Homeಮುಖಪುಟಆನ್‌ಲೈನ್‌ ಕ್ಲಾಸ್‌ಗಳ ಭಾರ ಕಡಿಮೆ ಮಾಡುವಂತೆ ಪ್ರಧಾನಿಗೆ ಪುಟ್ಟ ಹುಡುಗಿಯ ಮನವಿ

ಆನ್‌ಲೈನ್‌ ಕ್ಲಾಸ್‌ಗಳ ಭಾರ ಕಡಿಮೆ ಮಾಡುವಂತೆ ಪ್ರಧಾನಿಗೆ ಪುಟ್ಟ ಹುಡುಗಿಯ ಮನವಿ

ಜಮ್ಮು ಕಾಶ್ಮೀರದ 6 ವರ್ಷದ ಪುಟ್ಟ ಹುಡುಗಿಯ ವಿಡಿಯೋ ಮೇ 31 ರಂದು ವೈರಲ್‌ ಆಗಿದ್ದು, ಅನೇಕರು ಶಿಕ್ಷಣ ವ್ಯವಸ್ಥೆಯ ಕುರಿತಾಗಿ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ.

- Advertisement -
- Advertisement -

6 ವರ್ಷದ ಪುಟ್ಟ ಹುಡುಗಿಯೊಬ್ಬಳು ವಿಡಿಯೋ ಮೂಲಕ ಪ್ರಧಾನಿ ಮೋದಿಯವರಲ್ಲಿ ಜೂಮ್‌ ಆನ್‌ಲೈನ್ ಕ್ಲಾಸ್‌ ಮತ್ತು ಹೋಮ್‌ ವರ್ಕ್‌ ಭಾರವನ್ನು ಕಡಿಮೆ ಮಾಡುವಂತೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಜಮ್ಮು ಕಾಶ್ಮೀರದ 6 ವರ್ಷದ ಪುಟ್ಟ ಹುಡುಗಿಯ ವಿಡಿಯೋ ಮೇ 31 ರಂದು ವೈರಲ್‌ ಆಗಿದ್ದು, ಅನೇಕರು ಶಿಕ್ಷಣ ವ್ಯವಸ್ಥೆಯ ಕುರಿತಾಗಿ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ.

ವಿಡಿಯೋದಲ್ಲಿ ಪುಟ್ಟ ಹುಡುಗಿ ತನ್ನ ಮುದ್ದು ಭಾಷೆಯಲ್ಲಿ “ಮೋದಿ ಸಾಬ್‌ ಚಿಕ್ಕ ಮಕ್ಕಳಿಗೆ ಯಾಕಿಷ್ಟು ಕೆಲಸವನ್ನು ನೀಡಲಾಗುತ್ತದೆ. ಬೆಳಗ್ಗೆ ಆರು ಗಂಟೆಗೆ ಕ್ಲಾಸ್‌, ಏಳು ಗಂಟೆಗೆ ಕ್ಲಾಸ್‌ ಮತ್ತೆ ಮಧ್ಯಾಹ್ನ 2 ಗಂಟೆಯ ವರೆಗೆ ಜೂಮ್‌ ಕ್ಲಾಸ್. ದಿನವಿಡಿ ಹೋಮ್‌ ವರ್ಕ್‌. ಚಿಕ್ಕ ಮಕ್ಕಳಿಗೆ ಯಾಕಿಷ್ಟು ಕೆಲಸ ಮೋದಿ ಸಾಬ್‌? ಎಂದು ಬಾಲಕಿ ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಅನೇಕರು ಆನಲೈನ್‌ ಶಿಕ್ಷಣ ಪದ್ಧತಿಯಿಂದ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದು, ಸಮರ್ಪಕವಾದ ಡಿಜಿಟಲ್‌ ಶಿಕ್ಷಣ ನೀತಿ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ವರ್ಷದಿಂದ ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ. ಒಂದು ವರ್ಷದ ಅವಧಿಯಲ್ಲಿ 6 ವರ್ಷದ ಎಳೆಯ ಮಕ್ಕಳಿಗೂ ಡಿಜಿಟಲ್‌ ಮೂಲಕವೇ ಪಾಠ ಮಾಡಲಾಗುತ್ತಿದೆ. ಆಡುತ್ತ ಕುಣಿಯುತ್ತ ಬೆಳೆಯ ಬೇಕಾದ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣದ ಭಾರ ಹೆಗಲಮೇಲೆ ಬಿದ್ದಿದೆ. ಪೋಷಕರೂ ಅನೇಕ ತಿಂಗಳುಗಳಿಂದ ಮನೆಯಲ್ಲೇ ಇರುವುದರಿಂದ ಮಕ್ಕಳ ಚೇಷ್ಟೆ, ಕಿತಾಪತಿಗಳಿಂದ ತಪ್ಪಿಸಿಕೊಳ್ಳಲು ಹೆಚ್ಚು ಹೆಚ್ಚು ಆನಲೈನ್‌ ತರಗತಿಗಳನ್ನು ಅಟೆಂಡ್‌ ಮಾಡುವಂತೆ ತಮ್ಮ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ.

6 ವರ್ಷದ ಮಕ್ಕಳಿಗೂ ಹೋಮ್‌ ವರ್ಕ್‌ ನೀಡಲಾಗುತ್ತಿದೆ. ಇಂಗ್ಲೀಷ್‌, ಉರ್ದು, ಮ್ಯಾಥ್ಸ್‌, ಕಂಪ್ಯೂಟರ್‌, ಇವಿಎಸ್‌ ಬೆಳಗಿನಿಂದ ಸಂಜೆ ವರೆಗೆ ಝೂಮ್‌ ಕ್ಲಾಸ್. ಆಮೇಲೆ ಹೋಮ್‌ ವರ್ಕ್‌ ಚಿಕ್ಕ ಮಕ್ಕಳಿಗೆ ಯಾಕಿಷ್ಟು ಕೆಲಸ? ಎಂದು ಪ್ರಧಾನಿಯವರಲ್ಲಿ ಕೇಳಿದ್ದಾಳೆ.

ಪುಟ್ಟ ಬಾಲಕಿಯ ವೈರಲ್‌ ವಿಡಿಯೋ ಜಮ್ಮು ಕಾಶ್ಮೀರದ ಮನೋಜ್‌ ಸಿನ್ಹಾ ಅವರ ಗಮನಕ್ಕೂ ಬಂದಿದ್ದು 48 ಗಂಟೆಗಳಲ್ಲಿ ಸಮಗ್ರ ಡಿಜಿಟ್‌ ಶಿಕ್ಷಣ ನೀತಿಯೊಂದನ್ನು ರೂಪಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಆದೇಶಿಸಿದ್ದಾರೆ. ಮಕ್ಕಳ ಬಾಲ್ಯ ದೇವರು ಕೊಟ್ಟ ಕೊಡುಗೆ. ಅವರ ದಿನಗಳು ಆದಷ್ಟು ಲವಲವಿಕೆಯಿಂದ ಕೂಡಿರಬೇಕು. ಆನ್‌ಲೈನ್‌ ತರಗತಿಗಳು ಮಕ್ಕಳಿಗೆ ಹೊರೆಯಾಗಬಾರದು ಎಂದು ಮನೋಜ್‌ ಸಿನ್ಹಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಪುಟ್ಟ ಬಾಲಕಿಯ ಈ ವಿಡಿಯೋ ಅನೇಕ ದೊಡ್ಡ ಸಮಸ್ಯೆಗಳನ್ನು ತೆರಿದಿಟ್ಟಿದೆ. ಆನ್‌ಲೈನ್‌ ಶಿಕ್ಷಣ ಪದ್ಧತಿ ಎಳೆಯ ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಸರ್ಕಾರಗಳು ಅಧ್ಯಯನ ನಡೆಸಿದೆಯೇ? ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಡಿಜಿಟಲ್‌ ಶಿಕ್ಷಣ ನೀತಿಯ ಪರಿಣಾಮವೇನು? ದೇಶದಲ್ಲಿ ಸಮರ್ಪಕವಾದ ಡಿಜಿಟಲ್‌ ಶಿಕ್ಷಣ ನೀತಿ ಯಾಕಿಲ್ಲ? ಶಾಲೆಗಳನ್ನು ತೆರೆಯುವುದು ಯಾವಾಗ ಸಾಧ್ಯವಾಗಲಿದೆ? ಆನ್‌ಲೈನ್‌ ತರಗತಿಗಳು ಹೀಗೆ ಎಷ್ಟುಕಾಲ ಮುಂದುವರೆಯಲಿದೆ? ಎಂಬ ಪ್ರಶ್ನೆಗಳು ಸದ್ಯಕ್ಕೆ ದೇಶದ ಮುಂದೆ ಇದೆ.

ಮನೋವೈದ್ಯರು ಮತ್ತು ಮಕ್ಕಳ ತಜ್ಞರು ಹೇಳುವ ಪ್ರಕಾರ ಮನೆಯ ನಾಲ್ಕು ಗೋಡೆಗಳೊಳಗಿನ ವಾತಾವರಣ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಲ್ಲ. ಆದಷ್ಟು ಮಕ್ಕಳು ಗಾಳಿ ಬೆಳಕಿನ ಸ್ವಚ್ಛಂಧ ಪರಿಸರದಲ್ಲಿ ಬೆಳೆಯಬೇಕು. ಎಳೆಯ ವಯಸ್ಸಿನಲ್ಲಿ ಮಕ್ಕಳು ಡಿಜಿಟಲ್‌ ಜಗತ್ತಿಗೆ ಅಡಿಕ್ಟ್‌ ಆಗುವುದರಿಂದ ಇನ್ನೇನು ಬೆಳವಣಿಗೆಯ ಹಂತದಲ್ಲಿರುವ ದೃಷ್ಟಿ, ಆಲಿಸುವ ಶಕ್ತಿಯ ಮೇಲೆ ಅಗಾಧ ಪರಿಣಾಮ ಬೀರಲಿದೆ. ಆನ್‌ಲೈನ್‌ ತರಗತಿಗಳು ಮತ್ತು ಡಿಜಿಟಲ್‌ ಶಿಕ್ಷಣ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರ ಅಭಿಪ್ರಾಯ, ಮನೋಶಾಸ್ತ್ರಜ್ಞರ ಎಚ್ಚರಿಕೆಯ ನಡುವೆಯೂ ಶಾಲಾ ಆಡಳಿತ ಮಂಡಳಿಗಳು ಎಳೆಯ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಿಗೂ ಸಮಾನ ಶಿಕ್ಷಣ ಭಾರವನ್ನು ಹೊರಿಸುತ್ತಿರುವುದು ದೇಶಾದ್ಯಂತ ಕಂಡುಬಂದಿದೆ. ಶಾಲಾ ಶಿಕ್ಷಣ ಇಲಾಖೆಯು ಈ ಸಂಬಂಧ ಯಾವುದೇ ಸಮಗ್ರ ನೀತಿಯನ್ನು ರೂಪಿಸಲು ಮುಂದಾಗಿಲ್ಲ.

ಒಟ್ಟಿನಲ್ಲಿ ಆನ್‌ಲೈನ್‌ ತರಗತಿಗಳೆಂಬ ಅಜ್ಞಾತ ಪಂಜರಗಳಿಂದ ಮಕ್ಕಳು ಹೊರಬಂದು ಸ್ವಚ್ಛಂಧ ಆಕಾಶದಡಿಯಲ್ಲಿ ತಮ್ಮ ಬಾಲ್ಯಗಳನ್ನು ಕಳೆಯುವ ದಿನಗಳು ಸದ್ಯದಲ್ಲಿ ಬರುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಸರ್ಕಾರಗಳು ಮಕ್ಕಳಿಗೆ ಹೊರೆಯಾಗದಂತ ಡಿಜಿಟಲ್‌ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಬೇಕೆಂಬ ಒತ್ತಡ ದೇಶದ ವಿವಿಧ ಭಾಗಗಳಿಂದ ಕೇಳಿಬರುತ್ತಿದೆ.


ಇದನ್ನೂ ಓದಿ: ಆನ್ ಲೈನ್ ತರಗತಿ ಕಡ್ಡಾಯಗೊಳಿಸಿದ ಯುಜಿಸಿಗೆ ಕೇಳಬೇಕಾದ ಪ್ರಶ್ನೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...