Homeಅಂಕಣಗಳುವಿಂಬಲ್ಡನ್ 2023; ಹೊಸ ತಾರೆಯೊಂದರ ಉದಯ!

ವಿಂಬಲ್ಡನ್ 2023; ಹೊಸ ತಾರೆಯೊಂದರ ಉದಯ!

- Advertisement -
- Advertisement -

ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಸೆಂಟರ್ ಕೋರ್ಟ್ ಕಳೆದ ಭಾನುವಾರ ಐತಿಹಾಸಿಕ ಘಟನೆಗೆ ಮತ್ತು ಹೊಸ ತಾರೆಯೊಂದರ ಉದಯಕ್ಕೆ ಸಾಕ್ಷಿಯಾಗಿದೆ. ಕೋಟ್ಯಂತರ ಟೆನಿಸ್ ಪ್ರಿಯರಿಗೆ ರಸದೌತಣವನ್ನೂ ಉಣಿಸಿದೆ. 23 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ 36ರ ಹರೆಯ ನೊವಾಕ್ ಜೊಕೊವಿಚ್ ಅವರಿಗೆ ಸೋಲುಣಿಸಿ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಡುವ ಮೂಲಕ ಸ್ಪೇನ್ 20ರ ಹರೆಯ ಕಾರ್ಲೊಸ್ ಅಲ್ಕರಾಝ್ ಹೊಸ ಇತಿಹಾಸ ಬರೆದಿದ್ದಾರೆ. 5 ಮೇ 2003ರಲ್ಲಿ ಜನಿಸಿದ ಅಲ್ಕರಾಝ್ ಈಗ ನಂ.1 ಟೆನಿಸ್ ತಾರೆಯಷ್ಟೇ ಅಲ್ಲ, ಅಲ್ಟಿಮೇಟ್ Gen Z ಆಟಗಾರ ಎಂದೂ ಪ್ರಖ್ಯಾತರಾಗಿದ್ದಾರೆ. ಫೆಡರರ್, ನಡಾಲ್, ಜೊಕೊವಿಚ್ ನಂತರ ಯಾರು? ಎಂಬ ಪ್ರಶ್ನೆಗೂ ಭರವಸೆ ಮೂಡಿಸಿದ್ದಾರೆ.

ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದ ಮೊದಲ ಸೆಟ್‌ಅನ್ನು ಜೊಕೊವಿಚ್ ಸುಲಭಕ್ಕೆ ಗೆದ್ದುಕೊಂಡಿದ್ದರು. 6-1 ಅಂತರದಲ್ಲಿ ಮೊದಲ ಸೆಟ್ ವಶಪಡಿಸಿಕೊಂಡಿದ್ದ ಜೊಕೊವಿಚ್ 24ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಸುಲಭವಾಗಿ ತನ್ನದಾಗಿಸಿಕೊಳ್ಳುತ್ತಾರೆ ಎಂದು ಅವರ ಬಹುತೇಕ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದ್ದರು. ಆದರೆ, ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಲ್ಲಲು ಅಲ್ಕರಾಝ್‌ಗೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ.

ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಅಲ್ಕರಾಝ್ ತನ್ನ ವೇಗದ ಸರ್ವ್-ರಿಟರ್ನ್ ಮತ್ತು ಲೀಲಾಜಾಲವಾದ ಬ್ಯಾಕ್‌ಹ್ಯಾಂಡ್ ಶಾಟ್ ಮೂಲಕ ಜೊಕೊವಿಚ್‌ರನ್ನು ತಬ್ಬಿಬ್ಬುಗೊಳಿಸಿದರು. ಪರಿಣಾಮ 7-6 (8-6), 6-1 ಅಂತರದಲ್ಲಿ ಮುಂದಿನ ಎರಡೂ ಸೆಟ್ ಅಲ್ಕರಾಝ್ ಕೈವಶವಾಯಿತು. ನಾಲ್ಕನೇ ಸೆಟ್ ಕಳೆದುಕೊಂಡರೂ ಐದನೇ ಸೆಟ್‌ನಲ್ಲಿ ಮೊನಚಿನ ಆಟ ಪ್ರದರ್ಶಿಸಿದ ಅಲ್ಕರಾಝ್ ಅಂತಿಮವಾಗಿ 1-6, 7-6 (8-6), 6-1, 3-6, 6-4 ಅಂತರದ ಐದು ಸೆಟ್‌ಗಳ ಮತ್ತು ಸುಮಾರು ಐದು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಹೋರಾಟದಲ್ಲಿ ಟೆನಿಸ್ ಲೋಕದ ದಿಗ್ಗಜ ನೊವಾಕ್ ಜೊಕೊವಿಚ್ ವಿರುದ್ಧ ಗೆಲುವು ಸಾಧಿಸಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟರು.

ನೊವಾಕ್ ಜೊಕೊವಿಚ್

ಇದು ಅಲ್ಕರಾಝ್ ಗೆದ್ದ ಎರಡನೇ ಗ್ರ್ಯಾಂಡ್‌ಸ್ಲಾಮ್ ಹಾಗೂ ಮೊದಲ ವಿಂಬಲ್ಡನ್ ಪ್ರಶಸ್ತಿಯಾಗಿದೆ. 2022ರ ಯುಎಸ್ ಓಪನ್ ಟೂರ್ನಿಯಲ್ಲಿ ಅಲ್ಕರಾಝ್ ತಮ್ಮ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಜಯಿಸಿದ್ದರು. ಈ ವರ್ಷದ ಆಗಸ್ಟ್-ಸೆಪ್ಟಂಬರ್‌ನಲ್ಲಿ ನಡೆಯಲಿರುವ ಯುಎಸ್ ಓಪನ್ ಮತ್ತು ಮುಂದಿನ ವರ್ಷದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗಳ ಮೇಲೆ ಈಗ ಎಲ್ಲರ ಕಣ್ಣೂ ನೆಟ್ಟಿವೆ.

ಎರಡು ದಾಖಲೆಗಳ ಸನಿಹದಲ್ಲಿ ಎಡವಿದ ಜೊಕೊವಿಚ್

ಅಲ್ಕರಾಝ್ ವಿರುದ್ಧದ ಸೋಲಿನೊಂದಿಗೆ ರೋಜರ್ ಫೆಡರರ್ ದಾಖಲೆ ಸರಿಗಟ್ಟುವ ಅಪರೂಪದ ಅವಕಾಶವೊಂದನ್ನು ಜೊಕೊವಿಚ್ ತಪ್ಪಿಸಿಕೊಂಡಿದ್ದಾರೆ. ಟೆನಿಸ್ ಲೋಕದಲ್ಲಿ ವರ್ಷಕ್ಕೆ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಟೂರ್ನಿಗಳಿದ್ದರೂ ವಿಂಬಲ್ಡನ್‌ಗೆ ತುಸು ಹೆಚ್ಚನ ಗೌರವವಿದೆ ಎನ್ನಬಹುದು. ಈ ಪ್ರತಿಷ್ಠಿತ ಟೂರ್ನಿಯಲ್ಲಿ 2003ರಿಂದ 2007ರ ಅವಧಿಯಲ್ಲಿ ರೋಜರ್ ಫೆಡರರ್ ಸತತ ಐದು ಬಾರಿ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು.

ನೊವಾಕ್ ಜೊಕೊವಿಚ್ 2018ರಿಂದ 2022ರ ಅವಧಿಯಲ್ಲಿ ಸತತ ನಾಲ್ಕು ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದರು. ಈ ವರ್ಷವೂ ಅವರು ಗೆಲುವು ಸಾಧಿಸಿದ್ದರೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಫೆಡರರ್ ಹೆಸರಲ್ಲಿದ್ದ ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದ ಶ್ರೇಯ ಅವರಿಗೆ ಸಲ್ಲುತ್ತಿತ್ತು. ಅಲ್ಲದೆ, ಈ ವರ್ಷ ನಡೆದ ಆಸ್ಟ್ರೇಲಿಯಾ ಓಪನ್ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿಯನ್ನೂ ಗೆದ್ದಿದ್ದ ಜೊಕೊವಿಚ್ ವಿಂಬಲ್ಡನ್ ಮುಕುಟ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ಲೆಕ್ಕಾಚಾರದಲ್ಲಿದ್ದರು. ಆದರೆ ಜೊಕೊವಿಕ್ ಅವರ ಗೆಲುವಿನ ನಾಗಾಲೋಟಕ್ಕೆ ಅಡ್ಡಿಯಾಗಿ ಫ್ರೆಂಚ್ ಓಪನ್ ಸೆಮಿಫೈನಲ್ ಸೋಲಿಗೆ ಕಾರ್ಲೊಸ್ ಅಲ್ಕರಾಝ್ ಸೇಡು ತೀರಿಸಿಕೊಂಡಿದ್ದಾರೆ. ಈ ಸೋಲಿನೊಂದಿಗೆ ಸರ್ಬಿಯಾ ಆಟಗಾರನ ಸತತ 34 ಪಂದ್ಯಗಳ ಜಯದ ಓಟಕ್ಕೂ ತೆರೆಬಿದ್ದಿದೆ.

ನಂಬರ್ 1 ಪಟ್ಟ ಉಳಿಸಿಕೊಂಡ ಕಾರ್ಲೊಸ್

ಬರೋಬ್ಬರಿ 4 ಗಂಟೆ 42 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಫೈನಲ್ ಹೋರಾಟದಲ್ಲಿ ಗೆಲುವಿನ ಸಂಭ್ರಮ ಕಂಡು ವಿಂಬಲ್ಡನ್ ಮುಕುಟ ಗೆದ್ದ ಕಾರ್ಲೊಸ್ ಅಲ್ಕರಾಝ್ ವಿಶ್ವದ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳುವುದರ ಜೊತೆಗೆ 2003ರ ಬಳಿಕ ಟೆನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್, ರಫಾಲ್ ನಡಾಲ್, ನೊವಾಕ್ ಜೊಕೊವಿಚ್, ಆಂಡಿ ಮರ್ರ್‍ಎ ನಂತರ ವಿಂಬಲ್ಡನ್ ಗೆದ್ದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ವಿಂಬಲ್ಡನ್‌ನಲ್ಲಿ 2 ದಶಕಗಳ ಕಾಲ ಉಳಿದುಕೊಂಡಿದ್ದ ಬಿಗ್ ಫೋರ್ ಪ್ರಾಬಲ್ಯಕ್ಕೆ ಈ ಮೂಲಕ ತೆರೆಬಿದ್ದಿದೆ. ಅಲ್ಕರಾಝ್ ಮುಂದಿನ ಪೀಳಿಗೆಯ ಸೂಪರ್ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಫ್ರೆಂಚ್ ಓಪನ್: ದಂತಕಥೆ ಜೊಕೊವಿಚ್ ಮುಡಿಗೆ 23ನೇ ಗ್ರಾಂಡ್‌ಸ್ಲ್ಯಾಮ್

ಇಂತಹ ಆಟಗಾರನ ಎದುರು ಆಡೇ ಇಲ್ಲ!

ವಿಂಬಲ್ಡನ್ ಫೈನಲ್ ಸೋಲಿನ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 23 ಗ್ರಾಂಡ್‌ಸ್ಲಾಮ್‌ಗಳ ವಿಜೇತ ನೊವಾಕ್ ಜೊಕೊವಿಚ್, ತಮ್ಮ ವೃತ್ತಿಬದುಕಿನಲ್ಲಿ ಕಾರ್ಲೊಸ್ ಅಲ್ಕರಾಝ್ ಮಾದರಿಯ ಆಟಗಾರನನ್ನು ಎದುರಾಗಿಯೇ ಇಲ್ಲ ಎಂದು ಗುಣಗಾನ ಮಾಡಿದ್ದಾರೆ.

“ಕಾರ್ಲೊಸ್ ಅಲ್ಕರಾಝ್ ಅವರಲ್ಲಿ ರೋಜರ್ ಫೆಡರರ್, ರಫಾಲ್ ನಡಾಲ್ ಮತ್ತು ನನ್ನ ಆಟದ ಸಮ್ಮಿಶ್ರಣ ಕಾಣಬಹುದು ಎಂದು ಚರ್ಚೆಯಾಗುತ್ತಿದೆ. ಇದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಕಾರ್ಲೊಸ್ ಪರಿಪೂರ್ಣ ಆಟಗಾರ. ನನ್ನ ವೃತ್ತಿಬದುಕಿನಲ್ಲಿ ಇಂತೊಬ್ಬ ಆಟಗಾರನ ಎದುರು ಈವರೆಗೆ ಆಡಿಲ್ಲ. ಮಾನಸಿಕವಾಗಿ ಕಾರ್ಲೊಸ್ ಅತ್ಯಂತ ಬಲಿಷ್ಠ ಆಟಗಾರ ಆಗಿದ್ದಾರೆ. 20ನೇ ವಯಸ್ಸಿಗೇ ಅವರ ಮಾನಸಿಕ ಸ್ಥಿತಿ ಸ್ವಾಪಜ್ಞತೆ, ಪ್ರಬುದ್ಧತೆ ಎಲ್ಲರನ್ನೂ ಮರುಳಾಗಿಸಿದೆ. ಅವರೊಬ್ಬ ಸ್ಪೇನ್‌ನ ಗೂಳಿ ಇದ್ದಂತೆ. ಸ್ಪರ್ಧಾತ್ಮಕ ಮನೋಭಾವ ಹಾಗೂ ಹೋರಾಟದ ಕಿಚ್ಚು ಅವರನ್ನು ಸಣ್ಣ ವಯಸ್ಸಿಗೇ ಈ ಹಂತಕ್ಕೆ ತಂದು ನಿಲ್ಲಿಸಿದೆ.

ನಡಾಲ್‌ರಂತೆಯೇ ಅತ್ಯುತ್ಕೃಷ್ಟ ರಕ್ಷಣಾತ್ಮಕ ಆಟ ಆಲ್ಕರಾಝ್‌ಗೂ ಒಲಿದಂತೆ ಕಾಣುತ್ತಿದೆ. ನನ್ನ ಪ್ರಮುಖ ಶಕ್ತಿ ಎನಿಸಿರುವ ಬ್ಯಾಕ್‌ಹ್ಯಾಂಡ್, ಡಬಲ್ ಹ್ಯಾಂಡೆಡ್ ಬ್ಯಾಕ್ ಹ್ಯಾಂಡ್ ಶಾಟ್‌ಗಳನ್ನು ಅಲ್ಕರಾಝ್ ನನ್ನಷ್ಟೇ ಚೆನ್ನಾಗಿ ಆಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪರಿಸ್ಥಿತಿಗೆ ತಕ್ಕಂತೆ ಆಟದ ಶೈಲಿಯನ್ನು ಬದಲಿಸಿಕೊಳ್ಳುವ ಸಾಮರ್ಥ್ಯ ಈ ಹುಡುಗನಿಗೆ ಈಗಾಗಲೇ ಕರಗತಗೊಂಡಿರುವುದನ್ನು ನೋಡಿ ಮೂಕವಿಸ್ಮಿತನಾಗಿದ್ದೇನೆ” ಎಂದು ಜೊಕೊವಿಚ್ ಕೊಂಡಾಡಿದ್ದಾರೆ.

ಮಹಿಳಾ ಸೆಂಗಲ್ಸ್: ಶ್ರೇಯಾಂಕ ರಹಿತ ಆಟಗಾರ್ತಿಗೆ ಪ್ರಶಸ್ತಿ

ವಿಂಬಲ್ಡನ್ 2023ರ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಝೆಕ್ ಗಣರಾಜ್ಯದ 24 ವರ್ಷದ ಆಟಗಾರ್ತಿ ಮರ್ಕೆಟಾ ವಾಂಡ್ರೊಸೊವಾ ಇತಿಹಾಸ ಬರೆದಿದ್ದಾರೆ. ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದಿದ್ದ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಝೆಕ್ ಆಟಗಾರ್ತಿ ಮರ್ಕೆಟಾ, 6-4, 6-4 ಅಂತರದ ನೇರ ಸೆಟ್‌ಗಳ ಅಂತರದಲ್ಲಿ ಟ್ಯುನಿಶಿಯಾದ ಅನುಭವಿ ಆಟಗಾರ್ತಿ 28 ವರ್ಷದ ಓನ್ಸ್ ಜಬೇಯುರ್ ಎದುರು ಗೆದ್ದು ಇತಿಹಾಸ ಬರೆದರು. ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಇತಿಹಾಸದಲ್ಲಿ ಟ್ರೋಫಿ ಗೆದ್ದ ಮೊತ್ತ ಮೊದಲ ಶ್ರೇಯಾಂಕರಹಿತ ಆಟಗಾರ್ತಿ ಎಂಬ ಶ್ರೇಯಕ್ಕೂ ಅವರು ಪಾತ್ರರಾಗಿದ್ದಾರೆ.

ಮರ್ಕೆಟಾ ವಾಂಡ್ರೊಸೊವಾ

ಟೂರ್ನಿಯಲ್ಲಿ ಶ್ರೇಯಾಂಕರಹಿತ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದ 2021ರ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮರ್ಕೆಟಾ ವಾಂಡ್ರೊಸೊವಾ, ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿ ಫೈನಲ್‌ಗೆ ದಾಪುಗಾಲಿಟ್ಟಿದ್ದರು. ಅಂತೆಯೇ ಫೈನಲ್‌ನಲ್ಲೂ ಆತ್ಮವಿಶ್ವಾಸದ ಆಟವಾಡಿ 6ನೇ ಶ್ರೇಯಾಂಕಿತೆ ಓನ್ಸ್ ಜಬೇಯುರ್ ಅವರ ಸವಾಲನ್ನು ಹತ್ತಿಕ್ಕಿದರು.

ಇದು ಮರ್ಕೆಟಾ ಗೆದ್ದ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಸಿಂಗಲ್ಸ್ ಕಿರೀಟವಾಗಿದೆ. 2019ರ ಫ್ರೆಂಚ್ ಓಪನ್ ಸಿಂಗಲ್ಸ್ ಫೈನಲ್ ತಲುಪಿದ್ದ ಮರ್ಕೆಟಾ, ಆಗಿನ ವಿಶ್ವದ ನಂ.1 ಆಟಗಾರ್ತಿ ಆಸ್ಟ್ರೇಲಿಯಾದ ಆಷ್ಲೇ ಬಾರ್ಟಿ ಎದುರು ನೇರ ಸೆಟ್‌ಗಳಿಂದ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಬಿವಿಪಿ ದಾಂಧಲೆ : ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅಜೀಂ ಪ್ರೇಮ್ ಜಿ ವಿವಿ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ (ಎಪಿಯು) ಎಬಿವಿಪಿ ಸದಸ್ಯರು ನುಗ್ಗಿ ದಾಂಧಲೆ ನಡೆಸಿದ ಬಳಿಕ, ಕ್ಯಾಂಪಸ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ 'ಸ್ಪಾರ್ಕ್ ರೀಡಿಂಗ್ ಸರ್ಕಲ್' ಎಂಬ ಸಾಮಾಜಿಕ ಮಾಧ್ಯಮ ಪುಟದ ವಿರುದ್ಧ ಕುಲಸಚಿವರು...

2019ರ ಈಸ್ಟರ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥರ ಬಂಧನ

2019ರ ಈಸ್ಟರ್ ಭಾನುವಾರದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾಧಿಕಾರಿಗಳು ಮಾಜಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್...

ಹೈದರಾಬಾದ್| ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ 12 ವರ್ಷದ ಬಾಲಕ

ವಿಡಿಯೋ ಗೇಮ್ ಆಡಿದ್ದಕ್ಕಾಗಿ ತಂದೆ ನಿರಂತರವಾಗಿ ಬೈಯುತ್ತಿದ್ದ ಕಾರಣ 12 ವರ್ಷದ ಬಾಲಕ (ಫೆ.26) ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು 'ಸಿಯಾಸತ್' ವರದಿ ಮಾಡಿದೆ. ಬಂಜಾರಾ ಹಿಲ್ಸ್‌ನ...

‘ಕೋಮು ಸಾಮರಸ್ಯ ಕದಡುವ ಸಾಧ್ಯತೆ’: ‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

'ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್' ಸಿನಿಮಾದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಗುರುವಾರ (ಫೆ.26) ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಸಿನಿಮಾ ನಾಳೆ...

ಕೈದಿಗಳಿಗೆ ನಿಯತಕಾಲಿಕ ವೈದ್ಯಕೀಯ ತಪಾಸಣೆಯ ಹಕ್ಕಿದೆ: ಮದ್ರಾಸ್ ಹೈಕೋರ್ಟ್ 

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಪ್ರತಿಯೊಬ್ಬ ಕೈದಿಯೂ ನಿಯತಕಾಲಿಕ ವೈದ್ಯಕೀಯ ತಪಾಸಣೆಗೆ ಅರ್ಹನಾಗಿದ್ದು, ಅಂತಹ ಆರೋಗ್ಯ ರಕ್ಷಣೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ...

ಡಿಜೆ ಮ್ಯೂಸಿಕ್ ವಿವಾದ: ಅಲಿಗಢದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ

ಉತ್ತರ ಪ್ರದೇಶ ರಾಜ್ಯದ ಅಲಿಗಢ ಸಮೀಪದ ಸುನಾನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಬಾರಾತ್ ಸಮಯದಲ್ಲಿ ಹಾಕಿದ್ದ ಡಿಜೆ ಮ್ಯೂಸಿಕ್‌ನಿಂದ ವಿವಾದ ಉಂಟಾಗಿದ್ದು, ದಲಿತ ಕುಟುಂಬದ ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಲಾಗಿದೆ...

‘ನೆತನ್ಯಾಹು ಅವರ ನಿರ್ಲಜ್ಜ ಸಮರ್ಥನೆ’ : ಪ್ರಧಾನಿ ಮೋದಿಯ ನೆಸೆಟ್ ಭಾಷಣ ಟೀಕಿಸಿದ ಕಾಂಗ್ರೆಸ್

ಇಸ್ರೇಲ್ ಸಂಸತ್ ನೆಸೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಗುರುವಾರ (ಫೆ.26) ತೀವ್ರವಾಗಿ ಟೀಕಿಸಿದ್ದು, ಇದು ಅವರ ಆತಿಥೇಯರಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ 'ನಿರ್ಲಜ್ಜ ಸಮರ್ಥನೆ' ಎಂದಿದೆ. ಇಸ್ರೇಲ್ ರಾಷ್ಟ್ರದ...

ವಿವಾದಿತ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಿದ್ದಪಡಿಸಿದ 8 ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಫೆ.26) ತೀವ್ರ ಅಸಮಾಧಾನ...

ಕ್ಯೂಬಾ ಜಲಪ್ರದೇಶ ಪ್ರವೇಶಿಸಿದ ಅಮೆರಿಕಾ ಮೂಲದ ಸ್ಪೀಡ್‌ಬೋಟ್ ಮೇಲೆ ಕ್ಯೂಬಾ ಪಡೆಗಳಿಂದ ಗುಂಡಿನದಾಳಿ, ನಾಲ್ವರು ಸಾವು 

ಕ್ಯೂಬಾ: ಬುಧವಾರ ಕ್ಯೂಬಾದ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಫ್ಲೋರಿಡಾ-ನೋಂದಾಯಿತ ಸ್ಪೀಡ್‌ಬೋಟ್‌ನ ಮೇಲೆ ಕ್ಯೂಬಾ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಈ ವೇಳೆ ಬೋಟ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡರುವುದಾಗಿ ವರದಿಯಾಗಿದೆ....

ಬಾಲಕಿಯೊಂದಿಗೆ ಅನುಚಿತ ವರ್ತನೆ : ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು

ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇಲೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಝಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ...