Homeಮುಖಪುಟಲಿವ್-ಇನ್ ಸಂಬಂಧ ಅಪಾಯಕಾರಿ ಕಾಯಿಲೆ, ಇದರ ವಿರುದ್ಧ ಕಾನೂನು ತನ್ನಿ: ಬಿಜೆಪಿ ಸಂಸದ ಆಗ್ರಹ

ಲಿವ್-ಇನ್ ಸಂಬಂಧ ಅಪಾಯಕಾರಿ ಕಾಯಿಲೆ, ಇದರ ವಿರುದ್ಧ ಕಾನೂನು ತನ್ನಿ: ಬಿಜೆಪಿ ಸಂಸದ ಆಗ್ರಹ

- Advertisement -
- Advertisement -

ಲಿವ್-ಇನ್ ಸಂಬಂಧಗಳು ‘ಅಪಾಯಕಾರಿ ಕಾಯಿಲೆ’ಯಾಗಿದೆ. ಇದರ ವಿರುದ್ಧ ಕಾನೂನು ರೂಪಿಸಬೇಕು. ಸಮಾಜದಿಂದ ಇದನ್ನು ನಿರ್ಮೂಲನೆ ಮಾಡಬೇಕು ಎಂದು ಹರಿಯಾಣದ ಬಿಜೆಪಿ ಸಂಸದ ಧರಂಬೀರ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗುರುವಾರ ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಧರಂಬೀರ್ ಸಿಂಗ್, “ಪ್ರೇಮ ವಿವಾಹಗಳಲ್ಲಿ ವಿಚ್ಛೇದನದ ಪ್ರಮಾಣ ಹೆಚ್ಚಾಗುತ್ತಿದ್ದು, ವಧು-ವರರ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.

“ನಾನು ಅತ್ಯಂತ ಗಂಭೀರವಾದ ವಿಷಯವನ್ನು ಸರ್ಕಾರ ಮತ್ತು ಸಂಸತ್ತಿನ ಗಮನಕ್ಕೆ ತರಲು ಬಯಸುತ್ತೇನೆ. ಭಾರತೀಯ ಸಂಸ್ಕೃತಿಯು ‘ವಸುಧೈವ ಕುಟುಂಬ’ಕಂ (ಜಗತ್ತು ಒಂದು ಕುಟುಂಬ) ಮತ್ತು ಸಹೋದರತ್ವಕ್ಕೆ ಹೆಸರುವಾಸಿಯಾಗಿದೆ. ನಮ್ಮ ಸಾಮಾಜಿಕ ರಚನೆಯು ಪ್ರಪಂಚದ ಇತರರಿಗಿಂತ ಭಿನ್ನವಾಗಿದೆ. ನಮ್ಮ ವೈವಿಧ್ಯತೆಯಲ್ಲಿ ಏಕತೆಗೆ ಇಡೀ ಜಗತ್ತು ಪ್ರಭಾವಿತವಾಗಿದೆ ಎಂದು” ಭಿವಾನಿ-ಮಹೇಂದ್ರಗಢದ ಸಂಸದ ಧರಂಬೀರ್ ಸಿಂಗ್ ಹೇಳಿದ್ದಾರೆ.

“ಭಾರತವು ಅರೇಂಜ್ಡ್ ಮ್ಯಾರೇಜ್‌ಗಳ ಸುದೀರ್ಘ ಸಂಪ್ರದಾಯವನ್ನು ಹೊಂದಿದೆ. ಸಮಾಜದ ದೊಡ್ಡ ವರ್ಗವು ಇಂದಿಗೂ ಪೋಷಕರು ಅಥವಾ ಸಂಬಂಧಿಕರು ನಿಶ್ವಯಿಸುವ ಮದುವೆಗಳಿಗೆ ಆದ್ಯತೆ ನೀಡುತ್ತಿವೆ. ಇದು ವಧು ಮತ್ತು ವರನ ಒಪ್ಪಿಗೆಯನ್ನು ಹೊಂದಿದೆ. ವಿವಾಹಗಳು ಸಾಮಾಜಿಕ, ವೈಯಕ್ತಿಕ ಮೌಲ್ಯಗಳು, ಇಷ್ಟಗಳು ಮತ್ತು ಕೌಟುಂಬಿಕ ಹಿನ್ನೆಲೆಗಳಂತಹ ಹಲವಾರು ಸಾಮಾನ್ಯ ಅಂಶಗಳ ಹೊಂದಾಣಿಕೆಯನ್ನು ಆಧರಿಸಿವೆ” ಎಂದು ಧರಂಬೀರ್ ಸಿಂಗ್ ಹೇಳಿದ್ದಾರೆ.

“ಮದುವೆಯು ಏಳು ತಲೆಮಾರುಗಳವರೆಗೆ ಮುಂದುವರಿಯುವ ಪವಿತ್ರ ಸಂಬಂಧವೆಂದು ಪರಿಗಣಿಸಲಾಗಿದೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ವಿಚ್ಛೇದನದ ಪ್ರಮಾಣವು ಸುಮಾರು 40 ಪ್ರತಿಶತದಷ್ಟಿದೆ. ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ವಿಚ್ಛೇದನದ ದರ ತೀರಾ ಕಡಿಮೆ ಇರುತ್ತದೆ. ಆದರೆ, ಇತ್ತೀಚೆಗೆ ವಿಚ್ಛೇದನದ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರೇಮ ವಿವಾಹಗಳು” ಎಂದು ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಪ್ರೇಮ ವಿವಾಹಗಳಲ್ಲಿ ವಧು-ವರರ ತಾಯಿ ಮತ್ತು ತಂದೆಯ ಒಪ್ಪಿಗೆಯನ್ನು ಕಡ್ಡಾಯಗೊಳಿಸಬೇಕೆಂದು ನನ್ನ ಸಲಹೆಯಾಗಿದೆ. ಏಕೆಂದರೆ ದೇಶದ ಹೆಚ್ಚಿನ ಭಾಗಗಳಲ್ಲಿ ಒಂದೇ ‘ಗೋತ್ರ’ದಲ್ಲಿ ವಿವಾಹಗಳು ನಡೆಯುವುದಿಲ್ಲ. ಪ್ರೇಮ ವಿವಾಹಗಳ ಕಾರಣದಿಂದಾಗಿ ಹಳ್ಳಿಗಳಲ್ಲಿ ಸಾಕಷ್ಟು ಸಂಘರ್ಷಗಳಿಂದ ಹಲವಾರು ಕುಟುಂಬಗಳು ನಾಶವಾಗುತ್ತಿವೆ. ಆದ್ದರಿಂದ, ಎರಡೂ ಕುಟುಂಬಗಳ ಒಪ್ಪಿಗೆ ಮುಖ್ಯವಾಗಿದೆ. ಈಗ ಹೊಸ ಕಾಯಿಲೆ ಶುರುವಾಗಿದೆ. ಈ ಸಾಮಾಜಿಕ ಅನಿಷ್ಟವನ್ನು “ಲಿವ್-ಇನ್ ಸಂಬಂಧ” ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಇಬ್ಬರು ವ್ಯಕ್ತಿಗಳು, ಪುರುಷ ಅಥವಾ ಮಹಿಳೆ ವಿವಾಹವಾಗದೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಂತಹ ಸಂಬಂಧಗಳು ತುಂಬಾ ಸಾಮಾನ್ಯವಾಗಿದೆ. ನಮ್ಮ ಸಮಾಜದಲ್ಲಿ ಈ ರೋಗ ವೇಗವಾಗಿ ಹರಡುತ್ತಿದೆ. ಇದರ ಪರಿಣಾಮಗಳು ಭಯಾನಕವಾಗಿವೆ. ಇತ್ತೀಚೆಗೆ, ಶ್ರದ್ಧಾ ವಾಲ್ಕರ್ ಮತ್ತು ಅಫ್ತಾಬ್ ಪೂನಾವಾಲಾ ಪ್ರಕರಣವು ಬೆಳಕಿಗೆ ಬಂದಿತ್ತು. ಅವರಿಬ್ಬರು ಲೀವ್ ಇನ್‌ ನಲ್ಲಿ ಇದ್ದರು” ಎಂದು ಸಿಂಗ್ ಹೇಳಿದ್ದಾರೆ.

ಇದನ್ನು ಓದಿ : ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಟಿಎಂಸಿ ಸಂಸದೆಯರಿಂದ ಪ್ರತಿಭಟನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...