PC: TheNewsMinute

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ಶಾಸಕರು ಮತ್ತು ಸಂಸದರು ಪದೇ ಪದೇ ಕೋವಿಡ್ ಲಸಿಕೆ ವಿವಾದದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಈಗ ಇದೆ ಸಾಲಿಗೆ ಬೆಂಗಳೂರಿನ ಸಿ.ವಿ.ರಾಮನ್ ನಗರ ಶಾಸಕ ಎಸ್.ರಘು, ಸರ್ಕಾರಿ ಲಸಿಕೆಯನ್ನು ಶಾಸಕರು ನೀಡುತ್ತಿರುವ ಉಚಿತ ಲಸಿಕೆ ಎಂದು ಸ್ವಂತ ಸ್ಥಳದಲ್ಲಿ ಲಸಿಕಾ ಅಭಿಯಾನ ನಡೆಸಿದ್ದಾರೆ.

ಬೆಂಗಳೂರಿನ ಭುವನೇಶ್ವರಿ ನಗರದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ (PHC) ಮೇ 31 ರಂದು ನಡೆಯಬೇಕಿದ್ದ ವ್ಯಾಕ್ಸಿನೇಷನ್ ಡ್ರೈವ್ ಶಾಸಕರ ಆದೇಶದಂತೆ ರದ್ದುಗೊಳಿಸಲಾಗಿದೆ. ಸುಮಾರು 300 ಜನರಿಗೆ ಮುಂಜಾನೆ ಟೋಕನ್‌ಗಳನ್ನು ನೀಡಲಾಗಿತ್ತು. ಆರೋಗ್ಯ ಕೇಂದ್ರದಲ್ಲಿ ನಡೆಯಬೇಕಿದ್ದ ಲಸಿಕಾ ಅಭಿಯಾನವನ್ನು, ಬಿಜೆಪಿ ಶಾಸಕ ಎಸ್.ರಘು ಅವರ ಓಂ ಶಕ್ತಿ ಕಲ್ಯಾಣ ಮಂಟಪದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ನಡೆಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಶಾಸಕರು ಉಚಿತ ವ್ಯಾಕ್ಸಿನೇಷನ್ ಡ್ರೈವ್ ಮಾಡುತ್ತಿದ್ದಾರೆ ಎಂದು ಪ್ರಚಾರ ಪಡಿಸುವ ಬ್ಯಾನರ್‌ನೊಂದಿಗೆ ಲಸಿಕೆ ನೀಡಲಾಗಿದೆ. ಜೊತೆಗೆ ಬಿಜೆಪಿಯ ಕಾರ್ಯಕರ್ತರು, ಶಾಸಕರ ಸ್ನೇಹಿತರು ಮತ್ತು ಕುಟುಂಬಗಳಿಗೆ ಮಾತ್ರ ಲಸಿಕೆ ನೀಡಿದರು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಘಟನೆ ಬಗ್ಗೆ ಶಾಸಕ ರಘು, ಬಿಬಿಎಂಪಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಇದನ್ನೂ ಓದಿ: ಕೊರೊನಾಗೆ ಔಷಧಿ ನೀಡಲು ನಾಟಿ ವೈದ್ಯ ನೆಲ್ಲೂರು ಆನಂದಯ್ಯಗೆ ಆಂಧ್ರ ಸರ್ಕಾರದ ಒಪ್ಪಿಗೆ

ಶನಿವಾರವಷ್ಟೇ ಶಾಸಕ ರವಿ ಸುಬ್ರಮಣ್ಯ ಇದೇ ರೀತಿಯ ವಿವಾದಕ್ಕೆ ಸಿಲುಕಿದ್ದರು, ಅಲ್ಲಿ ಅವರು ಲಸಿಕೆಗಳನ್ನು ನಿರ್ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ.

ತನ್ನ 72 ಮತ್ತು 65 ವರ್ಷದ ಪೋಷಕರಿಗೆ ಲಸಿಕೆ ಟೋಕನ್ ಸಂಗ್ರಹಿಸಲು ಬೆಳಿಗ್ಗೆ 7 ಗಂಟೆಗೆ ಆರೋಗ್ಯ ಕೇಂದ್ರಕ್ಕೆ ತೇರಳಿದ್ದ ಸ್ಥಳೀಯ ನಿವಾಸಿ ಮಂಜು ಹೇಳೂವಂತೆ, ’ಟೋಕನ್ ಪ್ರಕಾರ ಬೆಳಿಗ್ಗೆ 9: 45 ಕ್ಕೆ ಪೋಷಕರನ್ನು ಕರೆತರಲು ತಿಳಿಸಲಾಗಿತ್ತು. ನಾವು ನಿಗದಿತ ಸಮಯಕ್ಕಿಂತ ಮುಂಚೆಯೇ ಅಲ್ಲಿಗೆ ತಲುಪಿದ್ದೇವು.  ಆದರೆ ನಾವು ಅಲ್ಲಿಗೆ ಹೋದಾಗ ಬೆಳಿಗ್ಗೆ 10: 15 ಕ್ಕೆ ಇಲ್ಲಿ ಲಸಿಕೆ ನೀಡುವುದಿಲ್ಲ ಆದರೆ ಎಲ್ಲರೂ ಕಲ್ಯಾಣ ಮಂಟಪಕ್ಕೆ ಹೋಗಬೇಕು ಎಂದು ತಿಳಿಸಿದರು’ ಎಂದರು.

’ಕಲ್ಯಾಣ ಮಂಟಪದ ಬಳಿ ನೂರಾರು ಜನರು ದೈಹಿಕ ಅಂತರ ಕಾಯ್ದುಕೊಳ್ಳದೆ ನಿಂತಿದ್ದರು. ನಾನು ನನ್ನ ತಂದೆ-ತಾಯಿಯನ್ನು ಇಷ್ಟು ದಿನ ಹೊರಗೆ ಕಳುಹಿಸಿಲ್ಲ. ಇಲ್ಲಿನ ಜನಸಂದಣಿ ನೋಡಿ ಭಯವಾಯಿತು. ಅವರಿಗಾಗಿ ನಾನು 45 ನಿಮಿಷಗಳ ಕಾಲ ಸರದಿಯಲ್ಲಿ ಕಾಯುತ್ತಿದ್ದೆ. ಆದರೆ, ಅಲ್ಲೂ ಕೂಡ ಶಾಸಕರು ಬಂದು ಲಸಿಕಾ ಅಭಿಯಾನ ಉದ್ಘಾಟಿಸಬೇಕು ಎಂದು ತಿಳಿಸಿದರು. ಇವು ಸರ್ಕಾರದ ಲಸಿಕೆಗಳು, ಇವುಗಳನ್ನು ಅವರು ಹೇಗೆ ತಮ್ಮ ಜನರಿಗೆ ಮಾತ್ರ ನೀಡಲು ಸಾಧ್ಯ…? ನನ್ನ ಹೆತ್ತವರಿಗೆ ಯಾವಾಗ ಲಸಿಕೆ ದೊರೆಯುತ್ತದೋ ನನಗೆ ತಿಳಿದಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬ ನಿವಾಸಿ ಜಗದೀಶ್, “ಶಾಸಕರು ವ್ಯಾಕ್ಸಿನೇಷನ್ ಕೇಂದ್ರವನ್ನು ತಮ್ಮ ಸ್ವಂತ ಆಸ್ತಿಗೆ ಸ್ಥಳಾಂತರಿಸಿದ್ದಾರೆ. ಆದರೆ, ನಿಯಮಗಳ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬೇಕು. ಆರೋಗ್ಯ ಕೇಂದ್ರಗಳಿಗೆ ನೀಡಬೇಕಾದ ಸರ್ಕಾರಿ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದ್ದೇನೆ ಎಂದು ಹೇಳಿಕೊಂಡು ಬಿಜೆಪಿ ಶಾಸಕ ತಮ್ಮ ಫೋಟೋದೊಂದಿಗೆ ಬ್ಯಾನರ್ ಹಾಕಿದ್ದಾರೆ. ಜೊತೆಗೆ ಅವರು ತಮ್ಮ ಪಕ್ಷದ ಜನರಿಗೆ ಲಸಿಕೆಗಳನ್ನು ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.


 

ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ: ಡಿಸಿ ರೋಹಿಣಿ ಸಿಂಧೂರಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here