Homeಮುಖಪುಟಅಮಿತ್ ಶಾ ಕೋವಿಡ್ ನೆಗೆಟಿವ್: ಟ್ವೀಟ್‌ ಡಿಲೀಟ್ ಮಾಡಿದ ಮನೋಜ್ ತಿವಾರಿ! ಹೊಸ ಪರೀಕ್ಷೆ ಮಾಡಿಲ್ಲವೆಂದ...

ಅಮಿತ್ ಶಾ ಕೋವಿಡ್ ನೆಗೆಟಿವ್: ಟ್ವೀಟ್‌ ಡಿಲೀಟ್ ಮಾಡಿದ ಮನೋಜ್ ತಿವಾರಿ! ಹೊಸ ಪರೀಕ್ಷೆ ಮಾಡಿಲ್ಲವೆಂದ ಗೃಹ ಸಚಿವಾಲಯ

"ದೇಶದ ಯಶಸ್ವಿ ಗೃಹಮಂತ್ರಿ ಅಮಿತ್‌ ಶಾರವರ ಕೊರೊನಾ ವೈರಸ್ ಪರೀಕ್ಷೆ ವರದಿ ಹೊರಬಿದ್ದಿದೆ. ನೆಗೆಟಿವ್" ಮನೋಜ್‌ ತಿವಾರಿ ಟ್ವೀಟ್‌ ಮಾಡಿದ್ದರು.

- Advertisement -
- Advertisement -

ಗೃಹ ಸಚಿವ ಅಮಿತ್ ಶಾರವರು COVID-19 ಪರೀಕ್ಷೆ ನಡೆಸಿದ್ದು ನೆಗೆಟಿವ್ ವರದಿ ಬಂದಿದೆ ಎಂದು ಶಾರವರ ಸಹೋದ್ಯೋಗಿ ಮನೋಜ್ ತಿವಾರಿ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ.

ಅಮಿತ್‌ ಶಾ ರವರು ವಾರದ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದು ಗುರುಗ್ರಾಮ್‌ ಬಳಿಯ ಮೆದೆಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಿಗ್ಗೆ ಗೃಹ ಸಚಿವರ ಕೊರೊನಾ ಪರೀಕ್ಷೆ ನೆಗೆಟಿವ್ ಬಂದಿದೆ ಎಂದು ಮನೋಜ್ ತಿವಾರಿ ಟ್ವೀಟ್‌ ಮಾಡಿದ್ದರು. ಅದನ್ನು ಆಧರಿಸಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಸ್ಪಲ್ಪ ಸಮಯದಲ್ಲಿಯೇ ಅವರು ತಮ್ಮ ಟ್ವೀಟ್‌ ಅನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೇ ಗೃಹ ಸಚಿವಾಲಯವು ಗೃಹ ಸಚಿವರಿಗೆ ಹೊಸದಾಗಿ ಕೊರೊನಾ ಪರೀಕ್ಷೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

“ದೇಶದ ಯಶಸ್ವಿ ಗೃಹಮಂತ್ರಿ ಅಮಿತ್‌ ಶಾರವರ ಕೊರೊನಾ ವೈರಸ್ ಪರೀಕ್ಷೆ ವರದಿ ಹೊರಬಿದ್ದಿದೆ. ನೆಗೆಟಿವ್” ಮನೋಜ್‌ ತಿವಾರಿ ಟ್ವೀಟ್‌ ಮಾಡಿದ್ದರು.

55 ವರ್ಷದ ಅಮಿತ್‌ ಶಾ ಆಗಸ್ಟ್ 2ರ ಭಾನುವಾರ ಕೊರೊನಾ ವೈರಸ್‌ ಪಾಸಿಟಿವ್ ಆಗಿದ್ದರು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಅಯೋಧ್ಯೆಯ ಮಸೀದಿ ಜಾಗದಲ್ಲಿ ಬಾಬ್ರಿ ಆಸ್ಪತ್ರೆ ಸ್ಥಾಪನೆ? ಈ ಸುದ್ದಿ ನಿಜವೆ? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...