Homeಮುಖಪುಟಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ‘ಆಧುನಿಕ’ ಪರಿ : ಸಾಮಾಜಿಕ ಜಾಲತಾಣ ಬಳಕೆದಾರರ ಬೇಟೆಗೆ ತಯ್ಯಾರಿ

ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ‘ಆಧುನಿಕ’ ಪರಿ : ಸಾಮಾಜಿಕ ಜಾಲತಾಣ ಬಳಕೆದಾರರ ಬೇಟೆಗೆ ತಯ್ಯಾರಿ

ಒಂದಿಷ್ಟು ವೈಯಕ್ತಿಕ ವಿವರ ತುಂಬುವ ಮೂಲಕ ಫೇಸ್‌ಬುಕ್, ಟ್ವಿಟರ್ ಖಾತೆ ತೆರೆದು ನಿರಾಳವಾಗಿ ಸಂವಹನ ಮಾಡುತ್ತಿರುವ 40 ಕೋಟಿ ಭಾರತೀಯರು ಇನ್ನು ಮುಂದೆ ತಮ್ಮ ಖಾಸಗೀತನವನ್ನು ಕಳೆದುಕೊಳ್ಳಲಿದ್ದಾರೆ.

- Advertisement -
- Advertisement -

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ ಸುದ್ದಿ ಹರಡುವುದರಲ್ಲಿ ಮತ್ತು ಕೋಮುದ್ವೇಷ ಪಸರಿಸುವಲ್ಲಿ ಮುಂದಿರುವುದು ಬಿಜೆಪಿ ಪಕ್ಷ ಮತ್ತು ಅದರ ಬೆಂಬಲಿಗರೇ. ಈಗ ‘ಇಂಥದ್ದನ್ನೆಲ್ಲ ತಡೆಯಲು ಹೊಸ ನಿಯಮಾವಳಿ’ ಜಾರಿಗೆ ತರುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದರೆ ನಂಬುವುದು ಹೇಗೆ?

ಖಂಡಿತ ಇದು, ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ಮಾಡಿಕೊಂಡಿರುವ ಒಂದು ವ್ಯಸ್ಥಿಯ ಸಂಚು.
ಈ ತಿಂಗಳ ಕೊನೆಯಲ್ಲಿ ಜಾರಿಗೆ ಬರಲಿರುವ ಹೊಸ ಸೋಷಿಯಲ್ ಮೀಡಿಯಾ ನಿಯಮಾವಳಿಗಳ ಪರಿಣಾಮವಾಗಿ ಭಾರತದ 40 ಕೋಟಿ ಸೋಷಿಯಲ್ ಮೀಡಿಯಾ ಬಳಕೆದಾರರು ತಮ್ಮ ಅನಾಮಧೇಯತೆಯನ್ನು ಕಳೆದುಕೊಳ್ಳಲಿದ್ದಾರೆ. ಜೊತೆಗೆ ಅವರ ಖಾಸಗಿತನದ ಹಕ್ಕನ್ನು ಕಳೆದಿಕೊಳ್ಳಲಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ಮೂಲಕವೇ ವಿರೋಧಿಗಳನ್ನು ಹತ್ತಿಕ್ಕುತ್ತ ಬಂದ ಮೋದಿ ಸರ್ಕಾರವೀಗ ಸಾಮಾಜಿಕ ಜಾಲತಾಣಗಳ ಬಳಸುವ ತನ್ನ ಸೈದ್ದಾಂತಿಕ ವಿರೋಧಿಗಳ ಮೇಲೆ ಈ ಹೊಸ ಅಸ್ತ್ರ ಪ್ರಯೋಗಿಸಲು ಸಿದ್ಧವಾಗಿದೆ.

ಭಾರತ ಸರ್ಕಾರ ಕೇಳಿದರೆ, ಫೇಸ್‌ಬುಕ್, ಟ್ವಿಟರ್, ಯು-ಟ್ಯೂಬ್, ವ್ಯಾಟ್ಸಾಪ್ ಮತ್ತು ಟಿಕ್ ಟಾಕ್ ಕಂಪನಿಗಳು ಅವರ ಯಾವುದಾದರೂ ಬಳಕೆದಾರರ ಐಡೆಂಟಿಟಿಯನ್ನು ಅಂದರೆ ವಿವರಗಳನ್ನು ಸರ್ಕಾರಕ್ಕೆ ಒದಗಿಸಬೇಕು. ಇದಕ್ಕೆ ಯಾವುದೇ ಪ್ರಕ್ರಿಯೆ ಇರುವುದಿಲ್ಲ, ಕಾನೂನಿನ ಮೊರೆ ಹೋಗುವಂತಿಲ್ಲ, ಕೇಳಿದಾಕ್ಷಣ ವಿವರ ನೀಡಬೇಕಷ್ಟೇ.

2018ರ ಡಿಸೆಂಬರ್‌ನಲ್ಲಿ ಸರ್ಕಾರ ಈ ನಿಯಮಾವಳಿ ರೂಪಿಸಿ, ಸಾರ್ವಜನಿಕ ಅಭಿಪ್ರಾಯ ಕೇಳಿತ್ತು. ಗೂಗಲ್, ಫೇಸ್‌ಬುಕ್‌ನಂತಹ ಕಂಪನಿಗಳನ್ನು ಒಳಗೊಂಡ ‘ದಿ ಇಂಟರ್‌ನೆಟ್ ಆ್ಯಂಡ್ ಮೊಬೈಲ್ ಅಸೋಷಿಯೇಷನ್ ಆಫ್ ಇಂಡಿಯಾ’ ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ‘ಸುಪ್ರಿಂಕೋರ್ಟ್ ತಿಳಿಸಿದಂತೆ, ಇದು ಖಸಗಿತನದ ಹಕ್ಕಿನ ಉಲ್ಲಂಘನೆ’ ಎಂದು ಹೇಳಿದ್ದವು. ಆದರೂ ಸರ್ಕಾರ ಪಟ್ಟು ಬಿಡದೇ ಈ ನಿಯಮಾವಳಿ ಜಾರಿಗೆ ತರಲು ಹೊರಟಿದೆ.

ಹೀಗಾಗಿ ಸೋಷಿಯಲ್ ಮೀಡಿಯಾ ಕಂಪನಿಗಳು ತಮ್ಮ ಬಳಕೆದಾರರಿಗೆ ತಮ್ಮ ಐಡೆಂಟಿಟಿ ವಿವರ ನೀಡುವಂತೆ ನಿಯಮ ಮಾಡಲಿವೆ. ಇಷ್ಟು ವರ್ಷ ಕೇವಲ ಆನ್‌ಲೈನ್‌ನಲ್ಲಿ ಯಾವುದೇ ದಾಖಲೆ ಇಲ್ಲದೇ, ಒಂದಿಷ್ಟು ವೈಯಕ್ತಿಕ ವಿವರ ತುಂಬುವ ಮೂಲಕ ಫೇಸ್‌ಬುಕ್, ಟ್ವಿಟರ್ ಖಾತೆ ತೆರೆದು ನಿರಾಳವಾಗಿ ಸಂವಹನ ಮಾಡುತ್ತಿರುವ 40 ಕೋಟಿ ಭಾರತೀಯರು ಇನ್ನು ಮುಂದೆ ತಮ್ಮ ಖಾಸಗೀತನವನ್ನು ಕಳೆದುಕೊಳ್ಳಲಿದ್ದಾರೆ.
ಸುಳ್‌ಸುದ್ದಿ ತಡೆಯಲು ಮತ್ತು ಸಮಾಜವಿರೋಧಿ ಶಕ್ತಿಗನ್ನು ಪತ್ತೆ ಹಚ್ಚಲು ಈ ನಿಯಮಾವಳಿ ತರುತ್ತೇವೆಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ವಿಶ್ವದ ಹಲವಾರು ದೇಶಗಳಲ್ಲಿ ಸೈಬರ್ ಅನ್‌, ಪೋರ್ನ್‌ ಜಾಲತಾಣ (ಅಶ್ಲೀಲ ತಾಣ) ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು, ಅಂತರ್ಜಾಲ ಒದಗಿಸುವ ಸಾಮಾಜಿಕ ಜಾಲತಾಣಗಳ ಸೇವೆಯ ಮೇಲೆ ನಿಯಂತ್ರಣ ಹೊಂದಿವೆ. ಆದರೆ ಅಲ್ಲಿ ಸಾಮಾಜಿಕ ಜಾಲತಾಣಗಳ ನೆರವು ಪಡೆದು, ಸೈಬರ್ ತಜ್ಞರ ಮೂಲಕ ಅಪರಾಧಿಗಳ ಪತ್ತೆ ಹಚ್ಚುತ್ತಾರೆ. ಅಶ್ಲೀಲ ಮತ್ತು ದ್ವೇಷ ಹರಡುವ ಜಾಲತಾಣ ಮತ್ತು ಅಕೌಂಟುಗಳನ್ನು ಪತ್ತೆ ಹಚ್ಚಲು ಫೇಸ್‌ಬುಕ್ ಮತ್ತು ಟ್ವಿಟರ್‌ಗಳು ವಿಶೇಷ ಸಾಫ್ಟ್ವೇರ್ ರೂಪಿಸಿವೆ. ಅಂತಹ ಅಕೌಂಟುಗಳನ್ನು ನಿಷೇಧಿಸುತ್ತವೆ.

ಆದರೆ ಭಾರತದಲ್ಲಿ ತರಲು ಹೊರಟಿರುವ ಕಾನೂನು ಮತ್ತು ನಿಯಮಗಳು ಉಳಿದ ದೇಶಗಳ ನಿಯಮಗಳಿಗಿಂತ ಅಪಾಯಕಾರಿಯಾಗಿವೆ. ಯಾವುದೇ ಕಾನೂನು ಪ್ರಕ್ರಿಯೆ ಅಥವಾ ನೋಟಿಸ್ ಇಲ್ಲದೇ ಜಾಲತಾಣಗಳಿಗೆ ಇಂತಿಂಥವರ ವಿವರ ಬೇಕೆಂದಾಕ್ಷಣ ನೀಡಲೇಬೇಕು. ಯಾವುದೇ ಆಡಳಿತ ಪಕ್ಷ ಇದನ್ನು ತಮ್ಮ ವಿರೋಧಿಗಳನ್ನು ಹಣಿಯಲು ಬಳಸಬಹುದು. ತಮ್ಮ ಸಿದ್ದಾಂತ ಒಪ್ಪದ ಸಾಮಾನ್ಯ ಜನರನ್ನೂ ಪತ್ತೆ ಹಚ್ಚಿ ತೊಂದರೆ ನೀಡಬಹುದು. ಹೇಳಿಕೇಳಿ, ತನ್ನ ವಿರೋಧಿಸುವವರನ್ನು ದೇಶದ್ರೋಹಿ, ಅರ್ಬನ್ ನಕ್ಸಲ್ ಎಂದೆಲ್ಲ ಜೈಲಿಗಟ್ಟುವ ಈ ಸರ್ಕಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರೋಧಿಸುವವರ ಬೇಟೆಯಾಡಲು ಹೊರಟಂತಿದೆ.
(ಮಾಹಿತಿ: ದಿ ಎಕನಾಮಿಕ್ ಟೈಮ್ಸ್, ಎನ್‌ಡಿಟಿವಿಡಾಟ್ ಕಾಂ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ: ಮದುವೆ ರಿಸೆಪ್ಷನ್‌ನಲ್ಲಿ ಗೋಮಾಂಸ ಬಡಿಸಿದ ಆರೋಪ; ವರನ ತಂದೆ ಸೇರಿ ಏಳು ಮಂದಿ ಬಂಧನ, ಮಂಟಪ ಸೀಲ್

ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ನಡೆದ ಮದುವೆ ಆರತಕ್ಷತೆ (ವಲೀಮಾ) ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾರಂಭದಲ್ಲಿ ಅತಿಥಿಗಳಿಗೆ ಗೋಮಾಂಸವನ್ನು ಬೇಯಿಸಿ ಬಡಿಸಲಾಗಿದೆ ಎಂಬ...

ರಾಮ ಮಂದಿರ ದೇಣಿಗೆ ವಿವಾದ: ಎಫ್‌ಐಆರ್ ದಾಖಲಿಸಿ ತ್ವರಿತ ನ್ಯಾಯಾಲಯದ ವಿಚಾರಣೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ರಾಮ ದೇಣಿಗೆ ವಿವಾದ ದುರುಪಯೋಗ ಕುರಿತು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಕೂಡಲೇ, ಬಲಪಂಥೀಯ ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ. ವಿಎಚ್‌ಪಿ ಅಂತರರಾಷ್ಟ್ರೀಯ...

ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ: ವಿದೇಶಾಂಗ ಸಚಿವಾಲಯ

ಪಾಸ್‌ಪೋರ್ಟ್ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು, ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕಾರಿಗಳು ಬುಧವಾರ (ಜೂನ್ 24) ತಿಳಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ಖಚಿತವಾಗಿ ಸಾಬೀತುಪಡಿಸುವ...

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...

ತಿರುವನಂತಪುರಂ | 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧು : ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳಿಗೆ ನಾಲ್ಕು ವಾರಗಳ ಒಳಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ಜೂ.24) ಆದೇಶಿಸಿದೆ. ಜನವರಿ ತಿಂಗಳಲ್ಲಿ ಕೌನ್ಸಿಲರ್‌ಗಳ ಪ್ರಮಾಣವಚನ ನಡೆದಿತ್ತು. ಡೆಪ್ಯುಟಿ ಮೇಯರ್...

ಎಸ್‌ಐಆರ್‌ನಿಂದ ಹೊರಗಿಡಲಾದ ಜನರಿಗೆ ಪಡಿತರ ನಿರಾಕರಣೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸೂಚನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಸೌಲಭ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುತ್ತಿರುವ ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...