ಟ್ವಿಟ್ಟರ್‌ನಲ್ಲಿ ಭೀಫ್‌ ಖಾದ್ಯದ ಫೋಟೊ ಷೇರ್‌ ಮಾಡಿದ ಸಚಿವ ಸಿ.ಟಿ ರವಿ ; ನೆಟ್ಟಿಗರಿಂದ ಫುಲ್‌ ಟ್ರೋಲ್‌

0
10

ಸಂಕ್ರಾಂತಿಯ ದಿನ ನಿನ್ನೆ ಕೇರಳ ಟೂರಿಸಂ ಇಲಾಖೆಯ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಭೀಫ್‌ ಖಾದ್ಯದ ಫೋಟೊ ಹಂಚಿಕೊಂಡಿತ್ತು. ಅದನ್ನು ಬಿಜೆಪಿ ಮುಖಂಡ ಮತ್ತು ಕರ್ನಾಟಕ ಪ್ರವಾಸೋಧ್ಯಮ ಇಲಾಖೆ ಸಚಿವ ಸಿ.ಟಿ ರವಿ ವೆಲ್‌ಕಂ ಟು ಕರ್ನಾಟಕ ಎಂದು ಬರೆದು ಷೇರ್‌ ಮಾಡುವ ಮೂಲಕ ನೆಟ್ಟಿಗರ ಟ್ರೋಲ್‌ಗೆ ತುತ್ತಾಗಿದ್ದಾರೆ.

ಸಿಟಿ ರವಿಯವರು ಷೇರ್‌ ಮಾಡಿರುವ ಫೋಟೊ ಕಣ್ಣಿಗೆ ಬಿದ್ದಿದ್ದೆ ತಡ ನೆಟ್ಟಿಗರು “ನಮ್ ಹಿಂದೂ ಧರ್ಮ ಗೋ ಮಾತೆ ಬಗ್ಗೆ ಪುಂಕಾನು ಪುಂಕ ಪುಂಗಿ ಈರೀತಿ ಟ್ವೀಟ್ ಮಾಡಿದಿರಲ್ಲ ಸ್ವಾಮಿ. ಅಮಾಯಕರನ್ನು ಧರ್ಮದ ಬಗ್ಗೆ ತಲೆಗೆ ತುಂಬಿ ನೀವು ಈತರ ಮಾಡೊದು ಸರಿಯೇ…? ಎಂದು ಪ್ರಶ್ನಿಸಿದ್ದಾರೆ.

ಏನ್ಸಾರ್​ ಇದು, ಬೀಪ್​ ವೆಲ್​ಕಮ್​ ಮಾಡ್ತೀದಿರಾ..? ಅವ್ರೇನೋ ಸೆಕ್ಯೂಲರ್​ ಹೆಸರಲ್ಲಿ, ಸಂಸ್ಕ್ರತಿಯನ್ನೆಲ್ಲಾ ಬಿಟ್ಟಾಕಿ ಮಾಡಬಾರದ್ದನ್ನೆಲ್ಲಾ ಮಾಡ್ತೀದಾರೆ. ನೀವು ಅದನ್ನ ವೆಲ್​ಕಮ್​ ಅಂತೀದಿರಾ…! ನಾವು ಇದನ್ನ ಬಿಜೆಪಿ ನಾಯಕರಿಂದ ನಿರೀಕ್ಷಿಸಿರಲಿಲ್ಲ ಎಂದು ಮಂಜು ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ತೀರಾ ವಿಪರೀತಕ್ಕೆ ಹೋಗಿ ಮಟ ಮಟ ಮಧ್ಯಾಹ್ನವೇ ಈ ಥರ ಟ್ವೀಟ್‌ ಮಾಡಿದ್ದರಲ್ಲ? ಯಾವ ಬ್ರಾಂಡ್‌ ಎಂದೆಲ್ಲಾ ಟೀಕಿಸಿದ್ದಾರೆ. ಬೀಫ್ ಪರನೋ ವಿರೋಧನೋ ಸ್ಪಷ್ಟಪಡಿಸಿ ಎಂದು ಕೆಲವರು ಆಗ್ರಹಿಸಿದ್ದಾರೆ.

ಸಿ.ಟಿ ರವಿಯವರ ಇನ್ನೊಂದು ಲೆಕ್ಕಾಚಾರವೂ ಈ ಟ್ವೀಟ್‌ನಲ್ಲಿ ಇದ್ದಂತೆ ಕಾಣುತ್ತಿದೆ. ಕೇರಳದಲ್ಲಿ ಭೀಫ್‌ ಊಟವೇ ಹೆಚ್ಚು, ಅದಕ್ಕೆ ಕರ್ನಾಟಕಕ್ಕೆ ಬನ್ನಿ ಎಂಬ ಹುನ್ನಾರವೂ ಇದರಿಂದೆ ಇರಬಹುದು ಎಂತಲೂ ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ.

ಭೀಫ್‌ ಜನತಾ ಪಾರ್ಟಿಗೆ ಸ್ವಾಗತ ಎಂದು ಕೆಲವರು ಚೇಡಿಸಿದ್ದಾರೆ. ಒಟ್ಟಿನಲ್ಲಿ ಕಂಡ ಕಂಡಲ್ಲಿ ಬಿಜೆಪಿ ಪಕ್ಷ ಭೀಫ್‌ ವಿರುದ್ಧ ಮಾತಾಡುತ್ತದೆ. ಭೀಫ್‌ ರಫ್ತಿನಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ. ಅದೇ ರೀತಿ ಸಿ.ಟಿ ರವಿಯವರ ಟ್ವೀಟ್‌ ಸಹ ಬಂದಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here