ಹಾರ್ವರ್ಡ್‌ ವಿವಿಯಲ್ಲಿ ಕೆಲಸ ನೀಡುವುದಾಗಿ ವಂಚನೆ: ಎನ್‌ಡಿಟಿವಿ ಪತ್ರಕರ್ತೆ ಆರೋಪ

ಅಮೆರಿಕಾದ ಪ್ರತಿಷ್ಠಿತ ಹಾರ್ವರ್ಡ್‌ ವಿವಿಯಲ್ಲಿ ಸಹ ಪ್ರಾಧ್ಯಾಪಕಿ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಎನ್‌ʼಡಿಟಿವಿಯ ಹಿರಿಯ ಮಾಜಿ ಪತ್ರಕರ್ತೆ ನಿಧಿ ರಾಜ್ದನ್‌ ಅವರನ್ನು ವಂಚಿಸಲಾಗಿದೆ. ಈ ವಿಷಯವನ್ನು ಸ್ವತಃ ನಿಧಿ ರಾಝ್ದಾನ್ ಅವರೇ ಟ್ವೀಟ್ ಮಾಡಿದ್ದಾರೆ.

2020 ರ ಜೂನ್‌ ತಿಂಗಳಿನಲ್ಲಿ “ಎನ್‌ʼಡಿಟಿವಿಯಲ್ಲಿನ 21 ವರ್ಷಗಳ ಕಾಲ ದೀರ್ಘ ವೃತ್ತಿ ಜೀವನದ ಬಳಿಕ ನಾನು ಹಾರ್ವರ್ಡ್‌ ವಿವಿಯಲ್ಲಿ ಪತ್ರಿಕೋದ್ಯಮ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಾ ಮುಂದುವರಿಯಲಿದ್ದೇನೆ” ಎಂದು ಟ್ವೀಟ್‌ ಮಾಡಿದ್ದರು.

ಈಗ, “ನಾನು ಸೆಪ್ಟೆಂಬರ್‌ 2020ರ ವೇಳೆಗೆ ಹಾರ್ವರ್ಡ್‌ ವಿವಿಗೆ ಸೇರ್ಪಡೆಗೊಳ್ಳುತ್ತೇನೆ ಎಂದು ನಂಬಿದ್ದೆ. ಆದರೆ ಕೊರೊನಾ ಕಾರಣದಿಂದ ಅದು ಜನವರಿ 2021ಕ್ಕೆ ಮುಂದೂಡಲ್ಪಟ್ಟಿತ್ತು. ಆ ವೇಳೆ ಈ ಹೊಸ ಯೋಜನೆಯ ಕುರಿತು ತಯಾರಿ ನಡೆಸುತ್ತಿರುವಾಗ ಕೆಲವು ಆಡಳಿತಾತ್ಮಕ ವೈಪರೀತ್ಯಗಳನ್ನು ಗಮನಿಸಿದೆ. ಕೊರೊನಾ ಕಾರಣದಿಂದಾಗಿ ತಡವಾಗುತ್ತಿರಬಹುದೆಂದು ಅಂದಾಜಿಸಿದರೂ ಬಳಿಕ ಇದರ ಕುರಿತು ಅನುಮಾನಗಳು ಹೆಚ್ಚಾದವು. ನಂತರ ನಾನು ಹಾರ್ವರ್ಡ್‌ ವಿವಿಯ ಅಧಿಕೃತರನ್ನು ಸಂಪರ್ಕಿಸಿದೆ. ಈ ವೇಳೆ ಇದು ಮೋಸದ ಜಾಲ ಎಂದು ನನಗೆ ತಿಳಿದು ಬಂದಿದ್ದು, ಎಲ್ಲಾ ವಿಚಾರಗಳನ್ನೂ ಅವರಿಗೆ ವಿವರಿಸಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ಜನವರಿ 20ರಂದು ರಾಜಭವನ ಮುತ್ತಿಗೆ: ಕಾಂಗ್ರೆಸ್ ಮುಖಂಡ ಸುದರ್ಶನ್

“ವಂಚಕರು ನಂಬಲರ್ಹ ರೀತಿಯಲ್ಲಿ ಕುಶಲತೆಯಿಂದ ವ್ಯವಹರಿಸಿ ನನ್ನ ಹಲವಾರು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ನನ್ನ ಲ್ಯಾಪ್ ಟಾಪ್‌, ಇಮೈಲ್‌ ಮತ್ತು ಮೊಬೈಲ್‌ಗಳಲ್ಲಿನ ಮಾಹಿತಿಗಳನ್ನೂ ಸಂಗ್ರಹಿಸಿದ್ದಾರೆ.  ಈ ಕುರಿತು ನಾನು ಪೊಲೀಸ್‌ ಪ್ರಕರಣ ದಾಖಲಿಸಿದ್ದೇನೆ. ಪೊಲೀಸರು ಈ ಕುರಿತು ಸಮರ್ಪಕ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚುತ್ತಾರೆಂಬ ನಂಬಿಕೆ ನನಗಿದೆ” ಎಂದು ಹೇಳಿದ್ದಾರೆ ಎಂದು ಗೌರಿ ಲಂಕೇಶ್ ನ್ಯೂಸ್ ವರದಿ ಮಾಡಿದೆ.

ಈ ಕುರಿತು ನಿಧಿಯವರೇ ಟ್ವೀಟ್ ಮಾಡಿದ್ದಾರೆ. “ನಾನು ತುಂಬಾ ಗಂಭೀರವಾದ ವಂಚನೆಯ ಬಲಿಪಶುವಾಗಿದ್ದೇನೆ. ನನಗೆ ಏನಾಗಿದೆ ಎಂಬುದರ ಕುರಿತು ತಿಳಿಸಲು ದಾಖಲೆ ಸಮೇತ ಈ ಹೇಳಿಕೆಯನ್ನು ಹಂಚಿಕೊಳ್ಳುತ್ತಿದ್ದೇನೆ. ನಾನು ಈ ವಿಷಯವನ್ನು ಇನ್ನು ಮುಂದೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅದಾನಿಗೆ 6 ವಿಮಾನ ನಿಲ್ದಾಣಗಳ ನಿರ್ವಹಣೆ ನೀಡುವುದರ ವಿರುದ್ಧ ದನಿಯೆತ್ತಿದ್ದ ಹಣಕಾಸು ಇಲಾಖೆ, ನೀತಿ…

ಮತ್ತೊಂದು ಟ್ವೀಟ್‌ನಲ್ಲಿ, “ನನ್ನನ್ನು ಬೆಂಬಲಿಸಲು ಅನೇಕ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ತಕ್ಷಣವೇ ಬರೆಯಲಾಗದಿರುವುದಕ್ಕೆ ಕ್ಷಮೆಯಾಚಿಸುತ್ತೇನೆ. ಸಾಮಾಜಿಕ ಮಾಧ್ಯಮಗಳಿಂದ ಕೆಲಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಎಲ್ಲರೂ ಎಚ್ಚರಿಕೆಯಿಂದಿರಿ” ಎಂದು ಬರೆದುಕೊಂಡಿದ್ದಾರೆ.

 


ಇದನ್ನೂ ಓದಿ: ಕೊರೊನಾ ವೈರಸ್‌ಗಿಂತ ಬಿಜೆಪಿ ಅಪಾಯಕಾರಿಯೆಂದ ಸಂಸದೆ‌-ಬಿಜೆಪಿಯ ಉತ್ತರವೇನು ಗೊತ್ತೆ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

LEAVE A REPLY

Please enter your comment!
Please enter your name here