ವಿನೇಶಾ ಫೋಗಟ್ ತನ್ನ ಪ್ಯಾರಿಸ್ ಒಲಿಂಪಿಕ್ಸ್ ಪ್ರದರ್ಶನದ ಆಧಾರದ ಮೇಲೆ ಬೆಳ್ಳಿ ಪದಕವನ್ನು ನೀಡಬೇಕೆಂದು ಒತ್ತಾಯಿಸಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಆಫ್ ಸ್ಪೋರ್ಟ್ (ಸಿಎಎಸ್) ನಲ್ಲಿ ತನ್ನ ಮೊಕದ್ದಮೆಯನ್ನು ಮುಂದುವರಿಸುತ್ತಿರುವುದರಿಂದ ಇಡೀ ಭಾರತವು ತೀರ್ಪಿಗಾಗಿ ಕಾತುರದಿಂದ ಕಾಯುತ್ತಿದೆ.
ನಿರ್ಧಾರವು ಇನ್ನೂ ಬಾಕಿ ಇರುವಾಗಲೇ, ಸಿಎಎಸ್ ಮೇಲ್ಮನವಿಯ ಸಂದರ್ಭದಲ್ಲಿ ವಿನೇಶಾ ಅವರ ಪರ ವಕೀಲ ವಿದುಷ್ಪತ್ ಸಿಂಘಾನಿಯಾ ಅವರು, ಭಾರತೀಯ ಕುಸ್ತಿಪಟು ಯಶಸ್ಸಿನ ಸಾಧ್ಯತೆಯ ಬಗ್ಗೆ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಿಎಎಸ್‌ನಲ್ಲಿನ ಯಶಸ್ಸಿನ ಪ್ರಮಾಣವು ಐತಿಹಾಸಿಕವಾಗಿ ಸಾಕಷ್ಟು ಕಠೋರವಾಗಿದೆ. ಆದರೆ, ಒಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಒಂದು ಹೆಗ್ಗುರುತು ತೀರ್ಪಿನಲ್ಲಿ ವಿನೇಶಾಗೆ ನ್ಯಾಯವನ್ನು ನೀಡುವುದನ್ನು ನೋಡಲು ಭರವಸೆ ಹೊಂದಿದ್ದೇವೆ ಎಂದು ಸಿಂಘಾನಿಯಾ ಹೇಳಿದ್ದಾರೆ.
“ನಾವೆಲ್ಲರೂ ನಂಬುತ್ತೇವೆ.. ಹೌದು, ಸಿಎಎಸ್‌ನ ತಾತ್ಕಾಲಿಕ ಸಮಿತಿಯು 24 ಗಂಟೆಗಳ ಕಾಲಾವಧಿಯನ್ನು ಹೊಂದಿದೆ. ಅವರು ತೀರ್ಪಿನ ಗಡುವನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಸ್ತರಿಸಿದ್ದಾರೆ ಎಂದರೆ ತಮ್ಮ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎಂದರ್ಥ; ಇದು ನಮಗೆ ಒಳ್ಳೆಯದು” ಎಂದು ವಿದುಷ್ಪತ್ ಸಿಂಘಾನಿಯಾ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
“ನಾನು ಈ ಹಿಂದೆ ಸಿಎಎಸ್‌ನಲ್ಲಿ ಹಲವು ಪ್ರಕರಣಗಳನ್ನು ಎದುರಿಸಿದ್ದೇನೆ. ಅಲ್ಲಿ ಯಶಸ್ಸಿನ ಪ್ರಮಾಣ ತುಂಬಾ ಕಡಿಮೆಯಾಗಿದೆ. ಈ ವಿಷಯದಲ್ಲಿ, ನಾವು ಮಧ್ಯಸ್ಥಗಾರರಿಂದ ಮಹತ್ವದ ನಿರ್ಧಾರವನ್ನು ಕೇಳುತ್ತಿದ್ದೇವೆ. ಇದು ಸ್ವಲ್ಪ ಕಷ್ಟ, ಆದರೆ ಏನಾದರೂ ದೊಡ್ಡದಾಗಲಿ ಎಂದು ಆಶಿಸೋಣ” ಎಂದು ಅವರು ಹೇಳಿದ್ದಾರೆ.
“ವಿನೇಶಾಗಾಗಿ ನಾವೆಲ್ಲರೂ ಪ್ರಾರ್ಥಿಸೋಣ; ಆಕೆಗೆ ಪದಕ ಸಿಗಲಿ ಎಂದು ಹಾರೈಸೋಣ. ಆಕೆಗೆ ಪದಕ ಸಿಗದಿದ್ದರೂ ಆಕೆ ಚಾಂಪಿಯನ್ ಆಗಿದ್ದಾಳೆ” ಎಂದು ಸಿಂಘಾನಿಯಾ ಹೇಳಿದ್ದಾರೆ.
ಓಲಂಪಿಕ್ ಗೇಮ್ಸ್ ಗ್ರಾಮ ತೊರೆದ ವಿನೇಶಾ
ವಿನೇಶಾ ಸೋಮವಾರ ಒಲಿಂಪಿಕ್ ಕ್ರೀಡಾಕೂಟದಲ್ಲಿ ತನ್ನ ಅಸಾಮಾನ್ಯ ಪ್ರದರ್ಶನದ ನಂತರ ಓಲಂಪಿಕ್ ಗೇಮ್ಸ್ ಗ್ರಾಮವನ್ನು ತೊರೆಯುತ್ತಿರುವುದು ಕಂಡುಬಂದಿತು. ಕುಸ್ತಿ ಫೈನಲ್ ಪಂದ್ಯದ ದಿನದಂದು ತೂಕದ ಸಮಯದಲ್ಲಿ ಹೆಚ್ಚುವರಿ 100 ಗ್ರಾಂ ತೂಕವನ್ನು ಹೊಂದಿದ್ದ ಕಾರಣ ಅವರು ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಚಿನ್ನದ ಪದಕದ ಪಂದ್ಯದಿಂದ ಅನರ್ಹಗೊಂಡರು.
ನಂತರ, ಅವರು ಸಿಎಎಸ್‌ನೊಂದಿಗೆ ಒಲಿಂಪಿಕ್ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದರು. 50 ಕೆಜಿ ತೂಕ ವಿಭಾಗದಲ್ಲಿ ಜಂಟಿ ಬೆಳ್ಳಿ ಪದಕಕ್ಕಾಗಿ ಒತ್ತಾಯಿಸಿದರು.
ಇದನ್ನೂ ಓದಿ; ವಯನಾಡ್ ಭೂಕುಸಿತ: ಕಾಣೆಯಾದವರ ದಾಖಲೆ ವಿತರಿಸಲು ಕೇರಳದ ಶಾಲೆಗಳಲ್ಲಿ ವಿಶೇಷ ಶಿಬಿರ