ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಲ ಮುಗಿಯಿತೆ? ಮುಂಬರುವ ಋತುಗಳ ಒಪ್ಪಂದದಲ್ಲಿ BCCI ಪಟ್ಟಿಯಿಂದ ಧೋನಿ ಹೊರಕ್ಕೆ..

0
6

ಭಾರತದ ಮಾಜಿ ಕ್ಯಾಪ್ಟನ್‌, ಮೊದಲ ಟಿ20 ಪ್ರಶಸ್ತಿ ಗೆದ್ದುಕೊಟ್ಟ, ಎರಡನೇ ವಿಶ್ವಕಪ್‌ ಗೆದ್ದುಕೊಟ್ಟ, ಲಕ್ಷಾಂತರ ಅಭಿಮಾನಿಗಳ ಪಾಲಿನ ಹೆಲಿಕ್ಯಾಪ್ಟರ್‌ ಶೂಟರ್‌ ಮಹೇಂದ್ರ ಸಿಂಗ್ ಧೋನಿ ಅವರ ಅಂತರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನ ಮುಗಿಯಿತೆ ಎಂಬ ಪ್ರಶ್ನೆಗಳು ಇಂದು ಜೋರಾಗಿ ಕೇಳಿಬಂದಿವೆ. ಇದಕ್ಕೆ ಕಾರಣ ಅವರನ್ನು ಬಿಸಿಸಿಐ ಒಪ್ಪಂದದ ಪಟ್ಟಿಯಿಂದ ಕೈಬಿಡಲಾಗಿದೆ.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಋತುವಿಗೆ ಕೇಂದ್ರ ಒಪ್ಪಂದಗಳನ್ನು ಪ್ರಕಟಿಸಿದ್ದು ಮಹತ್ವದ ಹೆಜ್ಜೆಯಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಟ್ಟಿದೆ. ಅವರು ಕಳೆದ ಋತುವಿನಲ್ಲಿ ’ಎ’ ಗ್ರೇಡ್‌ನಲ್ಲಿದ್ದರು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರಿತ್ ಬುಮ್ರಾ ಮೂವರು ಉನ್ನತ ವಿಭಾಗದಲ್ಲಿ (ಎ +) 7 ಕೋಟಿಗಳಿಂದ ವೇತನವನ್ನು ಪಡೆಯುತ್ತಾರೆ.

ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಧೋನಿ ಫಾರ್ಮ್‌ ಚೆನ್ನಾಗಿಲ್ಲ. ಇದರಿಮದ ಭಾರತೀಯ ತಂಡದಲ್ಲಿ ಧೋನಿಯ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಕಂಡುಬಂದಿವೆ.

ಎಂಎಸ್ ಧೋನಿ 50 ಓವರ್ ಮತ್ತು 20 ಓವರ್‌ಗಳ ವಿಶ್ವಕಪ್ ಗೆದ್ದ ಏಕೈಕ ಅಂತರರಾಷ್ಟ್ರೀಯ ನಾಯಕ. ಅವರು 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಪ್ರಶಸ್ತಿಗೆ ದಕ್ಕಿಸಿಕೊಟ್ಟಿದ್ದರು. ಭಾರತಕ್ಕಾಗಿ 90 ಟೆಸ್ಟ್ ಪಂದ್ಯಗಳಲ್ಲಿ ಧೋನಿ 4876 ರನ್ ಗಳಿಸಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ 50.57 ರ ಸರಾಸರಿಯಲ್ಲಿ ಅವರ 10,773 ರನ್ ಗಳಿಸುವಿಕೆಯು ಭಾರತದ ಅತ್ಯುತ್ತಮ 50 ಓವರ್‌ಗಳ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. 98 ಟಿ20 ಪಂದ್ಯಗಳಲ್ಲಿ 1617 ರನ್ ಗಳಿಸಿದ್ದಾರೆ.

“ಈ ಐತಿಹಾಸಿಕ ನಾಯಕ ಶೀಘ್ರದಲ್ಲೇ ತನ್ನ ಏಕದಿನ ವೃತ್ತಿಜೀವನವನ್ನು ಕೊನೆಗೊಳಿಸಬಹುದು ಆದರೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು. ಏಕೆಂದರೆ ಅವರು ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌‌ನಲ್ಲಿದ್ದಾರೆ” ಎಂದು ಮುಖ್ಯ ತರಬೇತುದಾರ ರವಿಶಾಸ್ತ್ರಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.

ಜಸ್ಪ್ರೀತ್ ಬುಮ್ರಾ ಕಳೆದ ವರ್ಷದಲ್ಲಿ ದೈತ್ಯ ದಾಪುಗಾಲಿಟ್ಟಿದ್ದಾರೆ ಮತ್ತು ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ವೇಗದ ಬೌಲರ್‌ ಆಗಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಅವರು ಕೊಹ್ಲಿ ಮತ್ತು ರೋಹಿತ್ ಅವರ ಸಮನಾದ ಉನ್ನತ ಶ್ರೇಣಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರೂ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಅವರನ್ನು ಗ್ರೇಡ್ ಬಿ ಯಿಂದ ಗ್ರೇಡ್ ಎ ಆಗಿ ಬಡ್ತಿ ನೀಡಲಾಗಿದೆ.

ನಾಲ್ಕು ವಿಭಾಗಗಳಾಗಿ 27 ಆಟಗಾರರನ್ನು ವಿಂಗಡಿಸಲಾಗಿದ್ದು, ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರಿತ್ ಬುಮ್ರಾ ಅವರು ಎ + ವಿಭಾಗದಲ್ಲಿರುವ ಮೂವರಾಗಿದ್ದಾರೆ.

ಧೋನಿಯೊಂದಿಗೆ ಅಂಬಾಟಿ ರಾಯುಡು, ಖಲೀಲ್ ಅಹ್ಮದ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಒಪ್ಪಂದದಿಂದ ಕೈಬಿಡಲಾಗಿದೆ. ಟೆಸ್ಟ್ ಓಪನರ್ ಮಾಯಾಂಕ್ ಅಗರ್ವಾಲ್ ಅವರು ವರ್ಗ ಬಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ನವದೀಪ್ ಸೈನಿ, ದೀಪಕ್ ಚಹರ್, ಶಾರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಸಿ ವರ್ಗದಲ್ಲಿ ಸೇರಿಸಲಾಗಿದೆ.

ಮುಂಬರುವ ‌ಋತುವಿನಲ್ಲಿ ಬಿಸಿಸಿಐ ಒಪ್ಪಂದವು ಹೀಗಿದೆ:

ವರ್ಗ ಎ: ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್ ಮತ್ತು ರಿಷಭ್ ಪಂತ್

ವರ್ಗ ಬಿ: ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ, ಮಾಯಾಂಕ್ ಅಗರ್ವಾಲ್.

ವರ್ಗ ಸಿ: ಕೇದಾರ ಜಾಧವ್, ನವದೀಪ್ ಸೈನಿ, ದೀಪಕ್ ಚಹರ್, ಮನೀಶ್ ಪಾಂಡೆ, ಹನುಮ ವಿಹಾರಿ, ಶಾರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here