Homeರಂಜನೆಕ್ರೀಡೆ‘ಭಾರತವೇ, ಇದು ನಿನಗಾಗಿ!’ - ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಬಾಕ್ಸರ್‌‌‌‌ ‘ನಿಖತ್‌ ಜರೀನ್‌‌’

‘ಭಾರತವೇ, ಇದು ನಿನಗಾಗಿ!’ – ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಬಾಕ್ಸರ್‌‌‌‌ ‘ನಿಖತ್‌ ಜರೀನ್‌‌’

ಭಾರತದ ಬಾಕ್ಸಿಂಗ್ ದಂತ ಕತೆ ಮೇರಿ ಕೋಮ್‌ ಅವರು, ‘ನಿಖತ್ ಜರೀನ್ ಯಾರು?’ ಎಂದು ಪ್ರಶ್ನಿಸಿದ್ದರು. ಅದಾಗಿ ಮೂರು ವರ್ಷಗಳ ನಂತರ, ಜರೀನ್ ವಿಶ್ವ ಚಾಂಪಿಯನ್ ಆಗಿದ್ದಾರೆ.

- Advertisement -
- Advertisement -

ತೆಲಂಗಾಣದ 25 ವರ್ಷದ ‘ಬಾಕ್ಸರ್‌‌‌‌ ನಿಖತ್‌ ಜರೀನ್’ ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಐದನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುರುವಾರದಂದು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ನಿಖತ್ ಜರೀನ್ ಅವರು 52 ಕೆಜಿ ಫ್ಲೈವೇಟ್ ವಿಭಾಗದಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಾಮಾಸ್ ಅವರನ್ನು ಸೋಲಿಸಿ, ಈ ಸಾಧನೆ ಮಾಡಿದ್ದಾರೆ.

ಪಂದ್ಯದ ನಂತರ ಹೊಸ ವಿಶ್ವ ಫ್ಲೈವೇಟ್ ಚಾಂಪಿಯನ್‌ನ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ, ಜರೀನ್ ಅವರು ತನ್ನ ಕೈಯನ್ನು ಗಾಳಿಯಲ್ಲಿ ಗುದ್ದಿ, ತನ್ನ ಎದುರಾಳಿಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿರುವ ಜರೀನ್‌, ಅಂತಿಮವಾಗಿ ಇಲ್ಲಿ ತಲುಪಿದೆ. ಹಲವು ವರ್ಷಗಳ ಕಠಿಣ ಪರಿಶ್ರಮ ಮತ್ತು ಪರಿಶ್ರಮದ ತುತ್ತತುದಿ ಇದು ಎಂದು ಹೇಳಿದ್ದು, “ಭಾರತವೇ, ಇದು ನಿನಗಾಗಿ. ನಾವಿಬ್ಬರೂ ಇದನ್ನು ಒಟ್ಟಿಗೆ ಸಾಧಿಸಿದ್ದೇವೆ” ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಮಾಜಿ ಜೂನಿಯರ್ ವಿಶ್ವ ಚಾಂಪಿಯನ್, ಎಂ.ಸಿ. ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌‌ಎಲ್ ಮತ್ತು ಲೇಖಾ ಕೆಸಿ ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಎಂಬ ಗೌರವಕ್ಕೆ ನಿಖತ್‌ ಜರೀನ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಕೆಲವು ಕ್ರೀಡೆಗಳು ಸೃಷ್ಟಿಸುವ ಹೈಪರ್ ನ್ಯಾಷನಲಿಸಂ ಮತ್ತು ಕ್ರೀಡಾಪಟುಗಳ ಜಾತಿನಿಂದನೆ – ಇವುಗಳ ನಡುವೆ ಸಂಭ್ರಮಿಸುವುದಾದರೂ ಹೇಗೆ?

2019 ರಲ್ಲಿ, ಟೋಕಿಯೊ ಒಲಿಂಪಿಕ್ಸ್‌ನ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಿದ ನಂತರ ಭಾರತದ ದಂತಕಥೆ ಬಾಕ್ಸರ್ ಮೇರಿ ಕೋಮ್ ವಿರುದ್ಧ ನ್ಯಾಯಯುತ ವಿಚಾರಣೆಗೆ ಜರೀನ್ ಕೇಳಿದ್ದರು. ಆಗ ಅವರು “ನಿಖತ್ ಜರೀನ್ ಯಾರು?” ಎಂದು ಪ್ರಶ್ನಿಸಿದ್ದರು. ಇದಾಗಿ ಮೂರು ವರ್ಷಗಳ ನಂತರ, ಜರೀನ್ ವಿಶ್ವ ಚಾಂಪಿಯನ್ ಆಗಿದ್ದಾರೆ.

ಇದಕ್ಕೂ ಮೊದಲು 2018 ರಲ್ಲಿ ಮೇರಿ ಕೋಮ್‌ ಭಾರತದ ಮೊದಲ ಚಿನ್ನವನ್ನು ಗೆದಿದ್ದರು.

ಗುರುವಾರ ತನ್ನ ಗೆಲುವಿನ ನಂತರ, ತನ್ನ ವೃತ್ತಿಜೀವನದುದ್ದಕ್ಕೂ ತನ್ನನ್ನು ಬೆಂಬಲಿಸಿದ ಎಲ್ಲಾ ದೇಶವಾಸಿಗಳಿಗೆ ಪದಕವನ್ನು ಅರ್ಪಿಸುವುದಾಗಿ ಜರೀನ್‌‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಟ್ರೆಂಡ್ ಆಗುವುದು ತನ್ನ ಕನಸು ಎಂದು ಹೇಳಿದ ನಿಖತ್‌‌ ಜರೀನ್

“ನಾನು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದೇನೆಯೇ? ಹಿಂದಿನಿಂದಲೇ ಟ್ವಿಟರ್‌ನಲ್ಲಿ ಟ್ರೆಂಡ್ ಆಗುವುದು ನನ್ನ ಕನಸಾಗಿತ್ತು. ವಿಶ್ವ ಮಟ್ಟದಲ್ಲಿ ನನ್ನ ದೇಶಕ್ಕಾಗಿ ಏನನ್ನಾದರೂ ಸಾಧಿಸುವುದು ದೊಡ್ಡ ಕನಸಾಗಿದೆ” ಎಂದು ಅವರು ಹೇಳಿದ್ದಾರೆ.

ತೆಲಂಗಾಣದ ನಿಜಾಮಾಬಾದ್ ಪಟ್ಟಣದ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಮುಸ್ಲಿಂ ಬಾಕ್ಸರ್ ನಿಖತ್ ಜರೀನ್‌ ಅವರು ಬಾಕ್ಸಿಂಗ್‌‌ಗೆ ಬರಲು ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Private: ಲಿವಾಕ್ ಎಂಬ ಕೊಡಗಿನ ಅತಿರೇಕವಾದಿ ಸಂಘಟನೆ ಮತ್ತು ಟಿಪ್ಪುಸುಲ್ತಾನ್ ಬಗ್ಗೆ ಸುಳ್ಳು ಇತಿಹಾಸ ಸೃಷ್ಟಿ

“ನಾನು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ಬಾಕ್ಸಿಂಗ್ ಮಹಿಳೆಯರಿಗಾಗಿ ಅಲ್ಲ ಎಂಬ ಮಾತು ಸೇರಿದಂತೆ ಹಲವು ಅಡೆತಡೆಗಳನ್ನು ನಿವಾರಿಸಬೇಕಾಗಿತ್ತು. ನನ್ನ ಮುಖಕ್ಕೆ ಏನೂ ಆಗುವುದಿಲ್ಲ ಮತ್ತು ನನ್ನ ಸೌಂದರ್ಯವು ಹಾಗೇ ಇರುತ್ತದೆ ಎಂದು ನಾನು ಜನರಿಗೆ ಹೇಳಬೇಕಾಗಿತ್ತು” ಎಂದು ಅವರು ಕಳೆದ ವರ್ಷ ಕ್ರೀಡಾ ವಸ್ತುಗಳ ಬ್ರಾಂಡ್‌‌ ಅಡಿಡಾಸ್‌ನ ಅಭಿಯಾನವನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಹೇಳಿದ್ದರು.

“ಈ ಮಾತುಗಳು ನನಗೆ ಸವಾಲಾಗಿದೆ. ನಾನು ಅಲ್ಲಿಗೆ ಹೋಗಿ, ಬಾಕ್ಸಿಂಗ್‌‌ ಎಂಬ ಆಟವು ನೀವು ಪುರುಷನೊ ಅಥವಾ ಮಹಿಳೆಯೊ ಎಂಬುದನ್ನು ಲೆಕ್ಕಿಸುವುದಿಲ್ಲ ಎಂದು ಸಾಬೀತುಪಡಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ತಮಿಳು ಸಿನಿಮಾಗಳು ಐತಿಹಾಸಿಕ ಪ್ರತಿರೋಧ ತೋರಿವೆ: ಕೋಟಗಾನಹಳ್ಳಿ ರಾಮಯ್ಯ

ಜರೀನ್ 2010 ರಲ್ಲಿ 13 ನೇ ವಯಸ್ಸಿನಲ್ಲಿ ಬಾಕ್ಸಿಂಗ್ ಸೇರಿದರು. ಆರು ತಿಂಗಳೊಳಗೆ ಅವರು ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದರು. ಅದಾಗಿ ಕೇವಲ ಒಂದು ವರ್ಷದ ನಂತರ, ಅವರು ಟರ್ಕಿಯ ಅಂಟಲ್ಯದಲ್ಲಿ ಬಾಲಕಿಯರಿಗಾಗಿ 2011 ರ ವಿಶ್ವ ಜೂನಿಯರ್ ಮತ್ತು ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನವನ್ನು ಗೆದ್ದರು.

ಗುರುವಾರ ಮತ್ತೊಮ್ಮೆ ಟರ್ಕಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಐತಿಹಾಸಿಕ ಗೆಲುವಿನಿಂದ ಜರೀನ್ ಅವರ ಕುಟುಂಬ ಹರ್ಷಗೊಂಡಿದೆ.

“ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವುದು ಮುಸ್ಲಿಂ ಹುಡುಗಿಯರಿಗೆ ಮತ್ತು ದೇಶದ ಪ್ರತಿಯೊಬ್ಬ ಹುಡುಗಿಯರಿಗೂ ಜೀವನದಲ್ಲಿ ದೊಡ್ಡ ಸಾಧನೆ ಮಾಡುವ ಸ್ಫೂರ್ತಿಯನ್ನು ನೀಡುತ್ತದೆ. ಒಂದು ಮಗು, ಅದು ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ, ತನ್ನದೇ ಆದ ದಾರಿಯನ್ನು ಆರಿಸಿಕೊಳ್ಳಬೇಕು. ನಿಖತ್ ಕೂಡಾ ತನ್ನದೇ ಆದ ದಾರಿಯನ್ನು ಆರಿಸಿಕೊಂಡಿದ್ದಾರೆ” ಎಂದು ಜರೀನ್ ಅವರ ತಂದೆ ಜಮೀಲ್ ಅಹ್ಮದ್ ಹೇಳಿದ್ದಾರೆಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.

ಪ್ರಧಾನಿ ಮೋದಿ ಕೂಡಾ ಟ್ವೀಟ್‌ನಲ್ಲಿ ಜರೀನ್ ಅವರನ್ನು ಶ್ಲಾಘಿಸಿದ್ದಾರೆ. “ನಮ್ಮ ಬಾಕ್ಸರ್‌ಗಳು ನಮಗೆ ಹೆಮ್ಮೆ ತಂದಿದ್ದಾರೆ! ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತವಾದ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ನಿಖತ್ ಜರೀನ್‌ಗೆ ಅಭಿನಂದನೆಗಳು” ಎಂದು ಮೋದಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಪಾಕ್ ಕ್ರಿಕೆಟ್ ನಾಯಕಿಯ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಪ್ರೀತಿಯ ಕ್ಷಣಗಳು: ಎಲ್ಲೆಡೆ ಅಭಿಮಾನದ ಮಹಾಪೂರ

“ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ಮನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಅವರನ್ನು ನಾನು ಅಭಿನಂದಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

“ಇತಿಹಾಸ ಪುಸ್ತಕಗಳಿಗೆ ಇದು ಒಂದು” ಎಂದು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಟ್ವೀಟ್ ಮಾಡಿದ್ದು, ನಿಖತ್ ಜರೀನ್ ತನ್ನ ಚಿನ್ನದ ಸರಣಿಯನ್ನು ಮುಂದುವರೆಸಿದ್ದಾಳೆ…ವೆಲ್‌ಡನ್‌ ವಿಶ್ವ ಚಾಂಪಿಯನ್” ಎಂದು ಅದು ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...