Homeಮುಖಪುಟಇಂದು ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ: ನಾಳೆ ಚಳಿಗಾಲದ ಅಧಿವೇಶನ; ಇಲ್ಲಿಯವರೆಗೆ ನಮಗೆ ಏನು...

ಇಂದು ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ: ನಾಳೆ ಚಳಿಗಾಲದ ಅಧಿವೇಶನ; ಇಲ್ಲಿಯವರೆಗೆ ನಮಗೆ ಏನು ತಿಳಿದಿದೆ?

- Advertisement -
- Advertisement -

ಮುಂಬೈ: ವಿಧಾನಸಭೆಯ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ಮಹಾರಾಷ್ಟ್ರದಲ್ಲಿ ಮಹಾಯುತಿ ಸರಕಾರದ  ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭವು ಇಂದು ( ಭಾನುವಾರ) ಸಂಜೆ ನಾಗ್ಪುರದಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ನವೆಂಬರ್ 23 ರಂದು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅದ್ಭುತ ವಿಜಯವನ್ನು ದಾಖಲಿಸಿದ ಮಹಾಯುತಿ ಮೈತ್ರಿಕೂಟದ ಪಾಲುದಾರರಾದ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ನಡುವಿನ ವಾರಗಳ ತೀವ್ರ ಚರ್ಚೆಯ ನಂತರ ಈ ಘೋಷಣೆ ಹೊರಬಿದ್ದಿದೆ.

ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದೊಳಗೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿದ್ದು, ಶಿವಸೇನೆ ಮತ್ತು ಬಿಜೆಪಿಯ ಶಾಸಕರು ಹೊಸ ಸಂಪುಟ ಮತ್ತು ಸಚಿವ ಸಂಪುಟದಲ್ಲಿ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸರ್ಕಾರದಲ್ಲಿ ಮೊದಲ ಸಚಿವ ಸಂಪುಟದ ವಿಸ್ತರಣೆಯು ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರೊಂದಿಗೆ ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಹಂಚಿಕೊಂಡು ಎರಡು ವಾರಗಳ ನಂತರ ನಡೆಯುತ್ತಿದೆ.

ವಿಸ್ತೃತ ಚರ್ಚೆಗಳು ಮತ್ತು ಹಿರಿಯ ನಾಯಕರ ನಡುವೆ ಹಲವಾರು ಸಭೆಗಳ ನಂತರ, ಪ್ರಮುಖ ಖಾತೆಗಳು ಮತ್ತು ಮೂರು ಸಮ್ಮಿಶ್ರ ಪಕ್ಷಗಳ ನಡುವೆ ಅಧಿಕಾರ ಹಂಚಿಕೆಯ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ಧಾರಕ್ಕೆ ಬರಲಾಗಿದೆ. ಹೊಸ ಸಚಿವರ ಸೇರ್ಪಡೆಗೆ ಹಾದಿಯನ್ನು ತೆರವುಗೊಳಿಸಲಾಗಿದೆ.

ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಬಿಜೆಪಿ 20-21 ಸಚಿವ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ, ನಂತರ ಶಿವಸೇನೆಗೆ 11-12 ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ 9-10 ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಆದರೆ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಲ್ಲೇ ತೀವ್ರ ಪೈಪೋಟಿ ಏರ್ಪಟ್ಟಿದೆ. ಶುಕ್ರವಾರ ರಾತ್ರಿ, ಪ್ರಮುಖ ಶಾಸಕರಾದ ಸಂಜಯ್ ಶಿರ್ಸಾತ್, ಯೋಗೇಶ್ ಕದಂ, ವಿಜಯ್ ಶಿವತಾರೆ, ಭರತ್ ಗೋಗವಾಲೆ ಮತ್ತು ಬಾಲಾಜಿ ಕಿಣಿಕರ್ ಶಿಂಧೆ ಅವರನ್ನು ಭೇಟಿಯಾಗಿ ತಮ್ಮ ವಾದವನ್ನು ಮಂಡಿಸಿದರು. ಇಬ್ಬರು ಮಾಜಿ ಮಂತ್ರಿಗಳಾದ ದೀಪಕ್ ಕೇಸರ್ಕರ್ ಮತ್ತು ತಾನಾಜಿ ಸಾವಂತ್ ಅವರು ಐದು ಗಂಟೆಗಳ ಕಾಲ ಕಾಯುತ್ತಿದ್ದರೂ ಶಿಂಧೆ ಭೇಟಿ ಮಾಡಲು ಸಾಧ್ಯವಾಗಿಲ್ಲ.

ಕಳಂಕಿತ ಅಥವಾ ವಿವಾದಾತ್ಮಕ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವುದಿಲ್ಲ ಎಂಬ ತನ್ನ ನಿಲುವಿನಲ್ಲಿ ಬಿಜೆಪಿ ದೃಢವಾಗಿದೆ ಮತ್ತು ಶಿವಸೇನೆಯಿಂದ ಕೇಸರ್ಕರ್, ಸಾವಂತ್, ಅಬ್ದುಲ್ ಸತ್ತಾರ್ ಮತ್ತು ಸಂಜಯ್ ರಾಥೋಡ್ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಕೇಸರ್ಕರ್ ಮತ್ತು ಸಾವಂತ್ ಅವರನ್ನು ಹೊರತುಪಡಿಸುವುದರಿಂದ ರಾಜಕೀಯವಾಗಿ ಶಿಂಧೆ ಅವರಿಗೆ ಹಾನಿಯಾಗುವ ಸಾಧ್ಯತೆಯಿಲ್ಲದಿದ್ದರೂ, ವಿದರ್ಭದ ಕೆಲವು ಭಾಗಗಳಲ್ಲಿ ಗಮನಾರ್ಹ ಅಸ್ತಿತ್ವವನ್ನು ಹೊಂದಿರುವ ಬಂಜಾರ ಸಮುದಾಯದಿಂದ ಬಂದಿರುವ ಸಂಜಯ್ ರಾಥೋಡ್ ಅವರ ಸೇರ್ಪಡೆ ಶಿಂಧೆ ಅವರ ಸಾಮಾಜಿಕ-ರಾಜಕೀಯ ಲೆಕ್ಕಾಚಾರಗಳಿಗೆ ನಿರ್ಣಾಯಕವಾಗಿದೆ.

ಪುಣೆಯಲ್ಲಿ ಯುವತಿಯ ಆತ್ಮಹತ್ಯೆಗೆ ಸಂಬಂಧಿಸಿ ರಾಥೋಡ್  ಅವರ ಹೆಸರು ಕೇಳಿ ಬಂದಿರುವುದರಿಂದ  ಅವರನ್ನು ಸೇನೆಯ ಸಚಿವ ಸ್ಥಾನದ ಪಟ್ಟಿಯಿಂದ ಹೊರಗಿಡಬೇಕು ಎಂದು ಪಡ್ನವೀಸ್ ಸೂಚಿಸಿದ್ದಾರೆ ಎನ್ನಲಾಗಿದೆ.

ಅಬ್ದುಲ್ ಸತ್ತಾರ್ ವಿರುದ್ಧ ಸರ್ವಾಧಿಕಾರಿ ವರ್ತನೆಯ ದೂರುಗಳಿವೆ ಎಂದು ಮೂಲಗಳು ಸೂಚಿಸುತ್ತವೆ ಮತ್ತು ಆರೋಗ್ಯ ಸಚಿವರಾಗಿ ತಾನಾಜಿ ಸಾವಂತ್ ಅವರು ವಿವಿಧ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಆಗಾಗ್ಗೆ ದುರ್ನಡತೆ ತೋರಿದ್ದರು ಎನ್ನಲಾಗಿದೆ.

30-32 ಸಚಿವರು ಭಾನುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ. ಇದರಲ್ಲಿ 20 ಬಿಜೆಪಿ ನಾಯಕರು ಮತ್ತು ಉಳಿದವರು ಶಿವಸೇನೆಯವರು ಸೇರಿದ್ದಾರೆ ಎಂದು ವರದಿಗಳು ಹೇಳುತ್ತವೆ. ಮಹಾರಾಷ್ಟ್ರದ ಸಚಿವ ಸಂಪುಟವು ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 43 ಸದಸ್ಯರನ್ನು ಹೊಂದಬಹುದಾಗಿದೆ.

ನವೆಂಬರ್ 20ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿಯು ರಾಜ್ಯದ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತು. ಇದರಲ್ಲಿ ಬಿಜೆಪಿ 132 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಶಿಂಧೆ ಅವರ ಶಿವಸೇನೆ 57 ಮತ್ತು ಪವಾರ್ ಅವರ ಎನ್‌ಸಿಪಿ 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದವು.

ಸರ್ಕಾರ ರಚನೆಯು ಈಗಾಗಲೇ ಹಲವು ತಿರುವುಗಳನ್ನು ಕಂಡಿದೆ.  ಸರ್ಕಾರದ ಭಾಗವಾಗಲು ಇಚ್ಛಿಸದ ಮತ್ತು ಪಕ್ಷ ಸಂಘಟನೆಯತ್ತ ಗಮನ ಹರಿಸಲು ಉತ್ಸುಕರಾಗಿದ್ದ ಶಿಂಧೆ ಅವರನ್ನು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮನವೊಲಿಸಲಾಗಿದೆ.

ಶಿವಸೇನೆಯು ಹಲವಾರು ಸಂದರ್ಭಗಳಲ್ಲಿ ಶಿಂಧೆಗೆ ಅವರ ಸ್ಥಾನಮಾನಕ್ಕೆ ತಕ್ಕ ಹುದ್ದೆಯಾದ ಗೃಹ ಖಾತೆಯನ್ನು ಕೇಳಿತ್ತು. ಇದಕ್ಕೆ ಬಿಜೆಪಿಯು ಒಪ್ಪಿಗೆ ನೀಡಲಿಲ್ಲ.

ಇದನ್ನೂ ಓದಿ…..ದಕ್ಷಿಣ ಕೊರಿಯಾ ಅಧ್ಯಕ್ಷರ ಪದಚ್ಯುತಿ: ಮಧ್ಯಂತರ ಅಧ್ಯಕ್ಷರಾಗಿ ಪ್ರಧಾನಿ ಹ್ಯಾನ್ ಡುಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ಅಭಿಜಿತ್ ದೀಪ್ಕೆಗೆ ‍‍ಜಾಮೀನು : ಪೊಲೀಸ್ ಕಸ್ಟಡಿಯಿಂದ ಬಿಡುಗಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಶನಿವಾರ (ಅಕ್ಟೋಬರ್ 17) ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ದೆಹಲಿಯ ಮಂದಿರ್ ಮಾರ್ಗ್ ಠಾಣೆ ಪೊಲೀಸರ ಕಸ್ಟಡಿಯಿಂದ ಬಿಡುಗಡೆಯಾಗಿದ್ದಾರೆ ಎಂದು...

ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್

ಮಹತ್ವದ ತೀರ್ಪಿನಲ್ಲಿ, ಸಂವಿಧಾನದ 21 ಮತ್ತು 19(1)(ಎ) ವಿಧಿಗಳ ಅಡಿಯಲ್ಲಿ ಇಂಟರ್‌ನೆಟ್ ಪಡೆಯುವ ಮತ್ತು ಬಳಸುವ ಹಕ್ಕನ್ನು ಸುಪ್ರೀಂ ಕೋರ್ಟ್ 'ಮೂಲಭೂತ ಹಕ್ಕು' ಎಂದು ಘೋಷಿಸಿದೆ. ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಈ...

ಸಿಜೆಐ ಸೂರ್ಯಕಾಂತ್ ವಿರುದ್ಧದ ಪೋಸ್ಟ್: ಕೇರಳ ಕಾಂಗ್ರೆಸ್ ಅಧ್ಯಕ್ಷರಿಗೆ ಎಸ್‌ಸಿಬಿಎ ಜಂಟಿ ಕಾರ್ಯದರ್ಶಿಯಿಂದ ಲೀಗಲ್ ನೋಟಿಸ್!

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರನ್ನು ಗುರಿಯಾಗಿಸಿ ಕೇರಳ ಕಾಂಗ್ರೆಸ್‌ನ ಅಧಿಕೃತ ಎಕ್ಸ್ (X) ಖಾತೆಯಿಂದ ಮಾಡಲಾಗಿತ್ತು ಎನ್ನಲಾದ ಪೋಸ್ಟ್‌ಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ (SCBA) ಜಂಟಿ...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ನೇಹಾ ಬೋರಾ ಬಿಡುಗಡೆ : ಅಭಿಜಿತ್ ದೀಪ್ಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿರುವ ಪೊಲೀಸರು

ಶುಕ್ರವಾರ (ಅಕ್ಟೋಬರ್ 16) ಬಂಧಿತರಾಗಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಶನಿವಾರ (ಅ.17) ಮುಂಜಾನೆ ಬಿಡುಗಡೆ ಮಾಡಲಾಗಿದ್ದು, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್...

ಬೆಂಗಳೂರಿನಲ್ಲಿ ತಿರಂಗ ಯಾತ್ರೆಗೆ ಪೊಲೀಸರ ಷರತ್ತುಬದ್ಧ ಅನುಮತಿ: ಪ್ರತಿಭಟನೆ, ಘೋಷಣೆಗಳಿಗೆ ನಿರ್ಬಂಧ

ಬೆಂಗಳೂರು: ದೆಹಲಿಯಲ್ಲಿ ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆ ವಿಚಾರವಾಗಿ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಅಕ್ಟೋಬರ್ 16ರಂದು ಟೌನ್ ಹಾಲ್‌ನಿಂದ ಬನ್ನಪ್ಪ ಪಾರ್ಕ್‌ನಲ್ಲಿರುವ ಕ್ವಿಟ್ ಇಂಡಿಯಾ ಸ್ಮಾರಕದವರೆಗೆ ಹಮ್ಮಿಕೊಂಡಿರುವ ತಿರಂಗ...

ಸುಪ್ರೀಂ ವಿಚಾರಣೆಗೆ ಸಜ್ಜಾಗುತ್ತಿದ್ದಂತೆ ಸಿಜೆಪಿಯ ತಿರಂಗಾ ಮೆರವಣಿಗೆ ಆರಂಭ; ಪೊಲೀಸರ ನೋಟಿಸ್ ಧಿಕ್ಕರಿಸಿ ತೆರಳುತ್ತಿದ್ದ ಅಭಿಜೀತ್ ದೀಪ್ಕೆ ವಶಕ್ಕೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಹಕ್ಕಿನ ಕುರಿತ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಜ್ಜಾಗುತ್ತಿದ್ದ ಬೆನ್ನಲ್ಲೇ, ದೆಹಲಿ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ‘ಲೆಹ್ರಾ ದೋ ತಿರಂಗಾ’...

‘ದಿಮಾಗಿ ನಕ್ಸಲ್’, ‘ದೇಶದ್ರೋಹಿ’ ಎಂದು ಪಟ್ಟ ಕಟ್ಟುವುದು ಅಧಿಕಾರ ಕಳೆದುಕೊಳ್ಳುವ ಭೀತಿಯ ಸಂಕೇತ”: ಮೋದಿ-ಅಮಿತ್ ಶಾ ವಿರುದ್ಧ ಪವನ್ ಖೇರಾ ವಾಗ್ದಾಳಿ!

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ತನ್ನ ನೀತಿಗಳು ಮತ್ತು ನಡೆಯನ್ನು ಪ್ರಶ್ನಿಸುವ ನಾಗರಿಕರಿಗೆ ‘ರಾಷ್ಟ್ರವಿರೋಧಿ’, ‘ಎಡಪಂಥೀಯ’ ಹಾಗೂ ‘ದಿಮಾಗಿ ನಕ್ಸಲ್’ ಎಂದು ಪಟ್ಟ ಕಟ್ಟುತ್ತಿರುವುದು ಅದರ ಅಧಿಕಾರ ಕಳೆದುಕೊಳ್ಳುವ ಭೀತಿಯನ್ನು ತೋರಿಸುತ್ತದೆ ಎಂದು...

ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಹೆಚ್ಚಿದ ನಿರ್ಬಂಧ: 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ, ಸೆಂಟ್ರಲ್ ಪಾರ್ಕ್ ಬಂದ್

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)...

ಸಿಜೆಪಿಯ ತಿರಂಗಾ ಮೆರವಣಿಗೆ: ಸೆಂಟ್ರಲ್ ಪಾರ್ಕ್ ಮುಚ್ಚುವಿಕೆ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕಾಕ್ರೋಚ್ ಜನತಾ ಪಾರ್ಟಿ...

ದೆಹಲಿ ಬಿಟ್ಟು ರಿಲಯನ್ಸ್ ರಿಫೈನರಿ ಇರುವ ಜಾಮ್‌ನಗರಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಭೇಟಿ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರ ಮುಂಬರುವ ಭಾರತ ಭೇಟಿ ಹಾಗೂ ವಿದೇಶಾಂಗ ಸಚಿವಾಲಯದ ನಿರ್ಧಾರಗಳ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಮರ್ಶಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ...