Homeನಾನು ಗೌರಿಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

ಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

- Advertisement -
- Advertisement -

ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು..: ಪ್ರತಿಭಾ ನಂದಕುಮಾರ್

ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಮಾತು ಮರೆತ ಭಾರತದ ಅಂಕಣದ ’ಕರ್ನಾಟಕದಲ್ಲಿ ಅಸ್ಪೃಶ್ಯತೆ’ (ಇಲ್ಲಿ ಕ್ಲಿಕ್ ಮಾಡಿ) ಬರಹಕ್ಕೆ ಸಂಬಂಧಿಸಿದಂತೆ ಕವಿ-ಬರಹಗಾರ್ತಿ ಪ್ರತಿಭಾ ನಂದಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದರು: “ಹಲವು ಹೇಳಿಕೆಗಳಿಗೆ ಸೂಕ್ತ ಉಲ್ಲೇಖಗಳನ್ನು (ರೆಫೆರೆನ್ಸ್) ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು. ಉದಾಹರಣೆಗೆ ’ಮಾದಿಗರ ಗಲ್ಲೇಬಾನಿ (ಚಪ್ಪಲಿ ತೊಳೆದ ನೀರು) ನೀರಿಲ್ಲದೆ ಬ್ರಾಹ್ಮಣರ ಹೆಣ್ಣು ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?

ಪ್ರತಿಭಾ ನಂದಕುಮಾರ್

ಮಹಾಭಾರತದಲ್ಲಿ ಕರ್ಣನು ಶಲ್ಯನನ್ನು ಹೀಯಾಳಿಸುವಾಗ ಮಾದ್ರಕರ ಹೆಂಗಸರ ಬಗ್ಗೆ ಕೀಳಾಗಿ ವರ್ಣಿಸುತ್ತಾನೆ. ಆದರೆ ಅಲ್ಲಿ ಅಸ್ಪೃಶ್ಯತೆಯ ಪ್ರಸ್ತಾಪವಿಲ್ಲ. ಮಾದ್ರಕ-ಮಾದ್ರ ರಾಜ್ಯ-ಮಾದ್ರಿ-ಅವಳ ಅಣ್ಣ ಶಲ್ಯ. ಭೀಷ್ಮ ಮಾದ್ರ ರಾಜ್ಯಕ್ಕೆ ಹೋಗಿ ಮಾದ್ರಿಯನ್ನು ಪಾಂಡುವಿಗೆ ವಧುವಾಗಲು ಕೋರಿದಾಗ ಶಲ್ಯ ’ಪಾಣಿಗ್ರಹಣ ತಮ್ಮಲ್ಲಿಲ್ಲ ’ತೆರ’ ಕೊಟ್ಟು ಕರೆದುಕೊಂಡು ಹೋಗು’ ಎಂದಾಗ ಭೀಷ್ಮ ಹಣ, ಚಿನ್ನ, ಆನೆ, ಕುದುರೆ ಇತ್ಯಾದಿ ಕೊಟ್ಟು ಅವಳನ್ನು ಕರೆದುಕೊಂಡು ಹೋಗುತ್ತಾನೆ. ಮಾದ್ರಕರು ಮಾದರುಗಳಾದರೆ (ಕರ್ಣನ ಹೀಯಾಳಿಕೆ ಅರ್ಥೈಸಿ) ಭೀಷ್ಮ ಪಾಂಡುವಿಗೆ ಮಾದ್ರಿಯನ್ನು ಮದುವೆಯಾಗಿಸಿದ ಅಂದರೆ ಅಲ್ಲಿ ವರ್ಣ ಸಂಕರ ಇರಲಿಲ್ಲ ಎಂದರ್ಥವೇ? ಉತ್ತರದಲ್ಲಿ ಮಹಾಭಾರತದ ಕಾಲಕ್ಕೆ (ಆಗಿನ ಆರ್ಯರ ಪದ್ಧತಿಯಂತೆ) ಅಸ್ಪೃಶ್ಯತೆ ಇರಲಿಲ್ಲ ಅಂದರೆ ಅಲ್ಲಿಂದ ದಕ್ಷಿಣಕ್ಕೆ ಬಂದ ’ಬ್ರಾಹ್ಮಣ ಪುರೋಹಿತರು ತಮ್ಮೊಂದಿಗೆ ಚಾತುರ್ವರ್ಣ ಧರ್ಮವನ್ನು ಹೊತ್ತುಕೊಂಡು ಹೋದರು ಹಾಗೂ ವಿಸ್ತರಿಸಿದರು. ಈ ಭಾಗವಾಗಿಯೇ ಕರ್ನಾಟಕಕ್ಕೂ ವರ್ಣವ್ಯವಸ್ಥೆ ಕಾಲಿಟ್ಟಿತು. ಅದರೊಂದಿಗೆ ಜಾತಿಪದ್ಧತಿ, ಅಸ್ಪೃಶ್ಯತೆಯೂ ಕಾಲಿಟ್ಟಿತು’ ಎನ್ನುವುದನ್ನು ಅರ್ಥೈಸುವಲ್ಲಿ ಸ್ವಲ್ಪ ಗೊಂದಲ ಇದೆ.

ಚಾತುರ್ವರ್ಣ ಪರಿಪಾಲಿಸದ ಶಲ್ಯ ವಂಶಸ್ಥರನ್ನು ಅಸ್ಪೃಶ್ಯರು ಎನ್ನಲಾಗುವುದಿಲ್ಲ: ಸಾಕ್ಯ ಸಮಗಾರ

ಪ್ರಶ್ನೆ 1. ’ಮಾದಿಗರ ಗಲ್ಲೇಬಾನಿ ನೀರಿಲ್ಲದೆ ಬ್ರಾಹ್ಮಣರ ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?
ಸ್ಪಷ್ಟೀಕರಣ: ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪ್ರಖ್ಯಾತ ಸಂಸ್ಕೃತಿ ಚಿಂತಕ ಹಾಗೂ ಕವಿ ಕೆ. ಬಿ. ಸಿದ್ದಯ್ಯನವರು ತಮ್ಮ ಗಲ್ಲೇಬಾನಿ ಖಂಡಕಾವ್ಯಕ್ಕೆ ಮುನ್ನುಡಿ ಬರೆಯುತ್ತಾ ಹೀಗೆ ಉಲ್ಲೇಖಿಸುತ್ತಾರೆ. ’ಈ (ಗಲ್ಲೇಬಾನಿ) ನೀರನ್ನು ಶಾಸ್ತ್ರದ ನೀರು ಎಂದು ಕರೆಯುತ್ತಾರೆ. ವಿಪ್ರ ಬಂಧುಗಳು ಅವರಲ್ಲಿ ನಡೆಯುವ ವಿವಾಹ ಸಂದರ್ಭದಲ್ಲಿ ನವವಧುವರರ ನೆತ್ತಿಯ ಮೇಲೆ ’ಶಾಸ್ತ್ರದ ನೀರ’ನ್ನು ಚುಮುಕಿಸಿ, ಅರುಂಧತಿ ನಕ್ಷತ್ರ ದರ್ಶನ ಮಾಡಿಸಿದರೆ ಶುಭವಾಗುತ್ತದೆ ಎಂದು ಕಲ್ಲುನೀರು ಕರಗೋ ಹೊತ್ತಿನಲ್ಲಿ ಕಾಡಿಬೇಡಿ ’ಗಲ್ಲೇಬಾನಿ’ ನೀರನ್ನು ಚಮ್ಮಾರನ ಅನುಗ್ರಹದಿಂದ ಪಡೆದುಕೊಳ್ಳುತ್ತಾರೆಂಬುದು ಜನಪದರ ನಾಲಿಗೆ ಮೇಲಿನ ಸೋಜಿಗದ ಸಂಗತಿಯಾಗಿದೆ’ ಎನ್ನುತ್ತಾರೆ.

ಡಾ. ಎಂ. ಚಿದಾನಂದ ಮೂರ್ತಿಯವರು ಬರೆದಿರುವ ’ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ’ ಕೃತಿಯಲ್ಲಿ ’ಚಪ್ಪಲಿ ಹೊಲಿಯಲು ಅದ್ದುವ ನೀರನ್ನು ಪವಿತ್ರವೆಂದು ಭಾವಿಸುವ ಹೊಲೆಯರು ಅದು ಬ್ರಾಹ್ಮಣರ ಕೈಗೆ ಹೋಗದಂತೆ ಎಚ್ಚರ ವಹಿಸುತ್ತಾರೆ’ ಎಂದು ಬರೆಯುತ್ತಾ ಮುಂದುವರೆದು ’ಕೆಲವೆಡೆ ಬ್ರಾಹ್ಮಣರು ತಮ್ಮ ಮದುವೆಯ ದಿನ ರಾತ್ರಿ ಗುಟ್ಟಾಗಿ ಹೊಲೆಗೇರಿಗೆ ಬಂದು ’ಸುರೆಬಾನಿ’ ನೀರನ್ನು (ಚಪ್ಪಲಿ ಅದ್ದಿದ ನೀರನ್ನು) ತೆಗೆದುಕೊಂಡು ಹೋಗುತ್ತಾರೆ ಎಂಬ ವದಂತಿಗಳಿವೆ’ ಎನ್ನುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಮಾದಿಗ’ರೆಂದು ಹಾಗೂ ಮೈಸೂರು ಜಿಲ್ಲೆಯ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಹೊಲೆಯ’ರೆಂದು ಕರೆಯುವ ವಾಡಿಕೆ ಇದೆ. ಇದಕ್ಕೂ ಮೂಲಕಾರಣ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರು ಕೊಂಡೊಯ್ಯುವುದಾಗಿದೆ.

ಕೆ. ಬಿ. ಸಿದ್ದಯ್ಯ

ಈ ಜನಪದ ಸ್ಮೃತಿಯ ಮೂಲ ಹಿಡಿದು ಹೊರಟಾಗ ಅದು ವಚನ ಚಳವಳಿಯ ಹರಳಯ್ಯ ದಂಪತಿ ಮತ್ತು ಬ್ರಾಹ್ಮಣ ಮಧುವರಸ ಪ್ರಸಂಗಕ್ಕೆ ಹೋಗಿ ನಿಲ್ಲುತ್ತದೆ. ಬಸವಣ್ಣನವರು ಹರಳಯ್ಯರಿಗೆ ಶರಣುಶರಣಾರ್ಥಿ ಎಂದುದನ್ನು ಋಣವೆಂದು ತಿಳಿದ ಹರಳಯ್ಯನ ತನ್ನ ಮಡದಿಗೆ ಹೋಗಿ ಈ ವಿಚಾರ ತಿಳಿಸಿದಾಗ ಇಬ್ಬರ ತೊಡೆ ಚರ್ಮದಿಂದ ಬಸವಣ್ಣನಿಗೆ ಚಪ್ಪಲಿ ಮಾಡಿಕೊಡಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ ಹಾಗೂ ಹಾಗೆಯೇ ಮಾಡುತ್ತಾರೆ. ಹರಳಯ್ಯ ದಂಪತಿಗಳು ಅದನ್ನು ಹೊತ್ತು ಬಸವಣ್ಣನ ಬಳಿಗೆ ತೆರಳುವಾಗ ದಾರಿಯಲ್ಲಿ ಕಂಡ ಮಧುವರಸ ಆ ಚಪ್ಪಲಿಗಳನ್ನು ಬಲವಂತದಿಂದ ಕಸಿದು ಮೆಟ್ಟಿಕೊಳ್ಳುತ್ತಾನೆ. ತಕ್ಷಣವೇ ಆ ಚಪ್ಪಲಿಗಳು ಬೆಂಕಿಯಂತೆ ಉರಿಯಲಾರಂಭಿಸುತ್ತವೆ. ಉರಿಚಮ್ಮಾಳಿಗೆ ಆಗುತ್ತವೆ. ಚಪ್ಪಲಿಗಳನ್ನು ತೆಗೆದರೂ ಆ ಮೈ ಉರಿ ಕಾಣೆಯಾಗದೆ ತೀವ್ರವಾಗುತ್ತದೆ. ಅದೆಷ್ಟೇ ಔಷಧೋಪಚಾರ, ಪೂಜೆಗಳನ್ನು ಮಾಡಿದರೂ ಉರಿ ಕಡಿಮೆಯೇ ಆಗುವುದಿಲ್ಲ. ಕಡೆಗೆ ಹರಳಯ್ಯನ ಮನೆಯ ಮಗಳು ಗಲ್ಲೇಬಾನಿಯ ನೀರನ್ನು ಮಧುವರಸ ಮೈಮೇಲೆ ಸುರಿದಾಗ ಉರಿ ಕಡಿಮೆಯಾಗುತ್ತದೆ. ಅಂದಿನಿಂದ ಬ್ರಾಹ್ಮಣರಿಗೆ ಗಲ್ಲೇಬಾನಿಯ ನೀರು ಪವಿತ್ರ ಎಂಬ ಜಾನಪದ ಕತೆ ಜನಮಾನಸದಲ್ಲಿ ಬೆರೆತುಹೋಗಿದೆ. ಇದಕ್ಕೆ ಮಂಟೆಸ್ವಾಮಿ ಹಾಗೂ ಮಲೆ ಮಹದೇಶ್ವರ ಕಾವ್ಯಗಳೇ ಸಾಕ್ಷಿ.

ಇನ್ನು ಪುರಾಣಗಳನ್ನು ಶೋಧಿಸಿದಾಗ ವಸಿಷ್ಠ ತಾನು ಮದುವೆಯಾಗುವ ಹುಡುಗಿಯನ್ನು ಹುಡುಕಿಕೊಂಡು ಬರುವುದು ಮಾದಿಗರ ಕೇರಿಗೆಯೇ. ಅವನು ಮಾದಿಗ ಅರುಂಧತಿಯ ಮನೆಗೆ ಬರುತ್ತಾನೆ. ಅವಳ ಮೂಲ ಹೆಸರು ಆರಂಜ್ಯೋತಿ. ಅವಳು ಗಲ್ಲೇಬಾನಿಯ ನೀರಿನಿಂದ ಆತನನ್ನು ಪರಿಶುದ್ಧಗೊಳಿಸುತ್ತಾಳೆ ಹಾಗೂ ವಿವಾಹವಾಗುತ್ತಾಳೆ. ಇದರ ಬಗ್ಗೆ ಸಂಸ್ಕೃತಿ ಚಿಂತಕ ವಡ್ಡಗೆರೆ ನಾಗರಾಜರವರು ಸಂಪೂರ್ಣ ಅಧ್ಯಯನ ಮಾಡಿದ್ದಾರೆ.

ಕುತೂಹಲಕಾರಿ ಎಂದರೆ 1891ರ ಬ್ರಿಟಿಷ್ ಭಾರತದ ಮೊದಲ ಜನಗಣತಿಯಲ್ಲಿ ಮೈಸೂರಿನ ಮಾದಿಗರು ತಮ್ಮನ್ನು ’ಮಾತಂಗ ಬ್ರಾಹ್ಮಣರು’ ಎಂದು ಘೋಷಿಸಿಕೊಂಡಿರುವುದು ಸಹ ಇಲ್ಲಿ ಉಲ್ಲೇಖಾರ್ಹ (ದಕ್ಷಿಣ ಭಾರತದ ಜಾತಿ ಬುಡಕಟ್ಟುಗಳು – ಸಂಪುಟ 4 – ಎಡ್ಗರ್ ಥರ್ಸ್ಟನ್/ಕೆ. ರಂಗಾಚಾರಿ)

ಡಾ. ಎಂ. ಚಿದಾನಂದ ಮೂರ್ತಿ

ಒಟ್ಟಾರೆ ಚರ್ಮವನ್ನು ಹದಮಾಡಿ ಚಪ್ಪಲಿಯನ್ನು ಅದ್ದುವ ನೀರು ಪವಿತ್ರ. ಇದರಿಂದ ಬ್ರಾಹ್ಮಣರೂ ಪವಿತ್ರವಾಗುತ್ತಾರೆ ಎಂಬುದು ಐತಿಹ್ಯ. ಯಾವ ಕಾಯಕವೂ ಉಚ್ಚವಲ್ಲ, ನೀಚವಲ್ಲ ಎಂಬ ಸತ್ಯವನ್ನು ಸಾರುತ್ತದೆ ಈ ಆಚರಣೆ.

ಪ್ರಶ್ನೆ 2. ಮಹಾಭಾರತದ ಶಲ್ಯ ಮಾದಿಗನಲ್ಲವೇ?

ಸ್ಪಷ್ಟೀಕರಣ: ಅಲ್ಲ. ಮಹಾಭಾರತವು ರಾಮಾಯಣಕ್ಕಿಂತಲೂ ಹಿಂದಿನ ಮಹಾಕಾವ್ಯವಾಗಿದೆ. ರಾಮಾಯಣ ಬರೆದ ಕಾಲಘಟ್ಟದಲ್ಲಿಯೇ ಅಸ್ಪೃಶ್ಯತೆ ಕಂಡುಬರದೇ ಇರುವಾಗ ಮಹಾಭಾರತದಲ್ಲಿ ಅಸ್ಪೃಶ್ಯತೆಯ ಇರುವಿಕೆ ಸಾಧ್ಯವಿಲ್ಲ. ಮುಂದುವರೆದು, ಕರ್ಣನನ್ನೇ ಕ್ಷತ್ರಿಯನೆಂದು ಒಪ್ಪಿಕೊಳ್ಳದ ಪಾಂಡವರು ಶಲ್ಯನ ಸೋದರಿ ಮಾದ್ರಿಯನ್ನು ಪಾಂಡುರಾಜನಿಗೆ ವಿವಾಹವಾಗಿಸಲು ಸಾಧ್ಯವಿಲ್ಲ. ಮಾದ್ರಿಯ ಮಕ್ಕಳಾದ ನಕುಲ ಮತ್ತು ಸಹದೇವರಿಂದ ಯಾಗಗಳನ್ನು ನೆರವೇರಿಸಲೂ ಸಾಧ್ಯವಿಲ್ಲ. ಶಲ್ಯ ಕುರುಕ್ಷೇತ್ರದ ಕಡೆಯ ದಿನದ ಯುದ್ಧದಲ್ಲಿ ದಂಡನಾಯಕನಾಗಲೂ ಸಾಧ್ಯವಿಲ್ಲ. ಮಾದ್ರ ರಾಜ್ಯದ ಶಲ್ಯನ ವಂಶಸ್ಥರು ಚಾತುರ್ವರ್ಣ ಪರಿಪಾಲಕರಲ್ಲ ಎಂಬ ಕಾರಣದಿಂದ ಅವರನ್ನು ಅಸ್ಪೃಶ್ಯರೆಂದು ಬಗೆಯುವುದು ಐತಿಹಾಸಿಕವಾಗಿ ತಪ್ಪಾಗುತ್ತದೆ. ಏಕೆಂದರೆ ಅಂತಹ ಚಾತುರ್ವರ್ಣ ಪರಿಪಾಲಿಸದ ನೂರಾರು ರಾಜ್ಯಗಳು ಹಸ್ತಿನಾಪುರದ ಸುತ್ತಲೂ ಇರುತ್ತವೆ. ಇದರಷ್ಟೇ ಸತ್ಯ ಆರ್ಯವರ್ತವನ್ನು ಬಿಟ್ಟು ಮಿಕ್ಕ ಇನ್ನಾವ ಪ್ರಾಚೀನ ಭಾರತದಲ್ಲಿಯೂ ಚಾತುರ್ವರ್ಣ ವ್ಯವಸ್ಥೆ ಇಲ್ಲದಿದ್ದದ್ದು. ಘಟೋತ್ಗಜನದ್ದೂ ಅಂತಹದ್ದೇ ಬುಡಕಟ್ಟಿನ ಪ್ರಾಂತ್ಯ. ಹಾಗಾಗಿ ಕರ್ಣ ಹಾಗೂ ಶಲ್ಯರಿಬ್ಬರ ನಡುವೆ ನಡೆಯುವ ಸಂಭಾಷಣೆ ಒಬ್ಬರನ್ನೊಬ್ಬರೂ ಹೀಗಳೆಯಲಷ್ಟೇ ಆಗಿರುತ್ತದೆ. ಅದಕ್ಕೂ ಅಸ್ಪೃಶ್ಯತೆಗೂ ಸಂಬಂಧವಿಲ್ಲ. ಏಕೆಂದರೆ ಅಸ್ಪೃಶ್ಯತೆ ಕಾಣಿಸಿಕೊಂಡದ್ದು ಕ್ರಿ.ಶ 4ನೇ ಶತಮಾನದಲ್ಲಿ. ಇದರ ಬಗ್ಗೆ ಹೆಚ್ಚು ತಿಳಿಯಲು ದಯಮಾಡಿ ಈ ಅಂಕಣದ ’ಪ್ರಾಚೀನ ಭಾರತದಲ್ಲಿ ಅಸ್ಪೃಶ್ಯತೆ; ಹಾಗೂ ’ಮಧ್ಯಕಾಲೀನ ಭಾರತದಲ್ಲಿ ಅಸ್ಪೃಶ್ಯತೆ’ ಲೇಖನಗಳನ್ನು ಓದಿ.


ಇದನ್ನೂ ಓದಿ: ಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನಾನೂ ಹಲವಾರು ಬ್ರಾಹ್ಮಣರನ್ನು ಕೇಳಿದೆ. ಯಾರಿಗೂ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರ ಮದುವೆಯಲ್ಲಿ ಬಳಸುವ ಬಗ್ಗೆ ಗೊತ್ತಿಲ್ಲ. ಪ್ರಚಲಿತದಲ್ಲಿ ಇಲ್ಲ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...