್ಕಾರಕ್ಕೆ ನನ್ನ ಧಿಕ್ಕಾರ ಧಿಕ್ಕಾರ 👎👎
    ಛೇ ಛೇ ನಾಚಿಕೆ ನಾಚಿಕೆ…………👎👎👎👎👎👎

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...