Homeರಂಜನೆಕ್ರೀಡೆ’ಹೆಂಡತಿ ಮತ್ತು ಗರ್ಲ್‌ಫ್ರೆಂಡ್ ಮಾತ್ರ ಒತ್ತಡ ನೀಡುತ್ತಾರೆ’ ಎಂದ ಸೌರವ್ ಗಂಗೂಲಿ: ವ್ಯಾಪಕ ಟೀಕೆ

’ಹೆಂಡತಿ ಮತ್ತು ಗರ್ಲ್‌ಫ್ರೆಂಡ್ ಮಾತ್ರ ಒತ್ತಡ ನೀಡುತ್ತಾರೆ’ ಎಂದ ಸೌರವ್ ಗಂಗೂಲಿ: ವ್ಯಾಪಕ ಟೀಕೆ

- Advertisement -
- Advertisement -

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮಹಿಳೆಯರ ಕುರಿತ ವಿವಾದಾತ್ಮಕ ಹೇಳಿಕೆಯಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಕಾರ್ಯಕ್ರಮವೊಂದರಲ್ಲಿ, “ಜೀವನದಲ್ಲಿ ಯಾವುದೇ ಒತ್ತಡವಿಲ್ಲ. ಹೆಂಡತಿ ಮತ್ತು ಗೆಳತಿಯರು ಮಾತ್ರ ಒತ್ತಡವನ್ನು ನೀಡುತ್ತಾರೆ” ಎಂದಬ ವಿವಾದಿತ ಹೇಳಿಕೆ ನೀಡಿದ್ದಾರೆ.

ಗುರ್ಗಾಂವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಾವ ಕ್ರಿಕೆಟಿಗನ ವರ್ತನೆಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ವಿರಾಟ್ ಕೊಹ್ಲಿ ಅವರ ವರ್ತನೆ ಇಷ್ಟ. ಆದರೆ ಅವರು ತುಂಬಾ ಜಗಳವಾಡುತ್ತಾರೆ” ಎಂದು ಹೇಳಿದ್ದಾರೆ.

ಜೊತೆಗೆ ಜೀವನದಲ್ಲಿನ ಎಲ್ಲಾ ಒತ್ತಡವನ್ನು ಹೇಗೆ ಎದುರಿಸುತ್ತಾರೆ ಎಂಬ ಇನ್ನೊಂದು ಪ್ರಶ್ನೆಗೆ, “ಜೀವನದಲ್ಲಿ ಯಾವುದೇ ಒತ್ತಡವಿಲ್ಲ. ಹೆಂಡತಿ ಮತ್ತು ಗೆಳತಿಯರು ಮಾತ್ರ ಒತ್ತಡವನ್ನು ನೀಡುತ್ತಾರೆ” ಎಂದಿದ್ದಾರೆ.

ಇದನ್ನೂ ಓದಿ: 2021 ಸಿನಿಮಾ ಲೋಕ: ಜಾತಿ ದೌರ್ಜನ್ಯವನ್ನು ಪ್ರಶ್ನಿಸಿದ, ಚಿಂತನೆಗೆ ಹಚ್ಚಿದ ಚಲನಚಿತ್ರಗಳ ಪಟ್ಟಿ ಇಲ್ಲಿದೆ

ಗಂಗೂಲಿಯವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.

ಸರ್ಕಲ್ ಆಫ್ ಕ್ರಿಕೆಟ್ ಎಂಬ ಖಾತೆಯಿಂದ ಗಂಗೂಲಿ ಅವರ ಹೇಳಿಕೆಯನ್ನು ಪೋಸ್ಟರ್‍ ಮಾಡಿ ಹಾಕಲಾಗಿದ್ದು, ಹಲವಾರು ಮಂದಿ ನಿಮ್ಮ ಹೇಳಿಕೆಯಿಂದ ನಮಗೆ ನೋವಾಗಿದೆ. ನಿಮಗೆ ನಾಚಿಕೆಯಾಗಬೇಕು ಎಂಬಂತಹ ಕಾಮೆಂಟ್ ಮಾಡುತ್ತಿದ್ದಾರೆ.

ದೇಶದ ಒಂದು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಮಾತನ್ನು ಬಯಸಿರಲಿಲ್ಲ. ಇದನ್ನು ಬಿಸಿಸಿಐ ಕೂಡ ಒಪ್ಪುತ್ತದೆಯೇ ಎಂಬ ಹೇಳಿಕೆಗಳನ್ನು ಮಾಡಲಾಗಿದೆ.


ಇದನ್ನೂ ಓದಿ: ವಿರಾಟ್ ಕೊಹ್ಲಿ ನಾಯಕತ್ವ ವಿವಾದ: ಬಿಸಿಸಿಐ ಇದನ್ನು ನಿಭಾಯಿಸುತ್ತದೆ ಎಂದ ಸೌರವ್ ಗಂಗೂಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...