Homeಮುಖಪುಟವಿಡಿಯೊ ನೋಡಿ: ಭಾರತದ ರಾಷ್ಟ್ರಗೀತೆ ನುಡಿಸಿ ಶುಭಕೋರಿದ ಪಾಕಿಸ್ತಾನಿ ಸಂಗೀತಗಾರ

ವಿಡಿಯೊ ನೋಡಿ: ಭಾರತದ ರಾಷ್ಟ್ರಗೀತೆ ನುಡಿಸಿ ಶುಭಕೋರಿದ ಪಾಕಿಸ್ತಾನಿ ಸಂಗೀತಗಾರ

- Advertisement -
- Advertisement -

ಪಾಕಿಸ್ತಾನಿ ಸಂಗೀತಗಾರೊಬ್ಬರು ರಬಾಬ್‌ ವಾದನದಲ್ಲಿ ಭಾರತದ ರಾಷ್ಟ್ರಗೀತೆಯನ್ನು ನುಡಿಸಿದ್ದು, “ಗಡಿಯಾಚೆಯ ನನ್ನ ವೀಕ್ಷಕರಿಗೆ ಸ್ವಾತಂತ್ರ್ಯ ದಿನದ ಉಡುಗೊರೆ ಇಲ್ಲಿದೆ” ಎಂದು ಅವರು ತಿಳಿಸಿದ್ದಾರೆ.

ಸಂಗೀತಗಾರ ಸಿಯಾಲ್ ಖಾನ್‌ ಅವರು ನುಡಿಸಿರುವ ರಾಷ್ಟ್ರಗೀತೆಯನ್ನು ನೀವು ಕೇಳಿರಿ.

ಮತ್ತೊಂದು ಟ್ವೀಟ್ ಮಾಡಿರುವ  ಸಿಯಾಲ್ ಖಾನ್‌, “ಭಾರತದ ಸ್ವಾತಂತ್ರ್ಯ ದಿನದ ಶುಭಾಶಯಗಳು. ನಮ್ಮ ನಡುವಿನ ಶಾಂತಿ, ಸಹಿಷ್ಣುತೆ, ಉತ್ತಮ ಸಂಬಂಧ, ಸ್ನೇಹ ಮತ್ತು ಸೌಹಾರ್ದತೆಯ ಸಂಕೇತವಾಗಿ ನಾನು ಭಾರತದ ರಾಷ್ಟ್ರಗೀತೆಯನ್ನು ಹಾಡಲು ಪ್ರಯತ್ನಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ. #IndependenceDay2022 (#ಸ್ವಾತಂತ್ರ್ಯ ದಿನಾಚರಣೆ 2022) ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.

ಈ ಸುದ್ದಿ ಬರೆಯುವ ಹೊತ್ತಿಗೆ ಏಳು ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೊವನ್ನು ರೀಟ್ವೀಟ್ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸಿಯಾಲ್ ಖಾನ್ ಅವರು ಪಾಕಿಸ್ತಾನದ ಪೇಶಾವರ್‌ನವರು ಎಂದು ತಿಳಿದುಬಂದಿದೆ.

ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ಉಭಯ ದೇಶಗಳ ಸೈನಿಕರು

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತ-ಪಾಕ್ ಸೈನಿಕರು ಸಿಹಿಹಂಚುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯಾದ ಅಟ್ಟಾರಿ-ವಾಘಾದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ಪಾಕಿಸ್ತಾನ ರೇಂಜರ್ಸ್ ಮತ್ತು ಬಿಎಸ್‌ಎಫ್ ಸಿಹಿ ಹಂಚಿಕೊಂಡಿದ್ದಾರೆ.

ಭಾರತವು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡರೆ, ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯ ದಿನವನ್ನು ಪಾಕಿಸ್ತಾನ ಆಚರಿಸಿಕೊಳ್ಳುತ್ತದೆ. ಎರಡೂ ದೇಶಗಳ ನಡುವೆ ವಿಶೇಷ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹಳೆಯ ಸಂಪ್ರದಾಯದಂತೆ ಸೈನಿಕರು ಗಡಿಯಲ್ಲಿ ಪರಸ್ಪರ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...