Homeಕರೋನಾ ತಲ್ಲಣನಾವು ನಂಬುತ್ತಿರುವುದಕ್ಕಿಂತ ಹೆಚ್ಚಾಗಿ, ದೇಹದ ಇಮ್ಯುನಿಟಿ ನಮ್ಮನ್ನು ರಕ್ಷಿಸುತ್ತದೆ: ಡಾ ಗುಲೇರಿಯಾ

ನಾವು ನಂಬುತ್ತಿರುವುದಕ್ಕಿಂತ ಹೆಚ್ಚಾಗಿ, ದೇಹದ ಇಮ್ಯುನಿಟಿ ನಮ್ಮನ್ನು ರಕ್ಷಿಸುತ್ತದೆ: ಡಾ ಗುಲೇರಿಯಾ

ಒಂದು ವ್ಯವಸ್ಥಿತ ಖಾಯಿಲೆಯಾಗುತ್ತಿರುವ ಕೊರೊನಾ ಕೇವಲ ಶ್ವಾಸಕೋಶವನ್ನು ಮಾತ್ರವಲ್ಲದೇ, ಮೆದುಳು ಮತ್ತು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರಬಹುದು ಎನ್ನುವ ಕಠೋರ ವಾಸ್ತವವೊಂದು ಬೆಳಕಿಗೆ ಬಂದಿದೆ ಎಂದು ಡಾ. ಗುಲೇರಿಯಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

- Advertisement -
- Advertisement -

ಇತ್ತೀಚೆಗೆ ಬಿಡುಗಡೆಯಾದ ರೋಗನಿರೋಧಕ ಪ್ರಕ್ರಿಯೆಯ ದತ್ತಾಂಶದ ಪ್ರಕಾರ, ಪ್ರಸ್ತುತ ನಾವು ನಂಬುತ್ತಿರುವುದಕ್ಕಿಂತ ಹೆಚ್ಚಾಗಿ “ನಾವು ರಕ್ಷಿಸಲ್ಪಡಬಹುದು” ಎಂದು ಏಮ್ಸ್ ನಿರ್ದೇಶಕ ಮತ್ತು ದೇಶದ ಕೊರೊನಾ ಕಾರ್ಯಪಡೆಯನ್ನು ಮುನ್ನಡೆಸುತ್ತಿರುವ ತಜ್ಞರಲ್ಲಿ ಒಬ್ಬರಾದ ಡಾ. ರಂದೀಪ್ ಗುಲೇರಿಯಾದ ಇಂಡಿಯನ್ ಎಕ್ಸ್ ಪ್ರೆಸ್  ಗೆ ತಿಳಿಸಿದರು.

ಕೊರೊನಾ ಕೇವಲ ಶ್ವಾಸಕೋಶವನ್ನು ಮಾತ್ರವಲ್ಲದೇ, ಮೆದುಳು ಮತ್ತು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರಬಹುದು ಎನ್ನುವ ಕಠೋರ ವಾಸ್ತವವೊಂದು ಬೆಳಕಿಗೆ ಬಂದಿದೆ ಎಂದು ಡಾ. ಗುಲೇರಿಯಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಕೊರೊನಾ ಕಾರ್ಯಪಡೆಯ ಕ್ಲಿನಿಕಲ್ ರಿಸರ್ಚ್ ಗ್ರೂಪಿನ ಮುಖ್ಯಸ್ಥರಾದ ಡಾ. ಗುಲೇರಿಯಾ, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಚೇತರಿಸಿಕೊಂಡ ನಂತರವೂ ಅವರ ಶ್ವಾಸಕೋಶವು “ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ” ಹಾಗಾಗಿ ಅವರಿಗೆ ಆಮ್ಲಜನಕದ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.

ಕೊರೊನಾ ರೋಗಿಗಳು ಈಗ ಪಾರ್ಶ್ವವಾಯು ಮತ್ತು ಮೆದುಳು ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಇದು ಉಸಿರಾಟದ ತೊಂದರೆಗಿಂತ  ಹೆಚ್ಚಾಗಿ ಅವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ದೇಶದ ಉನ್ನತ ಶ್ವಾಸಕೋಶತಜ್ಞ ಡಾ.ಗುಲೇರಿಯಾ ಹೇಳಿದ್ದಾರೆ.

“ಮೊದಮೊದಲು ಇದು ಕೇವಲ ನ್ಯುಮೋನಿಯಾ ಎಂದು ನಾವು ಭಾವಿಸಿದ್ದೆವು. ಆದರೆ ನಂತರ ತಿಳಿಯಿಯಿತು ಇದು hypercoagulable ಸ್ಥಿತಿಗೆ ಕಾರಣವಾಗಿದೆ ಎಂದು. ಇದು ಹೆಪ್ಪುಗಟ್ಟುವಿಕೆಯನ್ನು ಉಲ್ಬಣಗೊಳಿಸುತ್ತದೆ. ನಂತರ ಶ್ವಾಸಕೋಶ ಮತ್ತು ಹೃದಯದಲ್ಲಿನ ರಕ್ತನಾಳಗಳ ಹೆಪ್ಪುಗಟ್ಟುವಿಕೆಯಿಂದ ಜನರು ಹಠಾತ್ತನೆ ಸಾಯುತ್ತಿದ್ದರು. ಈಗ ನಾವು ಪಾರ್ಶ್ವವಾಯು ಮತ್ತು ಇತರ ಮೆದುಳು ಸಂಬಂಧಿ ಸಮಸ್ಯೆಗಳೊಂದಿಗೆ ಏನಾದರೂ ತೊಂದರೆಯಾಗುತ್ತಿದೆಯೇ ಎಂದು ನೋಡಲಾರಂಭಿಸಿದ್ದೇವೆ. ಆರಂಭದಲ್ಲಿ, ಇದೆಲ್ಲವೂ ದೊಡ್ಡ ಸಮಸ್ಯೆಯಲ್ಲ ಎಂದು ನಾವು ಭಾವಿಸಿದ್ದೆವು, ಆದರೆ ನಾವು ಹೆಚ್ಚಿನ ಪ್ರಕರಣಗಳನ್ನು ನೋಡುತ್ತಿದ್ದಂತೆ, ಇದು ಒಂದು ಸಮಸ್ಯೆಯಾಗಿ ಪರಿಣಮಿಸಿದೆ ”ಎಂದು ಡಾ ಗುಲೇರಿಯಾ ಹೇಳಿದರು.

“ಸೋಂಕು ಶ್ವಾಸಕೋಶದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಇದು ಶ್ವಾಸಕೋಶದ ಕಾಯಿಲೆಯಾಗಿದೆ ”ಎಂದು ಡಾ ಗುಲೇರಿಯಾ ಹೇಳಿದರು. “ಆದರೆ ಇದು ಗಮನಾರ್ಹವಾದ ನಾಳಗಳ ಸಮಸ್ಯೆಗಳನ್ನು ಹೊಂದಿದೆ. ಇದನ್ನು ಸ್ವಲ್ಪ ಮಟ್ಟಿಗೆ ನಾಳಗಳ ಕಾಯಿಲೆ ಎಂದು ಕರೆಯಬಹುದು. ಇದು ಇಡೀ ದೇಹವನ್ನು ಒಳಗೊಂಡಿರುವುದರಿಂದ ಇದನ್ನು ಗಂಭೀರ ಕಾಯಿಲೆಯಾಗಿ ಪರಿಣಮಿಸಿದೆ. ” ಎಂದಿದ್ದಾರೆ.

ಕೊರೊನಾ ವೈರಸ್ ನಿಂದ ಮೆದುಳಿಗೆ ಹಾನಿಯಾಗಬಹುದೇ?

ತೀವ್ರ ರೋಗಲಕ್ಷಣಗಳೊಂದಿಗೆ ಚೇತರಿಸಿಕೊಂಡ ರೋಗಿಗಳಲ್ಲಿ ತೊಡಕುಗಳು ಮುಂದುವರಿಯುತ್ತವೆ. “ತೀವ್ರವಾದ ನ್ಯುಮೋನಿಯಾ ಹೊಂದಿರುವ ಹಲವಾರು ರೋಗಿಗಳನ್ನು ನಾವು ನೋಡಿದ್ದೇವೆ. ಅಲ್ಲಿ ಶ್ವಾಸಕೋಶವು ಸಂಪೂರ್ಣವಾಗಿ ಹಾನಿಯಾಗುತ್ತದೆ (ಚೇತರಿಸಿಕೊಂಡ ರೋಗಿಗಳಲ್ಲಿ); ಅವರಲ್ಲಿ ಕೆಲವರಿಗೆ ಚೇತರಿಕೆಯ ನಂತರ ಮನೆಯಲ್ಲಿ ಆಮ್ಲಜನಕದ ಅಗತ್ಯವಿರುತ್ತದೆ. ಮೂರು ತಿಂಗಳ ಕೆಳಗೆ (ಲೈನ್), ಸಿ.ಟಿ ಸ್ಕ್ಯಾನ್‌ಗಳು ಶ್ವಾಸಕೋಶವು ಕೆಟ್ಟ ಸ್ಥಿತಿಯಲ್ಲಿದೆ ಎಂದು ತೋರಿಸಿದೆ. ಕೆಲವು ರೋಗಿಗಳು ದೌರ್ಬಲ್ಯದ ಬಗ್ಗೆ ದೂರು ನೀಡಿದ್ದಾರೆ ಮತ್ತು ಕೆಲಸಕ್ಕೆ ಹಿಂತಿರುಗುವ ಶಕ್ತಿ ಇಲ್ಲ. ಕೆಲವು ಸಂದರ್ಭಗಳಲ್ಲಿ, ಗಂಭೀರವಾದ ಸಂಬಂಧಿ ಸಮಸ್ಯೆಗಳಿವೆ (ಚೇತರಿಕೆಯ ನಂತರ) ”ಎಂದು ಡಾ ಗುಲೇರಿಯಾ ಅವರು ಹೇಳಿದರು.

ವೈರಸ್‌ಗೆ ಪ್ರತಿಕ್ರಿಯೆಯಾಗಿ ದೇಹವು ಅಭಿವೃದ್ಧಿಪಡಿಸಿದ ರೋಗನಿರೋಧಕಗಳು ಶಾಶ್ವತವೇ ಎಂದು ವಿಶ್ವದಾದ್ಯಂತ ಸಂಶೋಧಕರು ಅಧ್ಯಯನ ಮಾಡುತ್ತಿದ್ದರೆ.

ದತ್ತಾಂಶ ಹೇಳುವಂತೆ, ನಾವು ದೇಹದ ರೋಗನಿರೋಧಕ ಶಕ್ತಿಯ ಬಗ್ಗೆ ಕಲಿಯುತ್ತಿದ್ದೇವೆ; ಕೋಶ-ಮಧ್ಯಸ್ಥಿಕೆಯ ಪ್ರತಿರಕ್ಷೆಯನ್ನು ಸಹ ಸಕ್ರಿಯಗೊಳಿಸಲಾಗಿದೆ ಮತ್ತು ರಕ್ತದಲ್ಲಿನ  T-cells ಮೂಲಕ ರಕ್ಷಣೆ ನೀಡುತ್ತದೆ ಎಂದು ನಾವು ತಿಳಿದುಕೊಂಡಿದ್ದೇವೆ. ಹಾಗಾಗಿ ನಾವು ಯೋಚಿಸುತ್ತಿರುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ರಕ್ಷಿಸಬಹುದು. ಆದರೆ ರಕ್ಷಣೆ ಎಷ್ಟು ಕಾಲ ಉಳಿಯುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಗುಲೇರಿಯಾ ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾ: ರೋಗ ನಿರೋಧಕತೆ ಕುರಿತು ಆಯುರ್ವೇದದ ದೃಷ್ಟಿಕೋನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...