Homeಮುಖಪುಟಓವೈಸಿ ಪಕ್ಷ ಎಸ್‌ಪಿಗೆ ಮುಳುವಾಯಿತೆ? ಬಿಜೆಪಿ ಅತಿ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳಿವು...

ಓವೈಸಿ ಪಕ್ಷ ಎಸ್‌ಪಿಗೆ ಮುಳುವಾಯಿತೆ? ಬಿಜೆಪಿ ಅತಿ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳಿವು…

- Advertisement -
- Advertisement -

ಸಮಾಜವಾದಿ ಪಾರ್ಟಿ ಹಾಗೂ ಇದರ ಮಿತ್ರ ಪಕ್ಷಗಳಿಗೆ ಅಸಾದುದ್ದೀನ್ ಓವೈಸಿಯವರ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷ ಹಲವು ಕ್ಷೇತ್ರಗಳಲ್ಲಿ ಬಿಸಿ ತುಪ್ಪವಾಗಿರುವ ಸಾಧ್ಯತೆಯನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ತೆರೆದಿಟ್ಟಿದೆ.

ಮತಗಳಿಕೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊಮ್ಮಿರುವ ಬಹುಜನ ಸಮಾಜವಾದಿ ಪಕ್ಷವು ಹಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜೊತೆಗೆ ಹಲವಾರು ಪಕ್ಷೇತರ ಅಭ್ಯರ್ಥಿಗಳು ಮುಸ್ಲಿಮರಾಗಿದ್ದರು. ಇವೆಲ್ಲವೂ ಎಸ್‌ಪಿ ಮತ ಚದುರಲು ಕಾರಣವಾಗಿರಬಹುದು. ಅದಕ್ಕಾಗಿ ಹೆಚ್ಚಾಗಿ ಮುಸ್ಲಿಂ ಮುಖವಾಣಿ ಎಂದೇ ಬಿಂಬಿತವಾಗಿರುವ ಹೈದ್ರಾಬಾದ್‌ ಮೂಲದ ಎಎಂಐಎಂಎ ಪಕ್ಷಕ್ಕೆ ಬಿದ್ದಿರುವ ಮತಗಳು ಒಂದು ವೇಳೆ ಎಸ್‌ಪಿ ತೆಕ್ಕೆಗೆ ಬಿದ್ದಿದ್ದರೆ ಮತ್ತಷ್ಟು ಕ್ಷೇತ್ರಗಳು ಎಸ್‌ಪಿ ಪಾಲಾಗುತ್ತಿದ್ದವು ಎಂಬ ಚರ್ಚೆಯಾಗುತ್ತಿದೆ.

ಯಾದವ ಹಾಗೂ ಮುಸ್ಲಿಂ ಸಮುದಾಯದ ಮತಗಳನ್ನು ಬಹುಮುಖ್ಯವಾಗಿ ನಂಬಿಕೊಂಡಿರುವ ಸಮಾಜವಾದಿ ಪಕ್ಷವನ್ನು ಮುಸ್ಲಿಂ ಮತದಾರರು ಕೈ ಹಿಡಿದಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿ ವಿರುದ್ಧ ಕಡಿಮೆ ಅಂತರದಲ್ಲಿ ಎಸ್‌ಪಿ ಸೋತಿರುವ ಕೆಲವು ಕ್ಷೇತ್ರಗಳಲ್ಲಿ ಎಐಎಂಐಎಂ ಸೇರಿದಂತೆ ಇತರ ಪಕ್ಷಗಳು ಮುಸ್ಲಿಂ ಮತಗಳನ್ನು ಚದುರಿಸಿರುವ ಸಾಧ್ಯತೆ ಇದೆ.

ಒಟ್ಟು ಮತ ವಿಭಜನೆಯಲ್ಲಿ ಬಿಎಸ್‌ಪಿ ಶೇ. 12.88, ಬಿಜೆಪಿ ಶೇ. 41.29, ಎಸ್‌ಪಿ 32.06 ಮತಗಳನ್ನು ಪಡೆದಿವೆ. ಎಎಎಪಿ ಶೇ. 0.38, ಎಐಎಫ್‌ಬಿ ಶೇ. 0.00, ಸಿಪಿಐ ಶೇ. 0.07, ಸಿಪಿಐ(ಎಂ) ಶೇ. 0.01, ಸಿಪಿಐ(ಎಂಎಲ್‌) ಶೇ. 0.01, ಕಾಂಗ್ರೆಸ್‌ ಶೇ. 2.33, ಐಯುಎಂಎಲ್‌‌ ಶೇ. 0.00, ಜೆಡಿಯು ಶೇ 0.11, ಎಲ್‌ಜೆಪಿ ಶೇ. 0.00, ಎಲ್‌ಜೆಪಿಆರ್‌ವಿ ಶೇ. 0.01, ಎನ್‌ಸಿಪಿ ಶೇ. 0.05, ನೋಟಾ ಶೇ. 0.69%, ಆರ್‌‌ಎಲ್‌ಡಿ ಶೇ. 2.85, ಎಸ್‌‌ಎಚ್‌‌ಎಸ್‌ ಶೇ. 0.02, ಪಕ್ಷೇತರರು ಶೇ. 6.74 ಮತಗಳನ್ನು ಪಡೆದಿದ್ದಾರೆ. ಎಐಎಂಐಎಂ ಪಕ್ಷವು ಉತ್ತರ ಪ್ರದೇಶದ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಶೇ. 0.49 ಮತಗಳನ್ನು ಎಐಎಂಐಎಂ ಪಡೆದಿರುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಶೇ. 0.49ರಷ್ಟು ಮತ ಗಳಿಸಿದರೂ ಮತ ವಿಭಜನೆಯಾಗುವಲ್ಲಿ ಎಐಎಂಐಎಂ ಪ್ರಮುಖ ಪಾತ್ರ ವಹಿಸಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕೆಲವು ಕ್ಷೇತ್ರಗಳ ಫಲಿತಾಂಶ ಚರ್ಚೆಯಾಗುತ್ತಿದೆ.

ಬಿಜ್ನೋರ್‌ ಕ್ಷೇತ್ರ

ಬಿಜ್ನೋರ್‌ ಕ್ಷೇತ್ರದಲ್ಲಿ ಬಿಜೆಪಿಯ ಸುಚಿ ಮೌಸಮ್‌ ಚೌದರಿ ಗೆಲುವು ಪಡೆದಿದ್ದಾರೆ. 97,165 ಮತಗಳನ್ನು ಅವರು ಗಳಿಸಿದ್ದರೆ, ಎಸ್‌ಪಿಯ ಮಿತ್ರ ಪಕ್ಷ ಆರ್‌ಎಲ್‌ಡಿಯ ಅಭ್ಯರ್ಥಿ ನೀರಜ್ ಚೌದರಿಯವರು 95,720 ಮತಗಳನ್ನು ಪಡೆದಿದ್ದಾರೆ. ಬಿಜೆಪಿ 1,445 ಮತಗಳ ಅಂತರದಲ್ಲಿ ಗೆದ್ದಿದೆ. ಎಐಎಂಐಎಂ ಅಭ್ಯರ್ಥಿ 2,290 ಮತಗಳನ್ನು ಗಳಿಸಿದ್ದರೆ, ಮೂರನೇ ಸ್ಥಾನದಲ್ಲಿರುವ ಬಿಎಸ್‌ಪಿ ಅಭ್ಯರ್ಥಿ 52,035 ಮತಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ.

***

ನಾಕೂರ್‌ ಕ್ಷೇತ್ರ

ನಾಕೂರ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ಚೌದರಿಯವರು 315 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಎಸ್‌ಪಿ ಹಾಗೂ ಬಿಜೆಪಿಯ ಭಾರಿ ಪೈಪೋಟಿಯ ನಡುವೆ ಬಿಎಸ್‌ಪಿ ಮೂರನೇ ಸ್ಥಾನದಲ್ಲಿದೆ. ಬಿಜೆಪಿ ಅಭ್ಯರ್ಥಿ 1,04,114 ಮತಗಳನ್ನು ಗಳಿಸಿದರೆ, ಎಸ್‌ಪಿ ಅಭ್ಯರ್ಥಿ ಧರಂಸಿಂಗ್ ಸೈನಿ 1,03,799 ಮತಗಳನ್ನು ಪಡೆದು ಸೋತಿದ್ದಾರೆ. ಎಐಎಂಐಎಂ ಪಕ್ಷದ ರಿಜ್ವಾನಾ 3,593 ಮತಗಳನ್ನು ಪಡೆದಿದ್ದಾರೆ. ಬಿಎಸ್‌ಪಿಯು ಮುಸ್ಲಿಂ ಅಭ್ಯರ್ಥಿ ಸಾಹಿಲ್‌ ಖಾನ್‌ ಅವರನ್ನು ಕಣಕ್ಕಿಳಿಸಿ 55,112 ಮತಗಳನ್ನು ಗಳಿಸಿದೆ.

***

ಕುರ್ಸಿ ಕ್ಷೇತ್ರ

ಕುರ್ಸಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಕೇಂದ್ರ ಪ್ರತಾಪ್ ವರ್ಮಾ 118,720 ಮತಗಳನ್ನು ಪಡೆಯುವ ಮೂಲಕ 217 ಮತಗಳ ಅಂತರದಲ್ಲಿ ಎಸ್‌ಪಿ ಅಭ್ಯರ್ಥಿ ರಾಕೇಶ್‌ ವರ್ಮಾ ಅವರನ್ನು ಸೋಲಿಸಿದ್ದಾರೆ. ರಾಕೇಶ್‌‌ 118,503 ಮತಗಳನ್ನು ಗಳಿಸಿದ್ದರು. ಮೂರನೇ ಸ್ಥಾನದಲ್ಲಿರುವ ಬಿಎಸ್‌ಪಿ ಅಭ್ಯರ್ಥಿ ಕುಮಾರಿ ಮೀತಾ ಗೌತಮ್‌ 35,561 ಮತಗಳನ್ನು ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ಎಐಎಂಐಎಂ ಅಭ್ಯರ್ಥಿ ಕಮೈಲ್ ಅಶ್ರಫ್ ಖಾನ್‌ 8,541 ಮತಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಐದನೇ ಸ್ಥಾನದಲ್ಲಿರುವ ಉರ್ಮಿಳಾ ಪಟೆ 2,803 ಮತಗಳನ್ನು ಗಳಿಸಿದ್ದರು.

***

ಸುಲ್ತಾನ್‌ಪುರ್‌ ಕ್ಷೇತ್ರ

ಸುಲ್ತಾನ್‌ಪುರ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿನೋದ್‌ ಸಿಂಗ್‌ ಅವರು 92,715, ಎಸ್‌ಪಿ ಅಭ್ಯರ್ಥಿ ಅನೂಪ್‌ ಸಂದ 91,706 ಮತ ಗಳಿಸಿದ್ದಾರೆ. 1,009 ಮತಗಳ ಅಂತರದಲ್ಲಿ ಬಿಜೆಪಿ ಗೆದ್ದಿದ್ದು, ಎಐಎಂಐಎಂನ ಮಿರ್ಜಾ ಅಕ್ರಮ್ ಬೇಗ್‌ 5,251 ಮತ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬಿಎಸ್‌ಪಿಯ ದೇವಿ ಶಹಾ ಮಿಶ್ರಾ ಅವರು 22,521 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿ ಫಿರೋಜ್‌ ಖಾನ್‌ ಕಣದಲ್ಲಿದ್ದು, 2,655 ಮತಗಳನ್ನು ಗಳಿಸಿದ್ದಾರೆ.

***

ಔರೈ

ಔರೈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಧೀನನಾಥ್ ಭಾಸ್ಕರ್‌ 93,691, ಎಸ್‌ಪಿಯ ಅಂಜನಿಯವರು 92,044 ಮತ ಗಳಿಸಿದ್ದರು. ಬಿಜೆಪಿ 1,647 ಮತಗಳ ಅಂತರದಲ್ಲಿ ಗೆದ್ದಿದೆ. ಮೂರನೇ ಸ್ಥಾನದಲ್ಲಿರುವ ಬಿಎಸ್‌ಪಿಯ ಕಮಲಾ ಶಂಕರ್‌ 28,413 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ 2,694 ಮತ, ವಿಎಸ್‌ಐಪಿ 2,499 ಮತ, ನೋಟಾ 2,205 ಮತಗಳು, ಎಐಎಂಐಎಂ ಪಕ್ಷದ ತೆದೈ 2,190 ಮತಗಳನ್ನು ಗಳಿಸಿದ್ದಾರೆ.

***

ಶಹಗಂಜ್ ಕ್ಷೇತ್ರ

ಬಿಜೆಪಿ ಮಿತ್ರ ಪಕ್ಷವಾದ ನಿಶಾದ್ ಪಾರ್ಟಿಯ ಅಭ್ಯರ್ಥಿ ರಮೇಶ್ 719 ಮತಗಳ ಅಂತರದಲ್ಲಿ ಎಸ್‌ಪಿ ಅಭ್ಯರ್ಥಿ ಶೈಲೇಂದ್ರ ಯಾದವ್‌ ವಿರುದ್ಧ ಜಯ ಗಳಿಸಿದ್ದಾರೆ. ಶೈಲೇಂದ್ರ ಅವರು 86,514 ಮತ ಗಳಿಸಿದ್ದರೆ ರಮೇಶ್ 87,233 ಮತ ಪಡೆದಿದ್ದಾರೆ. ಬಿಎಸ್‌ಪಿಯ ಇಂದರ್‌ದೇವ್‌ 48,957 ಮತ ಗಳಿಸಿದ್ದಾರೆ. ಎಐಎಂಐಎಂ ಪಕ್ಷದ ನಯಾದ್ ಅಹಮದ್ ಖಾನ್‌ 8,128 ಮತ ಗಳಿಸಿದ್ದಾರೆ. ವಿಎಸ್‌ಐಪಿ 2,551 ಮತ, ಕಾಂಗ್ರೆಸ್ 1,529 ಮತ ಪಡೆದಿವೆ.

***

ಹೀಗೆ ಹಲವು ಕ್ಷೇತ್ರಗಳಲ್ಲಿ ಎಸ್‌ಪಿ ಮತಗಳು ವಿಭಜನೆಯಾಗಿರುವ ಸಾಧ್ಯತೆಯನ್ನು ಚುನಾವಣಾ ಫಲಿತಾಂಶ ತೆರೆದಿಟ್ಟಿದೆ. ಉತ್ತರ ಪ್ರದೇಶದ ಚುಣಾವಣೆಯಲ್ಲಿ ಓವೈಸಿಯವರ ಉಪಸ್ಥಿತಿ, ಮುಸ್ಲಿಂ ಮತಬ್ಯಾಂಕ್‌ ಮೂಲಕ ಗುರುತಿಸಿಕೊಂಡಿರುವ ಎಸ್‌ಪಿಗೆ ಹೊಡೆತ ನೀಡಿದೆ ಎಂದೇ ಚರ್ಚೆಗಳಾಗುತ್ತಿವೆ. ಚುನಾವಣಾ ರಾಜಕಾರಣದಲ್ಲಿ ಜಾತಿಗಳ ಸಮೀಕರಣ, ಕೋಮು ಧ್ರುವೀಕರಣ ಹಾಗೂ ಸಂಪತ್ತಿನ ಕ್ರೋಢೀಕರಣ ಕೆಲಸ ಮಾಡುತ್ತದೆ ಎಂಬುದು ಓಪನ್‌ ಸಿಕ್ರೆಟ್‌. ಮಾಯವತಿಯವರ ಮೌನವೂ ಬಿಜೆಪಿಯ ದಿಗ್ವಿಜಯಕ್ಕೆ ಕಾರಣವಾಗಿರಬಹುದೆಂಬ ಸಾಧ್ಯತೆಯನ್ನು ಹೊರಗಿಟ್ಟು ನೋಡಲಾಗದು.


ಇದನ್ನೂ ಓದಿರಿ: ಯುಪಿ ಫಲಿತಾಂಶ 2024ರ ಚುನಾವಣೆಗೆ ದಿಕ್ಸೂಚಿ ಎಂದ ಮೋದಿ: ಇದು ಸುಳ್ಳು ನಿರೂಪಣೆ ಎಂದ ಪ್ರಶಾಂತ್ ಕಿಶೋರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....