Homeಅಂತರಾಷ್ಟ್ರೀಯಗಾಝಾ: ಅಲ್-ಶಿಫಾ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಪ್ರಾಣ ಉಳಿಸಲು ಪರದಾಟ

ಗಾಝಾ: ಅಲ್-ಶಿಫಾ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಪ್ರಾಣ ಉಳಿಸಲು ಪರದಾಟ

- Advertisement -
- Advertisement -

ಗಾಝಾದ ಅಲ್-ಶಿಫಾ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ನವಜಾತ ಶಿಶುಗಳ ಜೀವ ಅಪಾಯದಲ್ಲಿದ್ದು, ಈಗಾಗಲೇ ಮೂರು ನವಜಾತ ಶಿಶುಗಳು ಮೃತಪಟ್ಟಿದೆ ಎಂದು ಪ್ಯಾಲೆಸ್ತೀನ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

ಅಲ್-ಶಿಫಾ ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶುಗಳು ಸೇರಿ 37 ನವಜಾತ ಶಿಶುಗಳು ಇದ್ದವು. ಇಸ್ರೇಲ್ ದಾಳಿಯ ಪರಿಣಾಮವಾಗಿ ಸಂಪೂರ್ಣ ವಿದ್ಯುತ್ ಬಿಕ್ಕಟ್ಟು ಎದುರಾಗಿದ್ದು, ವೈದ್ಯಕೀಯ ಸಿಬ್ಬಂದಿಗಳು ಮಕ್ಕಳಿಗೆ ಕೃತಕ ಉಸಿರಾಟವನ್ನು ನೀಡುತ್ತಿದ್ದಾರೆ ಎಂದು ಪ್ಯಾಲೆಸ್ತೀನ್‌ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ಸಚಿವಾಲಯದ ಡೈರೆಕ್ಟರ್ ಜನರಲ್ ಡಾ.ಮುನೀರ್ ಅಲ್-ಬುರ್ಶ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅಲ್-ಶಿಫಾ ಆಸ್ಪತ್ರೆಯಲ್ಲಿ ಮೂರು ಶಿಶುಗಳು ಸಾವನ್ನಪ್ಪಿವೆ. ನವಜಾತ ಶಿಶುಗಳ ವಾರ್ಡ್‌ನಲ್ಲಿನ ಜನರೇಟರ್ ಇಸ್ರೇಲ್‌ ದಾಳಿಯಿಂದ ನಿಷ್ಕ್ರಿಯವಾಗಿದೆ ಎಂದು ಹೇಳಿದ್ದಾರೆ.

ಅಲ್-ಶಿಫಾ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ಮಾತನಾಡಿ, ಇಸ್ರೇಲ್‌ ನಡೆಸಿದ ದಾಳಿಯಲ್ಲಿ ರಾತ್ರಿಯಲ್ಲಿ ವಿದ್ಯುತ್‌ ವ್ಯತ್ಯವಾಗಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಮರ್ವಾನ್ ಅಬು ಸದಾ ಮಾತನಾಡಿ, ಅಲ್-ಶಿಫಾದ ಹೊರಗೆ ಎಲ್ಲೆಡೆ ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ನಡೆದಿದೆ. ನೀವು ದಾಳಿಯ ಶಬ್ಧವನ್ನು ಪ್ರತಿ ಸೆಕೆಂಡಿನಲ್ಲಿ ಕೇಳಬಹುದು. ಅಲ್-ಶಿಫಾ ಆಸ್ಪತ್ರೆಯಿಂದ ಯಾರೂ ಹೊರಬರಲು ಸಾಧ್ಯವಾಗುತ್ತಿಲ್ಲ. ಯಾರೂ ಅಲ್-ಶಿಫಾ ಆಸ್ಪತ್ರೆಗೆ ಬರುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಯಲ್ಲಿರುವ ವೈದ್ಯರು ಈಗ ವಾರ್ಡ್‌ನಲ್ಲಿರುವ 36 ಶಿಶುಗಳಿಗೆ ಕೃತಕ ಉಸಿರಾಟವನ್ನು ನೀಡುತ್ತಿದ್ದಾರೆ. ತೀವ್ರ ನಿಗಾ ಘಟಕ, ಮಕ್ಕಳ ವಿಭಾಗ ಮತ್ತು ಆಮ್ಲಜನಕ ಸಾಧನಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ ಎಂದು ಡಾ.ಅಶ್ರಫ್ ಅಲ್-ಕಿದ್ರಾ ಹೇಳಿದ್ದಾರೆ.

ಅಲ್-ಶಿಫಾ ಆಸ್ಪತ್ರೆಯ ಅಂಗಳವನ್ನು ಇಸ್ರೇಲ್‌ ಪಡೆಗಳು ಗುರಿಯಾಗಿಸಿದ್ದು, ಆಸ್ಪತ್ರೆಯ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್-ಶಿಫಾ ಆಸ್ಪತ್ರೆಯ ಬಳಿ ಬಾಂಬ್ ದಾಳಿಯನ್ನು ತೋರಿಸುವ ವಿಡಿಯೋಗಳನ್ನು ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಪೋಸ್ಟ್‌ ಮಾಡಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆಗಳು, ಗಾಝಾ ಪಟ್ಟಿಯಲ್ಲಿ ಭಯೋತ್ಪಾದಕರು ಉಡಾಯಿಸಿದ ಕ್ಷಿಪಣಿ ಅಲ್-ಶಿಫಾ ಆಸ್ಪತ್ರೆಯ ಮೇಲೆ ಹೊಡೆದಿದೆ ಎಂದು ಹಮಾಸ್‌ ವಿರುದ್ದವೇ ಆರೋಪವನ್ನು ಮಾಡಿದೆ.

ಆಸ್ಪತ್ರೆಯ ಹೊರಗೆ ಆಂಬ್ಯುಲೆನ್ಸ್‌ನ್ನು ಗುರಿಯಾಗಿಸಿಕೊಂಡ ದಾಳಿ ನಡೆಸಿದ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ. ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದರು.

ಇದನ್ನು ಓದಿ: ಗಾಝಾದಲ್ಲಿ ನಾಗರಿಕರ ಹತ್ಯಾಕಾಂಡ: ಅಂತರಾಷ್ಟ್ರೀಯ ಸಮುದಾಯವನ್ನು ದೂಷಿಸಿದ ಸೌದಿ, ಇರಾನ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...