ಅಸ್ಸಾ ಪ್ರವಾಹ ಹಾಗೂ ಭೂಕುಸಿತದಿಂದ 70 ಜನರು ಮೃತ
ಚಿತ್ರ ಕೃಪೆ: ದಿ ಹಿಂದು

ಅಸ್ಸಾಂ ರಾಜ್ಯದಲ್ಲಿ ಭಾನುವಾರ ಸಂಭವಿಸಿದ ಧಾರಾಕಾರ ಮಳೆಯಿಂದಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಇವುಗಳೊಂದಿಗೆ ಪ್ರವಾಹ ಹಾಗು ಭೂಕುಸಿತದಿಂದಾದ ಸಾವು 70 ಕ್ಕೆ ಏರಿದೆ.

ನಾಗಾವ್ನ್ ಜಿಲ್ಲೆಯ ಪ್ರವಾಹದಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಕಮ್ರೂಪ್ (ಮೆಟ್ರೋ) ಜಿಲ್ಲೆಯ ಗುವಾಹಟಿಯ ಹೊರವಲಯದಲ್ಲಿರುವ ಜೋರಾಬತ್‌ನಲ್ಲಿ ಭೂಕುಸಿತ ಸಂಭವಿಸಿದ ಘಟನೆಯಲ್ಲಿ ಅನೇಕರು ಸಾವನ್ನಪ್ಪಿದ್ದಾರೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಜ್ಯದ 24 ಜಿಲ್ಲೆಗಳಲ್ಲಿ 2,015 ಹಳ್ಳಿಗಳು ನೆರೆ ಪೀಡಿತವಾಗಿದ್ದು, 12.97 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ಥರಾಗಿದ್ದಾರೆ. 82,546 ಹೆಕ್ಟೇರ್ ಪ್ರದೇಶಗಳಲ್ಲಿರುವ ಬೆಲೆಗಳ ಮೇಲೆ ಪರಿಣಾಮ ಬೀರಿದೆ.

ಪ್ರವಾಹದ ನೀರು ನದಿಗಳನ್ನು ಮೀರಿ ಹರಿಯುತ್ತಿದ್ದು, ಸೇತುವೆಗಳು ಮತ್ತು ರಸ್ತೆಗಳನ್ನು ಹಾನಿಗೊಳಿಸಿದೆ. ಪ್ರಮುಖ ನದಿಗಳಾದ ಬ್ರಹ್ಮಪುತ್ರ, ಬುರ್ಹಿ ಡೆಹಿಂಗ್, ಧನ್ಸಿರಿ, ಜಿಯಾ ಭಾರಾಲಿ, ಪುತಿಮರಿ, ಬೆಕಿ, ಕೋಪಿಲಿ ಮತ್ತು ಸಂಕೋಷ್ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಬ್ರಹ್ಮಪುತ್ರ ನದಿಯೂ ಹಲವಾರು ಕಡೆಗಳಲ್ಲಿ ಅಪಾಯ ಮಟ್ಟದ ಎರಡು ಅಡಿಗಿಂತ ಹೆಚ್ಚು ಹರಿಯುತ್ತಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

16 ಜಿಲ್ಲೆಗಳಲ್ಲಿ 224 ಪರಿಹಾರ ಶಿಬಿರಗಳನ್ನು ಪ್ರಾರಂಭಿಸಿದ್ದು, ಅಲ್ಲಿ 21,071 ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದಾರೆ. ಸ್ಥಳೀಯರನ್ನು ಹೊರತುಪಡಿಸಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಸಿಬ್ಬಂದಿ ಜನರನ್ನು ರಕ್ಷಿಸುವಲ್ಲಿ ನಿರತರಾಗಿದೆ.

ಪ್ರವಾಹಕ್ಕೆ ಸಿಲುಕಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ 41 ಪ್ರಾಣಿಗಳು ಈವರೆಗೆ ಸಾವನ್ನಪ್ಪಿದೆ. ಇವುಗಳಲ್ಲಿ ಕೆಲವು ಪ್ರಾಣಿಗಳ ಸಾವು ಉದ್ಯಾನವನದ ಪಕ್ಕದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ವಾಹನ ಅಫಘಾತದಿಂದ ಸಂಭವಿಸಿವೆ.

ಭಾನುವಾರ ನಡೆದ ಸಭೆಯಲ್ಲಿ ಪರಿಸ್ಥಿತಿಯನ್ನು ಗಮನಿಸಿದ ನಂತರ, ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಚಿವರು, ಸಂಸದರು ಮತ್ತು ಶಾಸಕರಿಗೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯನ್ನು ಅಂದಾಜು ಮಾಡಲು ಸೂಚಿಸಿದರು. ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ಯುದ್ದೋಪಾದಿಯಲ್ಲಿ ಸರಿಪಡಿಸಬೇಕು ಎಂದು ಅವರು ನಿರ್ದೇಶಿಸಿದರು.

ನೆರೆಯ ಅರುಣಾಚಲ ಪ್ರದೇಶದಲ್ಲಿ ಕೂಡಾ ಪ್ರವಾಹವು ಪಾಸಿಘಾಟ್, ನಮ್ಸಾಯಿ ಮತ್ತು ದಿಬಾಂಗ್ ಪಟ್ಟಣಗಳ ತಗ್ಗು ಪ್ರದೇಶಗಳನ್ನು ಮುಳುಗಿಸಿದೆ. ಭೂಕುಸಿತದಿಂದಾಗಿ ರಾಜ್ಯದ ಹಲವಾರು ಭಾಗಗಳ ಸಂಪರ್ಕ ಕಡಿತಗೊಂಡಿದೆ. ಎರಡು ದಿನಗಳ ಹಿಂದೆ ಪಾಪುಮ್ ಪಾರೆ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಭೂಕುಸಿತ ಘಟನೆಗಳಲ್ಲಿ ಎಂಟು ಜನರು ಮೃತಪಟ್ಟಿದ್ದರು. ಸಿಯಾಂಗ್, ಡಿಕ್ರಾಂಗ್, ಡಿಬಾಂಗ್ ಮತ್ತು ಸುಬನ್ಸಿರಿ ಮುಂತಾದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ವರದಿಯಾಗಿವೆ.


ಓದಿ: ಅಸ್ಸಾಂನಲ್ಲಿ ಮತ್ತೆ ಪ್ರವಾಹ; 25 ಜಿಲ್ಲೆಗಳಲ್ಲಿ ಭಾರೀ ಮಳೆ


 

LEAVE A REPLY

Please enter your comment!
Please enter your name here