Homeಕರ್ನಾಟಕಕನ್ನಡ ಬಾವುಟ ಬೇಡವೆಂದ ಸಚಿವ ಸಿ.ಟಿ ರವಿಗೆ ನೆಟ್ಟಿಗರಿಂದ ಫುಲ್ ಕ್ಲಾಸ್..

ಕನ್ನಡ ಬಾವುಟ ಬೇಡವೆಂದ ಸಚಿವ ಸಿ.ಟಿ ರವಿಗೆ ನೆಟ್ಟಿಗರಿಂದ ಫುಲ್ ಕ್ಲಾಸ್..

- Advertisement -
- Advertisement -

ದೇಶಕ್ಕೊಂದು ಧ್ವಜವಿರುವಾಗ ಕನ್ನಡ ಧ್ವಜ ಬೇಕಿಲ್ಲ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿರುವ ಸಚಿವ ಸಿಟಿ ರವಿಗೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಫುಲ್ ಕ್ಲಾಸ್ ಕೊಟ್ಟಿದ್ದಾರೆ. ಯಾರು ಯಾರು ಏನೇನು ಹೇಳಿದ್ದಾರೆ ನೋಡಿ.

“ಚೀಟಿ ರವಿಯವರೆ, ದೇಶಕ್ಕೊಂದೆ ಧ್ವಜ ಅಂದಿದ್ದೀರಿ, ಬಟ್ ತ್ರಿವರ್ಣ ಧ್ವಜವೋ ಭಗವಾ ದ್ದಜವೋ ಕರೆಕ್ಟಾಗಿ ಹೇಳಿ… ತ್ರಿವರ್ಣ ಧ್ವಜವಾದರೆ ಭಗವಾಧ್ವಜಗಳನ್ನು ಯಾರೂ ಬಳಸೋ ಹಾಗಿಲ್ಲ ಎನ್ನಿ, ಭಗವಾ ಧ್ವಜ ಆಗಿದ್ದರೆ ತ್ರಿವರ್ಣ ಧ್ವಜ ನಮಗೆ ಬೇಡ ಎನ್ನಿ… ಈ ಬಗ್ಗೆ ಸ್ಪಷ್ಟ ನಿಲುವು ಹೇಳಲು ತಾಕತ್ತಿಲ್ಲದಿದ್ದರೆ ತೆಪ್ಪಗಿರಿ. ನಮ್ಮ ಕನ್ನಡ ಧ್ವಜದ ಉಸಾಬರಿ ನಿಮಗೆ ಬೇಡ. ಕನ್ನಡಿಗರುಂಟು ಅವರ ಕನ್ನಡ ಧ್ವಜ ಉಂಟು. ಮೊದಲು “ಕನ್ನಡ ಸಂಸ್ಕೃತಿ” ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟು ಕೆಳಗಿಳೀರಿ… ಕನ್ನಡ ಸಂಸ್ಕೃತಿ, ಕನ್ನಡತನವನ್ನ ಗೌರವಿಸಲಾಗದ ನಿಮ್ಮಂತ ನಾಲಾಯಕ್ ಗಳಿಂದ ಕನ್ನಡ ಮಾತೆ ಪಡೆದುಕೊಳ್ಳೋದಕ್ಕಿಂದ ಕಳೆದುಕೊಳ್ಳೋದೇ ಹೆಚ್ಚು..ನಡೀರಿ ಆಚೆ..” ಎಂದು ಹರ್ಷಕುಮಾರ್ ಕುಗ್ವೆ ಕಿಡಿಕಾರಿದ್ದಾರೆ.

ಕೆಂಚನೂರು ಎನ್ ಶಂಕರರವರು ಫೇಸ್ ಬುಕ್ ನಲ್ಲಿ “C T ರವಿ ಮತ್ತು ಅವರ ಪಕ್ಷ ಹುಟ್ಟುವ ಮೊದಲೇ ಈ ಬಾವುಟ ಕನ್ನಡ ಮತ್ತು ಕರ್ನಾಟಕದ ಗುರುತಾಗಿ ಇತ್ತು ಮುಂದೆಯೂ ಇರಲಿದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ”. ಎಂದು ಬರೆದಿದ್ದಾರೆ.

“ಕರ್ನಾಟಕಕ್ಕೆ ಪ್ರತ್ಯೇಕ ನಾಡದ್ವಜ ಅಗತ್ಯವಿಲ್ಲ ಎಂದ ಬಿಜೆಪಿ ಪುಡಾರಿ ಚೀಟಿ ರವಿ
ನಿನ್ನ ಮೋದಿ ನಾಗಾಲ್ಯಾಂಡಿಗೆ ಪ್ರತ್ಯೇಕ ದ್ವಜ, ಪ್ರತ್ಯೇಕ ಸ್ಥಾನಮಾನ ಕೊಟ್ಟಿದ್ದೇತಕೆ? ಎಂದು ವಿನಯ್ ಕಸ್ವೆ ಪ್ರಶ್ನಿಸಿದ್ದಾರೆ.

ಎಂ.ಆರ್ ಕೃಷ್ಣರವರು ಕನ್ನಡ ಬಾವುಟ ನಮ್ಮ ಆಸ್ಮಿತೆ. ಹಿಂದಿ ಗುಲಾಮಿಗಳು ಮತ್ತು ಕನ್ನಡದ್ರೋಹಿಗಳ ವಿರುದ್ಧ ಕಸ್ತೂರಿ ಕನ್ನಡಿಗರ ಹೋರಾಟ ನಿತ್ಯ ನಿರಂತರ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರು ಈ ಕುರಿತು ವಿವರವಾಗಿ ಬರೆದಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ತನ್ನದೇ ಆದ ಸ್ವತಂತ್ರ ಲಾಂಛನವಿದೆ. ಈಗ ಸ್ವತಂತ್ರ ಧ್ವಜವನ್ನು ಹೊಂದುವ ಸಮಯ.

ಭಾರತ ಗಣರಾಜ್ಯವು ಒಕ್ಕೂಟ ವ್ಯವಸ್ಥೆಯ ದೇಶ (Federal, albeit a quasi). ಒಕ್ಕೂಟ ವ್ಯವಸ್ಥೆಯಲ್ಲಿ ಹಲವು ವಿಚಾರಗಳಲ್ಲಿ ಸ್ವತಂತ್ರ ಅಸ್ತಿತ್ವ ಮತ್ತು ಆಡಳಿತವ್ಯಾಪ್ತಿ ಇರುವ ರಾಜ್ಯಗಳಿರುತ್ತವೆ. ಆ ರಾಜ್ಯಗಳಿಗೆ ತಮ್ಮದೇ ಆದ ಲಾಂಛನ ಮತ್ತು ಧ್ವಜಗಳಿರುತ್ತವೆ. ಹಾಗೆಯೇ ಆಯಾ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಕೆಲವು ಸ್ವತಂತ್ರ ಕಾಯ್ದೆ, ಕಾನೂನುಗಳೂ.

ಯಾವುದೋ ಕಾರಣಕ್ಕೆ ಇಲ್ಲಿಯವರೆಗೂ ನಮ್ಮ ರಾಜ್ಯ ಸ್ವಂತ ಧ್ವಜವನ್ನು ರೂಪಿಸಿಕೊಂಡಿರಲಿಲ್ಲ ಎಂದಮಾತ್ರಕ್ಕೆ ಅದು ಮುಂದೆಂದೂ ಇರಬಾರದು ಎಂದಿಲ್ಲ.

ಈ ಹಿನ್ನೆಲೆಯಲ್ಲಿ ಕನ್ನಡಿಗರ ಮತ್ತು ಕರ್ನಾಟಕದ ಪ್ರಜೆಗಳ ಜನಾಭಿಪ್ರಾಯವನ್ನು ಗೌರವಿಸಿ ಈ ಕೂಡಲೇ ಕರ್ನಾಟಕ ರಾಜ್ಯ ಸರ್ಕಾರವು ಸ್ವತಂತ್ರ ಧ್ವಜವನ್ನು ಹೊಂದುವ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆಗೆ ಮುಂದಾಗಬೇಕು ಎಂದು “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷವು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತದೆ. ರಾಜ್ಯದ “ಕನ್ನಡ ಮತ್ತು ಸಂಸ್ಕೃತಿ” ಇಲಾಖೆಯ ಸಚಿವರಾದ ಸಿ.ಟಿ.ರವಿಯವರು ಈ ಪ್ರಕ್ರಿಯೆಗೆ ಪೂರಕವಾಗಿ ತಮ್ಮ ಇಲಾಖೆಯ ವತಿಯಿಂದ ಯಾವುದೆಲ್ಲಾ ಕಾನೂನು ಮತ್ತು ಆಡಳಿತ ಪ್ರಕ್ರಿಯೆಗಳನ್ನು ಮಾಡಬೇಕಿದೆಯೋ ಅದನ್ನು ಶ್ರದ್ಧಾಭಕ್ತಿಯಿಂದ ಹಾಗೂ ಕರ್ತವ್ಯನಿಷ್ಠೆಯಿಂದ ನಿರ್ವಹಿಸಬೇಕೆಂದು ನಾವು ಅವರನ್ನು ಒತ್ತಾಯಿಸುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅದು ‘ಕರ್ನಾಟಕ ವಿರೋಧಿ ಕೃತ್ಯ’ ಎಂದು ಎಚ್ಚರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Mr. ಸಿ.ಟಿ ರವಿ ಕನ್ನಡ ಬಾವುಟ ಹಾರಿಸಿದ್ದೇನೆ ಅದ್ ಯಾವಾ ಕೇಸ್ ಹಾಕೀಸ್ತೀಯೋ ಹಾಕ್ಸು. ನನ್ನ ಕನ್ನಡ ಭಾಷೆಗೆ ಪ್ರತ್ಯೇಕ ನಾಡಧ್ವಜ ಹೊಂದುವುದು ರಾಷ್ಟ್ರದ್ರೋಹವಾದರೆ ನಾನು ರಾಷ್ಟ ದ್ರೋಹಿಯಾಗಲು ಸಿದ್ದ….. ಎಂದು ಕನ್ನಡ ರಣಧೀರ ಪಡೆಯ ಹರೀಶ್ ಕುಮಾರ್ ಬಿ ಸವಾಲು ಹಾಕಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...