Homeಮುಖಪುಟಹಮಾಸ್‌ ಸಶಸ್ತ್ರ ಗುಂಪಿನ 1500 ಮೃತದೇಹಗಳು ಪತ್ತೆ: ಇಸ್ರೇಲ್‌ ಸೇನೆ

ಹಮಾಸ್‌ ಸಶಸ್ತ್ರ ಗುಂಪಿನ 1500 ಮೃತದೇಹಗಳು ಪತ್ತೆ: ಇಸ್ರೇಲ್‌ ಸೇನೆ

- Advertisement -
- Advertisement -

ಸುಮಾರು 1500 ಹಮಾಸ್‌ ಸಶಸ್ತ್ರ ಗುಂಪಿನವರ ಮೃತದೇಹಗಳು ಗಾಝಾ ಪಟ್ಟಿಯ ಸುತ್ತಲಿನ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಇಸ್ರೇಲ್‌ ಸೇನೆ ಇಂದು ಹೇಳಿದೆ.

ಈ ಕುರಿತು ಮಾಹಿತಿ ನೀಡಿದ ಇಸ್ರೇಲ್‌ನ ಮಿಲಿಟರಿ ವಕ್ತಾರ ರಿಚರ್ಡ್‌ ಹೆಚ್ಟ್‌, ”ಗಾಝಾ ಜೊತೆಗಿನ ಗಡಿ ಪ್ರದೇಶದಲ್ಲಿ ಇಸ್ರೇಲ್‌ ಬಹುಪಾಲು ನಿಯಂತ್ರಣ ಮರುಸ್ಥಾಪಿಸಿದೆ” ಎಂದು ಹೇಳಿದ್ದಾರೆ.

”ಕಳೆದ ರಾತ್ರಿಯಿಂದ ಯಾರೂ ಒಳಬಂದಿಲ್ಲ, ಆದರೆ ನುಸುಳುವಿಕೆ ನಡೆಯಬಹುದು. ಗಡಿ ಪ್ರದೇಶದ ಸುತ್ತಲಿನ ಎಲ್ಲಾ ಜನರ ತೆರವು ಕಾರ್ಯಾಚರಣೆಯನ್ನು ಸೇನೆ ಬಹುತೇಕ ಪೂರ್ಣಗೊಳಿಸಿದೆ” ಎಂದು ಅವರು ಹೇಳಿದ್ದಾರೆ.

ಕಳೆದ ಶನಿವಾರ ಇಸ್ರೇಲ್‌ ಮೇಲೆ ಹಮಾಸ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ವ್ಯಾಪಕ ವಾಯು ದಾಳಿಯನ್ನು ಗಾಝಾ ಪಟ್ಟಿಯ ಹಮಾಸ್‌ ನೆಲೆಗಳ ಮೇಲೆ ಮಾಡಿದೆ ಎಂದು ವರದಿಯಾಗಿದೆ.

ಈ ಹಿಂದೆ 900 ಇಸ್ರೇಲ್ ಸೈನಿಕರು ಮತ್ತು ನಾಗರಿಕರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ವರದಿ ಮಾಡಿದೆ. ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಸುಮಾರು 700 ಸಾವುಗಳ ಕುರಿತು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ವರದಿ ಮಾಡಿದ್ದಾರೆ.

ಇಸ್ರೇಲಿ ಯುದ್ಧವಿಮಾನಗಳು ಹಮಾಸ್‌ನ ಸರ್ಕಾರಿ ಕೇಂದ್ರಗಳಿಗೆ ನೆಲೆಯಾಗಿರುವ ಡೌನ್‌ಟೌನ್ ಗಾಜಾ ಸಿಟಿಯ ಮೇಲೆ ದಾಳಿ ಮಾಡಿವೆ.

4-ದಿನಗಳಿಂದ ನಡೆಯುತ್ತಿರುವ ಈ ಯುದ್ದದಲ್ಲಿ ಸುಮಾರು 1,600ಕ್ಕಿಂತ ಹೆಚ್ಚು ಜೀವಗಳನ್ನು ಬಲಿಯಾಗಿದ್ದಾರೆ.

ಇದನ್ನೂ ಓದಿ: ಪ್ಯಾಲೆಸ್ತೀನ್‌ಗೆ ಬೆಂಬಲ ಘೋಷಿಸಿದ ಸೌದಿ ಅರೇಬಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...