Homeಸಿನಿಮಾಕ್ರೀಡೆಕೆಎಸ್‍ಸಿಎಗೆ ಕಳಂಕ ತಂದ ಕೆಪಿಎಲ್ ಮೋಸದಾಟ...

ಕೆಎಸ್‍ಸಿಎಗೆ ಕಳಂಕ ತಂದ ಕೆಪಿಎಲ್ ಮೋಸದಾಟ…

ಯಾರದೋ ಹಣದಾಹಕ್ಕೆ ಬಲಿಯಾಗಿ ಅತಿ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬಹುದೆಂಬ ಭ್ರಮೆಯಲ್ಲಿ ಇಂತಹ ಮೋಸದಾಟದ ಬಲೆಗೆ ಬೀಳುತ್ತಿರುವುದು ಕ್ರಿಕೆಟ್ ಜಗತ್ತಿನ ಕಳಂಕವಾಗಿದೆ...

- Advertisement -
- Advertisement -

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಸಮಿತಿಯ ಚುನಾವಣೆಯಲ್ಲಿ, 1983ರ ಭಾರತದ ವಿಶ್ವಕಪ್ ವಿಜೇತ ತಂಡದ ನಾಡಿನ ಹೆಮ್ಮೆಯ ಆಟಗಾರ ನೇತೃತ್ವದ ಬಳಗ ಪ್ರಚಂಡ ಬಹುಮತದಿಂದ ಆಯ್ಕೆಯಾಗಿರುವುದು ಸಂತೋಷದಾಯಕ ವಿಚಾರವಾಗಿದೆ.

ರೋಜರ್ ಬಿನ್ನಿ

ಮೋಸದಾಟ ಎಲ್ಲಾ ಹಂತದ ಕ್ರಿಕೆಟ್‍ನಲ್ಲೂ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಸ್ವಚ್ಛ, ಪಾರದರ್ಶಕ, ಭ್ರಷ್ಟಾಚಾರ ರಹಿತವಾದ ಆಡಳಿತದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ರೋಜರ್ ಬಿನ್ನಿ ನೇತೃತ್ವದ ತಂಡದಲ್ಲಿ ನಿಷ್ಕಳಂಕ ವೃತ್ತಿಪರ ಮಾಜಿ ಆಟಗಾರರು ಹಾಗೂ ಶಾವೀರ್ ತಾರಾಪೂರ್‌ರಂತಹ ಅಂತರ ರಾಷ್ಟ್ರೀಯ ಅಂಪೈರ್ ಇರುವುದು ಪಾರದರ್ಶಕ ಆಡಳಿತದ ದೃಷ್ಟಿಯಿಂದ ಸಮಾಧಾನಕರವಾದ ವಿಷಯವಾಗಿದೆ.

ಹಾಗೆಯೇ ಕೆಎಸ್‍ಸಿಎಯಿಂದ ಬಿಸಿಸಿಐ ಪ್ರತಿನಿಧಿಯಾಗಿ ಬ್ರಿಜೇಶ್ ಪಟೇಲ್ ಅವರನ್ನು ನಾಮನಿರ್ದೇಶನ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಏಕೆಂದರೆ ಭಾರತದ ಖ್ಯಾತನಾಮ ಆಟರಾರರಾಗಿದ್ದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಅಂತಹವರು ಕೆಎಸ್‍ಸಿಎ ಯ ಪದಾಧಿಕಾರಿಗಳಾಗಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಬುಡಮಟ್ಟದಿಂದ ಬದಲಾವಣೆಗಳನ್ನು ಮಾಡುವ ದೃಢ ಸಂಕಲ್ಪವನ್ನು ಮಾಡಿ ಯಾವುದೇ ಲಾಭಿಗೆ ಮಣಿಯದೇ ಅತ್ಯಂತ ನಿಷ್ಠೆಯಿಂದ ಅದರಲ್ಲಿ ಸಫಲತೆಯನ್ನು ಕಂಡರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೇ ಬಹುಪಾಲು ಜಿಲ್ಲಾ ಕೇಂದ್ರಗಳಲ್ಲಿ ಉತ್ಕೃಷ್ಟ ಮಟ್ಟದ ಕ್ರಿಡಾಂಗಣಗಳನ್ನು ನಿರ್ಮಿಸಿ ವಲಯವಾರು ಕ್ರಿಕೆಟ್ ಪಂದ್ಯಾವಳಿಗಳಿಗೆ ಹೆಚ್ಚಿನ ಒತ್ತು ಕೊಟ್ಟು ಅಲ್ಲಿಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟು ಗ್ರಾಮೀಣ ಭಾಗದ ಆಟಗಾರರ ಆಶಾಕಿರಣವಾದರು. ಹಾಗೆಯೇ ಕೆಎಸ್‍ಸಿಎ ಲೀಗ್ ಪಂದ್ಯಾವಳಿಗಳ ಆಯೋಜನೆಯಲ್ಲಿಯೂ ಅನೇಕ ಬದಲಾವಣೆ ತರುವುದರ ಮೂಲಕ ಕೆಎಸ್‍ಸಿಎ ಆಡಳಿತದ ಆಧಾರ ಸ್ಥಂಭಗಳಾದರು. ಇಂತಹ ಪಾರದರ್ಶಕ, ವೃತ್ತಿಪರ ಆಡಳಿತದ ಅವಶ್ಯಕತೆಯಿರುವುದರಿಂದ, ಹಾಗೂ ಮೋಸದಾಟದಂತಹ ಪಿಡುಗನ್ನು ಹಬ್ಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿರುವುದಿಂದ ಶುದ್ಧ ಹಸ್ತದ ಅನಿವಾರ್ಯತೆ ಕೆಎಸ್‍ಸಿಎಗೆ ಇದೆ.

‘ಕ್ರಿಕೆಟ್ ಜಂಟಲ್ ಮ್ಯಾನ್ಸ್ ಗೇಮ್’ ಎಂದು ಕರೆಯುತ್ತಾರೆ. ಆದರೆ ಕ್ರಿಕೆಟ್ ಮತ್ತು ಮೋಸದಾಟಕ್ಕೆ ಅವಿನಾಭಾವ ಸಂಬಂಧವಿದೆಯೇನೋ ಎನ್ನುವಷ್ಟರಮಟ್ಟಿಗೆ ಅದು ಒಂದಕ್ಕೊಂದು ಬೆರೆತುಹೋಗಿದೆ. ಕ್ರಿಕೆಟ್‍ನ ಎಲ್ಲಾ ಮಟ್ಟದ ಪಂದ್ಯಾವಳಿಗಳು ಇದಕ್ಕೆ ಹೊರತಲ್ಲ. ಮೊದಮೊದಲು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸೌತ್ ಆಫ್ರಿಕಾ ತಂಡದ ಆಗಿನ ನಾಯಕ ಹ್ಯಾನ್ಸಿ ಕ್ರೋನಿಯೆ ಪ್ರಕರಣದ ಮೂಲಕ ಇದರ ವಾಸನೆ ಬಡಿದ ಮೇಲೆ ಜಗಜ್ಜಾಹಿರಾಯಿತು. ಇಡೀ ಕ್ರಿಕೆಟ್ ಜಗತ್ತು ಮೂಕವಿಸ್ಮಿತವಾಗಿ ಕ್ರಿಕೆಟ್ ಆಟಗಾರರನ್ನು ಖಳನಾಯಕರಂತೆ ಕಾಣಲು ಪ್ರಾರಂಭಿಸಿತು. ಕ್ರಿಕೆಟ್ ಪ್ರಿಯರು ಹುಚ್ಚರಂತೆ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದವರು ಕ್ರಿಕೆಟ್ ಬಗ್ಗೆ ತಾತ್ಸಾರ ಮನೋಭಾವನೆ ತಾಳಲು ಪ್ರಾರಂಭಿಸಿದರು. ಇನ್ನೇನೂ ಮೋಸದಾಟ ಮರೆತು ಕ್ರಿಕೆಟನ್ನು ಆಸ್ವಾದಿಸಬೇಕು ಎಂದುಕೊಳ್ಳುತ್ತಿದ್ದ ಹಾಗೆಯೇ ಪದೇಪದೇ ಇಂತಹ ಪ್ರಕರಣಗಳು ಆಗಾಗ್ಗೆ ಕೇಳಿಬರುತ್ತಲೇ ಇದ್ದವು. ಅವು ಕೇವಲ ಅಂತರರಾಷ್ಟ್ರೀಯ ಮಟ್ಟಕ್ಕೆ ಮಾತ್ರ ಸೀಮಿತಕೊಳ್ಳದೇ ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್) ನಂತಹ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲೂ ಈ ಪೆಡಂಭೂತ ಕಾಡಲು ಶುರು ಮಾಡಿತು. ಆದರೂ ಐಪಿಎಲ್ ಎಡಬಿಡದೇ ಸಾಗಿಕೊಂಡು ಬಂದಿದೆ. ಅದರ ಉದ್ದೇಶ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಕೊಡುವುದೇ ಆಗಿದ್ದರೂ ಹಣದಾಹ ಮೂಲೋದ್ದೇಶಕ್ಕೆ ಧಕ್ಕೆ ಬರುವ ಹಾಗೆ ಮಾಡುತ್ತಿದೆ.

ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಐಪಿಎಲ್, ಆಟಗಾರರಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದುಕೊಟ್ಟರೆ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ರಾಷ್ಟ್ರ, ರಾಜ್ಯಮಟ್ಟದಲ್ಲಿ ಹೆಸರು ತಂದುಕೊಡುವ ಪಂದ್ಯಾವಳಿಯಾಗಿದೆ. ಸಾಮಾನ್ಯವಾಗಿ ಕೆಎಸ್‌ಸಿಎ ಮೊದಲ ಡಿವಿಶನ್‍ನಲ್ಲಿ ಆಡುವ ಆಟಗಾರರು ಮತ್ತು ಕೆಲವೇ ಕೆಲವು ಎರಡನೇ ಡಿವಿಶನ್ ಲ್ರಿಕೆಟ್ ಲೀಗ್ ಆಡುವ ಆಟಗಾರರು ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ. ಇದು ಅವರಿಗೆ ಕ್ರಿಕೆಟ್ ಜಗತ್ತಿನಲ್ಲಿ ಬೆಳೆಯಲು ಕೆಎಸ್‍ಸಿಎ ಒದಗಿಸಿರುವ ಸುವರ್ಣಾವಕಾಶವಾಗಿದೆ. ಅನೇಕ ಕನಸುಗಳನ್ನು ಹೊತ್ತು ಬರುವ ಅದೆಷ್ಟೋ ಆಟಗಾರರ ಭವಿಷ್ಯಕ್ಕೆ ಇದು ದಾರಿದೀಪವಾಗಿದೆ. ಅಷ್ಟೇ ಅಲ್ಲದೇ ಎಲ್ಲಾ ಆಟಗಾರರು ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಹಂಬಲಕ್ಕೆ ಆಸರೆಯಾಗಿ ಇದು ನೇರ ಪ್ರಸಾರವನ್ನು ಕೂಡ ಕಾಣುತ್ತದೆ. ಹಾಗೂ ಒಂದಷ್ಟು ಹಣವನ್ನು ತಂದುಕೊಡುತ್ತದೆ. ಈ ಕಾರಣಕ್ಕಾಗಿಯೇ ಅನೇಕ ಯುವ ಆಟಗಾರರ ಗಮನ ಕೆಪಿಎಲ್ ಸೆಳೆಯಲು ಕಾರಣವಾಗಿದೆ.

ಹೀಗೆ ಕನಸು ಕಂಡು ಬರುವ ಆಟಗಾರರು ಅವಕಾಶಗಳನ್ನು ಪಡೆದುಕೊಂಡು ಯಾರದೋ ಹಣದಾಹಕ್ಕೆ ಬಲಿಯಾಗಿ ಅತಿ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬಹುದೆಂಬ ಭ್ರಮೆಯಲ್ಲಿ ಇಂತಹ ಮೋಸದಾಟದ ಬಲೆಗೆ ಬೀಳುತ್ತಿರುವುದು ಕ್ರಿಕೆಟ್ ಜಗತ್ತಿನ ಕಳಂಕವಾಗಿದೆ. 2019-20ನೇ ಸಾಲಿನ ಕೆಪಿಎಲ್ ಕ್ರಿಕೆಟ್ ಟೂರ್ನಿ ಬಹಳ ಸಾಂಗವಾಗಿ ನೆರವೇರಿತು ಎಂದು ಕೆಎಸ್‍ಸಿಎ ನಿಟ್ಟುಸಿರು ಬಿಡುತ್ತಿರಬೇಕಾದರೆಯೇ ಮೋಸದಾಟದ ಸುದ್ದಿ ಹೊರಬಂದಿದೆ.

ಕ್ರಿಕೆಟ್ ಮೋಸದಾಟದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಾಕ್ ಮತ್ತು ಡ್ರಮ್ಮರ್ ಭವೇಶ್ ಬಾಫ್ನಾ ಇದರಲ್ಲಿ ಭಾಗಿಯಾಗಿದ್ದಾರೆಂಬ ಸ್ಪೋಟಕ ಮಾಹಿತಿ ಪೋಲಿಸ್ ತನಿಖೆಯಿಂದ ಗೊತ್ತಾಗಿ ಅವರನ್ನು ಬಂಧಿಸಲಾಗಿದೆ. ಅವರನ್ನು ತೀವ್ರವಾದ ವಿಚಾರಣೆಗೆ ಒಳಪಡಿಸಲಾಗಿ ಆರೋಪಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬುಕ್ಕಿಗಳ ಸಂಪರ್ಕ ಹೊಂದಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ. ಇದು ಕೇವಲ ಇಲ್ಲಿ ಮಾತ್ರವಿದೆಯೆಂದು ಅರ್ಥವಲ್ಲ. ಇಂತಹ ಅನೇಕ ಮಂದಿ ಮೋಸದಾಟದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ನ್ಯಾಯಯುತವಾದ ತನಿಖೆ ನಡೆಸಿದರೆ ಸಿಕ್ಕಿಬೀಳುತ್ತಾರೆ.

ಮಧ್ಯದಲ್ಲಿರುವವರು ಅಲಿ ಅಶ್ಫಾಕ್

ಕೆಎಸ್‌ಸಿಎ ಇದರ ಆಳ, ಅಗಲ, ಮತ್ತು ಇದರ ಮೂಲವನ್ನು ಅದರ ಪ್ರಗತಿಗೆ ಹುಡುಕಲೇ ಬೇಕಾಗಿದೆ. ಇಲ್ಲದಿದ್ದರೆ ಅದು ಪಡೆದುಕೊಂಡಿರುವ ಹೆಸರನ್ನು ಮಣ್ಣು ಪಾಲು ಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ನಾನು 1993ರಿಂದ ಒಬ್ಬ ಕ್ರಿಕೆಟ್ ಕ್ಲಬ್‍ನ ಕೆಎಸ್‍ಸಿಎ ಲೀಗ್ ಪಂದ್ಯಾವಳಿಗಳ ಆಟಗಾರನಾಗಿ ಕ್ರಿಕೆಟನ್ನು ತುಂಬ ಹತ್ತಿರದಿಂದ ಬಲ್ಲವನಾಗಿ ಕ್ರಿಕೆಟ್ ಅತ್ಯಂತ ಪ್ರೀತಿಯಿಂದ, ನಿಷ್ಠೆಯಿಂದ ಹೇಗೆ ಆಡಬಹುದು ಎಂಬುದನ್ನು ಬಲ್ಲೆ. ಯಾವುದೇ ಹಣದಾಹಕ್ಕೆ ಬಲಿಯಾಗದೇ ಆಟಕ್ಕೆ ಗೌರವ ಕೊಟ್ಟು ನಿಷ್ಠೆಯಿಂದ ಆಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಯುವ ಆಟಗಾರರು ಇತ್ತ ಕಡೆ ಗಮನಹರಿಸಿ, ತಾತ್ಕಾಲಿಕವಾದ ಇಷ್ಟಗಳನ್ನು ಪೂರೈಸುವ ಆಮಿಷಗಳಿಗೆ ಬಲಿಯಾಗದೇ ಭವಿಷ್ಯವನ್ನು ರೂಪಿಸುವ ಆಟದ ಕಡೆ ಮನಸ್ಸನ್ನು ನೆಡಬೇಕಾಗುತ್ತದೆ. ಹಾಗೆಯೇ ಅಧಿಕಾರದ ಚುಕ್ಕಾಣಿ ಹಿಡಿಯುವವರು ಕೆಎಸ್‌ಸಿಎ ಗೆ ಇರುವ ಮಾನ್ಯತೆ ಮತ್ತು ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾಗುತ್ತದೆ ಆಗ ಮಾತ್ರ ಕ್ರಿಕೆಟ್ ಪ್ರೀಮಿಗಳು ಕ್ರಿಕೆಟ್ ಆಟಗಾರರ ಬಗ್ಗೆ ಅಭಿಮಾನ ಮತ್ತು ವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...