ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದಿರುವ ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಕಲ್ಕತ್ತಾ ಹೈಕೋರ್ಟ್ ಸಿಬಿಐಗೆ ವರ್ಗಾಯಿಸಿದೆ.
ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠವು, ತನಿಖೆಯನ್ನು ಸ್ವತಂತ್ರ ಏಜೆನ್ಸಿಗೆ ವರ್ಗಾಯಿಸುವಂತೆ ಕೋರಿ ಸಂತ್ರಸ್ತೆಯ ಪೋಷಕರು ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದೆ.
ಅರ್ಜಿಗಳ ವಿಚಾರಣೆ ವೇಳೆ ರಾಜ್ಯ ಪೊಲೀಸರ ತನಿಖೆಯ ಪ್ರಗತಿಯ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, “ಈ ರೀತಿ ತನಿಖೆ ಮುಂದುವರೆದರೆ, ಅದು ಹಳಿ ತಪ್ಪಲಿದೆ ಎಂಬ ಆತಂಕ ಸಂತ್ರಸ್ತೆಯ ಪೋಷಕರಲ್ಲಿದೆ. ಆದ್ದರಿಂದ ಅವರು ಉನ್ನತ ಪರಿಹಾರಕ್ಕಾಗಿ ಕೋರಿದ್ದಾರೆ. ಈ ಪ್ರಕರಣದಲ್ಲಿ ಮತ್ತೊಂದು ಆತಂಕಕಾರಿ ಅಂಶವೆಂದರೆ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಯಾವುದೇ ದೂರು ಇಲ್ಲದಿದ್ದಾಗ ಅಂತಹ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಮೃತರು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರೂ ಪ್ರಾಂಶುಪಾಲರು ಏಕೆ ದೂರು ನೀಡಿಲ್ಲ ಎಂಬುವುದು ಅಚ್ಚರಿ ಮೂಡಿಸಿದೆ. ತನಿಖೆಯಲ್ಲಿ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ. ಆಡಳಿತವು ಸಂತ್ರಸ್ತೆ ಅಥವಾ ಆಕೆಯ ಕುಟುಂಬದೊಂದಿಗೆ ಇರಲಿಲ್ಲ. ಪ್ರಾಂಶುಪಾಲರು ಹೇಳಿಕೆಯನ್ನೂ ನೀಡಿಲ್ಲ. ತನಿಖೆಯಲ್ಲಿ ಗಮನಾರ್ಹ ಪ್ರಗತಿಯಿಲ್ಲದೆ, ಸಾಕ್ಷಿ ನಾಶವಾಗುತ್ತದೆ ಎಂಬ ಸಂತ್ರಸ್ತೆಯ ಪೋಷಕರ ಅಳಲನ್ನು ನಾವು ಪರಿಗಣಿಸುತ್ತಿದ್ದೇವೆ. ಆದ್ದರಿಂದ ಅರ್ಜಿದಾರರಿಗೆ ನ್ಯಾಯ ಒದಗಿಸಲು ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ನಾವು ತನಿಖೆಯನ್ನು ಸಿಬಿಐಗೆ ವರ್ಗಾಯಿಸುತ್ತೀದ್ದೇವೆ” ಎಂದು ಹೇಳಿದೆ.
In a breaking development, the Calcutta High Court has transferred the investigation into the brutal rape and murder of a 2nd year PG medical student at Kolkata's RG Kar Hospital, to the CBI.
Read more: https://t.co/fgmmT2FzMg#CalcuttaHighCourt #RGKarMedicalcollege #RGKarMCH pic.twitter.com/vRNrhMAN9j— Live Law (@LiveLawIndia) August 13, 2024
ಸ್ಥಳೀಯ ವರದಿಗಳ ಪ್ರಕಾರ, ತರಬೇತಿ ವೈದ್ಯೆಯು ತನ್ನ ರಾತ್ರಿ ಪಾಳಿಯನ್ನು ಮುಗಿಸಿ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ವಿಶ್ರಾಂತಿ ಪಡೆಯಲು ಹೋಗಿದ್ದರವರು ಆಗಸ್ಟ್ 9 ರ ಮುಂಜಾನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪ್ರಾಥಮಿಕ ತನಿಖೆಯ ನಂತರ, ಕೋಲ್ಕತ್ತಾ ಪೊಲೀಸರು ಸ್ಥಳೀಯ ಪೊಲೀಸ್ ಪಡೆಯೊಂದಿಗೆ ಕೆಲಸ ಮಾಡಿದ ‘ನಾಗರಿಕ ಸ್ವಯಂಸೇವಕ’ನನ್ನು ಬಂಧಿಸಿದ್ದರು. ಇದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಈ ಬಂಧನವನ್ನು ಮುಚ್ಚಿಹಾಕಲಾಗಿದೆ ಎಂದು ಬಣ್ಣಿಸಲಾಗಿದೆ, ರಾಜ್ಯ ಪೊಲೀಸರ ತನಿಖೆಯು ದೋಷಪೂರಿತವಾಗಿದೆ ಎಂದು ವಕೀಲರು ಪ್ರತಿಪಾದಿಸಿದ್ದಾರೆ ಮತ್ತು ಅವರು ನೈಜ ಸಂಗತಿಗಳನ್ನು ಮುಚ್ಚಿಡುವ ಪ್ರಯತ್ನದಲ್ಲಿ ಆರೋಪಿಗಳಿಂದ ಬಲಿಪಶು ಮಾಡಲು ಪ್ರಯತ್ನಿಸುತ್ತಿದ್ದಾರೆ.
ಮೃತ ವೈದ್ಯೆಯ ಪೋಷಕರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಶ್ ರಂಜನ್ ಭಟ್ಟಾಚಾರ್ಯ ಅವರು, ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಆರಂಭದಲ್ಲಿ ದೂರವಾಣಿ ಕರೆ ಬಂದಿದ್ದು, ಕಾಲೇಜಿಗೆ ತಲುಪಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಲಾಗಿತ್ತಾದರೂ, ಮೂರು ಗಂಟೆಗಳ ಕಾಲ ಕಾದರೂ ಆಕೆಯ ಶವ ನೋಡಲು ಅವಕಾಶ ನೀಡಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂನ ಓದಿ : ಆರ್‌ಜಿ ಕರ್ ವೈದ್ಯಕೀಯ ಕಾಲೇಜು ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ; ಘಟನೆ ರಾತ್ರಿ ನಡೆದಿದ್ದೇನು?