Homeಮುಖಪುಟರಫೇಲ್‌ ಹಗರಣ : ನಾಳೆ ಸುಪ್ರೀಂಕೋರ್ಟ್‌‌ನಿಂದ ಮಹತ್ವದ ತೀರ್ಪು

ರಫೇಲ್‌ ಹಗರಣ : ನಾಳೆ ಸುಪ್ರೀಂಕೋರ್ಟ್‌‌ನಿಂದ ಮಹತ್ವದ ತೀರ್ಪು

- Advertisement -
- Advertisement -

ಬಹುದಿನಗಳಿಂದ ಯುಪಿಎ ಮತ್ತು ಎನ್‌ಡಿಎ ನಾಯಕರ ವಾಕ್ಸಮರಕ್ಕೆ ಮತ್ತು ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿರುವ ರಫೇಲ್‌ ಯುದ್ಧ ವಿಮಾನ ಹಗರಣದ ತೀರ್ಪನ್ನು ನಾಳೆ ( ನವೆಂಬರ್‌ 14) ಸುಪ್ರೀಂಕೋರ್ಟ್‌ ಪ್ರಕಟಿಸಲಿದೆ.

ರಫೇಲ್‌ ಹಗರಣದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ ಚಿಟ್‌ ನೀಡಿರುವ ಬಗ್ಗೆ ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್‌ ಗುರುವಾರ (ನಾಳೆ) ತೀರ್ಪು ಪ್ರಕಟಿಸಲಿದೆ. ಮೇ 10ರಂದೇ ಅರ್ಜಿ ವಿಚಾರಣೆ ಸಂಪೂರ್ಣಗೊಳಿಸಿದ್ದ ಸುಪ್ರೀಂಕೋರ್ಟ್‌ ತೀರ್ಪನ್ನು ಕಾಯ್ದಿರಿಸಿತ್ತು.

ಇದನ್ನೂ ಓದಿ: ರಫೇಲ್ ಡೀಲ್ ವೃತ್ತಾಂತ

ಫ್ರೆಂಚ್ ಸಂಸ್ಥೆ ಡಸಾಲ್ಟ್ ಏವಿಯೇಷನ್‌ ಜತೆ ಮಾಡಿಕೊಂಡ ರಫೇಲ್‌ ಫೈಟರ್‌ ಜೆಟ್‌ ಒಪ್ಪಂದದಲ್ಲಿ ಕೇಂದ್ರ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಚುನಾವಣೆಯಲ್ಲಿ ರಫೇಲ್‌ ಅಸ್ತ್ರ ಬಳಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮೋದಿ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದರು. ಈ ಬಗ್ಗೆ ವಿಚಾರಣೆ ನಡೆದು, ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ಕೂಡ ನೀಡಲಾಗಿತ್ತು.

ಇದನ್ನೂ ಓದಿ: ರಫೇಲ್: ಕೇಂದ್ರಕ್ಕೆ ಮುಳುವಾದ ಮುಚ್ಚಿದ ಲಕೋಟೆ ಮತ್ತು ಬಿಜೆಪಿಯ ದ್ವಂದ್ವ ನಿಲುವು

ಹಗರಣದಲ್ಲಿ ಕೇಂದ್ರಕ್ಕೆ ನೀಡಲಾದ ಕ್ಲೀನ್‌ ಚಿಟ್‌ ಮರುಪರಿಶೀಲಿಸುವಂತೆ ಕಾಂಗ್ರೆ‌ಸ್‌ ನಾಯಕ ಯಶ್ವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಕಾರ್ಯಕರ್ತ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್‌ ನಾಳೆ ತೀರ್ಪು ಪ್ರಕಟಿಸಲಿದೆ.

ರಫೇಲ್‌ ಹಗರಣ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾಯಮೂರ್ತಿ ಎಸ್‌.ಕೆ.ಕೌಲ್‌, ಕೆ.ಎಂ.ಜೋಸೆಫ್‌ ಅವರಿರುವ ತ್ರಿಸದಸ್ಯ ಪೀಠ ತೀರ್ಪು ನೀಡಲಿದೆ.

ಇದನ್ನೂ ಓದಿ: ರಫೇಲ್ ರಾದ್ಧಾಂತ: ಮೋದಿ ಭವಿಷ್ಯದ ಮೇಲೆ `ಸುಪ್ರೀಂ’ ಹೊಸ ತೀರ್ಪಿನ ಪರಿಣಾಮ ಹೇಗಿರಲಿದೆ ಗೊತ್ತಾ?

ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆರೋಪಿಸುತ್ತಲೇ ಬಂದಿದ್ದಾರೆ. ಬಲಿಷ್ಠ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ 30 ಸಾವಿರ ಕೋಟಿ ಅಕ್ರಮವೆಸಗಿದ್ದಾರೆ ಎಂಬ ಆರೋಪವಿದೆ. ಯುದ್ಧ ವಿಮಾನ ಖರೀದಿಗಾಗಿ ಫ್ರಾನ್ಸ್‌ ಸರ್ಕಾರದೊಂದಿಗೆ ಭಾರತ ರಫೇಲ್‌ ಜೆಟ್‌ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆದಿದೆ.

ರಫೇಲ್‌ ಯುದ್ಧ ವಿಮಾನಗಳ ಬಿಡಿ ಭಾಗಗಳ ತಯಾರಿಕೆಯ ಹೊಣೆಯನ್ನು ಎಚ್‌ಎಎಲ್‌ಗೆ ಬದಲಾಗಿ ರಿಲಯನ್ಸ್‌ ಇಂಡಸ್ಟ್ರಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ರಾಹುಲ್‌ ಗಾಂಧಿ ಮಾಡಿದ್ದ ಆರೋಪವನ್ನು ರಿಲಯನ್ಸ್‌ ತಳ್ಳಿಹಾಕಿತ್ತು. ಅಷ್ಟೇ ಅಲ್ಲದೇ ಉದ್ದೇಶಿತ ಒಪ್ಪಂದಕ್ಕೂ, ರಫೇಲ್‌ ಖರೀದಿ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ ಎಂದಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...