Homeಮುಖಪುಟಲೋಕಸಭೆ ಚುನಾವಣೆ 2024: ದಕ್ಷಿಣದ ರಾಜ್ಯಗಳಲ್ಲಿ 'ಇಂಡಿಯಾ ಬಣ' ಉತ್ತಮ ಪ್ರದರ್ಶನ ನೀಡಲಿದೆ: ಪಿ. ಚಿದಂಬರಂ

ಲೋಕಸಭೆ ಚುನಾವಣೆ 2024: ದಕ್ಷಿಣದ ರಾಜ್ಯಗಳಲ್ಲಿ ‘ಇಂಡಿಯಾ ಬಣ’ ಉತ್ತಮ ಪ್ರದರ್ಶನ ನೀಡಲಿದೆ: ಪಿ. ಚಿದಂಬರಂ

- Advertisement -
- Advertisement -

ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಇಂಡಿಯಾ ಬಣ ಅದ್ಭುತ ಗೆಲುವು ಸಾಧಿಸುವ ಸಾಧ್ಯತೆಯಿದೆ. ಆದರೆ, ಇತರ ರಾಜ್ಯಗಳಲ್ಲಿ ಫಲಿತಾಂಶಗಳನ್ನು ಊಹಿಸಲು ಕಷ್ಟವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

“ನಾನು ಎಲ್ಲ ರಾಜ್ಯಗಳ ಫಲಿತಾಂಶದ ಬಗ್ಗೆ ಮಾತನಾಡಲಾರೆ; ತಮಿಳುನಾಡಿನಲ್ಲಿ ಇಂಡಿಯಾ ಬಣ ಭರ್ಜರಿ ಜಯ ದಾಖಲಿಸಲಿದೆ ಎಂದು ನಾನು ವಿಶ್ವಾಸದಿಂದ ಊಹಿಸಬಲ್ಲೆ. ಕೇರಳದಲ್ಲಿ ಎರಡೂ ರಂಗಗಳು (ಯುಡಿಎಫ್ ಮತ್ತು ಎಲ್‌ಡಿಎಫ್) 20 ಸ್ಥಾನಗಳನ್ನು ಹಂಚಿಕೊಳ್ಳಲಿದ್ದು, ಬಿಜೆಪಿಗೆ ಏನನ್ನೂ ಬಿಟ್ಟುಕೊಡುವುದಿಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರಗಳು ಜನಪ್ರಿಯವಾಗಿದ್ದು, ಅಲ್ಲಿ 2019 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ” ಎಂದು ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದರು.

“ಆದರೂ, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಗಾಧವಾಗಿ ಸುಧಾರಿತ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ಸಾಧ್ಯತೆಯಿದೆ. ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ದೆಹಲಿಯಿಂದ ಇಂಡಿಯಾ ಬಣದ ಬಗ್ಗೆ ಪ್ರೋತ್ಸಾಹದಾಯಕ ವರದಿಗಳಿವೆ” ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಮುಖ್ಯ ಆಟಗಾರ್ತಿ ಎಂದು ಹೇಳಿದ ಚಿದಂಬರಂ, ಬಂಗಾಳದಲ್ಲಿ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಅವರ ಸಾಮರ್ಥ್ಯವು ಇಂಡಿಯಾ ಬಣವನ್ನು ಬಲಪಡಿಸುತ್ತದೆ ಎಂದು ಹೇಳಿದರು.

‘ತುಷ್ಟೀಕರಣ’ ಬಿಜೆಪಿಯ ಕೋಡ್ ವರ್ಡ್

ವಿರೋಧ ಪಕ್ಷಗಳು ತುಷ್ಟೀಕರಣ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವನ್ನು ಒಡೆಯಲು ಮುಂದಾಗಿರುವ ಹಿಂದೂ ವಿರೋಧಿ ರಾಜಕಾರಣಿಗಳ ದಂಡು ಎಂದು ಕರೆದಿರುವುದು ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯ ತಂತ್ರವಾಗಿದೆ ಎಂದರು.

“ಇಡೀ ಪ್ರತಿಪಕ್ಷಗಳನ್ನು ಹಿಂದೂ ವಿರೋಧಿ ಎಂದು ಬಣ್ಣಿಸಲು ಮತ್ತು ಹಿಂದೂಗಳ ಸಂರಕ್ಷಕನಾಗಿ ನರೇಂದ್ರ ಮೋದಿಯ ಅರ್ಹತೆಯನ್ನು ಹೆಚ್ಚಿಸಲು ಬಿಜೆಪಿಯ ಲೆಕ್ಕಾಚಾರದ ತಂತ್ರ ಇದಾಗಿದೆ. ಹಿಂದೂ ಧರ್ಮಕ್ಕೆ ಅಪಾಯವಿಲ್ಲ. ಇಲ್ಲದ ಭಯವನ್ನು ಕಲ್ಪಿಸಿಕೊಡಲು ನರೇಂದ್ರ ಮೋದಿ ಹಿಂದೂಗಳಿಗೆ ಕೇಳುತ್ತಿದ್ದಾರೆ. ತುಷ್ಟೀಕರಣ ಎಂಬುದು ಬಿಜೆಪಿಯ ಅಲ್ಪಸಂಖ್ಯಾತ ವಿರೋಧಿ ನಿಲುವಿಗೆ ಸಂಕೇತ ಪದವಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ; ಬಡ ಕುಟುಂಬಕ್ಕೆ ವಾರ್ಷಿಕ ₹1 ಲಕ್ಷ, 1 ಕೋಟಿ ಸರ್ಕಾರಿ ಉದ್ಯೋಗ: ಆರ್‌ಜೆಡಿ ಭರವಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...